ಧ್ರುವ ಸರ್ಜಾ ಮಗಳ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡು ಮೇಘನಾ; ಕಣ್ಮಣಿ ಎಂದು ಕ್ಯೂಟ್ ಹೆಸರಿಟ್ಟ ಮೇಘನಾ

ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ಸ್ ಮೇಘನಾ ಹಾಗೂ ಚಿರು ಜೋಡಿ ಮೇಲೆ ಅದ್ಯಾವ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ ಮೇಘನಾ ಗರ್ಭಿಣಿ ಆಗಿದ್ದಾಗಲೇ ಚಿರು ಇನ್ನಿಲ್ಲವಾದ್ರು. ಬಂದ ನೋವನ್ನೆಲ್ಲ ಸಹಿಸಿಕೊಂಡು ಎಲ್ಲವನ್ನು ಸರಿದೂಗಿಸಿಕೊಂಡು ಹೋಗುವ ಮೂಲಕ ಚಿರು ನೆನಪಿನಲ್ಲೇ ರಾಯನ್ ಜೊತೆಗೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ ನಟಿ ಮೇಘನಾ ರಾಜ್. ಇತ್ತ ಕಡೆ ಕಿರುತೆರೆ ಹಿರಿತೆರೆ ಎರಡರಲ್ಲೂ ಸಕ್ರಿಯರಾಗಿ ಮಗನ ಲಾಲನೆ ಪಾಲನೆಯಲ್ಲೂ ಬ್ಯುಸಿಯಾಗಿರುವ ಮೇಘನಾ ಆಗಾಗ ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮದ ಮುಂದೆ ಕಾಣಿಸಿಕೊಳ್ಳುತ್ತಿರುತ್ತಾರೆ. ಇನ್ನು ಮೊನ್ನೆಯಷ್ಟೇ ಮೈದುನ ಧ್ರುವ ಪತ್ನಿ ಪ್ರೇರಣಾ ಸೀಮಂತ ಕಾರ್ಯಕ್ರಮದಲ್ಲಿ ಎಲ್ಲಿಯೂ ಮೇಘನಾ ಅವ್ರು ಕಾಣಿಸಿಕೊಂಡಿರಲಿಲ್ಲ ಹೀಗಾಗಿ ಸಾಕಷ್ಟು ಜನ ಸಾಕಷ್ಟು ರೀತಿಯಲ್ಲಿ ಮಾತನಾಡಿಕೊಂಡಿದ್ರು ಅದ್ರೆ ಮೇಘನಾ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ.

WhatsApp Group Join Now
Telegram Group Join Now

ಮೊನ್ನೆ ಮೊನ್ನೆಯಷ್ಟೇ ಪ್ರೇರಣಾ 2ನೆ ಮಗುವಿಗೆ ಜನ್ಮ ನೀಡುದ್ರು ಆಗ ಆಸ್ಪತ್ರೆಯ ಬಳಿಗೆ ಹೋಗಿ ಮೇಘನಾ ದ್ರುವ ಮಗುವನ್ನ ನೋಡಿ ಅಪ್ಪಿ ಮುದ್ದಾಡಿ ಪ್ರೇರಣಾ ಅರೋಗ್ಯ ವಿಚಾರಿಸಿ ಬಂದಿದ್ರು. ಮಧ್ಯಮದವರ ಜೊತೆಗೂ ಈ ಬಗ್ಗೆ ನಟಿ ಮೇಘನಾ ಪ್ರತಿಕ್ರಿಯೇ ಕೊಟ್ಟಿದ್ರು ಹೌದು ನಮ್ಮ ಮನೆಗೆ ಮತ್ತೊಂದು ದೇವರ ಆಗಮನವಾಗಿದೆ ಧ್ರುವನಿಗೆ ಗಂಡು ಮಗು ಆಗಿದೆ ಅಂತ ಹೇಳಿಕೊಂಡು ಖುಷಿಪಟ್ಟಿದ್ರು. ಇದೀಗ ಧ್ರುವ ಸರ್ಜಾ ಮೊದಲ ಮಗಳ ಜೊತೆಗೆ ಕಾಲ ಕಳೆದಿರುವ ಮೇಘನಾ ಮಗುವಿನ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಖುಷಿ ಪಟ್ಟಿದ್ದಾರೆ. ಅಲ್ದೇ ಕ್ಯೂಟ್ ಫೋಟೋಗೆ ಚಿಕ್ಕದಾದ ಕಾಪ್ಶನ್ ನೀಡಿದ್ದು ಅಭಿಮಾನಿಗಳಂತು ಫುಲ್ ಖುಷ್ ಆಗಿದ್ದಾರೆ.

 

View this post on Instagram

 

A post shared by Meghana Raj Sarja (@megsraj)

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಇದನ್ನೂ ಓದಿ: ನಿಮಗೆ ದರ್ಶನ್, ಶಿವಣ್ಣ, ಯಶ್ ಮಾತ್ರನ ಕಾಣಿಸೋದಾ? ದರ್ಶನ್ ಖಡಕ್ ಮಾತು; ಕನ್ನಡ ನಾಡಲ್ಲಿ ತಮಿಳನ್ನ ಬೆಳೆಸ್ತಾ ಇರೋರು ಯಾರು?

ಕುಟ್ಟಿಮ್ಮ ಮತ್ತೆ ಕಣ್ಮಣಿ ಅಂತ ಬರೆದು ವಿಶೇಷ ಫೋಟೋ ಶೇರ್ ಮಾಡಿದ ಮೇಘನಾ

ಹೌದು ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿಗೆ ಹೆಣ್ಣು ಮಗು ಹುಟ್ಟಿದಾಗ ಎಲ್ಲರು ಖುಷಿಪಟ್ಟಿದ್ರು. ಮನೆಗೆ ಯುವರಾಜ ಇದ್ದಾನೆ ಆಗಾಗಿ ಈಗ ಯುವರಾಣಿಯ ಆಗಮನವಾಗಿದೆ ಅದು ಧ್ರುವ ಆಸೆ ಕೂಡ ಅಂತ ಮೇಘನಾ ಹೇಳಿಕೊಂಡಿದ್ರು. ಹೌದು ನಟಿ ಮೇಘನಾ ರಾಜ್ ಧ್ರುವ ಮಗು ಬಗ್ಗೆ ಮಾತನಾಡಿ ಈಗಾಗಲೇ ಮನೆಗೊಬ್ಬ ಗಂಡು ಮಗ ಇದ್ದಾನೆ. ಈಗ ಹೆಣ್ಣು ಮಗು ಹುಟ್ಟಿರೋದು ಬಹಳ ಖುಷಿ ನೀಡಿದೆ. ಧ್ರುವ ಏನು ಆಸೆ ಪಟ್ಟಿದ್ನೋ, ಅದೇ ಆಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದಿದ್ದಾರು. ಇನ್ನು ಮಗು ಜನಿಸುವುದಕ್ಕೂ ಕೆಲ ಕ್ಷಣಗಳ ಹಿಂದಷ್ಟೇ ಮಾತನಾಡಿದ್ದ ಮೇಘನಾ ರಾಜ್, ಹೆಣ್ಣು ಮಗು ಬೇಕು ಎಂದು ಧ್ರುವ ಈಗಾಗಲೇ ಹೇಳಿದ್ದಾನೆ. ಹೆಣ್ಣಾಗಲಿ, ಗಂಡಾಗಲಿ ಆರೋಗ್ಯವಾಗಿ ಮಗು ಜನಿಸಲಿ ಎಂದಿದ್ದರು.

ಅದೇ ರೀತಿ ನಟ ಧ್ರುವ ಸರ್ಜಾ ಆಸೆ ಪಟ್ಟಂತೆ ಹೆಣ್ಣು ಮಗು ಜನಿಸಿತ್ತು. ಅಂದಿನಿಂದ ದ್ರುವ ಸರ್ಜಾ ದಂಪತಿ ಎಲ್ಲಿಯೂ ಮಗಳ ಫೋಟೋ ಹಂಚಿಕೊಂಡಿರಲಿಲ್ಲ ಮೇಘನಾ ಸಹ ಎಲ್ಲಿಯೂ ಮಗುವಿನ ಬಗ್ಗೆ ಮಾತನಾಡಿರಲಿಲ್ಲ ಮಗುವಿನ ಫೋಟೋ ಕೂಡ ಹಂಚಿಕೊಂಡಿರಲಿಲ್ಲ. ಅದ್ರಿಗ ದ್ರುವ ಸರ್ಜಾ ಮಗುವಿನ ಫೋಟೋವನ್ನ ಮೇಘನಾ ಹಂಚಿಕೊಂಡು ಸುಂದರವಾದ ಒಳ್ಳೆಯ ಹೆಸರಿಟ್ಟಿರೋ ಕಾಪ್ಶನ್ ಹಂಚಿಕೊಂಡಿದ್ದಾರೆ. ಹೌದು ದ್ರುವ ಹಾಗೂ ಪ್ರೇರಣಾ ದಂಪತಿ ಈಗ 2ನೆ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ ಈ ಸಂದರ್ಭದಲ್ಲಿ ಅವ್ರ ಜೊತೆಗಿರೋ ಮೇಘನಾ ದ್ರುವ ಮೊದಲ ಮಗಳ ಜೊತೆಗೆ ಕಾಲ ಕಳೆದಿದ್ದು ಮಗಳ ಜೊತೆಗೆ ತೆಗೆದ ಫೋಟೋಗಳನ್ನ ಹಂಚಿಕೊಂಡಿದ್ದಾರೆ.

ಹೌದು ಧ್ರುವ ಮಗಳ(Dhruva Sarja daughter) ಜೊತೆಗೆ ಕಾಲ ಕಳೆದಿರುವ ಮೇಘನಾ ಮಗುವಿನ ಜೊತೆಗೆ ಫೋಟೋಗಳನ್ನ ಕ್ಲಿಕ್ಕಿಸಿಕೊಂಡಿದ್ದಾರೆ. ಅಲ್ದೇ ಅದನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸ್ನೇಹಿತರೆ ನಿಮ್ಮೆಲ್ಲರಿಗೂ ಗೊತ್ತಿರುವಂತೆ ಧ್ರುವ ಹಾಗೂ ಪ್ರೇರಣಾ ದಂಪತಿ ತಮ್ಮ ಮೊದಲ ಮಗುವಿಗು ಇನ್ನು ಕೂಡ ಯಾವುದೇ ಹೆಸರಿಟ್ಟಿಲ್ಲ, ಹೌದು ಇನ್ನು ಮಗುವಿಗೆ ನಾಮಕರಣ ಶಾಸ್ತ್ರ ನಡೆದಿಲ್ಲ. ಅದ್ರೆ ಮನೆಯಲ್ಲಿ ಯಾವ ರೀತಿಯಾಗಿ ಮಗಳನ್ನ ಕರೆಯುತ್ತಾರೋ ಗೊತ್ತಿಲ್ಲ ಅದನ್ನ ಧ್ರುವ ಆಗ್ಲಿ ಪ್ರೇರಣಾ ಆಗ್ಲಿ ಅಧಿಕೃತವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಅದ್ರೆ ಮೊದಲ ಬಾರಿಗೆ ಮೇಘನಾ ಮಗುವಿಗೆ ಮುದ್ದಾದ ಹೆಸರಿಟ್ಟಿದ್ದೂ ಅಂದ್ರೆ ಪ್ರೀತಿಯಿಂದ ಧ್ರುವ ಅವ್ರ ಮಗಳನ್ನ ಕಣ್ಮಣಿ ಅಂತ ಕರೆಯುತ್ತಾರೆ.

ಹೀಗಾಗಿ ಮಗುವಿನ ಜೊತೆಗಿನ ಫೋಟೋ ಹಂಚಿಕೊಂಡಿರುವ ಮೇಘನಾ ಕುಟ್ಟಿಮ ಜೊತೆ ಕಣ್ಮಣಿ ಅಂತ ಕಾಪ್ಶನ್ ಬರೆದುಕೊಂಡಿದ್ದಾರೆ. ಹೌದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಮೇಘನಾ ಫೋಟೋ ಒಂದನ್ನ ಹಂಚಿಕೊಂಡು ಧ್ರುವ ಅವ್ರ ಮಗಳನ್ನ ತಾವು ಕಣ್ಮಣಿ ಅಂತ ಕರೆಯೋದಾಗಿ ಹೇಳಿಕೊಂಡಿದ್ದಾರೆ. ಇದನ್ನ ನೋಡಿದ ಅಭಿಮಾನಿಗಳು ಸಹ ಖುಷಿ ಪಟ್ಟಿದ್ದು, ಹೀಗೆ ಖುಷಿಯಾಗಿರಿ ಅಂದ್ರೆ ಮತ್ತೊಂದಷ್ಟು ಜನ ರಾಯನ್ ಚೈಲ್ಡ್ ವುಡ್ ಸಕ್ಕತ್ತಾಗಿರುತ್ತೆ ಎಲ್ಲ ಒಟ್ಟಿಗೆ ಲೈಫ್ ಎಂಜಾಯ್ ಮಾಡಿ ಎಂದಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮೀಯ 2000 ಹಣ ಇಂದು ಈ 10 ಜಿಲ್ಲೆಗಳಿಗೆ ಜಮಾ; ಯಾರಿಗೆ ಹಣ ಬಂದಿಲ್ವೋ ಅವ್ರಿಗೆ ಗುಡ್ ನ್ಯೂಸ್

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram