ಈಗ ಎಲ್ಲರೂ ಆಫೀಸ್ ನಲ್ಲಿ ಕೆಲಸ ಮಾಡುವ ಬದಲು ಮನೆಯಲ್ಲಿಯೇ ಕೆಲಸ ಮಾಡಲು ಇಷ್ಟ ಪಡುತ್ತಾರೆ.ಮನೆಯಲ್ಲಿ ಕುಳಿತು ಸ್ವಂತವಾಗಿ ಕೆಲಸ ಮಾಡಲು ಈಗ AI ಟೂಲ್ ಸಹಾಯ ಮಾಡುತ್ತದೆ. ನೀವು ಮನೆಯಿಂದ AI ಟೂಲ್ ಬಳಸಿ ಯಾವ ಯಾವ ವರ್ಕ್ ಮಾಡಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
AI ಟೂಲ್ ಉಪಯೋಗಿಸಿ ಮಾಡಬಹುದಾದ ಕೆಲಸಗಳು:-
1) AI ವೀಡಿಯೋ ಸ್ಕ್ರಿಪ್ಟ್ :- YouTube ವೀಡಿಯೊ ಗಳಿಗೆ ಸ್ಕ್ರಿಪ್ಟ್‌ಗಳನ್ನು ರಚನೆ ಮಾಡಲು ChatGPT ಅಂತಹ ಅಪ್ಲಿಕೇಶನ್ ಗಳನ್ನು ಬಳಸಿ ನೀವು ಯೂಟ್ಯೂಬ್ ಚಾನೆಲ್ ರಚಿಸಿ ಧ್ವನಿ ನೀಡಲು ಹಾಗೂ ಸ್ಕ್ರಿಪ್ಟ್ ರಚನೆ ಮಾಡಲು AI ಟೂಲ್ ಬಳಸುವ ಮೂಲಕ ಹಣ ಗಳಿಸಲು ಸಾಧ್ಯವಿದೆ. ನಿಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಸಾಮಾನ್ಯ ಜ್ಞಾನ ಮಾಹಿತಿಗಳು ಕಥೆಗಳು ನಿಮ್ಮ ಹತ್ತಿರದ ಸ್ಥಳದ ಬಗ್ಗೆ ಮಾಹಿತಿಗಳನ್ನು ನೀಡಬಹುದು. ನಿಮ್ಮ ವಿಡಿಯೋ ದಕ್ಕೆ ಬರುವ ವ್ಯೂಸ್ ಗೆ ತಕ್ಕಂತೆ ನಿಮಗೆ ಹಣ ಬರುತ್ತದೆ.
2) AI ಜೊತೆಗೆ ಪ್ರಿಂಟ್-ಆನ್-ಡಿಮಾಂಡ್ :- ಮಗ್ ಗಳಿಗೆ ಟಿ ಶರ್ಟ್ ಗಳಿಗೆ ಬರೆಯುವ ಸುಂದರ ಅಕ್ಷರಗಳನ್ನು ವಿವಿಧ ರೀತಿಯಲ್ಲಿ ಬರೆಯಲು AI ಟೂಲ್ ಸಹಾಯ ಮಾಡುತ್ತದೆ. ಮನೆಯಲ್ಲಿ ಪ್ರಿಂಟಿಂಗ್ ವ್ಯವಸ್ಥೆ ಇಟ್ಟುಕೊಂಡು ಮಗ್ ಗಳಿಗೆ ಸುಂದರವಾದ ಕಲಾಕೃತಿ ಮಾಡಲು ಸಾಧ್ಯವಾಗುತ್ತದೆ.
3)AI- ರಚಿತ ಕಲಾಕೃತಿ :- ಮಿಡ್ಜರ್ನಿಯಂತಹ ಸಾಧನಗಳು ನೈಸರ್ಗಿಕ ದೃಶ್ಯಗಳು, ಹೂವುಗಳ ಗುಚ್ಛಗಳು, ಹಣ್ಣಿನ ಬುಟ್ಟಿಗಳು ಅಥವಾ ಇತರ ದೃಶ್ಯ ಚಿತ್ರಗಳನ್ನು ರಚಿಸಲು ಸಾಧ್ಯವಾಗುತ್ತದೆ. ಈ ಚಿತ್ರಗಳನ್ನು ನೀವು ಡಿಜಿಟಲ್ ಕಲಾಕೃತಿಗಳಾಗಿ ಸಂಪಾದಿಸಿ ಮಾರಾಟ ಮಾಡಬಹುದು. ಆದರೆ ಕೆಲವೊಮ್ಮೆ AI-ರಚಿತ ಚಿತ್ರಗಳ ವಸ್ತುಗಳು ಮತ್ತು ಅಂಕಿಅಂಶಗಳು ದೋಷಯುಕ್ತವಾಗಿರಬಹುದು, ಉದ್ದವಾಗಿರಬಹುದು, ಹೆಚ್ಚುವರಿ ಕೈಕಾಲುಗಳನ್ನು ಹೊಂದಿರಬಹುದು ಅಥವಾ ಅತೀವವಾಗಿ ಸ್ಪರ್ಶಿಸಲ್ಪಟ್ಟಂತೆ ಕಾಣಿಸಬಹುದು. ನೀವು ಒಮ್ಮೆ ನಿಖರವಾಗಿ ಪರಿಶೀಲನೆ ಮಾಡಬೇಕಾಗುತ್ತದೆ.
4) AI-ಚಾಲಿತ ಕಾಪಿರೈಟಿಂಗ್ :- ಸ್ವತಂತ್ರ ಕಾಪಿರೈಟರ್ ಆಗಿ, ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಮಾಧ್ಯಮಕ್ಕಾಗಿ ವಿಷಯದ ರೂಪರೇಖೆಗಳು, ಶೀರ್ಷಿಕೆ ಮತ್ತು ಉಪಶೀರ್ಷಿಕೆ ಕಲ್ಪನೆಗಳು ಮತ್ತು ಮಾರ್ಕೆಟಿಂಗ್ ನಕಲಿನ ಸಂಪೂರ್ಣ ಭಾಗಗಳನ್ನು ರಚಿಸುವ ಮೂಲಕ ಸುಗಮಗೊಳಿಸಲು ನೀವು AI ಸಾಧನಗಳನ್ನು ಬಳಸಬಹುದು. ಈ ನಕಲು ಯಾಂತ್ರಿಕವಾಗಿ ಧ್ವನಿಸುವುದಿಲ್ಲ, ವ್ಯಾಕರಣ ದೋಷಗಳು ಕಂಡುಬಂದಿಲ್ಲ ಎಂಬುದನ್ನು ನೀವು ಇನ್ನೊಮ್ಮೆ ಪರಿಶೀಲಿಸಿಕೊಳ್ಳಿ.
5) AI-ಚಾಲಿತ ಸುದ್ದಿಪತ್ರ :- AI ಉಪಕರಣಗಳು ನಿಮಗೆ ಕಲ್ಪನೆಗಳನ್ನು ರಚಿಸಲು ಹಾಗೂ ಲೇಖನಗಳನ್ನು ಬರೆಯಲು ಜೊತೆಗೆ ನಿಮ್ಮ ಸುದ್ದಿಪತ್ರವನ್ನು ವಿನ್ಯಾಸಗೊಳಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಸಮಯವನ್ನು ಉಳಿಸುತ್ತದೆ ಜೊತೆಗೆ ನಿಮಗೆ ಇನ್ನಷ್ಟು ಹೆಚ್ಚಿನ ಸಮಯ ಬೇರೆ ಕಡೆ ಕೇಂದ್ರೀಕರಣ ಗೊಳಿಸಲು ಆಗುತ್ತದೆ. ಇದರಿಂದ ನೀವು ಆದಾಯ ಗಳಿಸಲು ಸಾಧ್ಯವಿದೆ.
AI ಟೂಲ್ ಉಪಯೋಗಿಸುವ ಮುನ್ನ ಎಚ್ಚರಿಕೆಯಿಂದ ಇರಬೇಕು. ಯಾಕೆ ಎಂದರೆ AI ಒಂದು ಕೃತಕ ಉಪಕರಣ ಆಗಿದ್ದು. ಇದರಲ್ಲಿ ನಿಮಗೆ ಅನೇಕ ತಪ್ಪುಗಳು ಹಾಗೂ ದೋಷಗಳು ಇರುತ್ತದೆ. ನೀವು ಒಮ್ಮೆ AI ನೀಡಿದ ಮಾಹಿತಿಗಳ ಜೊತೆಗೆ ನೀವು ನಿಮ್ಮ ಸ್ವಂತ ಶಕ್ತಿಯಿಂದ ಕೆಲವು ಮಾಹಿತಿಗಳು ಸೇರಿಸಬೇಕಾಗುತ್ತದೆ ಹಾಗೂ ಯಾವುದೇ ಕಾಗುಣಿತ ದೋಷಗಳು ಇದ್ದರೂ ನೀವು ಅದನ್ನು ಸರಿಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಫಿಕ್ಸೆಡ್ ಡಿಪಾಸಿಟ್ ಗೆ ಹೆಚ್ಚಿನ ಬಡ್ಡಿದರ ನೀಡುವ 5 ಬ್ಯಾಂಕ್ ಗಳ ಬಗ್ಗೆ ಮಾಹಿತಿ ಇಲ್ಲಿದೆ