1- ಫೆಬ್ರುವರಿ – 2024 ರಂದು ಕೇಂದ್ರ ಸರ್ಕಾರವು ಮಧ್ಯಂತರ ಬಜೆಟ್ ಮಂಡಿಸಿತು. ಬಜೆಟ್ ಬಗ್ಗೆ ಪರ ವಿರೋಧ ಚರ್ಚೆಗಳು ನಡೆದವು. ರಾಜ್ಯ ಸರ್ಕಾರ ನಮ್ಮ ರಾಜ್ಯಕ್ಕೆ ಯಾವ ಅನುದಾನವನ್ನು ನೀಡಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿತು. ಬಜೆಟ್ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಡಿ. ಕೆ ಸುರೇಶ್ ಅವರ ಮಾತು ಈಗ ಹಲವಾರು ವಿವಾದಗಳನ್ನು ಸೃಷ್ಠಿಸಿದೆ.
ಡಿ. ಕೆ ಸುರೇಶ್ ಅವರ ಹೇಳಿಕೆ ಏನು?: ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಅವರು ಕೇಂದ್ರ ಸರ್ಕಾರವು ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ. ದಕ್ಷಿಣ ಭಾರತದ ರಾಜ್ಯಗಳಿಂದ ಹೆಚ್ಚಿನ ತೆರಿಗೆ ಹಣವೂ ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ. ಆದರೆ ಕೇಂದ್ರ ಸರ್ಕಾರ ಪ್ರತಿ ಸಲವೂ ಉತ್ತರ ಭಾರತಕ್ಕೆ ಹೆಚ್ಚಿನ ಅನುದಾನ ನೀಡುತ್ತಿದೆ. ಇದರಿಂದ ನಮಗೆ ಆರ್ಥಿಕವಾಗಿ ಅನ್ಯಾಯ ಆಗುತ್ತಿದೆ ಆದ್ದರಿಂದ ನಮಗೆ ಪ್ರತ್ಯೇಕ ರಾಷ್ಟ್ರ ಬೇಕೆಂಬ ಕೂಗು ಅನಿವಾರ್ಯ ಆಗಲಿದೆ ಎಂದು ಹೊಸ ವಿವಾದಾತ್ಮಕ ಹೇಳಿಕೆ ನೀಡಿದರು.
ಮಲ್ಲಿಕಾರ್ಜುನ ಖರ್ಗೆ(Mallikarjun Kharga) ಅವರ ಪ್ರತಿಕ್ರಿಯೆ ಏನು?: ತಮ್ಮದೇ ಪಕ್ಷದ ಶಾಸಕ ಆಗಿರುವ ಡಿ. ಕೆ ಸುರೇಶ್ ಅವರು ಹೇಳಿರುವ ಹೇಳಿಕೆಯನ್ನು ಖಂಡಿಸಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತ ಒಂದಾಗಿದೆ. ಭಾರತಕ್ಕೆ ಸ್ವಾತಂತ್ರ ಸಿಗಬೇಕು ಎಂದು ಹಲವಾರು ಜನರು ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. ಇದನ್ನು ಒಡೆಯುವುದು ಸರಿಯಲ್ಲ.ಯಾವುದೇ ಪಕ್ಷದವರದರೂ ಇಂತಹ ಮಾತುಗಳನ್ನು ನಾವು ಸಹಿಸುವುದಿಲ್ಲ ಎಂದು ಸುರೇಶ್ ಅವರ ಹೇಳಿಕೆಯ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದರು.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ತಮ್ಮ ಜಾಲತಾಣದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್ ಪಕ್ಷದ ಇತಿಹಾಸವೇ ಒಡೆದು ಅಳುವುದಾಗಿದೆ. ಸುರೇಶ್ ಅವರು ದೇಶವನ್ನು ಒಡೆಯುವ ಮಾತನಾಡುತ್ತಾ ಇದ್ದರೆ ಇನ್ನೊಂದೆಡೆ ಅವರ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಜೋಡೋ ಯಾತ್ರೆಯ ಮೂಲಕ ದೇಶವನ್ನು ಒಂದು ಮಾಡುವ ಶಪಥ ಮಾಡುತ್ತಾರೆ ಎಂದು ಕಿಡಿಕಾರಿದರು. 200 ವರ್ಷಗಳ ಕಾಲ ಸಾವಿರಾರು ಹೋರಾಟಗಳು, ಲಕ್ಷಾಂತರ ಜನರ ತ್ಯಾಗ ಬಲಿದಾನದಿಂದ ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಇಂತಹ ಹೇಳಿಕೆಗಳು ಅಂಬೇಡ್ಕರ್ ಅವರ ಸಂವಿಧಾನಕ್ಕೆ ಮಾಡುವ ಅಪಮಾನ ಎಂದರು. ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಎಂದು ಭಾರತಕ್ಕೆ ಕರ್ನಾಟಕವೇ ನೆಚ್ಚಿನ ಮಗಳು ಎಂದು ಹೇಳಿದ ರಾಷ್ಟ್ರ ಕವಿ ಕುವೆಂಪು ಅವರಿಗೆ ಮಾಡುವ ಅವಮಾನ.
ಮಾತು ಮಾತಿಗೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದರುವ ಪಕ್ಷ ನಮ್ಮದು ಎಂದು ಬೊಗಳೆ ಬಿಡುವ ಕಾಂಗ್ರೆಸ್ ಪಕ್ಷ ಈಗ ದೇಶ ಒಡೆಯುವ ದೇಶದ್ರೋಹದ ಮಾತಾಡುತ್ತಿರುವುದು ನಿಜಕ್ಕೂ ನಾಚಿಕೆಯ ಸಂಗತಿ .ಎಂದು ಅರ್. ಅಶೋಕ್ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಹೇಳಿದ್ದಾರೆ. ಇನ್ನು ನಿರ್ಮಲಾ ಸೀತಾರಾಮನ್ ಅವರು ಲೋಕಸಭೆ ಸಂಸದರಾಗಿ ಈ ದೇಶವನ್ನು ಒಡೆಯುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ದೇಶದ ಏಕತೆ ಮತ್ತು ಸಾರ್ವಭೌಮತ್ವದ ಮುಂದೆ ಯಾವುದೂ ಹೆಚ್ಚಲ್ಲ ಎಂದು ಹೇಳಿದರು. ಸಭಾನಾಯಕ ಆಗಿರುವ ಪಿಯೂಶ್ ಗೋಯಲ್ ಅವರು ಇಂದು ರಾಜ್ಯಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿ ಕಾಂಗ್ರೆಸ್ ಪಕ್ಷ ಹಾಗೂ ಶಾಸಕರಾದ ಡಿ. ಕೆ ಸುರೇಶ್ ಬಗ್ಗೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
#WATCH | Congress president and LoP Rajya Sabha Mallikarjun Kharge speaks on Congress MP DK Suresh’s “…forced to demand a separate country” statement.
“…If anyone speaks about breaking the country, we will never tolerate it – irrespective of whichever party they belong to.… pic.twitter.com/LuR3cNjXaT
— ANI (@ANI) February 2, 2024
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಇದನ್ನೂ ಓದಿ: ರೈಲ್ವೆ ಇಲಾಖೆಯಿಂದ 9000 ಟೆಕ್ನೀಷಿಯನ್ ಹುದ್ದೆಗಳ ನೇಮಕಾತಿಗೆ ಶಾರ್ಟ್ ನೋಟಿಫಿಕೇಶನ್ ಬಿಡುಗಡೆ