ಜೂನ್ 1 ರಿಂದ ರಾಜ್ಯದಲ್ಲಿ ಮುಂಗಾರು ಮಳೆ ಆರಂಭ.. ಸಂತಸದಲ್ಲಿ ಕರುನಾಡು.

Monsoon rains

ಬರಗಲಾದ ಸ್ಥಿತಿಯಿಂದ ಕಂಗೆಟ್ಟ ಕರುನಾಡ ಜನತೆಗೆ ಈಗ ಹವಾಮಾನ ಇಲಾಖೆ ಶುಭ ಸುದ್ದಿ ನೀಡಿದ್ದು ಇದೆ ಬರುವ ಜೂನ್ 1 2024 ರಿಂದ ರಾಜ್ಯಕ್ಕೆ ಮುಂಗಾರು ಮಳೆ ಬರಲಿದೆ ಎಂದು ತಿಳಿಸಿದೆ. ಇದು ರಾಜ್ಯಾದ ರೈತರ ಪಾಲಿಗಂತೂ ಸಂತಸದ ಸುದ್ದಿ ಆಗಿದೆ. ಈಗಾಗಲೇ ಮುಂಗಾರು ಮಳೆಯ ಆರಂಭದ ಕೆಲಸಗಳಲ್ಲಿ ರಾಜ್ಯದ ರೈತರು ನಿರತರಾಗಿದ್ದು ಮುಂಗಾರು ಬರುವ ದಿನಕ್ಕೆ ಕಾಯುತ್ತಿದ್ದಾರೆ.

WhatsApp Group Join Now
Telegram Group Join Now

ಹಲವು ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಣೆ ಆಗಿದೆ.:- ಕರ್ನಾಟಕಕ್ಕೆ ಇನ್ನು ಮುಂಗಾರು ಬಂದಿಲ್ಲ. ಆದರೆ ಈಗಾಗಲೇ ಹಲವು ರಾಜ್ಯಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ದಕ್ಷಿಣ ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ ಭಾರಿ ಮಳೆ ಬೀಳುತ್ತದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಈಗಾಗಲೇ ಕೇರಳದ ಮೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಜೊತೆಗೆ ತಮಿಳುನಾಡು, ಪುದುಚೇರಿ, ಕಾರೈಕಲ್, ಮಾಯೆ ಯಲ್ಲಿ ಮುಂಬರುವ ಮೂರು ಮುಂದಿನ ಮೂರು ದಿನಗಳಲ್ಲಿ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟದಲ್ಲಿ ಈಗಾಗಲೇ ಪೂರ್ವ ಮುಂಗಾರು ಅಬ್ಬರಿಸುತ್ತಿದೆ :-

ಕಳೆದ ಒಂದೆರಡು ವಾರಗಳ ಈಚೆಗೆ ರಾಜ್ಯದ ಹಲವು ಕಡೆಗಳಲ್ಲಿ ಮಳೆ ಬೀಳುತ್ತಿದ್ದು ರೈತರು ಈಗಲೇ ರೈತಾಬಿ ಕೆಲಸಗಳು ಚುರುಕಿನಿಂದ ಕೂಡಿದೆ. ಜೊತೆಗೆ ಇನ್ನೂ ಮುಂದಿನ ಮೇ 31ವರೆಗೆ ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗಗಳಲ್ಲಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಮಾನ್ಸೂನ್ ಯಾವಾಗ ಆರಂಭ :- ಈ ಬಾರಿಯ ವಿಪರೀತ ಬರಗಾಲ ಬೆಂಗಳೂರಿನ ನಗರದ ಜನರನ್ನು ತಬ್ಬಿಬ್ಬು ಮಾಡಿಸಿತ್ತು. ಕುಡಿಯಲು ನೀರು ಇರದೆ ಬೆಂಗಳೂರಿನ ಜನರು ಪರದಾಡಿದರು. ಈಗ ಬೆಂಗಳೂರಿನಲ್ಲಿ ಜೂನ್ 13 ರಿಂದ ಮುಂಗಾರು ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ವಿದ್ಯುತ್ ಬಿಲ್‌ಗಳಿಗೆ ಗುಡ್‌ಬೈ ಹೇಳಿ! ನಿಮ್ಮ ಮನೆಯ ಟೆರೆಸ್ ಮೇಲೆ ಉಚಿತವಾಗಿ ಸೋಲಾರ್ ಪ್ಯಾನಲ್ ಅಳವಡಿಸಿ, ಹಣವನ್ನು ಉಳಿಸಿರಿ!

ಪೂರ್ವ ಮುಂಗಾರು ಮಳೆಗೆ ರಾಜ್ಯದಲ್ಲಿ ಅವಘಡಗಳು ಸಂಭವಿಸಿವೆ :-

ಈಗಾಗಲೆ ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಜೋರಾಗಿದ್ದು ಹಲವಾರು ಜಿಲ್ಲೆಗಳಲ್ಲಿ ರೈತರು ಬೆಳೆದ ಬೆಳೆಗಳ ನಾಶ ಉಂಟಾಗಿದೆ. ಸಿಡಿಲಿಗೆ ಇಬ್ಬರ ಬಲಿ ಆಗಿದೆ. ಜೊತೆಗೆ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪ್ರದೇಶದಲ್ಲಿ ಇಬ್ಬರು ಬಾಲಕರು ಕೆರೆಯಲ್ಲಿ ಈಜಲು ಹೋಗಿ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ರಾಜ್ಯದಲ್ಲಿ ಸಿಡಿಲು ಬಡಿದು ಪ್ರಾಣಿಗಳು ಸಹ ಸತ್ತು ಹೋಗಿವೆ. ಕುಷ್ಟಗಿಯ ಬಚನಾಳ ಗ್ರಾಮದಲ್ಲಿ ರೈತ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಈಶಪ್ಪ ಕಳಮಳ್ಳಿ ಎಂಬ ವ್ಯಕ್ತಿ ಮೃತ ಪಟ್ಟ ಘಟನೆ ನಡೆದಿದೆ. ಹಾಗೂ ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಈಶಪ್ಪ ಕರಡಪ್ಪ ಕಲಮಳ್ಳಿ ಎಂಬ ರೈತ ಸಿಡಿಲು ಬಡಿದು ಮೃತ ಪಟ್ಟಿದ್ದಾರೆ. ವಿಜಯನಗರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಸಿಡಿಲು ಬಡಿದು ಮೂವರು ಗಾಯಗೊಂಡ ಘಟನೆ ನಡೆದಿದೆ. ಹಾಗೂ ಚಿಕ್ಕಮಗಳೂರು ನಗರದ ಕಲ್ಯಾಣ ನಗರದಲ್ಲಿ ಇರುವ ಸಂಜೀವಿನಿ ಶಾಲೆಯ ಕಾಂಪೌಂಡ್ ಕುಸಿದು ನಾಲ್ಕು ಬೈಕ್ಗಳು ಸಂಪೂರ್ಣ ಹಾಳಾಗಿದೆ.

ಇದನ್ನೂ ಓದಿ: LIC ಪಿಂಚಣಿ ಯೋಜನೆಯಲ್ಲಿ ಒಮ್ಮೆ ಠೇವಣಿ ಮಾಡಿದರೆ ಪ್ರತಿ ವರ್ಷ 60 ಸಾವಿರ ಪಿಂಚಣಿ ಪಡೆಯಬಹುದು.