MLA Pradeep Eshwar: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಬಾರಿ ಕುತೂಹಲ ಕೆರಳಿಸಿತ್ತು. ಕಾರಣ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಸಚಿವ ಸುಧಾಕರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ನಡುವೆ ಪೈಪೋಟಿ ಜೋರಾಗಿಯೇ ಇತ್ತು. ಸಚಿವರ ಮುಂದೆ ಈ ಬಚ್ಚ ಹುಚ್ಚ ಗೆಲ್ತಾನಾ ಸಾಧ್ಯನೇ ಇಲ್ಲ ಅಂದುಕೊಂಡಿದ್ದವರಿಗೆ ಸಚಿವ ಸುಧಾಕರ್ ಅವರನ್ನು ಸೋಲಿಸುವ ಮೂಲಕ ಸಾಕಷ್ಟು ಸದ್ದು ಮಾಡಿದ್ದ ಪ್ರದೀಪ್ ಈಶ್ವರ್ ಶಾಸಕರಾದ ಮೇಲು ಆ ಹವಾ ಅದೇ ಜೋಶ್ ಉಳಿಸಿಕೊಂಡು ಬರುತ್ತಿದ್ದು, ಚುನಾವಣೆಗೂ ಮುನ್ನ ತಮ್ಮ ಮಾತುಗಳಿಂದಲೇ ಕ್ಷೇತ್ರದ ಜನಮನ ಗೆದ್ದಿದ್ದ ಪ್ರದೀಪ್ ಈಶ್ವರ್ ಗೆಲುವಿನ ಬಳಿಕವೂ ಕ್ಷೇತ್ರವನ್ನ ಮರೆತಿಲ್ಲ, ಪ್ರತಿ ಹಳ್ಳಿ ಪ್ರತಿ ಗ್ರಾಮದ ಪ್ರತಿಯೊಂದು ಮನೆಗೂ ಭೇಟಿ ಕೊಟ್ಟು ಜನರ ಜೊತೆ ಬೆರೆಯುತ್ತಿದ್ದಾರೆ. ಪ್ರಮಾಣ ವಚನ ಸ್ವೀಕರಿಸುವ ದಿನವೇ ಸಾಕು ತಾಯಿಯನ್ನ ಕಳೆದುಕೊಂಡ ಪ್ರದೀಪ್ ಈಶ್ವರ್ ತಾಯಿಯ ಸಾವಿನ ನೋವಿನಿಂದ ಹೊರಬರಲು ಕ್ಷೇತ್ರ ಸಂಚಾರ ಆರಂಭ ಮಾಡಿದ್ದು, ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಕ್ಷೇತ್ರದ ಜನರ ಸಮಸ್ಯೆಗಳನ್ನ ಆಲಿಸಿ ಸಾಧ್ಯವಾದಲ್ಲಿ ಸ್ಥಳದಲ್ಲೇ ಸಮಸ್ಯೆಗೆ ಪರಿಹಾರ ಮಾಡಿಕೊಡು ಮೂಲಕ ಮತ್ತಷ್ಟು ಜನರಿಗೆ ಹತ್ತಿರವಾಗುತ್ತಿದ್ದಾರೆ.
ನಿಮ್ಮೆಲ್ಲರಿಗೂ ಗೊತ್ತಿರುವಂತೆ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಇನ್ನು ಕೂಡ ಸಚಿವ ಸಂಪುಟ ರಚಣೆಯಾಗಿಲ್ಲ ಹೀಗಾಗಿ ಬಹುತೇಕ ಶಾಸಕರು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದು, ಸಚಿವ ಸ್ಥಾನಕ್ಕೆ ಲಾಬಿ ಮಾಡುತ್ತಿದ್ದಾರೆ, ಇನ್ನೂ ಕೆಲವರು ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇವರೆಲ್ಲರುಗಳ ಮಧ್ಯೆ ಪ್ರಥಮ ಬಾರಿಗೆ ತಮ್ಮ ಮಾತುಗಳ ಮೂಲಕವೇ ಚಿಕ್ಕಬಳ್ಳಾಪುರ ಕ್ಷೇತ್ರದ ಜನರ ಮನಸನ್ನ ಗೆದ್ದು ಸಚಿವರನ್ನೇ ಸೋಲಿಸುವ ಮೂಲಕ ಇತಿಹಾಸ ಸೃಷ್ಟಿ ಮಾಡಿರೋ ಶಾಸಕ ಪ್ರದೀಪ್ ಈಶ್ವರ್ ಕೊಂಚ ಭಿನ್ನಾವಾಗಿ ನಿಲ್ಲುತ್ತಾರೆ. ಕಾರಣ ಇಷ್ಟೇ ತಮ್ಮನ್ನು ತಾವು ಕ್ಷೇತ್ರ ಸಂಚಾರದಲ್ಲಿ ತೊಡಗಿಸಿಕೊಂಡಿದ್ದು ಗೆಲ್ಲಿಸಿದ ಕ್ಷೇತ್ರದ ಜನರನ್ನು ಭೇಟಿ ಮಾಡುವ ಮೂಲಕ ಮನೆ ಮನೆಗೆ ತೆರಳುತ್ತಿರುವ ಅವರು ಖುದ್ದಾಗಿ ಅವರೇ ಜನರ ಕಷ್ಟಗಳನ್ನು ಕೇಳುತ್ತಿದ್ದಾರೆ. ಅಲ್ಲದೇ ಕ್ಷೇತ್ರದ ಜನತೆಯೇ ನನಗೆ ತಂದೆ ತಾಯಿ ಎಂದು ಹೇಳಿಕೊಂಡಿದ್ದ ಅವರು ಈಗ ಅದರಂತೆಯೇ ನಡೆದುಕೊಳ್ಳುತ್ತಿರುವ ಪ್ರದೀಪ್ ಈಶ್ವರ್ ಗೆದ್ದ ಬಳಿಕ ಕ್ಷೇತ್ರದ ಜನರ ಮನೆ ಮನೆಗೆ ಭೇಟಿ ಮಾಡಿ ಧನ್ಯವಾದ ತಿಳಿಸುತ್ತೇನೆ ಎಂದು ಅವರು ಹೇಳಿಕೊಂಡಿದ್ದರು, ಅದರಂತೆ ಈಗ ನಡೆದುಕೊಳ್ಳುತ್ತಿದ್ದಾರೆ. ಹೌದು ನಮಸ್ತೆ ಚಿಕ್ಕಬಳ್ಳಾಪುರ ಹೆಸರಿನಲ್ಲಿ ಮತದಾರರನ್ನು ಭೇಟಿ ಮಾಡಿ ಸಮಸ್ಯೆಗಳನ್ನ ಕೇಳಿ ಅವುಗಳಿಗೆ ಪರಿಹಾರ ನೀಡುವ ಕೆಲಸವನ್ನ ಮಾಡುತ್ತಿದ್ದಾರೆ.
ಇದನ್ನೂ ಓದಿ: ಧ್ರುವ ಸರ್ಜಾ ಪ್ರೇರಣಾ ದಂಪತಿಯ ಪುಟ್ಟ ರಾಜಕುಮಾರಿ ಹೇಗಿದ್ದಾಳೆ ಗೊತ್ತಾ?
ಮನೆ ಮೆನೆಗೂ ತೆರಳಿ ಸಮಸ್ಯೆಗಳನ್ನ ಕೇಳ್ತಿದ್ದಾರೆ ನೂತನ ಶಾಸಕ
ನಾಲ್ಕು ವರ್ಷ ಸುಮ್ಮನಿದ್ದು ಚುನಾವಣೆಗೆ ಒಂದು ವರ್ಷ ಇದೆ ಎಂದಾಗ ಓಡಾಡುವ ಶಾಸಕ ನಾನಲ್ಲ, ಪ್ರತಿ ದಿನ ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ. ಮನೆ ಮನೆ ಬಾಗಿಲಿಗೂ ಹೋಗಿ ಜನರನ್ನು ಭೇಟಿ ಮಾಡುತ್ತೇನೆ” ಅಂತ ಹೇಳಿಕೊಂಡಿದ್ದ ಪ್ರದೀಪ್ ಈಶ್ವರ್ ಗೆದ್ದ ನಂತರವು ಆ ಮಾತುಗಳನ್ನ ಉಳಿಸಿಕೊಂಡಿದ್ದು, ಚಾಚುತಪ್ಪದೆ ಕ್ಷೇತ್ರದ ಮನೆ ಮಗನಂತೆ ಕೆಲಸ ಮಾಡುತ್ತಿದ್ದಾರೆ. ಇನ್ನು ಚಿಕ್ಕಬಳ್ಳಾಪುರ ಕ್ಷೇತ್ರದಾದ್ಯಂತ ರಸ್ತೆ ಗುಂಡಿ ಸಮಸ್ಯೆ ಹೆಚ್ಚಾಗಿದ್ದು, ಸರಿಯಾದ ರಸ್ತೆಗಳಿಲ್ಲದೆ ರೈತರು ಜನಸಾಮಾನ್ಯರು ಪರದಾಡುತ್ತಿದ್ದಾರೆ. ಕೆಲವೊಂದಿಷ್ಟು ಜನರು ರಸ್ತೆಗೆಗಳನ್ನೇ ಒತ್ತುವರಿ ಮಾಡಿಕೊಂಡಿದ್ದು, ಅದರಿಂದ ರಸ್ತೆ ಸಮಸ್ಯೆಗಲಾಗುತ್ತಿವೆ ಅಂತ ಸ್ಥಳೀಯರು ಹೇಳಿಕೊಂಡಿದ್ದು ಕೂಡಲೇ ಅಧಿಕಾರಿಗಳಿಗೆ ಪ್ರದೀಪ್ ಈಶ್ವರ್ ಕ್ಲಾಸ್ ತೆಗೆದುಕೊಂಡಿದ್ದು, ರಸ್ತೆ ಸರಿಪಡಿಸೋದಕ್ಕೆ ಮೊದಲ ಆದ್ಯತೆ ಕೊಡೋದಾಗಿ ಹೇಳಿದ್ದಾರೆ. ಅಲ್ಲದೇ ವೃದ್ಧೆಯೊಬ್ಬರಿಗೆ ಸ್ಥಳದಲ್ಲೇ ಬಿಪಿ ಪರೀಕ್ಷೆ ಮಾಡಿಸಿ, ಸೂಕ್ತ ಔಷಧಿ ತೆಗೆದುಕೊಳ್ಳುವಂತೆ ಹಣ ಕೂಡ ನೀಡಿದರು.ಮಹಿಳೆಯೊಬ್ಬರು ಸಾಲ ಪಡೆದು ಬಡ್ಡಿ ಕಟ್ಟಲಾಗದೆ ಒದ್ದಾಡುತ್ತಿದ್ದನ್ನು ಗಮನಿಸಿದ ಅವರು, ಬಡ್ಡಿ ಕಟ್ಟದಂತೆ ಸೂಚನೆ ನೀಡಿದರು. ಬಡ್ಡಿ ಕಟ್ಟುವಂತೆ ಕಿರುಕುಳ ನೀಡಿದರೆ, ಕೇಸು ದಾಖಲಿಸಿ ಅಂತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸುಧಾಕರ್ ವಿರುದ್ಧ ಇವರನ್ನು ಕಾಂಗ್ರೆಸ್ ಪಕ್ಷದಿಂದ ನಿಲ್ಲಿಸಿದಾಗ ಸುಧಾಕರ್ ಸುಲಭವಾಗಿ ಗೆಲ್ಲುತ್ತಾರೆ ಎಂದು ಹೇಳಲಾಗಿತ್ತು, ಕೆಲವೊಂದಷ್ಟು ಜನ ಆಡಿಕೊಂಡಿದ್ದು ಉಂಟು ಆದರೆ ಪ್ರದೀಪ್ ಈಶ್ವರ್ ತಮ್ಮ ಮಾತಿನ ಮೂಲಕವೇ ಜನರ ಮನ ಗೆದ್ದು, ಸುಧಾಕರ್ ಅವರಿಗೆ ಆಘಾತ ನೀಡಿದ್ದರು.ಇದೀಗ ಕ್ಷೇತ್ರದ ಮನೆ ಮಗನಂತೆ ಕ್ಷೇತ್ರವನ್ನೇ ಮನೆ ಎಂಬಂತೆ ಮಾಡಿಕೊಂಡಿದ್ದು ಪ್ರತಿಯೊಂದು ಸಮಸ್ಯೆಗಳನ್ನ ಜನರ ಸಂಕಷ್ಟಗಳ ನಿವಾರಣೆಗೆ ಶಾಸಕ ಪ್ರದೀಪ್ ಈಶ್ವರ್ ಟೊoಕ್ಕ ಕಟ್ಟಿ ನಿಂತಿದ್ದಾರೆ.
ಇದನ್ನೂ ಓದಿ: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ನಾದಬ್ರಹ್ಮ ಯಾಕ್ ಬರ್ತಿಲ್ಲ?ಪ್ರತಿಯೊಂದು ಸೀಸನ್ ನಿಂದಲೂ ಹಂಶಲೇಖ ದೂರ ಉಳಿದಿರೋದ್ಯಾಕೆ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram