ಗರ್ಭವತಿ ಆಗಿರುವ ಮಹಿಳೆಯರಿಗೆ ಹೆರಿಗೆ ಸಮಯದಲ್ಲಿ ಖರ್ಚುಗಳು ಹೆಚ್ಚಾಗಿರುತ್ತವೆ. ಗರ್ಭಿಣಿ ಸ್ತ್ರೀಯರಿಗೆ ಹಾಗೂ ಕಾರ್ಮಿಕ ವರ್ಗಗಳ ಕಾರ್ಮಿಕರಿಗೆ ಅವರ ಮದುವೆಗೆ ಹಾಗೂ ಅವರ ಮಕ್ಕಳ ಮದುವೆಗೆ ಇಲಾಖೆ ಸಹಾಯಧನ ನೀಡುತ್ತಿದೆ.
ಗರ್ಭಿಣಿ ಮಹಿಳೆಯರಿಗೆ ನೀಡುವ ಸಹಾಯಧನದ ಮಾಹಿತಿ :- ಕಾರ್ಮಿಕ ಕಲ್ಯಾಣ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುವ ಮಹಿಳೆಗೆ ಹೆರಿಗೆ ಸಮಯದಲ್ಲಿ ಸಹಾಯಧನ ನೀಡುತ್ತಿದೆ. ಈ ಸಹಾಯಧನವನ್ನು ಪಡೆಯಬೇಕು ಎಂದರೆ ಇಲಾಖೆಗೆ ಮಹಿಳೆಯರು ಮಗು ಜನಿಸಿದ ಆರು ತಿಂಗಳ ಒಳಗಾಗಿ ಸೂಕ್ತ ದಾಖಲೆಗಳನ್ನು ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಸೂಕ್ತ ದಾಖಲೆಗಳನ್ನು ಸಲ್ಲಿಸಿದ ನಂತರ ನಿಮ್ಮ ಅರ್ಜಿಯನ್ನು ಪರಿಶೀಲನೆ ಮಾಡಿ ನಂತರ ನಿಮಗೆ ಹಣವನ್ನು ನೀಡುತ್ತಾರೆ. ಆದರೆ ಈ ಸಹಾಯಧನ ಪಡೆಯಲು ಇಲಾಖೆ ಕೆಲವು ನಿಯಮಗಳನ್ನು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈ ಸಹಾಯಧನ ಪಡೆಯಲು ಇರುವ ನಿಯಮಗಳು :-
- ಕಾರ್ಮಿಕ ಇಲಾಖೆಯಲ್ಲಿ ನಿಮ್ಮ ಹೆಸರನ್ನು ನೋಂದಣಿ ಮಾಡಿದರೆ ಮಾತ್ರ ನಿಮಗೆ ಹೆರಿಗೆ ಸಹಾಯಧನ ಸೌಲಭ್ಯ ಸಿಗುತ್ತದೆ. ನೀವು ಕಾರ್ಮಿಕ ಮಹಿಳೆ ಆಗಿದ್ದು ನೋಂದಣಿ ಆಗದೆ ಇದ್ದರೆ ನಿಮಗೆ ಸಹಾಯಧನ ಸಿಗುವುದಿಲ್ಲ.
- ಮಗುವಿನ ಜನನದ ಬಗ್ಗೆ ಮಾಹಿತಿ ಮತ್ತು ದಾಖಲೆಗಳನ್ನು ನೀಡಿದರೆ ಮಾತ್ರ ನಿಮ್ಮ ಅರ್ಜಿ ಸ್ವೀಕಾರ ಆಗುತ್ತದೆ.
- ಮೊದಲನೇ ಮತ್ತು ಎರಡನೇ ಮಗುವಿಗೆ ಮಾತ್ರ ಈ ಸೌಲಭ್ಯ ಸಿಗುತ್ತದೆ.
- ಮಗು ಜನಿಸಿದ ಆರು ತಿಂಗಳ ಒಳಗೆ ಮಾತ್ರ ನೀವು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಿರಿ.
ಇದನ್ನೂ ಓದಿ: FD ಖಾತೆಯ ಹೂಡಿಕೆಗೆ ಹೆಚ್ಚಿನ ಬಡ್ಡಿದರ ನೀಡುವ 5 ಬ್ಯಾಂಕ್ ಗಳ ಬಗ್ಗೆ ವಿವರ ಇಲ್ಲಿದೆ
ಮದುವೆಯ ಸಹಾಯಾಧನದ ಬಗ್ಗೆ ಮಾಹಿತಿ :-
ಕಾರ್ಮಿಕ ಇಲಾಖೆಯು ಕಾರ್ಮಿಕ ವರ್ಗದಲ್ಲಿ ಕೆಲಸ ಮಾಡುವ ಕಾರ್ಮಿಕರ ಮದುವೆಗೆ ಹಾಗೂ ಅವರ ಕುಟುಂಬದ ಸದಸ್ಯರ ಮದುವೆಗೆ ಸಹಾಯಧನ ನೀಡತ್ತಿದೆ. ಕಾರ್ಮಿಕ ಇಲಾಖೆ ನೀಡುವ ಸಹಾಯಧನವು ಬಡವರ್ಗದವರ ಮದುವೆಯ ಭಾರವನ್ನು ಸ್ವಲ್ಪ ಕಡಿಮೆ ಮಾಡಲಿದೆ. ನೀವು ಈ ಸಹಾಯಧನವನ್ನು ಪಡೆಯಲು ಇಲಾಖೆ ಕೆಲವು ನಿಬಂಧನೆಗಳನ್ನು ತಿಳಿಸಿದೆ. ನಿಯಮಗಳನ್ನು ಸರಿಯಾಗಿ ತಿಳಿದು ಅರ್ಜಿ ಸಲ್ಲಿಸಿ.
ಮದುವೆಗೆ ಸಹಾಯಧನ ಪಡೆಯಲು ಇರುವ ನಿಯಮಗಳು :-
- ಮದುವೆಯ ಸಹಾಯಧನ ಪಡೆಯಬೇಕು ಎಂದರೆ ಮೊದಲು ಕಾರ್ಮಿಕ ಕಲ್ಯಾಣ ಇಲಾಖೆ ನೀಡುವ id card ಹೊಂದಿರಬೇಕು.
- ಸರಕಾರ ಸೂಚಿಸಿರುವ ನಿಯಮದ ಪ್ರಕಾರ ಮದುವೆಯ ಹುಡುಗನ ವಯಸ್ಸು ಕನಿಷ್ಠ 21 ವರ್ಷ ಮತ್ತು ಹುಡುಗಿಯ ವಯಸ್ಸು 18 ವರ್ಷ ಆಗಿರಬೇಕು. ಅಪ್ರಾಪ್ತ ವಯಸ್ಸಿನ ಮದುವೆ ಕಾನೂನು ಬಾಹಿರವಾಗಿದೆ.
- ಒಂದು ಕುಟುಂಬದಲ್ಲಿ ಇಬ್ಬರ ಮದುವೆಗೆ ಮಾತ್ರ ಸಹಾಯಧನ ಪಡೆಯಬಹುದಾಗಿದೆ.
- ಮದುವೆಯ ದಿನಾಂಕದ ನಂತರದ ಆರು ತಿಂಗಳು ಈ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸುವ ಅವಕಾಶ ಇರುತ್ತದೆ.
- ಅರ್ಜಿ ಸಲ್ಲಿಸುವಾಗ ನಿಖರ ದಾಖಲೆಗಳನ್ನು ನೀಡಬೇಕು.
ಗರ್ಭಿಣಿ ಮಹಿಳೆಯರ ಸಹಾಯ ಧನ ಮತ್ತು ಮದುವೆಗೆ ನೀಡುವ ಸಹಾಯಧನದ ಕುರಿತು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿ ಪರಿಶೀಲನೆ ಮಾಡಿ ಇಲ್ಲವೇ ಕಾರ್ಮಿಕ ಇಲಾಖೆಯ ಸಹಾಯವಾಣಿ ಸಂಖ್ಯೆ 155214 ಗೆ ಕರೆ ಮಾಡುವ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಇಲಾಖೆಯ ಅಪ್ಡೇಟ್ ಗಾಳನ್ನು ಶೋಷಿಯಲ್ ಮೀಡಿಯಾದಲ್ಲಿ ಪಡೆಯಲು ಇಲಾಖೆಯ ಫೇಸ್ಬುಕ್ ಐಡಿ https://www.facebook.com/workerswelfare ಅನ್ನು ಫಾಲೋ ಮಾಡಿ.
ಇದನ್ನೂ ಓದಿ: ರೈತರ ಬೆಳೆ ಪರಿಹಾರದ ಹಣ ಸಾಲಕ್ಕೆ ಜಮಾ ಮಾಡಿಕೊಂಡ ಬ್ಯಾಂಕ್ ಗಳಿಗೆ ಮರುಪಾವತಿಸಲು ಸೂಚಿಸಿದ ಸರ್ಕಾರ