Bharat Atta: ಕೇಂದ್ರ ಸರ್ಕಾರವು ಭಾರತ ಬ್ರಾಂಡ್ ನಲ್ಲಿ ಒಂದು ಕೆಜಿಗೆ 27 ರೂಪಾಯಿಗಳಂತೆ ಗೋಧಿ ಹಿಟ್ಟಿಗೆ ಸಬ್ಸಿಡಿ ನೀಡಿದೆ. ಗೋಧಿ ಹಿಟ್ಟಿನ ಬೆಲೆ ಏರಿಕೆಯನ್ನು ಕಂಡು ತತ್ತರಿಸಿದ ಜನಗಳಿಗೆ ಭಾರತ ಬ್ರಾಂಡ್ ನ ಯೋಜನೆ ಬಹಳ ಅನುಕೂಲವಾಗಲಿದೆ. ಈ ಯೋಜನೆಗೆ ಅನುಗುಣವಾಗಿ ಭಾರತದ ಅತ್ಯಂತ ಇಷ್ಟು ಕಡಿಮೆ ಬೆಲೆಯಲ್ಲಿ ಗೋಧಿ ಹಿಟ್ಟನ್ನು ಮಾರಟ ಮಾಡಲಾಗುವುದು. ಬೆಲೆ ಏರಿಕೆಯ ಬಿಸಿಯನ್ನು ಉಂಡವರಿಗೆ ಈ ಯೋಜನೆಯು ನೆರಳಾಗುತ್ತದೆ. ಈ ಯೋಜನೆಯ ಪ್ರಕಾರ ಜನರು ತಮ್ಮ ತಮ್ಮ ಕುಟುಂಬಗಳನ್ನು ಆರಾಮಾಗಿ ನಿರ್ವಹಿಸಬಹುದು.
ಈಗಾಗಲೇ 2000ಕ್ಕೂ ಹೆಚ್ಚು ಮಳಿಗೆಗಳಲ್ಲಿ ಗೋಧಿ ಹಿಟ್ಟಿನ ಮಾರಾಟ ಲಭ್ಯವಾಗಿದ್ದು ನಾಫೆಡ್ ಎನ್ಸಿಸಿಎಫ್ ಗಳ ಮೂಲಕ ಸುಮಾರು 500ಕ್ಕೂ ಹೆಚ್ಚು ಮೊಬೈಲ್ ವ್ಯಾನ್ ಗಳಲ್ಲಿ ಹೊತ್ತು ಮಾರಾಟ ಮಾಡಲಾಗುತ್ತಿದೆ ಮಾರುಕಟ್ಟೆಯಲ್ಲಿ ಇದರ ಬೆಲೆ ಸುಮಾರು 36 ರಿಂದ 70 ರೂಪಾಯಿಗಳವರೆಗೆ ಇದ್ದು, ಇದು ಜನರಿಗೆ ಕೊಳ್ಳುವುದಕ್ಕೆ ತುಂಬಾ ಕಷ್ಟವಾಗುತ್ತಿದೆ. ಎಲ್ಲಿದಿರಾ ಬೆಲೆಯು ಏರಿದ್ದು ಹಣದುಬ್ಬರ ಹೆಚ್ಚಳದಿಂದ ಗ್ರಾಹಕರಿಗೆ ಒಂದು ದಿನದ ಊಟಕ್ಕೂ ಸಹ ಕಷ್ಟವನ್ನು ಎದುರಿಸುವ ಪರಿಸ್ಥಿತಿ ಬಂದಿದೆ. ಆದ್ದರಿಂದ ಇದನ್ನರಿತ ಸರ್ಕಾರ ಜನಗಳ ಹಿತಕ್ಕಾಗಿ ಈ ಹೊಸ ಮಾರ್ಗವನ್ನು ಅನುಸರಿಸಿದೆ.
2023 ಫೆಬ್ರವರಿಯಲ್ಲಿ ಜನರಿಗೆ ಗೋಧಿ ಹಿಟ್ಟುಗಳನ್ನು 29 ರೂಪಾಯಿಗಳಿಗೆ ಸಿಗುವಂತೆ ಮಾರಾಟ ಮಾಡಲಾಗಿತ್ತು. ದೆಹಲಿಯ ಇಂಡಿಯಾ ಗೇಟ್ ಬಳಿ ಆಹಾರ ಸಚಿವ ಪಿಯೂಷ್ ಗೋಯಲ್ ಅವರು ಇದಕ್ಕೆ ಚಾಲನೆಯನ್ನು ನೀಡಿದರು. ಇದು ಸಕ್ಸಸ್ ಆಗಿರುವುದರಿಂದ ದೇಶದಲ್ಲಿಡೆ ಜಾರಿಗೊಳಿಸಲಾಗಿದೆ. ಇದರಿಂದ ಜನಗಳಿಗೆ ಉತ್ತಮವಾಗಿ ಖರೀದಿಸಲು ಸಾಧ್ಯವಾಗುತ್ತಿದ್ದು ಇದರಿಂದಲೇ ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದ್ದಾರೆ.
ಎಫ್ ಸಿ ಐ ಮತ್ತು ಎನ್ ಸಿ ಸಿ ಎಫ್ ಸೇರಿದಂತೆ ( FCI ಮತ್ತು NCCF) ಸೇರಿದಂತೆ ಸುಮಾರು 800 ವ್ಯಾನ್ ಗಳಲ್ಲಿ ಗೋಧಿಯನ್ನು ತುಂಬಿಸಿ ಕೇಂದ್ರೀಯ ಭಂಡಾರಕ್ಕೆ ನೀಡುತ್ತದೆ. ಇದನ್ನು ಹಿಟ್ಟಾಗಿ ಬದಲಾಯಿಸಿ ಜನತೆಗೆ ಅತಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವ ಕೆಲಸವನ್ನು ‘ಭಾರತ್ ಅಟ್ಟಾ ಬ್ರಾಂಡ್'(Bharat Atta) ಮಾಡುತ್ತಿದೆ. ಇದರ ಅಡಿಯಲ್ಲಿ ಸುಮಾರು 27 ರೂಪಾಯಿಗೆ ಗೋಧಿ ಹಿಟ್ಟು ಮಾರಾಟವಾಗುತ್ತಿದೆ ಬಹಳ ಬೇಡಿಕೆಯೂ ಕೂಡ ಹುಟ್ಟಿಕೊಂಡಿದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಗೋಧಿ ಹಿಟ್ಟನ್ನು ಸಬ್ಸಿಡಿ ಬೆಲೆಯಲ್ಲಿ ಮಾರಾಟ ಮಾಡುವ ಉದ್ದೇಶ
ಅದಾಗಲೇ ಗೋಧಿ ಹಿಟ್ಟಿನ ದರ ಕೆಜಿಗೆ 30 ರಿಂದ 70 ರೂಪಾಯಿಗಳು ಇದ್ದ ಕಾರಣ ಜನರಿಗೆ ಖರೀದಿಸಲು ಕಷ್ಟವಾಗುತ್ತಿತ್ತು. ಇದನ್ನರಿತ ಕೇಂದ್ರ ಸರ್ಕಾರ ಜನಗಳ ಹಿತರಕ್ಷಣೆಯಿಂದ ಜನಗಳಿಗೆ ಆಹಾರವನ್ನು ಒದಗಿಸುವುದಕ್ಕೋಸ್ಕರ ಒಂದು ಕ್ರಮವನ್ನು ಕೈಗೊಂಡಿದೆ ಇದರಿಂದ ಕಡಿಮೆ ಬೆಲೆಯಲ್ಲಿ ತಮ್ಮ ಆಹಾರವನ್ನು ಕೊಂಡುಕೊಂಡು ತಮ್ಮ ಕುಟುಂಬವನ್ನು ನಿರ್ವಹಿಸಿಕೊಳ್ಳಬಹುದಾಗಿದೆ.
ಗೋಧಿ ಹಿಟ್ಟನ್ನು ಒದಗಿಸಲು ಮತ್ತು ಬೆಲೆಯನ್ನ ನಿಯಂತ್ರಿಸಲು ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ. ಇಷ್ಟೇ ಅಲ್ಲದೆ ಕಡಲೆ ಬೆಳೆ, ಟೊಮೇಟೊ, ಈರುಳ್ಳಿಯನ್ನು ಸಹ ಇದೇ ರೀತಿಯಲ್ಲಿ ಮಾರಾಟ ಮಾಡುತ್ತಿದ್ದು ಬೆಲೆಯೂ ಕೂಡ ಒಂದು ಮಟ್ಟದಲ್ಲಿ ನಿಯಂತ್ರಣವಾಗಿದೆ ಎಂದು ಆಹಾರ ಸಚಿವ ಗೋಯಲ್ ಅವರು ಹೇಳಿದ್ದಾರೆ. ಸುಮಾರು ಮೂರು ಸಂಸ್ಥೆಗಳ ಮೊಬೈಲ್ ವ್ಯಾನ್ ಗಳು ಗೋಧಿಹಿಟ್ಟು ಟೊಮೇಟೊ ಹಾಗೂ ಕಡಲೆ ಬೇಳೆಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿವೆ ಎಂದು ಹೇಳಿದ್ದಾರೆ.
ನಾಫೆಡ್, NCCF ಮತ್ತು ಕೇಂದ್ರೀಯ ಭಂಡಾರ ಏಜೆನ್ಸಿಯ ಮೂಲಕ ಮಾರಾಟ ಮಾಡಲಾಗುತ್ತಿದೆ. ಜೊತೆಗೆ 800 ಮೊಬೈಲ್ ವ್ಯಾನ್ ಗಳ ಬಳಕೆಯನ್ನು ಮಾಡಲಾಗುತ್ತಿದೆ. 1500ಕ್ಕೂ ಹೆಚ್ಚು ‘ಭಾರತ್ ಅಟ್ಟಾ'(Bharat Atta) ಮಳಿಗೆಗಳನ್ನು ತೆರೆದಿದೆ. ಒಟ್ಟಿನಲ್ಲಿ ಕೇಂದ್ರ ಸರ್ಕಾರವು ಬಡವರ ಏಳಿಗೆಗಾಗಿ ಹಗಲು ಇರುಳು ಶ್ರಮಿಸುತ್ತಿದೆ.
ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಬಂಪರ್ ಆಫರ್; ಒಂದು ಎಲೆಕ್ಟ್ರಿಕಲ್ ಸ್ಕೂಟರ್ ಕೊಂಡ್ರೆ ಮತ್ತೊಂದು ಫ್ರೀ
ಇದನ್ನೂ ಓದಿ: ಉತ್ತಮ ಸುರಕ್ಷತೆಯೊಂದಿಗೆ ದೀಪಾವಳಿಯ ವಿಶೇಷ ರಿಯಾಯಿತಿಯಲ್ಲಿ ಹುಂಡೈ ಐ20 ಮಾರುಕಟ್ಟೆಯಲ್ಲಿ ಲಭ್ಯವಿದೆ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram