Malashree Ramu: ಸುಮಾರು ಎರಡು ದಶಕಗಳ ಹಿಂದೇನೆ ಕನ್ನಡ ಸಿನಿಮಾಗಳಿಗೆ ಕೋಟಿ ಬಜೆಟ್ ನ ಸಿನಿಮಾ ಮಾಡಿ ಕನ್ನಡ ಚಿತ್ರರಂಗ ದಲ್ಲಿ ಒಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದ ಕೋಟಿ ರಾಮು ಅವರು ಈ ಕೋರೊನಾ ಎಂಬ ಮಹಾಮಾರಿಗೆ ಬಲಿಯಾದರು 2021 ಏಪ್ರಿಲ್ 26 ನೇ ತಾರೀಕು ರಾಮು ಅವರು ಸಾವನಪ್ಪಿದರು ಇದೀಗ ರಾಮು ಅವರ ಎರಡನೇ ವರ್ಷದ ಪುಣ್ಯ ಸ್ಮರಣೆಯನ್ನು ಮಾಲಾಶ್ರೀ ಮತ್ತು ಕುಟುಂಬಸ್ಥರು ಮಾಡಿದ್ದಾರೆ.
ರಾಮು ಅವರನ್ನು ಕಳೆದುಕೊಂಡ ಮೇಲೆ ಮಾಲಾಶ್ರೀ ಅವರಿಗೆ ಏನು ತೋಚದ ರೀತಿ ಆಗಿತ್ತು. ಪತಿಯ ಅಗಲಿಕೆ ನೋವಿಂದ ಮಾಲಾಶ್ರೀ ಅವರು ಇನ್ನೂ ಕೂಡ ಸಂಪೂರ್ಣವಾಗಿ ಹೊರಬರುವುದಕ್ಕೆ ಆಗಿಲ್ಲ ಆದರೆ ಇದೀಗ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದು ಸ್ವಲ್ಪ ಸಿನಿಮಾ ಗಳಲ್ಲಿ Busy ಆಗಿದ್ದಾರೆ ರಾಮು ಅವರು ನಿರ್ಮಾಣ ಮಾಡಿದ ಕೊನೆ ಸಿನಿಮಾ ಅರ್ಜುನ್ ಗೌಡ ಕೂಡ ಮಾಲಾಶ್ರೀ ಅವರ ಜೊತೆ ಇಡೀ ಚಿತ್ರರಂಗ ಸೇರಿಸಿ ಸಿನಿಮಾವನ್ನು ಬಿಡುಗಡೆ ಮಾಡಿದ್ದರು.
ಪತಿಯ ಬಗ್ಗೆ ಭಾವುಕ ಪೋಸ್ಟ್ ಹಾಕಿದ ಮಾಲಾಶ್ರೀ
ರಾಮು ಅವರ ಎರಡನೇ ವರ್ಷ ಪುಣ್ಯ ಸ್ಮರಣೆ ಯನ್ನು ತೋಟದ ಮನೆಯಲ್ಲಿರುವ ರಾಮು ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬ. ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟನ್ನು ಮಾಲಾಶ್ರೀ ಹಂಚಿಕೊಂಡಿದ್ದಾರೆ “ನಾನು ನಿನ್ನನ್ನು ಮಿಸ್ ಮಾಡಿಕೊಂಡಾಗ, ಒಮ್ಮೆ ನನ್ನ ಕಣ್ಣುಗಳನ್ನು ಮುಚ್ಚುತ್ತೇನೆ ಮತ್ತು ನನ್ನ ಹೃದಯದಲ್ಲಿ ನಿನ್ನನ್ನು ಕಂಡುಕೊಳ್ಳುತ್ತೇನೆ ಐ ಮಿಸ್ ಯು ಸೋ ಮಚ್ ಕುಟ್ಟಿ” ಎಂದು ಮಾಲಾಶ್ರೀ ಅವರು ಬರೆದುಕೊಂಡಿದ್ದಾರೆ.
ಇದನ್ನು ಓದಿ: ಹಿರಿಯ ನಟಿ ಮಾಧವಿ ಅವರು ಈಗ ಹೇಗಿದ್ದಾರೆ ಮತ್ತು ಎಲ್ಲಿದ್ದಾರೆ? ಅವರ ಪತಿ ಮತ್ತು ಮಕ್ಕಳು ಹೇಗಿದ್ದಾರೆ?
ಅಪ್ಪನ ಬಗ್ಗೆ ಮಗಳು ರಾಧಾನ ರಾಮ್ ಹೇಳಿದ್ದೇನು?
ರಾಮು ಅವರ ಮಗಳು ರಾಧನ ರಾಮ್ ಕೂಡ ಅಪ್ಪನ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ದಲ್ಲಿ ಬರೆದುಕೊಂಡಿದ್ದಾರೆ “ನಾವು ನಿಮ್ಮನ್ನು ಪ್ರತಿದಿನ ತುಂಬಾ ಮಿಸ್ ಮಾಡಿಕೊಳ್ಳುತ್ತೇವಿ. ನೀವು ಯಾವಾಗಲೂ ನಮ್ಮನ್ನು ನೋಡುತ್ತಿದ್ದೀರಿ ಶಾಶ್ವತವಾಗಿ ನಮ್ಮನ್ನು ರಕ್ಷಿಸುತ್ತಿದ್ದೀರಿ ಮತ್ತು ಮಾರ್ಗದರ್ಶನ ನೀಡುತ್ತಿದ್ದೀರಿ ನಾವು ಯಾವಾಗಲೂ ನಮ್ಮೊಂದಿಗೆ ನಿಮ್ಮ ಉಪಸ್ಥಿತಿಯನ್ನು ಅನುಭವಿಸುತ್ತೇವೆ” ಎಂದು ರಾಧನ ರಾಮ್ ಬರೆದು ಕೊಂಡಿದ್ದಾರೆ.
ನಿಜಕ್ಕೂ ಇದು ತುಂಬಾ ದುಃಖದ ಸಂಗತಿ ನೀವು ಕನ್ನಡ ಚಿತ್ರರಂಗಕ್ಕೆ ಕೊಟ್ಟಿರುವ ಸಿನಿಮಾಗಳು ಮತ್ತು ನೀವು ಹೊಸ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟಿದ್ದೀರಿ. ಇಂದು ನಿಮ್ಮ ಮಕ್ಕಳು ಬೆಳೆಯುವುದನ್ನು ನೋಡಲು ನೀವು ಇರಬೇಕಿತ್ತು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಇದನ್ನು ಓದಿ: ವೈಯಕ್ತಿಕ ಆರೋಪಗಳಿಂದ ಕಿರುತೆರೆ ಧಾರಾವಾಹಿ ಗಳಿಂದ ದೂರಾಗಿದ್ದ ನಟಿ ಅಭಿನಯ ಈಗ ಮತ್ತೆ ಕಂಬ್ಯಾಕ್
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram