ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗೆ ಮನಸ್ವಿನಿ ಯೋಜನೆಯಡಿ ರೂಪಾಯಿ 500 ತಿಂಗಳ ವೇತನ; ಅರ್ಜಿ ಸಲ್ಲಿಸುವುದಕ್ಕೆ ಬೇಕಾದ ದಾಖಲಾತಿಗಳು..

Manaswini Scheme: ವಿವಾಹವಾಗದೆ ಅಥವಾ ವಿಚ್ಛೇದಿತರಾಗಿ ಸಾಮಾಜಿಕ ಸಂಕಷ್ಟಗಳನ್ನು ಎದುರಿಸುತ್ತಿರುವ ಮಹಿಳೆಯರಿಗಾಗಿ ಸರ್ಕಾರ 2013 ರಲ್ಲಿ ಮನಸ್ವಿನಿ ಯೋಜನೆಯೊಂದನ್ನು ರೂಪಿಸಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾಲು ಸಾಲಾಗಿ ಮಹಿಳೆಯರಿಗೆ ಒಂದಲ್ಲ ಒಂದು ಯೋಜನೆಯನ್ನು ಜಾರಿಗೆ ತರುತ್ತಿದೆ. ಮನಸ್ವಿನಿ ಯೋಜನೆಯ ಅಡಿಯಲ್ಲಿ ಕೇವಲ ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗಾಗಿ ಪ್ರತಿ ತಿಂಗಳು ರೂ.500 ವರೆಗಿನ ಮಾಸಾಶನದ ಭರವಸೆಯನ್ನು ನೀಡಿದೆ. ವಿವಾಹವಾಗದೆ ಅಥವಾ ಗಂಡನಿಂದ ಬೇರ್ಪಟ್ಟು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸುತ್ತಿರುವ ಮಹಿಳೆಯರ ಜೀವನಕ್ಕೆ ಬೆಂಬಲವಾಗುವಂತೆ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ನಮ್ಮ ದೇಶದಲ್ಲಿ ಎಷ್ಟು ಮಹಿಳೆಯರು ಯಾವುದು ಕಾರಣಕ್ಕಾಗಿ ವಿವಾಹವಾಗದೆ ಅಥವಾ ವಿವಾಹವಾಗಿದ್ದು ಕೆಲವೊಂದು ಕ್ಲಿಷ್ಟ ಕಾರಣಗಳಿಂದ ಗಂಡನಿಂದ ಬೇರ್ಪಟ್ಟಿದ್ದು ಅವರಿಗೆ ತಮ್ಮ ಜೀವನವನ್ನು ನಡೆಸುವುದು ಕಷ್ಟವಾಗುತ್ತಿದೆ.

WhatsApp Group Join Now
Telegram Group Join Now

ಇಂತಹ ಮಹಿಳೆಯರಿಗೆ ಆರ್ಥಿಕ ಬೆಂಬಲವನ್ನ ಒದಗಿಸುವುದು ನಮ್ಮ ಸರ್ಕಾರದ ಕರ್ತವ್ಯವಾಗಿದೆ. ದಿನಬಳಕೆಯ ವಸ್ತುವಿಗೂ ಸಂಕಷ್ಟ ಎದುರಿಸುತ್ತಿರುವ ಮಹಿಳೆಯರಿಗೆ ಈ ಯೋಜನೆಯು ಒಂದು ಆಸರೆಯಾಗಿದೆ. ಇನ್ನು 65 ವರ್ಷ ಮೇಲ್ಪಟ್ಟ ವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರು ರಾಷ್ಟ್ರೀಯ ವೃದ್ಧಾಪ್ಯ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಬಡತನದ ರೇಖೆ ಗಳಿಗಿಂತಲೂ ಕೂಡ ಕಡಿಮೆ ಆರ್ಥಿಕತೆಯನ್ನು ಹೊಂದಿರುವ ಮಹಿಳೆಯರಿಗೆ ಮನಸ್ವಿನಿ ಯೋಜನೆಯು ಸಹಕಾರಿಯಾಗಿದೆ. ಇಂತಹ ಮಹಿಳೆಯರಿಗೆ ಆರ್ಥಿಕ ನೆರವನ್ನು ನೀಡುವುದರ ಮೂಲಕ ಅವರ ದಿನನಿತ್ಯದ ಆಹಾರ ಪದ್ಧತಿಗೆ ತೊಂದರೆಯಾಗದಂತೆ ಅವರನ್ನ ಮೇಲಕ್ಕೆತ್ತಲು ಸರಕಾರ ಈ ಯೋಜನೆಯಡಿ ಶ್ರಮಿಸುತ್ತಿದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಮನಸ್ವಿನಿ ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಹತೆ

ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವವರು 40 ವರ್ಷದಿಂದ 65 ವರ್ಷದವರಾಗಿರಬೇಕು. ನಗರ ಪ್ರದೇಶಗಳಲ್ಲಿ ಬಡತನದ ರೇಖೆಗಳಿಗಿಂತ ಕಡಿಮೆ ಆರ್ಥಿಕತೆಯನ್ನು ಹೊಂದಿರಬೇಕು. ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 12000 ಗಳಿಗಿಂತ ಹೆಚ್ಚಿನ ವಾರ್ಷಿಕ ಆದಾಯವನ್ನು ಹೊಂದಿರಬಾರದು. ಇತರ ಯಾವುದೇ ಯೋಜನೆ ಅಡಿ ಅಥವಾ ಖಾಸಗಿಯಾಗಲಿ ಸಾರ್ವಜನಿಕವಾಗಲಿ ಯಾವುದೇ ರೀತಿಯ ಪಿಂಚಣಿಯನ್ನ ತೆಗೆದುಕೊಳ್ಳುವವರಾಗಿರಬಾರದು.

ತಿಂಗಳ ವೇತನವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಒಮ್ಮೆ ನೀವು 65 ವರ್ಷಕ್ಕಿಂತ ಹೆಚ್ಚಿನವರಾಗಿದ್ದರೆ ನಿಮಗೆ ಈ ಮನಸ್ವಿನಿ ಯೋಜನೆಯ(Manaswini Scheme) ಲಾಭವನ್ನು ಪಡೆಯಲು ಸಾಧ್ಯವಿಲ್ಲ ನೀವು ರಾಷ್ಟ್ರೀಯ ವೃದ್ಧಾಪ್ಯ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಒಂದೊಮ್ಮೆ ನೀವು ವಿಚ್ಛೇದಿತರಾಗಿದ್ದು ಮರು ವಿವಾಹವಾದರೆ ಅಥವಾ ಅವಿವಾಹಿತರು ವಿವಾಹವಾದರೆ ನಿಮಗೆ ಈ ಮನಸ್ವಿನಿ ಯೋಜನೆಯ ಪ್ರಯೋಜನವನ್ನು ರದ್ದುಗೊಳಿಸಲಾಗುತ್ತದೆ.

ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ನಿಮ್ಮ ಹತ್ತಿರವಿರುವ ಸರಕಾರಿ ಕಚೇರಿಗೆ ಅಥವಾ ಅಟಲ್ ಜಿ ಸ್ನೇಹ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ಕೇಳುವ ದಾಖಲಾತಿಯನ್ನು ಒದಗಿಸುವುದರ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದು. ಇದಕ್ಕೆ ಯಾವುದೇ ರೀತಿಯ ಆನ್ಲೈನ್ ಸೇವೆಗಳು ಲಭ್ಯವಿಲ್ಲ.

ದಾಖಲಾತಿಗಳ ಅಗತ್ಯತೆ

ಅವಿವಾಹಿತರು ಹಾಗೂ ವಿಚ್ಛೇದಿತರು, ವಿವಾಹವಾಗದೆ ಅಥವಾ ವಿಚ್ಛೇದನವಾಗಿರುವುದರ ಬಗ್ಗೆ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ. ಅಂತ್ಯೋದಯ ಕಾರ್ಡ್ ಅನ್ನು ಒದಗಿಸಬೇಕು. ನಿಮ್ಮ ವಯಸ್ಸಿನ ಬಗ್ಗೆ ಒಂದು ಪ್ರಮಾಣ ಪತ್ರವನ್ನು ಒದಗಿಸಬೇಕು. ನಿಮ್ಮ ಎಲೆಕ್ಷನ್ ಕಾರ್ಡ್ ಹಾಗೂ ಮನೆಯ ವಿಳಾಸದ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.

ಇದಿಷ್ಟು ದಾಖಲೆಗಳನ್ನ ಒದಗಿಸುವುದರ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದು. ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲಿಸಿ, ದಾಖಲೆಗಳು ಸರಿಯಾಗಿದ್ದರೆ ನಿಮ್ಮ ಖಾತೆಗೆ ಪ್ರತಿ ತಿಂಗಳು 500 ವರೆಗೆ ಮಾಸಾಶನ ವರ್ಗಾವಣೆ ಆಗುತ್ತದೆ. ಒಂದು ವೇಳೆ ನಿಮ್ಮ ದಾಖಲಾತಿಗಳು ಸರಿಯಾಗಿರದೆ ಇದ್ದಲ್ಲಿ ಅರ್ಜಿಯು ರಿಜೆಕ್ಟ್ ಆಗುತ್ತದೆ.

ಒಟ್ಟಿನಲ್ಲಿ ಸರ್ಕಾರ ಮಹಿಳೆಯರಿಗಾಗಿ ಸಾಲು ಸಾಲು ಯೋಜನೆಯನ್ನು ತರುವುದರ ಮೂಲಕ ಮಹಿಳೆಯರ ಅಭಿವೃದ್ಧಿ ಹಾಗೂ ಕಲ್ಯಾಣಕ್ಕಾಗಿ ಬಹಳ ಶ್ರಮಿಸುತ್ತಿದೆ. ಅಗತ್ಯತೆ ಇದ್ದವರು ಇದರ ಪ್ರಯೋಜನವನ್ನು ಪಡೆದುಕೊಂಡು ಸ್ವಾವಲಂಬಿಯಾಗಿ ಜೀವನ ನಡೆಸಲು ಸಹಕಾರಿಯಾಗಿದೆ. 9 ದಿನಗಳ ಕಾಲ ನಡೆಯುವ ಸ್ತ್ರೀಶಕ್ತಿ ಆರಾಧನೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಮಹಿಳೆಯರ ಸದೃಢತೆಗಾಗಿ ದಿನವಿಡೀ ಶ್ರಮಿಸುತ್ತಿದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ 2ನೇ ಕಂತಿನ ಹಣ ಬಿಡುಗಡೆ ಆದರು ನಿಮಗೆ ಯಾಕೆ ಬಂದಿಲ್ಲ?

ಇದನ್ನೂ ಓದಿ: ವಿಕೇಂಡ್ ನಲ್ಲಿ ಏರಿಕೆ ಕಂಡ ಚಿನ್ನದ ಬೆಲೆ! ಹೀಗಿದೆ ನೋಡಿ ಇಂದಿನ ಆಭರಣಗಳ ದರ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram