Pradeep Eshwar: ಇಡೀ ನಮ್ಮ ರಾಜ್ಯವೇ ಚಿಕ್ಕಬಳ್ಳಾಪುರ ಕ್ಷೇತ್ರದ ಕಡೆ ತಿರುಗಿ ನೋಡುತ್ತಿದೆ. ಅದಕ್ಕೆ ಕಾರಣ ಪ್ರಭಾವಿ ಸಚಿವ ಡಾ ಕೆ ಸುಧಾಕರ್ ಅವರನ್ನು ಸೋಲಿಸಿರುವ ಪ್ರದೀಪ್ ಈಶ್ವರ್. ಹೌದು ಏಳೆಂಟು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ನಗರದಲ್ಲಿ ಸಾಮಾನ್ಯನಾಗಿ ಓಡಾಡಿಕೊಂಡಿದ್ದ ಹುಡುಗ ಇಂದು ಪ್ರಭಾವಿ ಸಚಿವರನ್ನು ಮಣಿಸಿ ಶಾಸಕರಾಗಿ ಆಯ್ಕೆಯಾಗಿ ರಾಜ್ಯವೇ ಹುಬ್ಬೇರಿಸುವಂತೆ ಮಾಡಿದ್ದಾರೆ. ಅಲ್ಲದೇ ಡಾ ಕೆ ಸುಧಾಕರ್ ಅವ್ರ ತವರೂರು ಪೆರೇಸಂದ್ರದವರೇ ಆದ ಪ್ರದೀಪ್ ಈಶ್ವರ್ ಚಿಕ್ಕ ವಯಸ್ಸಲ್ಲೇ ಹೆತ್ತವರನ್ನು ಕಳೆದುಕೊಂಡು ಕಷ್ಟದಲ್ಲೇ ಬೆಳೆದರು. ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಶಿಕ್ಷಣ ಪಡೆದ ನಂತರ ನಗರದ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಬೋಧಕ ವೃತ್ತಿ ಆರಿಸಿಕೊಂಡರು. ಒಬಿಸಿ ಬಲಿಜ ಸಮುದಾಯಕ್ಕೆ ಸೇರಿರುವ ಪ್ರದೀಪ್ ಈಶ್ವರ್, ಕೋಚಿಂಗ್ ಸೆಂಟರ್‌ಗಳಲ್ಲಿ ಪಾಠ ಮಾಡುತ್ತಿದ್ದರು ಅಲ್ಲದೇ ಇವರು ಕೆಲವು ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದರು. ಸದ್ಯಕ್ಕೆ ಚುನಾವಣೆ ಸಂದರ್ಭದಲ್ಲಿ ತಮ್ಮ ತೆಲುಗು ಡೈಲಾಗ್‌ಗಳಿಂದಲೇ ಪ್ರದೀಪ್ ಈಶ್ವರ್ ಗಮನ ಸೆಳೆದಿದ್ದರು. ಸಚಿವ ಡಾ ಕೆ ಸುಧಾಕರ್ ಅವರಿಗೆ ಚುನಾವಣಾ ಕಣದಲ್ಲಿ ತಕ್ಕ ತಿರುಗೇಟು ನೀಡಿದ್ದರು. ಅದರ ಪರಿಣಾಮವೇ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಇಡೀ ರಾಜ್ಯವೇ ನೋಡುವಂತಹ ಫಲಿತಾಂಶ ಹೊರಬಿದ್ದಿತ್ತು, ಹೌದು ಚಿಕ್ಕಬಳ್ಳಾಪುರದ ಜನ ಈ ಬಾರಿ ಬದಲಾವಣೆ ಬಯಸಿ ಪ್ರದೀಪ್ ಈಶ್ವರ್ ಅವರನ್ನು ಗೆಲ್ಲಿಸಿದ್ದಾರೆ. ಅದರಂತೆ ಪ್ರದೀಪ್ ಈಶ್ವರ್ ಸಾಮಾನ್ಯರಲ್ಲಿ ಸಾಮಾನ್ಯರಂತೆ ಜನರ ಮಧ್ಯೆ ನಿಂತು ಕೆಲಸ ಮಾಡ್ತಿದ್ರು ಅದನ್ನ ಕೆಲವರು ಸಹಿಸಿಕೊಳ್ಳದೆ ಬಾಯಿಗೆ ಬಂದ ಹಾಗೆ ಟಿಕೆಗಳನ್ನ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬಾಡಿಗೆ ಮನೆಯಲ್ಲಿದ್ದೋರಿಗೆ ಸಿಗುತ್ತಾ ಫ್ರೀ ಕರೆಂಟ್- ಉಚಿತ 200ಯುನಿಟ್ ಪಡೆಯಲು ಏನ್ ಮಾಡಬೇಕು?
ಪ್ರದೀಪ್ ಈಶ್ವರ್ ವಿರುದ್ಧ ಟೀಕೆ ಯಾಕೆ
ಕೇವಲ ಸಾಮಾನ್ಯ ವ್ಯಕ್ತಿಯಂತಿದ್ದ ಪ್ರದೀಪ್ ಈಶ್ವರ್(Pradeep Eshwar) ಮೊದಲು ಕಾಣಿಸಿಕೊಂಡಿದ್ದು 2016ರಲ್ಲಿ. ಹೌದು ದೇವನಹಳ್ಳಿ ಬಳಿಯ ವಿಜಯಪುರವನ್ನು ತಾಲೂಕು ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಆ ಪ್ರತಿಭಟನೆ ವಿಫಲವಾದ ಬಳಿಕ ಸ್ಥಳೀಯ ಟಿವಿ ಚಾನೆಲ್ ಒಂದರಲ್ಲಿ ನಿರೂಪಕರಾಗಿ ಕೆಲಸ ಆರಂಭಿಸಿದರು. ಬಳಿಕ ಯೂಟ್ಯೂಬ್‌ನಲ್ಲಿ ಕಾಣಿಸಿಕೊಂಡ ಪ್ರದೀಪ್ ಈಶ್ವರ್ ಡಾ ಕೆ ಸುಧಾಕರ್ ವಿರುದ್ಧ ಸಣ್ಣ ಸಣ್ಣ ವಿಡಿಯೋಗಳನ್ನು ಮಾಡಿದ್ದರು. ಸಾಲದಕ್ಕೆ 2018ರ ವಿಧಾನಸಭೆ ಚುನಾವಣೆ ವೇಳೆ ಹಾಲಿ ಶಾಸಕರಾಗಿದ್ದ ಡಾ ಕೆ ಸುಧಾಕರ್ ಅವರನ್ನು ಎದುರು ಹಾಕಿಕೊಂಡರು.ಅವರ ವಿರುದ್ಧ ನಾನಾ ವಿಡಿಯೋಗಳನ್ನು ಮಾಡಿದ್ದರು. ಅಲ್ಲದೇ ಸುಧಾಕರ್ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿದ್ದ ಕೆ ವಿ ನವೀನ್‌ಕಿರಣ್ ಪರ ಭರ್ಜರಿ ಪ್ರಚಾರ ಮಾಡಿ ಸದ್ದು ಮಾಡಿದ್ದರು. ಈ ಕಾರಣಕ್ಕಾಗಿ ಇವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು.
ಆದರೂ ಕೂಡ ಕುಗ್ಗದ ಪ್ರದೀಪ್ ಈಶ್ವರ್ ಪೊಲೀಸ್ ದೌರ್ಜನ್ಯ ಖಂಡಿಸಿ ಏಕಾಂಗಿಯಾಗಿ ಪ್ರತಿಭಟನೆಯನ್ನೂ ಮಾಡಿದ್ದರು. ನಂತರ 2018ರಲ್ಲಿ ಡಾ ಕೆ ಸುಧಾಕರ್ ಗೆದ್ದ ನಂತರ ಪ್ರದೀಪ್ ಈಶ್ವರ್ ಬೆಂಗಳೂರಿಗೆ ಬಂದು, ಸಣ್ಣ ಮಟ್ಟದಲ್ಲಿ ಹುಟ್ಟು ಹಾಕಿದ ಪರಿಶ್ರಮ ನೀಟ್ ಅಕಾಡೆಮಿಯನ್ನು ಇಡೀ ರಾಜ್ಯವೇ ಎದ್ದು ನೋಡುವಂತೆ ಕಟ್ಟಿ ಬೆಳೆಸಿದ್ದರು. ಅದಾದ ನಂತರ ಅನಿರೀಕ್ಷಿತವಾಗಿ ಕಾಂಗ್ರೆಸ್ ನಿಂದ ಟಿಕೆಟ್ ಸಿಗುತ್ತೆ, ಸಚಿವನ ಎದುರೇ ನಿಂತು ಗೆದ್ದುಬಿಗಿದ್ದು ಆಯ್ತು. ಈಗ ಜನಮೆಚ್ಚಿದ ಶಾಸಕನಂತೆ ಕೆಲಸ ಮಾಡ್ತಿದ್ದಾರೆ. ಅವ್ರೆ ಹೇಳುವಂತೆ ನಾನು ದ್ವೇಷದ ರಾಜಕಾರಣ ಮಾಡಲ್ಲ. ಕ್ಷೇತ್ರದ ಪ್ರತಿ ಗ್ರಾಮಕ್ಕೂ ಭೇಟಿ ನೀಡುತ್ತೇನೆ. ನಗರದಲ್ಲಿ ಮನೆ ಮಾಡಲ್ಲ. ಪ್ರತಿ ದಿನ 4 ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸುತ್ತೇನೆ. ಕ್ಷೇತ್ರದ ಅಭಿವೃದ್ಧಿಯಷ್ಟೇ ನನ್ನ ಉದ್ದೇಶ’ಅಂತ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ರು, ಅದರಂತೆ ಕೊಟ್ಟ ಮಾತಿಗೆ ಕಟ್ಟು ಬಿದ್ದು ಹೇಳಿದಂತೆಯೇ ನಡೆದುಕೊಳ್ಳುತ್ತಿದ್ರು, ಕೆಲವರು ಬಾಯಿಗೆ ಬೀಗ ಹಾಕದೆ ಎಲುಬಿಲ್ಲದ ನಾಲಿಗೆ ಅಂತ ಬೇಕಾ ಬಿಟ್ಟಿ ಮಾತನಾಡುತ್ತಿದ್ದಾರೆ.
‘ಆರಂಭದ ಪ್ರಚಾರದ ಗಿಮಿಕ್, ಎಡವಿ ಬೀಳ್ತ್ಯಾ ಹುಷಾರ್’
ಹೌದು ಗೆದ್ದ ದಿನದಿಂದಲೂ ಪ್ರದೀಪ್ ಈಶ್ವರ್(Pradeep Eshwar) ಕ್ಷೇತ್ರ ಸಂಚಾರ ಮಾಡುತ್ತಿದ್ದಾರೆ. ಗ್ರಾಮ ಗ್ರಾಮಗಳಿಗೂ ಭೇಟಿ ನೀಡಿ ಎಲ್ಲ ಗ್ರಾಮಗಳಿಲ್ಲಿರತಕ್ಕಂತಹ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸವನ್ನು ಮಾಡ್ತಾ ಇದ್ದಾರೆ.ಆದರೆ ಇದನ್ನು ಸಹಿಸದ ಕೆಲವರು ಪ್ರದೀಪ್ ಈಶ್ವರ್ ವಿರುದ್ಧವಾಗಿ ನಾಲಿಗೆಯನ್ನು ಹರಿಬಿಡ್ತಿದ್ದಾರೆ. ಇನ್ನು ಸ್ಥಳದಲ್ಲಿಯೇ ಸಮಸ್ಯೆಗಳನ್ನ ಬಗೆಹರಿಸೋದು ಜನರೊಟ್ಟಿಗೆ ತಾನೊಬ್ಬ ಶಾಸಕನಲ್ಲ ತಮ್ಮ ಸೇವಕ ಅಂತ ಒಟ್ಟಿಗೆ ನಿಂತು ಕೆಲಸವನ್ನು ಮಾಡಿಕೊಡುತ್ತಿರೋದನ್ನ ಕೆಲವರಿಗೆ ಆರಗಿಸಿಕೊಳ್ಳಲು ಆಗ್ತಾ ಇಲ್ಲ, ಹೀಗಾಗಿ ಪ್ರದೀಪ್ ಈಶ್ವರ್ ವಿರುದ್ಧ ಇಲ್ಲ ಸಲ್ಲದ ಮಾತುಗಳನ್ನ ಆಡುತ್ತ ಜನರ ದಿಕ್ಕುಗಳು ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ಇನ್ನು ಕ್ಯಾಮರಾ ಇದ್ರೆ ಮಾತ್ರ ಇವ್ನು ಕ್ಷೇತ್ರ ಸಂಚಾರ ಮಾಡೋದು, ಇಲ್ಲ ಅಂದ್ರೆ ಏನು ಮಾಡಲ್ಲ ಕಲಾವಿದ ಅಂತೆಲ್ಲಾ ಕಮೆಂಟ್ಸ್ ಮಾಡ್ತಿದ್ದಾರೆ ಅಲ್ಲಾ ನಾವು ಯಾವ ಕಾಲದಲ್ಲಿದ್ದೀವಿ ಸೋಷಿಯಲ್ ಮೀಡಿಯಾ ಎಷ್ಟು ಪಾಸ್ಟ್ ಇದೆ ಅನ್ನೋದು ಗೊತ್ತಿದ್ರು ಈ ರೀತಿಯ ಮಾತುಗಳು ಸರಿನಾ ಅನೋದು ಕೂಡ ಇಲ್ಲಿ ಪ್ರಶ್ನೆಯಾಗುತ್ತೆ.
ಜನರ ಜೊತೆ ಬೆರೆಯುತ್ತಾ, ಜನರ ಮಧ್ಯದಲ್ಲಿ ನಿಂತು ನಿಮ್ಮಲ್ಲಿ ನಾನು ಒಬ್ಬ ಅಂತ ಹೇಳಿ ಈಗ ಕ್ಷೇತ್ರದಲ್ಲಿ ಕೆಲವೊಂದು ಬದಲಾವಣೆಯನ್ನು ಮಾಡುವ ನಿಟ್ಟಿನಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ ಅನ್ನೋದನ್ನ ಇನ್ನು ಕೂಡ ಜನರು ಅರ್ಥ ಮಾಡಿಕೊಂಡಿಲ್ಲ ಕೆಲವೊಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದಾಗ ನಾವು ಅವರ ಬೆನ್ನನ್ನು ತಟ್ಟಬೇಕು ಅದನ್ನ ಬಿಟ್ಟು ಅವರನ್ನು ಹೀಯಾಳಿಸಿ ಮಾತನಾಡುವುದು ಸರಿಯಲ್ಲ ಅನ್ನೋದು ಕೆಲವರ ಅಭಿಪ್ರಾಯ. ಯಾರೇ ಆದ್ರೂ ಸಹ ಅಭಿವೃದ್ಧಿಪಥದತ್ತ ಕ್ಷೇತ್ರವನ್ನು ಕೊಂಡೊಯ್ತಿದ್ದಾರೆ ಅಂತ ಅಂದಾಗ ಅವರಿಗೆ ನಾವು ಸಾತ್ ಕೊಡಬೇಕು ಅವರ ಜೊತೆ ನಿಂತು ಅವರ ಅಭಿವೃದ್ಧಿ ಕೆಲಸಗಳಿಗೆ ಕೈ ಜೋಡಿಸಬೇಕು, ಇಲ್ಲವಾದರೆ ಸುಮ್ಮನೆ ಇದ್ದುಬಿಡಬೇಕು. ಅದನ್ನು ಬಿಟ್ಟು ಅವರು ಹಾಗೆ ಹೀಗೆ ಪ್ರಚಾರಕ್ಕಾಗಿ ಹೀಗೆ ಮಾಡ್ತಿದ್ದಾರೆ ಪ್ರಾರಂಭದಲ್ಲಿ ಜೋಶ್ ಇರುತ್ತೆ ಅದಕ್ಕೋಸ್ಕರ ಮಾಡುತ್ತಿದ್ದಾರೆ ಅಂತ ಹೇಳಿ ಅವರನ್ನ ಹೀಯಾಳಿಸಬಾರದು ಅನ್ನೋದು ಕೆಲವರ ಅಭಿಪ್ರಾಯ. ಪ್ರದೀಪ್ ಈಶ್ವರ್ ಅವರ ಈ ಸಾಮಾಜಿಕ ಕಳಕಳಿ, ಜನರ ಮಧ್ಯದಲ್ಲಿ ನಿಂತು ಮಾಡ್ತಿರೋ ಅಭಿವೃದ್ಧಿ ಕೆಲಸಗಳು ಅದರ ಬಗ್ಗೆ ನೀವೇನ್ ಹೇಳ್ತೀರಾ ನಿಮ್ಮ ಅನಿಸಿಕೆಗಳನ್ನು ನಮಗೆ ತಿಳಿಸಿ.
ಇದನ್ನೂ ಓದಿ: ಹೆಂಡತಿಯ ಅಕ್ರಮ ಸಂಬಂಧ ಗೊತ್ತಿದ್ರೂ ಸುಮ್ಮನಿದ್ದ ಗಂಡ- ಆದ್ರೂ ಗಂಡನ ಜೀವ ತೆಗೆದ ಹೆಂಡತಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram