ನೇಪಾಳದಲ್ಲಿಯೂ ಭಾರತದ ಯುಪಿಐ ಬಳಸಿ ಹಣ ವರ್ಗಾವಣೆ ಮಾಡಬಹುದು

UPI in Nepal

ಭಾರತದಲ್ಲಿ ಪ್ರತಿ ಅಂಗಡಿಯಲ್ಲಿ ಯುಪಿಐ ಸ್ಕ್ಯಾನರ್ ಇದೆ. ಅಷ್ಟೇ ಅಲ್ಲದೆ ನಿಮ್ಮ ಸ್ನೇಹಿತರಿಗೆ, ಇನ್ಸೂರೆನ್ಸ್ ಕಟ್ಟಲು, ಮನೆ ಬಾಡಿಗೆ, ಕರೆಂಟ್ ಬಿಲ್, ನೀರಿನ ಬಿಲ್, ಪ್ರತಿ ತಿಂಗಳ ರೇಷನ್ ಬಿಲ್ ಎಲ್ಲವೂ ಈಗ ಆನ್ಲೈನ್ transaction ನಲ್ಲಿಯೇ ಆಗಲಿದೆ. ಯುಪಿಐ ಅಪ್ಲಿಕೇಶನ್ ಭಾರತದ ಬಹುಸಂಖ್ಯಾತರು ಬಳಸುವ ಅಪ್ಲಿಕೇಶನ್ ಆಗಿದೆ. ಭಾರತದ ಜೊತೆಗೆ ಸೌಹಾರ್ದ ಸಂಬಂಧ ಹೊಂದಿರುವ ಕೆಲವು ದೇಶಗಳು ಭಾರತದೊಂದಿಗೆ ಒಪ್ಪಂದ ಮಾಡಿಕೊಂಡು ಭಾರತದ ಯುಪಿಐ ಅಪ್ಲಿಕೇಶನ್ ತನ್ನ ದೇಶದಲ್ಲೂ ಬಳಸಬಹುದು ಎಂದು ತಿಳಿಸಿದ್ದಾರೆ. ಈಗಾಗಲೇ ನರೇಂದ್ರ ಮೋದಿ ಅವರು ಭೂತಾನ್, ಒಮಾನ್, ಯುನೈಟೆಡ್ ಅರಬ್ ಎಮಿರೇಟ್ಸ್, ಶ್ರೀಲಂಕಾ ಮತ್ತು ಮಾರಿಷಸ್‌ ದೇಶದಲ್ಲಿ ಭಾರತದ ಯುಪಿಐ ಬಳಕೆಯಲ್ಲಿ ಇದೆ. ಈಗ ನಮ್ಮ ನೆರೆಯ ರಾಷ್ಟ್ರ ನೇಪಾಳದಲ್ಲಿ ಸಹ ಭಾರತದ ಯುಪಿಐ ಬಳಸಬಹುದು.

WhatsApp Group Join Now
Telegram Group Join Now

ನೇಪಾಳದಲ್ಲಿ ಯುಪಿಐ ಬಳಸುವುದು ಹೇಗೆ?

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಶುಕ್ರವಾರ ಪ್ರಕಟಿಸದಂತೆ ಇನ್ನೂ ನೇಪಾಳದಲ್ಲಿ ಯುಪಿಐ ಬಳಸಬಹುದು. ಯುಪಿಐ ಬಳಸುವ ಭಾರತೀಯರು ನೇಪಾಳದ ಅಂಗಡಿಗಳಲ್ಲಿ ಹಣ ವರ್ಗಾವಣೆ ಮಾಡಲು ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಿ ನಿಮ್ಮ ಭಾರತದ ಖಾತೆಯಿಂದ ಹಣ ವರ್ಗಾವಣೆ ಮಾಡಬಹುದು ಎಂದು ಇಲಾಖೆ ತಿಳಿಸಿದೆ.

ಮೊದಲ ಹಂತದಲ್ಲಿ, ವ್ಯಾಪಾರ ಮಳಿಗೆಯಲ್ಲಿ ಪಾವತಿ ಮಾಡಲು ಯು ಪಿ ಐ ಬಳಸಲು ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಸುರಕ್ಷಿತ ಮತ್ತು ಅನುಕೂಲಕರ ಯುಪಿಐ ಪಾವತಿಗಳನ್ನು ಮಾಡಲು ಭಾರತೀಯ ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಸಾಧ್ಯ ಭಾರತದಲ್ಲಿ ಫೋನ್ ಪೇ ಬಳಸುವ ಗ್ರಾಹಕರು ನೇಪಾಳ ದೇಶದಲ್ಲಿ ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದು.

ಎರಡು ಪ್ರಮುಖ ಇಲಾಖೆಗಳ ನಡುವೆ ಒಪ್ಪಂದ ಆಗಿತ್ತು. !: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಇಂಟರ್ನ್ಯಾಷನಲ್ ಪೇಮೆಂಟ್ಸ್ (ಎನ್‌ಐಪಿಎಲ್) ಹಾಗೂ ನೇಪಾಳದ ಅತಿದೊಡ್ಡ ಆನ್ಲೈನ್ ಪೇಮೆಂಟ್ ನೆಟ್ವರ್ಕ್ ಫೋನ್‌ಪೇ ನಡುವೆ ಕಳೆದ ಸಪ್ಟೆಂಬರ್ ತಿಂಗಳಲ್ಲಿ ಭಾರತದ ಯುಪಿಐ ಬಳಸುವ ಬಗ್ಗೆ ಒಪ್ಪಂದ ನಡೆದಿತ್ತು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಮನೆಯಿಂದಲೇ ಹೆಚ್ಚಿನ ಲಾಭಗಳನ್ನು ನೀಡುವ 5 ಬ್ಯುಸಿನೆಸ್ ಐಡಿಯಾಗಳು 

ಈ ಕ್ರಮದಿಂದ ಭಾರತಕ್ಕೆ ಹಾಗೂ ನೇಪಾಳಕ್ಕೆ ಏನು ಲಾಭವಿದೆ?

ಇದರಿಂದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಉತ್ತೇಜಿಸುವ ಭಾರತದ ಬದ್ಧತೆಯನ್ನು ನೇಪಾಳ ದೇಶವು ಪ್ರತಿಬಿಂಬಿಸುತ್ತದೆ ಎಂಬುದನ್ನು ತಿಳಿಯಲು ಸಾಧ್ಯ ಆಗುತ್ತದೆ ಹಾಗೂ ಭಾರತ ಮತ್ತು ನೇಪಾಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ಪ್ರವಾಸೋದ್ಯಮಕ್ಕೆ ಇನ್ನಷ್ಟು ಹೆಚ್ಚಿನ ಒತ್ತು ನೀಡಿದಂತೆ ಆಗುತ್ತದೆ. ಭಾರತೀಯ ಪ್ರವಾಸಿಗಳು ನೇಪಾಳಕ್ಕೆ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಹೋಗುವ ಸಾಧ್ಯತೆ ಹೆಚ್ಚಿದೆ. ಆರ್ಥಿಕ ಸಮೃದ್ಧಿ ಮತ್ತು ಪ್ರಗತಿಗೆ ಉತ್ತೇಜನ ನೀಡುತ್ತದೆ ಜೊತೆಗೆ ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟುಗಳನ್ನು ಸುಲಭ ಮತ್ತು ತ್ವರಿತಗೊಳಿಸುತ್ತದೆ.

ನೇಪಾಳ ದೇಶದ ಬಗ್ಗೆ ಒಂದಿಷ್ಟು ಮಾಹಿತಿ: ನೇಪಾಳ ದಕ್ಷಿಣ ಏಷ್ಯಾದಲ್ಲಿರುವ ಒಂದು ಭೂಪ್ರದೇಶ ರಾಷ್ಟ್ರವಾಗಿದೆ. ಚೀನಾದ ಟಿಬೆಟ್ ಸ್ವಾಯತ್ತ ಪ್ರದೇಶವು ಉತ್ತರಕ್ಕೆ ಮತ್ತು ಭಾರತವು ಪೂರ್ವ, ದಕ್ಷಿಣ ಮತ್ತು ಪಶ್ಚಿಮಕ್ಕೆ ಗಡಿಯಾಗಿದೆ. ಮೌಂಟ್ ಎವರೆಸ್ಟ್, ಅನ್ನಪೂರ್ಣ, ಮತ್ತು ಕಾಂಚನಜುಂಗಾ ಸೇರಿದಂತೆ ವಿಶ್ವದ ಅತಿ ಎತ್ತರದ ಪರ್ವತಗಳಿಗೆ ನೇಪಾಳ ಪ್ರಸಿದ್ದಿ ಹೊಂದಿದೆ. ಪಶುಪತಿನಾಥ್ ದೇವಾಲಯವು ವಿಶ್ವದ ಅತ್ಯಂತ ಪವಿತ್ರ ಹಿಂದೂ ದೇವಾಲಯವಾಗಿದೆ. ಆರ್ಥಿಕವಾಗಿ ಬಹಳ ಹಿಂದುಳಿದ ದೇಶವಾಗಿದ್ದು. ಭಾರತ, ಅಮೆರಿಕಾ, ಜಪಾನ್ , ಇಂಗ್ಲಂಡ್, ಯುರೋಪಿಯನ್ ದೇಶಗಳಿಂದ ಆರ್ಥಿಕ ಸಹಾಯವನ್ನು ಪಡೆಯುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ವಾಸಿಸುವ ರಾಷ್ಟ್ರವಾಗಿದ್ದು ದೇಶದ ಸುತ್ತಲೂ ಹಿಂದೂಗಳ ಧಾರ್ಮಿಕ ಸಂಸ್ಕೃತಿಯನ್ನು ಕಾಣಬಹುದು.

ಇದನ್ನೂ ಓದಿ: ಬೆಂಗಳೂರು ನಿವೇಶನ ಖರೀದಿಸಿ ಖಾಲಿ ಬಿಟ್ಟರೆ ಶೇ. 25% ಹೆಚ್ಚಿನ ಶುಲ್ಕ ಕಟ್ಟಬೇಕು.