ವಿದೇಶದಲ್ಲಿ ಅರೆಬರೇ ಬಟ್ಟೆಯಲ್ಲಿ ಕಾಣಿಸಿಕೊಂಡ ಸೋನುಗೌಡ; ಒಳ ಉಡುಪಿನಲ್ಲಿ ರೆಸಾರ್ಟ್ ನಲ್ಲಿ ಸೋನುಗೌಡ ಫೋಟೋಶೂಟ್

ಸೋಶಿಯಲ್ ಮೀಡಿಯಾ ವೈರಲ್ ಸ್ಟಾರ್ ಸೋನು ಗೌಡ. ಒಳ್ಳೇದಕ್ಕಿಂತ ಕೆಟ್ಟದಕ್ಕೆ ಟ್ರೋಲ್ ಆಗೋದು ಜಾಸ್ತಿ. ಒಳ್ಳೆ ರೀತಿಯಲ್ಲಿ ಇರಮ್ಮಾ ಮಾನ ಮರ್ಯಾದೆ ಉಳಿಸಿಕೊಂಡು ಬೆಳಿಯಮ್ಮ ಅಂತ ನೆಟ್ಟಿಗರು ಟ್ರೋಲಿಗರು ಎಷ್ಟೇ ಬಾರಿ ಕಮೆಂಟ್ಸ್ ಟ್ರೋಲ್ ಮಾಡಿದ್ರು ಕೂಡ ಸೋನು ತನ್ನ ಚಾಳಿ ಬಿಡಲ್ಲ. ಹೌದು ಒಳ್ಳೆಯ ರೀತಿಯಾಗಿ ಬೆಳೆದು ಸಾಮಾಜಿಕ ಮಾಧ್ಯಮವನ್ನ ಒಳ್ಳೆ ರೀತಿ ಬಳಸಿಕೊಂಡು ಸಾಮಾಜಿಕ ಜಾಲತಾಣದ ಮೂಲಕವೇ ಬದುಕು ಕಟ್ಟಿಕೊಂಡವರಿದ್ದಾರೆ.. ಅದರೆ ಮತ್ತೆ ಕೆಲವರು ಸಾಮಾಜಿಕ ಜಲಾತಾಣದಲ್ಲಿ ತೋರಬಾರದ ರೀತಿ ತಮ್ಮನ್ನು ತಾವು ತೋರಿಕೊಂಡು ಟೀಕೆಗೆ ಒಳಗಾಗಿ ಅದರಿಂದ ಪ್ರಸಿದ್ಧ ಪಡಿಯಬಹುದು ಅಂದುಕೊಳ್ಳೋದ್ರಲ್ಲಿ ಸೋನು ಎತ್ತಿದ ಕೈ ಅಂತ ಜನ ಈಗ ಉಗಿತಿದ್ದಾರೆ. ಅದರಲ್ಲೂ ಇದೀಗ ಹೊಸ ಬಿಕಿನಿ ಅವತಾರ ನೋಡಿ ಮಾಡಬಾರದ ಕಮೆಂಟ್ಸ್ ಮಾಡಿ ಸೋನು ಗೌಡ ಜನ್ಮವನ್ನು ನೆಟ್ಟಿಗರು ಜಾಲಾಡುತ್ತಿದ್ದಾರೆ.

WhatsApp Group Join Now
Telegram Group Join Now

ಆದ್ರೂ ಕೂಡ ಸೋನು ಶ್ರೀನಿವಾಸ್ ಗೌಡಗೆ ಬುದ್ದಿ ಬರುವಂತೆ ಕಾಣುತ್ತಿಲ್ಲ ಈಗಲೂ ಅರೆಬರೇ ಬಟ್ಟೆ ತೊಟ್ಟು ಫೋಟೋಗೆ ಫೋಸ್ ಕೊಟ್ಟು ಅದನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ವಿಚಿತ್ರ ಖುಷಿ ಕಾಣುತ್ತಿದ್ದಾರೆ. ಅದರಲ್ಲೂ ಮೊನ್ನೆಯಷ್ಟೇ ಕಣ್ಣೀರು ಹಾಕುತ್ತಾ ವೀಡಿಯೋ ಒಂದನ್ನು ಮಾಡಿದ್ದರು.. ನಾನು ಯಾವುದೋ ಸಮಯದಲ್ಲಿ ತಪ್ಪು ಮಾಡಿದೆ ನಿಜ.. ಆದರೆ ತಿದ್ದಿಕೊಂಡು ಬದುಕೋಕೆ ಬಿಡಿ.. ನಾನು ಮನುಷ್ಯಳೆ ಹೀಗೆ ಸಾಕಷ್ಟು ನೋವಿನ ಮಾತುಗಳನ್ನಾಡಿದ್ದರು‌. ಆದ್ರೆ ಈಗ ಮತ್ತೆ ಅದೇ ಚಾಳಿ ಮುಂದುವರಿಸಿದ್ದು, ಜನ ಮಾತ್ರ ರೊಚ್ಚಿಗೆದ್ದು ತರೆವರಿ ಕಮೆಂಟ್ಸ್ ನಿಂದ ಸೋನು ಗೌಡಗೆ ಸರಿಯಾಗಿಯೇ ಟಾಂಗ್ ಕೊಡ್ತಿದ್ದಾರೆ.

ಹೌದು ಈಗ ಮತ್ತೆ ಸೋನು ಗೌಡ ತನ್ನ ಹಳೆಯ ವರಸೆಯಂತೆ ಒಳ ಉಡುಪಿನಲ್ಲಿ ವೀಡಿಯೋ ಫೋಟೋಗಳನ್ನು ಹಂಚಿಕೊಂಡಿದ್ದು ಮತ್ತೆ ಟ್ರೋಲರ್ಸ್ ಕಣ್ಣಿಗೆ ಬಿದ್ದಿರೋದು ಸುಳ್ಳಲ್ಲ. ಅಷ್ಟೇ ಅಲ್ಲದೇ ನೆಟ್ಟಿಗರು ಸಹ ತರಾಟೆಗೆ ತೆಗೆದುಕೊಂಡಿದ್ದಾರೆ. ಹೌದು ಮಾಲ್ಡೀವ್ಸ್ ಗೆ ತೆರಳಿರುವ ಸೋನು ಗೌಡ ಅಲ್ಲಿ ಐಶಾರಾಮಿ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದು. ಈಗ ಅಲ್ಲಿ ಮಾಡಿರೋ ಸಾಲು ಸಾಲು ವೀಡಿಯೋಗಳು ಫೋಟೋಗಳನ್ನು ಹಂಚಿಕೊಂಂಡಿದ್ದಾರೆ. ಅದರಲ್ಲೂ ಮೈಮೇಲೆ ಬಟ್ಟೆ ಇಲ್ಲದೇ ಒಳ ಉಡುಪಿನಲ್ಲಿಯೇ ವೀಡಿಯೋ ಹಂಚಿಕೊಂಡಿದ್ದು ನೆಟ್ಟಿಗರು ಮತ್ತಷ್ಟು ಉಗಿದು ಉಪ್ಪಾಕುವಂತಾಗಿದೆ. ಮೊನ್ನೆಯಷ್ಟೇ ಸೋನು ಕಣ್ಣೀರಿಟ್ಟ ಬಳಿಕ ಒಂದಷ್ಟು ಜನ ಮರುಗಿ ಇನ್ನು ಇವರನ್ನು ಟ್ರೋಲ್ ಮಾಡಬೇಡಿ ಹೊಸ ಬದುಕನ್ನು ಆರಂಭಿಸಲಿ ಎಂದು ಒಳ್ಳೆಯದನ್ನು ಬಯಸಿದ್ದರು.

ಆದರೆ ಕೆಲವೇ ದಿನಗಳಲ್ಲಿ ಮಾಲ್ಡೀವ್ಸ್ ನಲ್ಲಿ ಹೊಸ ಅವತಾರದಲ್ಲಿ ಸೋನು ಗೌಡರನ್ನು ಕಂಡು ಚಿತ್ರ ವಿಚಿತ್ರ ಕಮೆಂಟ್ ಗಳನ್ನು ಹಾಕುತ್ತಿದ್ದಾರೆ. ಹಸಿಬಿಸಿಯಾಗಿ ಕಾಣಿಸಿಕೊಂಡದ್ದು ಮಾತ್ರವಲ್ಲದೇ ವೈನ್ ಗ್ಲಾಸಿನ ಜೊತೆ ಒಂದಷ್ಟು ಫೋಟೋ ಹಂಚಿಕೊಂಡಿದ್ದು ವಿದೇಶದಲ್ಲಿ ಎಂಜಾಯ್ ಮಾಡುತ್ತಿರುವ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇತ್ತ ಇವೆಲ್ಲವನ್ನು ನೋಡಿದ ಜನರು ಈಕೆ ಎಂದೂ ಬದಲಾಗೋದಿಲ್ಲ ಎಂದರೆ, ಮತ್ತಷ್ಟು ಜನ ಮತ್ತೊಂದು ಟ್ರೋಲ್ ವೀಡಿಯೋ ಬರೋದು ಖಚಿತ ಎನ್ನುತ್ತಿದ್ದಾರೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಹೊಸ ಅವತಾರ ನೋಡಿ ನೆಟ್ಟಿಗರಿಂದ ಫುಲ್ ಕ್ಲಾಸ್!

ಈ ಮೊದಲು ರೀಲ್ಸ್ ವೀಡಿಯೋ ಅಂತ ಹೆಸರಾದ ಸೋನು ಗೌಡ ನಂತರ ಅವರ ಕೆಲವೊಂದು ಖಾಸಗಿ ವೀಡಿಯೋ ಲೀಕ್ ಆಗಿ ಸುದ್ದಿಯಾಗಿದ್ದರು. ಆ ನಂತರ ವೂಟ್ ನಲ್ಲಿ ಬಿಗ್ ಬಾಸಿಗೂ ಕೂಡ ಬಂದರು. ಇದಾದ ನಂತರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸದಾ ಟ್ರೋಲ್ ಆಗುತ್ತಲೇ ಇದ್ದರೂ ಕೂಡ ತಾನಿದ್ದ ರೀತಿಯಲ್ಲಿಯೇ ಇದ್ದ ಸೋನು ಮೊನ್ನೆ ಮೊನ್ನೆಯಷ್ಟೇ ಕಣ್ಣೀರು ಹಾಕುತ್ತಾ ವೀಡಿಯೋ ಒಂದನ್ನು ಮಾಡಿದ್ದರು. ನಾನು ಯಾವುದೋ ಸಮಯದಲ್ಲಿ ತಪ್ಪು ಮಾಡಿದೆ ನಿಜ. ಆದರೆ ತಿದ್ದಿಕೊಂಡು ಬದುಕೋಕೆ ಬಿಡಿ. ನಾನು ಮನುಷ್ಯಳೆ ಹೀಗೆ ಸಾಕಷ್ಟು ನೋವಿನ ಮಾತುಗಳನ್ನಾಡಿದ್ದರು‌. ಜೊತೆಗೆ ಆ ಟ್ರೋಲ್ ವೀಡಿಯೋಗಳಿಂದ ನನ್ನ ತಾಯಿ ನೊಂದುಕೊಂಡಿದ್ದಾರೆ ಅಂತ ಕಣ್ಣೀರಿಟ್ಟಿದ್ದರು. ಇದನ್ನು ನೋಡಿದ ಬಹಳಷ್ಟು ಜನ ಮರುಗಿದ್ದರು.

ಇನ್ನು ಮುಂದಾದರೂ ಸರಿಯಾಗಿ ಇರಲಿ ಬಿಡಿ ಎಂದು ಕಮೆಂಟ್ ಮಾಡಿದ್ದರು. ಇನ್ನು ಕೆಲವರು ಸೋನು ಗೌಡ ಕಣ್ಣೀರನ್ನು ನಂಬಿರಲಿಲ್ಲ. ಇವಳದ್ದು ಯಾವಾಗಲೂ ಇದದ್ದೇ.. ಇಂತವಳು ಯಾಕೆ ಬಟ್ಟೆ ತೆಗೆದು ವೀಡಿಯೋ ಮಾಡಬೇಕಿತ್ತು ಎಂದೆಲ್ಲಾ ಕಮೆಂಟ್ ಮಾಡಿದ್ದರು. ನಂತರದಲ್ಲಿ ಸೋನು ಬಗ್ಗೆಯ ಟ್ರೋಲ್ ಗಳ ಒಂದಷ್ಟು ಕಡಿಮೆ ಆಗಿದ್ದಂತೂ ನಿಜ. ಆದರೆ ಈಗ ಮತ್ತೆ ಸೋನು ಗೌಡ ತನ್ನ ಹಳೆಯ ವರಸೆಯಂತೆ ಒಳ ಉಡುಪಿನಲ್ಲಿ ವೀಡಿಯೋ ಫೋಟೋಗಳನ್ನು ಹಂಚಿಕೊಂಡಿದ್ದು ಮತ್ತೆ ಟ್ರೋಲರ್ಸ್ ಕಣ್ಣಿಗೆ ಬಿದ್ದಿದೆ. ಅಷ್ಟೇ ಅಲ್ಲದೇ ನೆಟ್ಟಿಗರು ಸಹ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ಮುಂದೆ ಇದೆ ಮಾರಿಹಬ್ಬ ಅಂತ ಕೆಲವೊಂದಷ್ಟು ಜನ ಹೇಳ್ತಿದ್ದು, ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ಹೋಗುತ್ತೋ ದೇವರೇ ಬಲ್ಲ.

ಇದನ್ನೂ ಓದಿ: ಬಂದೇ ಬಿಡ್ತು ಬಿಗ್ ಬಾಸ್ ಮೊದಲ ಪ್ರೋಮೋ; ಬಿಗ್ ಬಾಸ್ ಸೀಸನ್ 10ಕ್ಕೆ ಮುಹೂರ್ತ ಫಿಕ್ಸ್

ಇದನ್ನೂ ಓದಿ: ದರ್ಶನ್ ಬಗ್ಗೆ ಮನ ಬಿಚ್ಚಿ ಸುದೀಪ್ ಮಾತಾನಾಡಿದ್ದೇನು ಗೊತ್ತಾ? ನೀವಿಬ್ಬರು ಒಂದಾಗಿ ಅಂತ ಹೇಳಿದೋರಿಗೆ ಕಿಚ್ಚ ಹೇಳಿದ್ದೇನು ಗೊತ್ತಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram