ಕರೆಂಟ್ ಶಾಕ್ ನಿಂದ 8 ತಿಂಗಳ ಮಗು ದಾರುಣ ಸಾವು! ಮೊಬೈಲ್ ಚಾರ್ಜರ್ ಕಚ್ಚಿ ಪ್ರಾಣ ಬಿಡ್ತು ಪುಟ್ಟ ಕಂದ..

ಚಿಕ್ಕ ಮಕ್ಕಳಿರುವ ಮನೆಯಲ್ಲಿ ಎಷ್ಟೇ ಕಾಳಜಿ ವಹಿಸಿ ಎಚ್ಚರಿಕೆಯಿಂದ ಇದ್ರೂ ಸಾಲದು. ಅದ್ರಲ್ಲಿ ಚಿಕ್ಕ ಮಕ್ಕಳು ತೆವಳಲು ಶುರು ಮಾಡಿದ ಮೇಲಂತು ನಿಂತಲ್ಲಿ ನಿಲ್ಲಲ್ಲ. ಹೀಗಾಗಿ ಆ ಮಗುವಿಗೆ ಬುದ್ದಿ ಬಂದು ಹೇಳಿದ್ದನ್ನ ಕೇಳಿ ಅರ್ಥೈಸಿಕೊಳ್ಳುವವರೆಗೂ ಪೋಷಕರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತೆ ಸ್ವಲ್ಪ ಎಚ್ಚರ ತಪ್ಪಿದ್ರೂ ಅನಾಹುತಕ್ಕೆ ಆಹ್ವಾನ ಕೊಟ್ಟಂತೆ ಅನ್ನೋದಕ್ಕೆ ನಿದರ್ಶನ ಎಂಬಂತೆ ಕೆಲವೊಂದು ಘಟನೆಗಳು ನಡೆಯುತ್ತಲೇ ಇವೆ. ಸಣ್ಣ ಪುಟ್ಟ ಘಟನೆಗಳು ನಡೆದಾಗ ಅಥವಾ ಅತರಹದ ಸುದ್ದಿಗಳನ್ನ ಕೇಳಿದಾಗ ಅಥವಾ ನೋಡಿದಾಗಲ್ಲಾದ್ರೂ ಪೋಷಕರು ಇಚ್ಚೆತ್ತುಕೊಳ್ಳಬೇಕು ಇಲ್ಲವಾದ್ರೆ ಸಾವಿನ ಮನೆ ಸೇರಿದ ಮಗುವಿನ ಮುಖ ನೋಡಿ ಶೋಕದಲ್ಲಿ ಬದುಕಿಡಿ ಕಳೆಯಬೇಕು. ಇದೀಗ ಅಂತದ್ದೇ ಒಂದು ಘಟನೆ ನಡೆದಿದ್ದು ಪಾಲಕರ ನಿರ್ಲಕ್ಷ್ಯದ ಕಾರಣದಿಂದಾಗಿ ಮೊಬೈಲ್ ಚಾರ್ಜರ್ ವೊಂದು ಎಂಟು ತಿಂಗಳ ಮಗುವಿನ ಪ್ರಾಣ ತೆಗೆದಿರುವ ಹೃದಯ ವಿದ್ರಾವಕ ಘಟನೆ ಕಾರವಾರದಲ್ಲಿ ‌ನಡೆದಿದೆ. ಕಾರವಾರದ ಸಿದ್ದರ ಗ್ರಾಮದ ಸಂತೋಷ್ ಕಲ್ಗುಟ್ಕರ್ ಹಾಗೂ ಸಂಜನಾ ದಂಪತಿಯ 8 ತಿಂಗಳ ಮಗು ಸಾನಿಧ್ಯಾ ಇನ್ನಿಲ್ಲವಾಗಿದ್ದಾಳೆ.

WhatsApp Group Join Now
Telegram Group Join Now

ಹೌದು ಕಾರವಾರ ಜಿಲ್ಲೆಯ ಸಿದ್ದರ ಗ್ರಾಮದಲ್ಲಿ ಆಟವಾಡುತ್ತಿದ್ದ 8 ತಿಂಗಳ ಮಗುವೊಂದು ಮೊಬೈಲ್ ಚಾರ್ಜರ್ ಪಿನ್ ಅನ್ನು ಬಾಯಿಗೆ ಇಟ್ಟುಕೊಂಡು ಅದ್ರಲ್ಲಿ ವಿದ್ಯುತ್ ಪ್ರವೇಶಿಸಿ ಸಾವಿಗೀಡಾಗಿದೆ. ಸಂತೋಷ್ ಕಲ್ಗುಟ್ಕರ್ ಹಾಗೂ ಸಂಜನಾ ದಂಪತಿಯ ಮಗು ಸಾನಿಧ್ಯಾ ಸಾವಿಗೀಡಾದ ಮಗು. ಮಗುವಿನ ತಾಯಿ, ಮೊಬೈಲನ್ನು ಚಾರ್ಜರ್ ಗೆ ಹಾಕಿ ನಂತರ ಸ್ವಿಚ್ ಆಫ್ ಮಾಡದೆ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡಿದ್ದರು. ಮಗು ಪುನಃ ಚಾರ್ಜರ್ ವೈರ್ ನಿಂದ ಆಟವಾಡುತ್ತಾ ವಿದ್ಯುತ್ ಬಂದಿದ್ದು ಮಗುವು ಶಾಕ್ ಗೆ ಒಳಗಾಗಿ ಸಾವಿಗೀಡಾಗಿದೆ.

ಇದನ್ನೂ ಓದಿ: ಗಡಿಯಾರವನ್ನ ಮನೆಯಲ್ಲಿ ಹಾಕುವ ಮೊದಲು ಎಚ್ಚರ; ಈ ದಿಕ್ಕಿಗೆ ಗಡಿಯಾರವನ್ನ ಹಾಕಲೇಬೇಡಿ

ಮೊಬೈಲ್ ಚಾರ್ಜ್ ಮಾಡಿದ ನಂತರ ಪೋಷಕರೇ ಎಚ್ಚರ

ಹೌದು ಮೊಬೈಲ್ ಚಾರ್ಜರ್‌ನಿಂದ ಕರೆಂಟ್​ ಶಾಕ್ ತಗುಲಿ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಇನ್ನು ಪೋಷಕರು ಮನೆಯಲ್ಲಿ ಮೊಬೈಲ್​ ಚಾರ್ಜ್​​ ಮಾಡಿಕೊಂಡು ಬಟನ್​ ಆಫ್ ಮಾಡದೆ ಹಾಗೇ ಬಿಟ್ಟಿದ್ದಾರೆ. ಆಟ ಆಡಿಕೊಂಡಿದ್ದ ಮಗು ಚಾರ್ಜರ್​ನ ವೈರ್​ ಅನ್ನು ಬಾಯಲ್ಲಿ ಇಟ್ಟುಕೊಂಡಿದೆ. ಇದರಿಂದ ತಕ್ಷಣ ಕರೆಂಟ್​ ಶಾಕ್​ ತಗುಲಿದ್ದು ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಸದ್ಯ ಮಗು ಕಳೆದುಕೊಂಡಿರುವ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು,ಇಡೀ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.

ಇನ್ನು ಸಂತೋಷ್ ಹಾಗೂ ಸಂಜನಾ ದಂಪತಿಗೆ ಇಬ್ಬರು ಮಕ್ಕಳಿದ್ದು, ಇಂದು ಮೊದಲನೆ ಮಗಳ ಹುಟ್ಟು ಹಬ್ಬವಿತ್ತು. ತಂದೆ ಹೆಸ್ಕಾಂನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು, ಸಂಜೆ ದೊಡ್ಡ ಮಗಳ ಬರ್ತ್ ಡೇ ಆಚರಿಸಲು ಬೇಗ ವಾಪಸ್ಸು ಬರಬೇಕೆಂದು ಬೆಳಿಗ್ಗೆ ತುಸು ಬೇಗ ಕೆಲಸಕ್ಕೆ ತೆರಳಿದ್ದರು. ಹೀಗಾಗಿ ತಾಯಿ ಸಂಜನಾ ಸಣ್ಣ ಮಗುವನ್ನ ರೂಮಿನಲ್ಲಿ ಬಿಟ್ಟು ಕೆಲಸ ಮಾಡಿಕೊಳ್ಳುತ್ತಿದ್ದರು.‌ಇತ್ತ ದೊಡ್ಡ ಮಗಳು ಕೂಡ ಶಾಲೆಗೆ ತೆರಳಲೆಂದು ರೆಡಿಯಾಗಿ ಹೊರಡುವ ವೇಳೆಗೆ ತಾಯಿಗೆ ಚಿಕ್ಕ ಮಗು ಅಸ್ವಸ್ಥಗೊಂಡಿರುವುದು ತಿಳಿದು ಕಿರುಚಿಕೊಂಡಿದ್ದು, ದೊಡ್ಡ ಮಗು ಕೂಡ ಶಾಲೆಗೆ ಹೋಗದೆ ಮನೆಗೆ ಓಡಿಬಂದು ನೋಡಿದಾಗ ತಂಗಿ ಮಾತನಾಡುತ್ತಿರಲಿಲ್ಲ. ಇನ್ನು ಮಗು ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕಾರವಾರ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಮಗುವಿನ ಮೃತದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

ಇನ್ನು ಒಂದು ಚಿಕ್ಕ ನಿರ್ಲಕ್ಷ್ಯ ಇದೀಗ ಮುದ್ದಾದ ಮಗುವಿನ ಪ್ರಾಣವನ್ನೇ ಬಲಿಪಡೆದಿದ್ದು, ಈ ಘಟನೆ ಮಕ್ಕಳ ಕುರಿತು ನಿರ್ಲಕ್ಷ್ಯ ವಹಿಸುವ ಎಲ್ಲಾ ಪಾಲಕರಿಗೂ ಪಾಠವೇ ಸರಿ. ಅಲ್ದೇ ವೈದ್ಯರು ಕೂಡ ಪಾಲಕರಿಗೆ ಚಿಕ್ಕಮಕ್ಕಳ ಬಗ್ಗೆ ಕಾಳಜಿ ವಹಿಸುವಂತೆ ಕಿವಿಮಾತು ಹೇಳಿದ್ದಾರೆ. ಸದ್ಯ ಮಗುವಿನ ಸಾವಿನಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆದರೆ ಘಟನೆಯಲ್ಲಿ ಮಗುವಿನ ಪಾಲಕರ ನಿರ್ಲಕ್ಷ್ಯವೇ ಎದ್ದು ತೋರುತ್ತಿದೆ. ಮಗು ಒಂದನ್ನೇ ಆಟವಾಡಲು ಬಿಟ್ಟು, ಅದೇನು ಮಾಡುತ್ತಿದೆಯೆಂದೂ ನೋಡದಿರುವುದು ಈ ಅಚಾತುರ್ಯಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಜೊತೆಗೆ ಸ್ವಲ್ಪ ಎಚ್ಚರಿಕೆ ವಹಿಸಿದ್ರು ಪಾಲಕರು ಇವತ್ತು ಪುಟ್ಟ ಕಂದಮ್ಮನನ್ನ ಕಳೆದುಕೊಳ್ಳುತ್ತಿರಲಿಲ್ಲ ಅನ್ನೋದು ಕೂಡ ಅಷ್ಟೇ ಸತ್ಯ.

ಇದನ್ನೂ ಓದಿ: ನನ್ನ ಸ್ವಂತದವರೇ ನನ್ನ ಮಧ್ಯರಾತ್ರಿ ಒಂದು ಹೆಣ್ಣುಮಗಳು ಅಂತ ನೋಡದೆ ಆಚೆ ಹಾಕಿದ್ರು ಕಹಿ ಅನುಭವ ಹಂಚಿಕೊಂಡ ನಟಿ ತನ್ವಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram