Manvita kamath: ತಾಯಿಯ “ಅಸ್ತಿ ವಿಸರ್ಜನೆ” ಮಾಡಿದ ನಟಿ ಮಾನ್ವಿತಾ

Manvita kamath: ಕೆಂಡಸಂಪಿಗೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಕ್ಕೆ ಎಂಟ್ರಿ ಕೊಟ್ಟ ನಟಿ ಮಾನ್ವಿತ ಕಾಮತ್ ಅವರ ತಾಯಿ ಏಪ್ರಿಲ್ 15 ನೇ ತಾರೀಕು ನಿಧನರಾಗಿದ್ದರು. ಮಾನ್ವಿತಾ ಕಾಮತ್ ಅವರ ತಾಯಿಗೆ ಕಿಡ್ನಿ ಸಮಸ್ಯೆ ಇತ್ತು ಅವರಿಗೆ ಕಿಡ್ನಿ ಕಸಿ ಮಾಡಿಸಲಾಗಿತ್ತು ಅಷ್ಟೇ ಅಲ್ಲದೆ ಅವರಿಗೆ ಎರಡು ಬಾರಿ ಹೃದಯಾಘಾತ ಕೂಡ ಆಗಿತ್ತಂತೆ ಕಳೆದ ಎರಡು ತಿಂಗಳಿಂದ ಮಾನ್ವಿತ ಅವರ ತಾಯಿ ಬನ್ನೇರುಘಟ್ಟ ರಸ್ತೆ ಯಲ್ಲಿರುವ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಮಾನ್ವಿತ ಅವರು ತಾಯಿ ಯನ್ನು ಉಳಿಸಿಕೊಳ್ಳಲು ಎಷ್ಟು ಪ್ರಯತ್ನ ಪಟ್ಟರು ಕೂಡ ಚಿಕಿತ್ಸೆ ಫಲಿಸದೆ ಅವರು ಏಪ್ರಿಲ್ 15ನೇ ತಾರೀಕು ನಿಧನರಾಗಿದ್ದರು.

WhatsApp Group Join Now
Telegram Group Join Now

ಅಮ್ಮ ನನ್ನು ಕಳೆದುಕೊಂಡ ಮೇಲೆ ಮಾನ್ವಿತಾ ಅವರಿಗೆ ಇಡೀ ಚಿತ್ರರಂಗ ಸಾಂತ್ವನ ಹೇಳಿದ್ದು ಹಾಗೂ ಅಮ್ಮನ ಬಗ್ಗೆ ಸೋಶಿಯಲ್ ಮೀಡಿಯಾ ದಲ್ಲಿ ಭಾವುಕ ಪೋಸ್ಟನ್ನು ಹಂಚಿಕೊಂಡಿದ್ದರು ಇದೀಗ ಅಮ್ಮನ ಆಸ್ತಿ ವಿಸರ್ಜನೆ ಕಾರ್ಯ ಗಳನ್ನು ಮಾನ್ವಿತ ಅವರು ಮಾಡುತ್ತಿದ್ದು ಅದರ ಕೆಲವು ವಿಡಿಯೋ ಮತ್ತು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು ಈ ರೀತಿ ಬರೆದುಕೊಂಡಿದ್ದಾರೆ “I buried my mother in the ocean. Since then , the birds clean and comb , while securely placeing her favourite Mangalore Jasmin in her hair every morning and waves pull the blanket up to her chin , Stars planting kisses on her forehead Every night. I cannot complete this poem , Amma… Feels empty without you… I hope you find the comfort and peace in the other side of the world.” ಎಂದು ಬರೆದಿದ್ದಾರೆ.

ಇದನ್ನು ಓದಿ: ಅಕ್ಕನ ಮದುವೆಗೆ ಓಡಾಡ್ತೀರೋ ಬುಲೆಟ್ ಪ್ರಕಾಶ್ ಮಗ. ಅಕ್ಕನ ಮದುವೆ ತಯಾರಿ ಬಗ್ಗೆ ರಕ್ಷಕ್ ಹೇಳಿದ್ದೇನು ಗೊತ್ತಾ?

ಮಾನ್ವಿತಾ ಅವರ ತಾಯಿಗೆ ಸಹಾಯ ಮಾಡಿದ್ದ ನಟ ಸೋನು ಸೂದ್

ಹೌದು ಕೊರೋನಾ ಸಂದರ್ಭ ದಲ್ಲಿ ಸಾಕಷ್ಟು ನಿರಾಶಿತ ಜನಕ್ಕೆ ಸಹಾಯ ಮಾಡಿದ ಸೋನು ಸೂದ್ ಅವರು ರಿಯಲ್ ಹೀರೋ ಎಂದು ಅವರನ್ನು ಜನರು ಕರೆಯುತ್ತಿದ್ದರು. ಮಾನ್ವಿತಾ ಅವರ ತಾಯಿ ಅಪೋಲೋ ಆಸ್ಪತ್ರೆಯಲ್ಲಿದ್ದಾಗ ಸೋನು ಸೂದ್ ಅವರು ಸಹಾಯ ಮಾಡಿದ್ದರು ಸೋನು ಸೂದ್ ಅವರಿಗೆ ಮಾನ್ವಿತಾ ಕಾಲ್ ಮಾಡಿ ನನ್ನ ತಾಯಿಗೆ ಸಹಾಯ ಮಾಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರು. “ಸೋನು ಸೂದ್ ಅವರು ನಿಜಕ್ಕೂ ರಿಯಲ್ ಹೀರೋ ಎಲ್ಲದಕ್ಕೂ ನಿಮಗೆ ಧನ್ಯವಾದಗಳು” ಎಂದು ಮಾನ್ವಿತ ಅವರು ಟ್ವೀಟ್ ಮಾಡಿದ್ದರು.

ಚಿತ್ರರಂಗ ಕ್ಕೆ ಬರಲು ಮುನ್ನ ಆರ್.ಜೆ ಆಗಿದ್ದ ಮಾನ್ವಿತಾ ಬಳಿಕ ಸೂರಿ ಅವರ ನಿರ್ದೇಶನದ ಕೆಂಡಸಂಪಿಗೆ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದ್ದರು ಮೊದಲ ಸಿನಿಮಾದಲ್ಲೇ ಮಾನ್ವಿತಾ ಅವರಿಗೆ ತುಂಬಾ ಅಭಿಮಾನಿಗಳ ಬಳಗ ಹುಟ್ಟಿಕೊಂಡಿತ್ತು ಬಳಿಕ ‘ಕನಕ’ ‘ಟಗರು’ ‘ಶಿವ143’ ‘ಹ್ಯಾಪಿ ನ್ಯೂ ಇಯರ್’ ‘ರಿಲ್ಯಾಕ್ಸ್ ಸತ್ಯ’ ‘ತಾರಕಾಸುರ’ ಸೇರಿ ಹಲವು ಸಿನಿಮಾ ಗಳಲ್ಲಿ ನಟಿಸಿದ್ದಾರೆ.

ಇದನ್ನು ಓದಿ: ಹಿರಿಯ ನಟಿ ಮಾಧವಿ ಅವರು ಈಗ ಹೇಗಿದ್ದಾರೆ ಮತ್ತು ಎಲ್ಲಿದ್ದಾರೆ? ಅವರ ಪತಿ ಮತ್ತು ಮಕ್ಕಳು ಹೇಗಿದ್ದಾರೆ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram