ಕಾರು ಯಾರಿಗೆ ತಾನೇ ಇಷ್ಟ ಇಲ್ಲ. ಇಂದು ಪ್ರತಿ ಮನೆಯಲ್ಲಿ ಒಬ್ಬ ಸದಸ್ಯನ ಬಳಿ ಅಂತು ಕಾರು ಇದ್ದೆ ಇರುತ್ತದೆ. ಈಗಿನ ಕಾಲವೇ ಹಾಗೆ ಕಾರ್ ಇಲ್ಲ ಎಂದರೆ ಏನೋ ಬಡವ ಅನ್ನುವ ಮನೋಭಾವ. ಅದೇ ಸೆಕೆಂಡ್ ಹಾಂಡ್ ಕಾರ್ ಇದ್ದರೂ ಸಹ ಅವರನ್ನು ಗೌರವದಿಂದ ಕಾಣುತ್ತಾರೆ. ನಾವು ಮಾಧ್ಯಮ ವರ್ಗದ ಜನ ಹೆಚ್ಚಿನ ಬೆಲೆ ಕೊಟ್ಟು ಒಳ್ಳೆಯ ಕಾರ್ ಖರೀದಿ ಮಾಡುವುದು ಹೇಗೆ ಎಂಬ ಯೋಚನೆ ನಿಮಗೆ ಇದ್ದರೆ ಮಾರುತಿ ಕಂಪನಿಯ ಹೊಸ ಕಾರ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಕಾರಿನ ವೈಶಿಷ್ಯಗಳ ಬಗ್ಗೆ ಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ.
ಕಾರ್ ನ ಬಗ್ಗೆ ಮಾಹಿತಿ :- ಮಾರುತಿ ಸುಜುಕಿ ಅವರು ಮಾರುತಿ ಸುಜುಕಿ ಬಲೆನೊ ಕಾರ್ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಿದ್ದಾರೆ. ಈ ಕಾರ್ ಎಕ್ಸ್ ಶೋ ರೂಂ ಬೆಲೆಯನ್ನು 6.61 ಲಕ್ಷ ರೂಪಾಯಿಯಿಂದ 9.88 ಲಕ್ಷ ರೂಪಾಯಿಗಳವರೆಗೆ ಇದೆ. ಈ ಕಾರ್ ಸಿಗ್ಮಾ, ಡೆಲ್ಟಾ, ಝೀಟಾ ಮತ್ತು ಆಲ್ಫಾ ಎಂಬ 4 ರೂಪಾಂತರಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಮಾರುತಿ ಸುಜುಕಿ ಬಲೆನೊ ಕಾರ್ ವೈಶಿಷ್ಟ್ಯಗಳು :-
ಮಾರುತಿ ಸುಜುಕಿ ಬಲೆನೊದ ವಿಶೇಷತೆಗಳು ಎಂದರೆ 9 ಇಂಚಿನ ಸ್ಮಾರ್ಟ್ ಪ್ಲೇ ಪ್ರೊ ಪ್ಲಸ್ ಟಚ್ಸ್ಕ್ರೀನ್ ಹಾಗೂ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದಿದೆ.ವೈರ್ಲೆಸ್ ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ, ಅಲೆಕ್ಸಾ ವಾಯ್ಸ್ ಕಮಾಂಡ್, ಹೆಡ್ಅಪ್ ಡಿಸ್ಪ್ಲೇ, ವೈರ್ಲೆಸ್ ಫೋನ್ ಚಾರ್ಜಿಂಗ್ ಹಾಗೂ ಸ್ಮಾರ್ಟ್ಫೋನ್ ಪಡೆಯಬಹುದು. ಜೊತೆಗೆ ಸಂಪರ್ಕ, ಕ್ರೂಸ್ ಹಾಗೂ ಸ್ಟೀರಿಂಗ್ ವೀಲ್ ನಿಯಂತ್ರಣಗಳು ಇವೆ. ಮುಂಭಾಗದ ಗಾಜಿನ ಮೇಲೆ ಡಿಜಿಟಲ್ ಮೀಟರ್ ಇದೆ. 6 ಏರ್ಬ್ಯಾಗ್ಗಳನ್ನು ಒಳಗೊಂಡಿದೆ. 360-ಡಿಗ್ರಿ ಕ್ಯಾಮೆರಾ ಹಾಗೂ EBD ಜೊತೆಗೆ ABS ಇವೆ. ISOFIX ಚೈಲ್ಡ್ ಹಾಗೂ ರಿವರ್ಸಿಂಗ್ ಕ್ಯಾಮೆರಾ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್ಗಳು ಈ ಕಾರ್ ವಿಶೇಷತೆ ಆಗಿದೆ. ಹಿಲ್-ಸ್ಟಾರ್ಟ್ ಅಸಿಸ್ಟ್ ಹಾಗೂ ಇನ್ನೂ ಕೆಲವು ವಿಶೇಷತೆಗಳನ್ನು ಬಲೆನೊ ಒಳಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಎಂಜಿನ್ ಮತ್ತು ಮೈಲೇಜ್ ಬಗ್ಗೆ ಮಾಹಿತಿ :-
- ಪೆಟ್ರೋಲ್ ಎಂಜಿನ್: 1.2 ಲೀಟರ್ K12N ಎಂಜಿನ್ ಹಾಗೂ 88 bhp ಶಕ್ತಿ ಮತ್ತು 113 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
- CNG ಎಂಜಿನ್: 1.2 ಲೀಟರ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ಹೊಂದಿದೆ.
- ಮೈಲೇಜ್:- ಪೆಟ್ರೋಲ್: ಒಂದು ಲೀಟರ್ಗೆ 22.94 ಕಿಮೀ ಮೈಲೇಜ್ ನೀಡುತ್ತದೆ. CNG: ಪ್ರತಿ ಕೆಜಿಗೆ 30.61 ಕಿಮೀ ಮೈಲೇಜ್ ನೀಡುತ್ತದೆ.
ಮಾರುತಿ ಸುಜುಕಿ ಕಂಪನಿಯ ಇತಿಹಾಸ:-
1981 ರಲ್ಲಿ ಭಾರತ ಸರ್ಕಾರವು ಜಪಾನಿನ ಸುಜುಕಿ ಕಾರ್ಪೊರೇಷನ್ ಜೊತೆಗೆ ಜಂಟಿ ಉದ್ಯಮವಾಗಿ ಮಾರುತಿ ಉದ್ಯೋಗ ಸಂಸ್ಥೆ (MUL) ಸ್ಥಾಪಿಸಿತು. ಈ ಒಪ್ಪಂದದ ಉದ್ದೇಶ ಭಾರತದಲ್ಲಿ ಕೈಗೆಟುಕುವ ದರದಲ್ಲಿ ವಾಹನಗಳನ್ನು ಉತ್ಪಾದನೆ ಮಾಡುವುದು ಆಗಿತ್ತು. 1982 ರಲ್ಲಿ MUL ತನ್ನ ಮೊದಲ ಉತ್ಪಾದನಾ ಸೌಲಭ್ಯವನ್ನು ಹರಿಯಾಣದ ಗುರುಗ್ರಾಮದಲ್ಲಿ ಸ್ಥಾಪನೆ ಆಯಿತು. ಮಾರುತಿ 800, ಜನಪ್ರಿಯ ಜಪಾನಿನ ಕೀ ಕಾರ್ ಆಧಾರಿತ ಸಣ್ಣ ಕಾರು ಈ ಘಟಕದಿಂದ ಉತ್ಪಾದನೆಯಾದ ಮೊದಲ ವಾಹನವಾಗಿತ್ತು. ನಂತರ 2003 ರಲ್ಲಿ ಭಾರತ ಸರ್ಕಾರವು MUL ನಿಂದ ಹಿಂದೆ ಸರಿಯಿತು, ತನ್ನ ಪಾಲನ್ನು 51% ರಿಂದ 25% ಗೆ ಇಳಿಸಿತು. ಈ ಚಲನೆಯು ಖಾಸಗಿ ಹೂಡಿಕೆಗೆ ಹೆಚ್ಚಿನ ಅವಕಾಶ ಸಿಕ್ಕಿತು. ಹಾಗೂ 2007ರಲ್ಲಿ ಭಾರತ ಸರ್ಕಾರವು ಸುಜುಕಿ ವಾಹನ ಕಾರ್ಪೊರೇಶನ್ಗೆ ತನ್ನ ಉಳಿದ ಷೇರುಗಳನ್ನು ಮಾರಾಟ ಮಾಡಿತು, ಕಂಪನಿಯು ಸಂಪೂರ್ಣವಾಗಿ ಜಪಾನಿನ ಮಾಲೀಕತ್ವ ಪಡೆಯಿತು.
ಇದನ್ನೂ ಓದಿ: ಹೊಸ ವಿನ್ಯಾಸ ಹಾಗೂ ವೈಶಿಷ್ಟ್ಯತೆಯೊಂದಿಗೆ 9 ಸೀಟರ್ ಮಹೀಂದ್ರ ಬೊಲೆರೊ ನಿಯೋ ಪ್ಲಸ್, ಇದರ ಬೆಲೆ ಎಷ್ಟು ಗೊತ್ತಾ?
ಇದನ್ನೂ ಓದಿ: ಹೆಚ್ಚಿನ ಶಕ್ತಿ ಮತ್ತು ಹೆಚ್ಚಿನ ಮೈಲೇಜ್! ಹೊಸ ಟೊಯೋಟಾ ಫಾರ್ಚುನರ್, ಇದರ ಈಗಿನ ಬೆಲೆ ಎಷ್ಟು ಗೊತ್ತಾ?