Meghana Raj: ಸ್ಯಾಂಡಲ್ವುಡ್ ನ ಬಹಳ ಅಪರೂಪದ ಜೋಡಿಗಳಲ್ಲಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಜೋಡಿ ಒಂದು. ಹೌದು ಯಾಕಂದ್ರೆ ನಟಿ ಮೇಘನಾರಾಜ್ ಹಾಗೂ ಚಿರಂಜೀವಿ ಸರ್ಜಾ ಲವ್ ಸ್ಟೋರಿ ಸಿಂಪಲ್ ಅಲ್ಲ. ಇಬ್ಬರೂ ಬರೋಬ್ಬರಿ 10 ವರ್ಷಗಳ ಕಾಲ ಪ್ರೀತಿಸಿ ಕುಟುಂಬದವರನ್ನ ಒಪ್ಪಿಸಿ ಬಹಳ ಅದ್ದೂರಿಯಾಗಿಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರ ಕುಟುಂಬವೂ ಸಿನಿಮಾರಂಗದಲ್ಲೇ ಇದ್ದಿದ್ದರಿಂದ ತಮ್ಮ ಪ್ರೀತಿಯನ್ನು ಒಪ್ಪಿಸುವುದು ಇಬ್ಬರಿಗೂ ಹೆಚ್ಚು ಕಷ್ಟವೇನು ಆಗಿರಲಿಲ್ಲ. ಆದ್ರೆ ಅಷ್ಟು ವರ್ಷಗಳ ಕಾಲ ಪ್ರೀತಿಯನ್ನ ಉಳಿಸಿಕೊಳ್ಳೋದು ಅಷ್ಟು ಸುಲಭದ ಮಾತಲ್ಲ ಆದ್ರೆ ಚಿರು ಹಾಗೂ ಮೇಘನಾ ಬಹಳ ಕಷ್ಟ ಪಟ್ಟು ಪ್ರೀತಿಯನ್ನ ಉಳಿಸಿ ಕೊನೆಯವರೆಗೂ ಒಟ್ಟಿಗೆ ಇರಬೇಕು ಅಂದುಕೊಂಡಾಗ ವಿಧಿ ಮೇಘನಾ ಅವ್ರ ಜೀವನದಲ್ಲಿ ಬಹಳ ಕ್ರೂರವಾಗಿ ಆಟವಾಡಿಬಿಟ್ಟಿತ್ತು.
ಅಷ್ಟು ಪ್ರೀತಿ ಮಾಡ್ತಿದ್ದ ಚಿರು ಅವ್ರನ್ನ ದೇವರು ಕಿತ್ತುಕೊಂಡು ಮೇಘನಾ ಅವ್ರನ್ನ ಒಬ್ಬಂಟಿಯನ್ನಾಗಿ ಮಾಡಿಬಿಟ್ಟಿತ್ತು. ಆದ್ರೆ ಅವ್ರ ಹಿಂದಿನ ಪ್ರೀತಿ ಎಷ್ಟೋ ಜನರಿಗೆ ಸ್ಫೂರ್ತಿ ಆಗಿತ್ತು ಈಗಲೂ ಕೂಡ ಮೇಘನಾ ಅದನ್ನ ಉಳಿಸಿಕೊಂಡು ಹೋಗ್ತಿದ್ದಾರೆ ಚಿರು ಪ್ರತಿರೂಪ ರಾಯನ್ ಜೊತೆಗೆ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದಾರೆ. ಇನ್ನು ಮೇಘನಾ ಹಾಗೂ ಚಿರು ಇಬ್ಬರೂ ಪ್ರೀತಿ ಮಾಡುತ್ತಿದ್ದರೂ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದಕ್ಕೆ ಸಮಯ ತೆಗೆದಿಕೊಂಡಿದ್ದರು. ಅಲ್ಲದೆ ಇಬ್ಬರೂ ತಮ್ಮ ವೃತ್ತಿ ಬದುಕಿನ ಉತ್ತುಂಗದಲ್ಲಿ ಇರುವಾಗಲೇ ಚಿರಂಜೀವಿ ಸರ್ಜಾ ಹಾಗೂ ಮೇಘನಾ ಇಬ್ಬರೂ 2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕ್ರೈಸ್ತ ಹಾಗೂ ಹಿಂದೂ ಎರಡೂ ಸಂಪ್ರದಾಯದಂತೆ ವಿವಾಹವಾಗಿದ್ದರು. ಆದ್ರೆ ವಿಧಿಯಾಟಕ್ಕೆ ಚಿರು ಬಲಿಯಾದ್ರೂ ಮೇಘನಾ ಒಬ್ಬಂಟಿಯಾದ್ರೂ ಹೊಟ್ಟೆಯಲ್ಲಿದ್ದ ಮಗುವಿಗಾಗಿ ಜೀವನ ದೂಡಲು ಆರಂಭಿಸಿದ್ರೂ.. ಅದ್ರಿಗ ಮೇಘನಾ 2ನೇ ಮದುವೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಹೌದು ವೈವಾಹಿಕ ಜೀವನಕ್ಕೆ ಕಾಲಿಟ್ಟು ಎರಡೇ ವರ್ಷ ಕಳೆಯುವುದರೊಳಗೆ ಮೇಘನಾ ಬದುಕಿನಲ್ಲಿ ದುರಂತ ನಡೆದು ಹೋಯಿತು. ಜೂನ್ 7, 2020ಯಲ್ಲಿ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿದ್ದರು. ಆ ವೇಳೆ ಗರ್ಭಿಣಿಯಾಗಿದ್ದ ಮೇಘನಾ ಹೊಟ್ಟೆಯಲ್ಲಿದ್ದ ಮಗುವಿಗಾಗಿ ಭಾರದ ಜೀವನ ನಡೆಸುತ್ತಿದ್ರು. ಅದಾದ ನಂತರ ಮೇಘನಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಚಿರುವಿನ ಪ್ರತಿರೂಪವಾಗಿರೋ ರಾಯನ್ ಜೊತೆಗೆ ಮೇಘನಾ ಕಾಲ ಕಳೆಯುತ್ತಿದ್ದೂ, ಮೇಘನಾ ರಾಜ್ ಮಗ ರಾಯನ್ ಜೊತೆ ಖುಷಿ ಖುಷಿಯಾಗಿದ್ದಾರೆ. ಇನ್ನು ಈಗ ಮೇಘನಾ ಎರಡನೇ ಮದುವೆ ಬಗ್ಗೆ ಅಂತೇ ಕಂತೆಗಳು ಕೇಳಿಬರುತ್ತಿದ್ದು ಈ ಪ್ರಶ್ನೆಗೆ ಮೇಘನಾ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಅದನ್ನ ಕೇಳುದ್ರೆ ನಿಜಕ್ಕೂ ಗ್ರೇಟ್ ಅಂತಿದ್ದಾರೆ.. ಯಾಕಂದ್ರೆ ಗಂಡನಿಲ್ಲದೆ ಮಗುವನ್ನ ನೋಡಿಕೊಳ್ಳೋದು ಚಿತ್ರರಂಗದಲ್ಲಿ ಸಕ್ರಿಯರಾಗಿ ಗುರುತಿಸಿಕೊಳ್ಳೋದು ಅಷ್ಟು ಸುಲಭವಾಲ್ಲ ತಾಯಿಯಾಗಿ ಒಬ್ಬ ಕಲಾವಿದೆಯಾಗಿ ಮೇಘನಾ ಈಗ ಬಹಳ ಮುಖ್ಯ ಪಾತ್ರವನ್ನ ನಿಭಾಯಿಸುತ್ತಿದ್ದಾರೆ. ಈ ಮಧ್ಯೆ ಮತ್ತೊಂದು ಮದುವೆ ವಿಚಾರ ಸಖತ್ ಸೌಂಡ್ ಮಾಡ್ತಿದೆ.
ಇದನ್ನೂ ಓದಿ: ನಿತ್ಯ 10ಲಕ್ಷ ಆದಾಯ ರೈತನ ಅದೃಷ್ಟ ಬದಲಿಸಿದ ಟೊಮೊಟೊ; ಟೊಮೊಟೊ ಬೆಳೆಯೊ ಟೆಕ್ನಿಕ್ ಬದಲಿಸಿತು ರೈತನ ಆದಾಯ
ಮುಂದಿನ ಜೀವನದ ಬಗ್ಗೆ ಮನಬಿಚ್ಚಿ ಮಾತನಾಡಿದ ಮೇಘನಾ
ಇನ್ನು ಮೇಘನಾ(Meghana Raj) ಎರಡನೇ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ. ಎರಡನೇ ಮದುವೆ ಬಗ್ಗೆ ರಿಯಾಕ್ಷನ್ ಕೊಟ್ಟಿರುವ ಮೇಘನಾ ತನ್ನ ಸುತ್ತ ಇರುವ ಅದೆಷ್ಟೋ ಜನರು ಮತ್ತೆ ಮದುವೆಯಾಗಲು ಹೇಳುತ್ತಿದ್ದಾರೆ. ಮತ್ತೆ ಕೆಲವರು ಒಂಟಿಯಾಗಿದ್ದುಕೊಂಡು ಮಗ ರಾಯನ್ ಅನ್ನು ನೋಡಿಕೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ. ಎರಡನ್ನೂ ಹೇಳುವ ಜನರೂ ಇದ್ದಾರೆ ಅಂತ ಹೇಳಿರುವ ಮೇಘನಾ ಎರಡನೇ ಮದುವೆ ಬಗ್ಗೆ ಇನ್ನೂ ಯೋಚಿಸಿಲ್ಲ, ನಾಳೆ ಹೇಗಿರುತ್ತೆ ಅಂತ ನಾನು ಯೋಚಿಸುವುದಿಲ್ಲ. ಮುಂದಿನ ಜೀವನ ಹೇಗಿರುತ್ತೆ ಎಂದೂ ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಾಗಿ ಈ ವಿಚಾರದ ಬಗ್ಗೆ ಇನ್ನೂ ಯೋಚಿಸಿಲ್ಲ ಎಂದಿದ್ದಾರೆ. ಅಲ್ಲದೇ ರಾಯನ್ ಭವಿಷ್ಯ ಅಷ್ಟೆ ಈಗ ನನ್ನ ಕಣ್ಣ ಮುಂದಿರೋದು ರಾಯನ್ ಜವಾಬ್ದಾರಿ ಈಗ ನನ್ನ ಮೇಲಿದೆ. ಚಿತ್ರರಂಗ ಕಿರುತೆರೆ ಎರಡರಲ್ಲೂ ಈಗ ನಂಗೆ ಆಫರ್ ಇದೆ. ಹೀಗಾಗಿ ಎರಡನ್ನೂ ಸರಿದೂಗಿಸಿಕೊಂಡು ಹೋಗುವುದು ನನ್ನ ಮುಂದೆ ಇದೆ ಅಂತ ಹೇಳಿಕೊಂಡಿದ್ದಾರೆ.
ಹೌದು ಈಗ ನಾನು ಈ ಕ್ಷಣದಲ್ಲಿ ಮಾತ್ರ ಜೀವಿಸುವವಳು. ಚಿರು ಹೇಳಿದಂತೆಯೇ ಕೇಳುತ್ತೇನೆ. ನಾಳೆ ನನ್ನ ಮನಸ್ಸು ಏನು ಹೇಳುವುದೋ ಗೊತ್ತಿಲ್ಲ. ಆದರೆ ನನ್ನ ಬದುಕಿನ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ಶಕ್ತಿ ನನ್ನಲ್ಲಿ ಇದೆ. ಚಿರು ಹೇಳಿದಂತೆ ನನ್ನ ಮನಸ್ಸಿನ ಮಾತನ್ನು ನಾನು ಕೇಳುತ್ತೇನೆ. ಎರಡನೆಯ ಮದುವೆಯ ಬಗ್ಗೆ ನಾನು ಏನೇ ನಿರ್ಧಾರ ತೆಗೆದುಕೊಂಡರೂ ಚಿರು ನನ್ನ ಜತೆ ಕೊನೆಯವರೆಗೂ ಇರುತ್ತಾರೆ ಎಂದು ನಂಬಿದ್ದೇನೆ’ ಎಂದಿದ್ದಾರೆ ಮೇಘನಾ ರಾಜ್. ಇನ್ನು ಸದ್ಯ ನಾನು ನನ್ನ ಮಗನ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕಿದೆ. ಆತನಿಗೆ ಉತ್ತಮ ಭವಿಷ್ಯ ಕಲ್ಪಿಸಿ ಕೊಡಬೇಕಾಗಿದೆ. ಹಾಗಾಗಿ ಚಿತ್ರರಂಗಕ್ಕೆ ಮರಳಿ ಬಂದಿದ್ದೇನೆ. ಒಳ್ಳೆಯ ಸಿನಿಮಾವನ್ನು ನೀಡಬೇಕು ,ಒಳ್ಳೆಯ ಬದುಕನ್ನು ನನ್ನ ಮಗನಿಗೆ ಕಟ್ಟಿಕೊಡಬೇಕು ಎಂಬುದಷ್ಟೇ ಸದ್ಯ ನನಗಿರುವ ಆಶಯ. ಉಳಿದದ್ದು ನಂತರ ಯೋಚಿಸುವೆ ಅಂತ ಹೇಳಿದ್ದಾರೆ.
ಇದನ್ನೂ ಓದಿ: ಅಮಾವಾಸ್ಯೆಯ ದಿನ ಈ 3 ವಸ್ತುಗಳನ್ನು ಮನೆಗೆ ತರಬಾರದು! ಲಕ್ಷ್ಮೀ ದೇವಿ ನಿಮ್ಮ ಮನೆಯಿಂದ ಶಾಶ್ವತವಾಗಿ ಹೊರಹೋಗಿ ಬಿಡ್ತಾಳೆ!
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram