ಈಗ ಯಾವುದೇ ಸರ್ಕಾರಿ ಅಥವಾ ಪ್ರೈವೇಟ್ ಹುದ್ದೆ ಬೇಕು ಎಂದರೆ ಡಿಗ್ರೀ ಡಬಲ್ ಡಿಗ್ರಿ ಪಾಸ್ ಆಗಿ ಇರಬೇಕು ಎಂದು ಹೇಳುವ ಉದ್ಯೋಗ ಸಂಖ್ಯೆ ಜಾಸ್ತಿ ಇದೆ. ಆದರೆ ಈಗ ಕೋರ್ಟ್ ನಲ್ಲಿ SSLC ಪಾಸ್ ಆಗಿರುವವರಿಗೆ ಉದ್ಯೋಗ ಖಾಲಿ ಇದ್ದೂ ಆಸಕ್ತರು ಅರ್ಜಿ ಸಲ್ಲಿಸಬಹುದು.
ಹುದ್ದೆಯ ಬಗ್ಗೆ ಪೂರ್ಣ ವಿವರಗಳು :- ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮಂಡ್ಯ ಘಟಕದಲ್ಲಿ ಇರುವ ಹಲವು ನ್ಯಾಯಾಲಯಗಳಲ್ಲಿ ಖಾಲಿ ಇರುವ ಇತ್ತು 41 Peon ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲಾಖೆ ಸೂಚಿಸಿದೆ.
ಜಾತಿ ವಾರು ಖಾಲಿ ಇರುವ ಹುದ್ದೆಗಳ ಸಂಖ್ಯೆ :- ಸಾಮಾನ್ಯ ಅಭ್ಯರ್ಥಿ 18 ಹುದ್ದೆಗಳು, ಪರಿಶಿಷ್ಟ ಜಾತಿ 7 ಹುದ್ದೆಗಳು, ಪರಿಶಿಷ್ಟ ಪಂಗಡ 4 ಹುದ್ದೆಗಳು ಪ್ರವರ್ಗ1 2 ಹುದ್ದೆಗಳು, ಪ್ರವರ್ಗ-2 (ಎ) 6 ಹುದ್ದೆಗಳು, ಪ್ರವರ್ಗ-2 (ಬಿ) 2 ಹುದ್ದೆಗಳು ಹಾಗೂ ಪ್ರವರ್ಗ-3 (ಎ) 1 ಹುದ್ದೆಗೆ ಹಾಗೂ ಪ್ರವರ್ಗ-3 (ಬಿ) 1 ಹುದ್ದೆಗಳು ಇವೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ವಿದ್ಯಾರ್ಹತೆಯ ಮಾಹಿತಿ :- ಕರ್ನಾಟಕ ಪ್ರಾಥಮಿಕ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಇಲ್ಲವೇ ಅದಕ್ಕೆ ಸಮಾನವಾದ ವಿದ್ಯಾರ್ಹತೆ ಹೊಂದಿರಬೇಕು ಜೊತೆಗೆ ಕಡ್ಡಾಯವಾಗಿ ಕನ್ನಡ ಓದಲು ಮತ್ತು ಬರೆಯಲು ಬರಬೇಕು.
ತತ್ಸಮಾನ ವಿದ್ಯಾರ್ಹತೆಯ ಬಗ್ಗೆ ಮಾಹಿತಿ :-
- ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಅಥವಾ ಭಾರತೀಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಮಂಡಳಿ (ಐಎಸ್‌ಎಸ್) 10ನೇ ತರಗತಿ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು.
- ಇತರ ಯಾವುದೇ ರಾಜ್ಯ ಸರ್ಕಾರಗಳ ಪರೀಕ್ಷಾ ಮಂಡಳಿಗಳು ನಡೆಸುವ 10ನೇ ತರಗತಿ ಪರೀಕ್ಷೆ ಅಥವಾ ರಾಷ್ಟ್ರೀಯ ಮುಕ್ತ ಶಿಕ್ಷಣ ಸಂಸ್ಥೆ (ಎನ್’ಐಒಎಸ್) ನಡೆಸುವ ಶಿಕ್ಷಣ ಕೋರ್ಸ್ ಮುಗಿಸಿರಬೇಕು.
- ಕರ್ನಾಟಕ ಪ್ರಾಥಮಿಕ ಶಿಕ್ಷಣ ಪರೀಕ್ಷಾ ನಡೆಸುವ ಶಿಕ್ಷಣ ಮಟ್ಟದ ಕೋರ್ಸ್ ಮುಗಿಸಿರಬೇಕು.
ಇದನ್ನೂ ಓದಿ: ಡಿಪ್ಲೊಮಾ ಓದಿದವರಿಗೆ ಕೆಪಿಸಿಸಿ ಯಲ್ಲಿ ಉದ್ಯೋಗ ಖಾಲಿ ಇದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲಾಖೆ ಕೋರಿದೆ.
ವಯಸ್ಸಿನ ಮಿತಿ ಹೀಗಿದೆ :- ಅರ್ಜಿ ಸಲ್ಲಿಸುವವರ ವಯಸ್ಸು 18 ರಿಂದ 35 ವರ್ಷಗಳ ಮಧ್ಯೆ ಇರಬೇಕು. ಮೀಸಲಾತಿ ವರ್ಗಗಳಿಗೆ ವಯಸ್ಸಿನ ಮಿತಿಯಲ್ಲಿ ರಿಯಾಯಿತಿ ಲಭ್ಯವಿದೆ. 2 ಎ, 2 ಬಿ, 3 ಎ, 3 ಬಿ ವಿಭಾಗದ ಅಭ್ಯರ್ಥಿಗಳಿಗೆ 3 ವರ್ಷಗಳ ರಿಯಾಯಿತಿ ಇದ್ದೆ ಹಾಗೂ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇರುತ್ತದೆ.
ಅರ್ಜಿ ಶುಲ್ಕ ಹೀಗಿದೆ :- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವ ಅಗತ್ಯ ಇಲ್ಲ . ಸಾಮಾನ್ಯ ವರ್ಗದವರು 300 ರೂಪಾಯಿ ಅರ್ಜಿ ಶುಲ್ಕ ನೀಡಬೇಕು. ಪ್ರವರ್ಗ2 ಎ ಮತ್ತು 2 ಬಿ, 3 ಎ, 3 ಬಿ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು 150 ರೂಪಾಯಿ ಅರ್ಜಿ ಶುಲ್ಕ ನೀಡಬೇಕು. ಅಭ್ಯರ್ಥಿಗಳು ಆನ್ಲೈನ್ ಮೂಲಕ ಶುಲ್ಕ ಪಾವತಿ ಮಾಡಬೇಕು.
ನೇಮಕಾತಿ ನಿಯಮಗಳ ಪ್ರಕಾರ. 10ನೇ ತರಗತಿಯ ಪರೀಕ್ಷೆಯಲ್ಲಿ ಪಡೆದ ಗರಿಷ್ಠ ಅಂಕಗಳ ಆಧಾರದ ಮೇಲೆ ಪ್ರತಿ ಹುದ್ದೆಗೆ 10 ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಅರ್ಹ ಅಭ್ಯರ್ಥಿಗಳನ್ನು ಈ ಸಂದರ್ಶನದ ನಂತರ ನೇಮಕ ಮಾಡಿಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ 1000 ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ವಿಸ್ತರಣೆ ಆಗಿದೆ.