ಕೇಂದ್ರ ಸರ್ಕಾರದ ಯಾವ ಯೋಜನೆಯಲ್ಲಿ ಮಹಿಳೆಯರು ಕಡಿಮೆ ಮೊತ್ತ ಹೂಡಿಕೆ ಮಾಡಿ ಹೆಚ್ಚು ಬಡ್ಡಿ ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ.

Mahila Samman Saving Certificate

ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿ ಕೇಂದ್ರ ಸರ್ಕಾರವು ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸಲು ಸಮಾಜದಲ್ಲಿ ಸಮಾನ ಸ್ಥಾನ ಮತ್ತು ಗೌರವ ಪಡೆಯಬೇಕು ಎಂಬುದು ಕೇಂದ್ರ ಸರ್ಕಾರದ ಉದ್ದೇಶ ದಿಂದಾ ಕಡಿಮೆ ಮೊತ್ತದ ಇನ್ವೆಸ್ಟ್ ಮಾಡಿ ಹೆಚ್ಚಿನ ಬಡ್ಡಿ ಹಣವನ್ನು ಪಡೆಯುವ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಹಾಗಾದರೆ ಯೋಜನೆ ಯಾವುದು ಹಾಗೂ ಇನ್ವೆಸ್ಟ್ ಮಾಡುವುದು ಹೇಗೆ ಎಂಬ ಬಗ್ಗೆ ಪೂರ್ಣ ಮಾಹಿತಿ ಪಡೆಯೋಣ.

WhatsApp Group Join Now
Telegram Group Join Now

ಏನಿದು ಯೋಜನೆ?: ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸುವ ಸಲುವಾಗಿ ನರೇಂದ್ರ ಮೋದಿ ಸರ್ಕಾರವು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಆರಂಭ ಮಾಡಿತು. ಈ ಯೋಜನೆಯು 2023 ರಲ್ಲಿ ಆರಂಭ ಆಗಿರುವ ಯೋಜನೆ ಆಗಿದೆ.

ಯಾರು ಯಾರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು?: ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ ಎಲ್ಲಾ ವಯಸ್ಸಿನ ಮಹಿಳೆಯರು ಹೂಡಿಕೆ ಮಾಡಬಹುದು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳು ಅವರ ಪೋಷಕರ ಮೇಲ್ವಿಚಾರಣೆಯಲ್ಲಿ ಖಾತೆಯನ್ನು ತೆರೆಯಲು ಅವಕಾಶ ಇದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಎಷ್ಟು ಹಣ ಹೂಡಿಕೆ ಮಾಡಬಹುದು?: ಮಹಿಳೆಯರು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ ಕನಿಷ್ಠ 1,000 ರೂಪಾಯಿ ಇಂದ 2ಲಕ್ಷ ರೂಪಾಯಿಯ ವರೆಗೆ ಹೂಡಿಕೆ ಮಾಡಲು ಅವಕಾಶ ಇರುತ್ತದೆ. ಎರಡು ವರ್ಷಗಳ ಅವಧಿಕೆ ಹೂಡಿಕೆ ಮಾಡುವ ಅವಕಾಶ ಇರುತ್ತದೆ. ಎರಡು ವರ್ಷದ ನಂತರ ನೀವು ಹಣವನ್ನು ತೆಗೆಯಬಹುದು.

ಬಡ್ಡಿದರದ ವಿವರ :- ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದ ಮೊತ್ತಕ್ಕೆ ಶೇಕಡಾ 7.5% ಬಡ್ಡಿದರವನ್ನು ಪಡೆಯುತ್ತೀರಿ.

ಹೂಡಿಕೆ ಎಲ್ಲಿ ಮಾಡಬಹುದು?: ನಿಮ್ಮ ಹತ್ತಿರದ ಯಾವುದೇ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯ ಅಡಿಯಲ್ಲಿ ಹಣ ಹೂಡಿಕೆ ಮಾಡಲು ಅವಕಾಶ ಇರುತ್ತದೆ.

ಇದನ್ನೂ ಓದಿ: ತಿಂಗಳಿಗೆ 5 ರಿಂದ 10 ಸಾವಿರ ಇನ್ವೆಸ್ಟ್ ಮಾಡಿ ಒಂದು ಕೋಟಿ ಗಳಿಸುವ SIP ಯೋಜನೆ

ಯೋಜನೆಯ ಪ್ರಮುಖ ಉಪಯೋಗಗಳು :-

  1. ಅಪಾಯ ಇಲ್ಲ:- ಈ ಯೋಜನೆಯು ಸರ್ಕಾರದ ಬೆಂಬಲ ಹೊಂದಿರುವ ಯೋಜನೆ ಆಗಿರುವ ಕಾರಣದಿಂದ ಹೂಡಿಕೆ ಮಾಡಲು ಯಾವುದೇ ಭಯ ಅಥವಾ ಹಣ ದೋಚುವ ಅಪಾಯ ಇಲ್ಲ. ಆದರೆ ನಾವು ಹಣ ಹೂಡಿಕೆ ಮಾಡುವಾಗ post office ಅಥವಾ ಬ್ಯಾಂಕ್ ಗೆ ತೆರಳಿ ಯಾವುದೇ ಪರಿಚಿತ ಅಥವಾ ಅಪರಿಚಿತ ವ್ಯಕ್ತಿಗೆ ಹಣ ನೀಡಬಾರದು.
  2. ಬಡ್ಡಿದರ :- ಈ ಯೋಜನೆಯಲ್ಲಿ ಹೆಚ್ಚಿನ ಬಡ್ಡಿದರ ಸಿಗುವುದರಿಂದ ಮಹಿಳೆಯರು ಹೂಡಿಕೆ ಮಾಡಿರುವ ಮೊತ್ತಕ್ಕೆ ಹೆಚ್ಚಿನ ಲಾಭ ಗಳಿಸಲು ಸಾಧ್ಯವಿದೆ.
  3. ಕಡಿಮೆ ಅವಧಿ :- ಇದು ಕಡಿಮೆ ಅವಧಿಯ ಸ್ಕೀಮ್ ಆಗಿರುವ ಕಾರಣದಿಂದ ಹೂಡಿಕೆ ಮಾಡುವುದು ಬಹಳ ಉತ್ತಮ. ಯಾಕೆಂದರೆ ಇಲ್ಲಿ ಹಣ ಹೂಡಿಕೆ ಮಾಡಿದರೆ ಹತ್ತಾರು ವರ್ಷಗಳು ಹಣವನ್ನು ಹಿಂಪಡೆಯಲು ಕಾಯಬೇಕು ಎಂಬುದಿಲ್ಲ.
  4. ವಯಸ್ಸಿನ ಮಿತಿ :- ಹಣ ಹೂಡಿಕೆ ಮಾಡಲು ಯಾವುದೇ ವಯಸ್ಸಿನ ಮಿತಿ ಇಲ್ಲದ ಕಾರಣ ಹುಟ್ಟಿದ ಮೂರು ತಿಂಗಳ ಮಗುವಿಗೆ ಸಹ account open ಮಾಡಿಸಿ ಸ್ಕೀಮ್ ನಲ್ಲಿ ಹಣ ಹಿಡಿಕೆ ಮಾಡಲು ಸಾಧ್ಯವಿದೆ.
  5. ತೆರಿಗೆ ಪ್ರಯೋಜನ :- ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದ ಯೌನ್ನೆಯಲ್ಲಿ ಬಡ್ಡಿಯಿಂದ TDS ಅನ್ನು ಮೊತ್ತ ಕಡಿತ ಆಗುವುದಿಲ್ಲ. . ಆದರೆ ಸೆಕ್ಷನ್ 194A ಅನುಸಾರವಾಗಿ , ಒಂದು ಹಣಕಾಸು ವರ್ಷದಲ್ಲಿ ಯೋಜನೆಯಿಂದ ಪಡೆದ ಬಡ್ಡಿಯು ಮೊತ್ತ 40,000 ರೂಪಾಯಿ ಅಥವಾ ಹಿರಿಯ ನಾಗರಿಕರರಿಗೆ 50,000 ರೂಪಾಯಿ ಆಗಿದ್ದರೆ ಆಗ ಮಾತ್ರ TDS ಅನ್ವಯ ಆಗುತ್ತದೆ.

ಇದನ್ನೂ ಓದಿ: ಬ್ಯಾಂಕ್ ಎಫ್‌ಡಿಯನ್ನು ಮೀರಿಸುವ ಬಡ್ಡಿ ಮತ್ತು ತೆರಿಗೆ ಪ್ರಯೋಜನಗಳೊಂದಿಗೆ ಸುರಕ್ಷಿತ ಹೂಡಿಕೆ ಮಾಡಿ!