ಮ್ಯೂಚುಯಲ್ ಫಂಡ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬೇಕಾ? ಇದು ಹೇಗೆ ಕೆಲಸ ಮಾಡುತ್ತೆ ಇದರಿಂದ ಆಗುವ ಲಾಭಗಳೇನು ಎನ್ನುವ ಸಂಪೂರ್ಣ ಮಾಹಿತಿ

Mutual Funds: ಮ್ಯೂಚುವಲ್ ಫಂಡ್ ಸುಮಾರು ಎಲ್ಲರಿಗೂ ಗೊತ್ತೇ ಇದೆ ಇದರ ಬಗ್ಗೆ. ನಮ್ಮ ದೇಶದಲ್ಲಿ ಸುಮಾರು 80% ಜನ ಈ ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆಯನ್ನು ಮಾಡಿರುತ್ತಾರೆ. ಇದರಲ್ಲಿ ಎಷ್ಟೇ ರಿಸ್ಕ್ ಇದ್ದರೂ ಕೂಡ ಅಷ್ಟೇ ಲಾಭವನ್ನು ಗಳಿಸಬಹುದು ಆದರೆ ನಿಮ್ಮ ಹೂಡಿಕೆ ಹೆಚ್ಚು ವರ್ಷಗಳದ್ದಾಗಿರಬೇಕು ಅಷ್ಟೇ. ಮಾರುಕಟ್ಟೆಯಲ್ಲಿನ ಏರಿಳಿತಗಳಿಂದ ಲಾಭ ನಷ್ಟಗಳನ್ನ ಅವಲಂಬಿಸಿರುವ ಈ ಮ್ಯೂಚುವಲ್ ಫಂಡ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಹಣವನ್ನು ಮಾಡಲು ಇರುವ ಏಕೈಕ ಮಾರ್ಗ ಎಂದರೆ ಅದು ಈ ಮ್ಯೂಚುವಲ್ ಫಂಡ್. ತಿಳಿದ ತಜ್ಞರ ಮೂಲಕ ನೀವು ಹಣವನ್ನು ಹೂಡಿಕೆ ಮಾಡಿದರೆ ಖಂಡಿತವಾಗಲು ಹತ್ತು ಪಟ್ಟು ಲಾಭವನ್ನು ಗಳಿಸುತ್ತೀರಾ.

WhatsApp Group Join Now
Telegram Group Join Now

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಮ್ಯೂಚುಯಲ್ ಫಂಡ್ ನ ವಿಧಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ: ಮ್ಯೂಚುಯಲ್ ಫಂಡ್ ಗಳಲ್ಲಿ ಮೂರು ವಿಧವಾಗಿ ವಿಂಗಡಿಸಲಾಗಿದೆ ಅಸೆಟ್ ಹಂಚಿಕೆ ಹಾಗೂ ಇದರ ರಚನೆಯ ಮೇರೆಗೆ ಮೂರು ವಿಧಗಳಲ್ಲಿ ಇದನ್ನು ವಿಂಗಡಿಸಲಾಗಿದೆ. ಮೊದಲನೆಯದಾಗಿ ಇಕ್ವಿಟಿ ಮ್ಯೂಚುಯಲ್ ಫಂಡ್ (Equity mutual fund), ಡೆಟ್ ಮ್ಯೂಚುಯಲ್ ಫಂಡ್ (Debt mutual fund), ಬ್ಯಾಲೆನ್ಸ್ಡ್ ಮ್ಯೂಚುಯಲ್ ಫಂಡ್ (balanced mutual fund). ಈ ರೀತಿಯಾಗಿ ಮೂರು ವಿಧಗಳಲ್ಲಿ ವಿಂಗಡಿಸಲಾಗಿದೆ.

ಇಕ್ವಿಟಿ ಮ್ಯೂಚುಯಲ್ ಫಂಡ್ಗಳು ಎಂದರೇನು? 65 ಪರ್ಸೆಂಟ್ ಹಣವನ್ನು ಇತರೆ ಕಂಪನಿಗಳಲ್ಲಿ ಹೂಡಿಕೆ ಮಾಡಿ ಬಂದ ಲಾಭವನ್ನು ಹಂಚುತ್ತವೆ. ಮ್ಯೂಚುಯಲ್ ಫಂಡ್ ಗಳಿಂದ ನಾವು ಹೆಚ್ಚಿನ ಲಾಭಗಳನ್ನು ಪಡೆಯಬಹುದು. ರಿಸ್ಕ್ ಕಡಿಮೆ ಇರುತ್ತದೆ
ಇದು ಪರಿಸರ ಮತ್ತು ರಾಜಕೀಯದ ಕಾರ್ಯಕ್ರಮಗಳಿಂದ ಬರುವ ಮೊತ್ತದ ಮೇಲೆ ಅವಲಂಬಿಸಿರುತ್ತದೆ.

ಡೆಟ್ ಮ್ಯೂಚುವಲ್ ಫಂಡ್(Mutual Funds) ಅಂತ ಅಂದ್ರೆ ಇದರಲ್ಲಿ ನಾವು ಸ್ಥಿರವಾದ ಆದಾಯವನ್ನು ಗಳಿಸಬಹುದು. ಸುಮಾರು 65 ಪರ್ಸೆಂಟ್ ಹಣವನ್ನು ಸಾಲದ ವಾಹನಗಳಲ್ಲಿ ಹೂಡಿಕೆ ಮಾಡುತ್ತದೆ ಅದರಿಂದ ಬಂದ ಆದಾಯವನ್ನು ಎಲ್ಲರಿಗೂ ಹಂಚುತ್ತದೆ. ಇದರಲ್ಲಿ ರಿಸ್ಕ್ ಕೂಡ ಕಡಿಮೆ ಇರುತ್ತದೆ ಅಂತ ಹೇಳಬಹುದು. ಆದರೆ ನಾವು ಅತಿಯಾಗಿ ಲಾಭವನ್ನು ಬಯಸಲು ಸಾಧ್ಯವಿಲ್ಲ. ಒಂದು ಮಟ್ಟಿಗೆ ಅಂದರೆ ಒಂದು ಸ್ಥಿರ ಆದಾಯ ನಮ್ಮದಾಗುತ್ತದೆ.

ಇನ್ನು ಬ್ಯಾಲೆನ್ಸ್ಡ್ ಫಂಡ್ ಅಂತ ಅಂದ್ರೆ ಇದರಲ್ಲಿ ನೀವು ಹೆಚ್ಚಿನ ಎಕ್ಸ್ಪೆಕ್ಟೇಶನ್ ಮಾಡಬಹುದು. ಅಂದರೆ ಹೆಚ್ಚು ಹೆಚ್ಚು ಆದಾಯವನ್ನು ನೀವು ಇದರಲ್ಲಿ ಹೆಚ್ಚಿನ ಪರ್ಸೆಂಟೇಜ್ ಗಳಿಸಬಹುದು. ಇದರಲ್ಲಿ ಅಷ್ಟೇ ಅಪಾಯವು ಕೂಡ ಇದೆ. ಇದರಲ್ಲಿ ಫಂಡ್ ಮ್ಯಾನೇಜಿಗಳು ನೀವು ಆಕರ್ಷಕ ಆದಾಯವನ್ನು ಗಳಿಸಲು ಸಹಾಯ ಮಾಡುತ್ತಾರೆ.

ನೀವು ಮ್ಯೂಚುಯಲ್ ಫಂಡ್ ಗಳಿಗೆ ಆನ್ಲೈನ್ ನಲ್ಲೆ ಹೂಡಿಕೆ ಮಾಡಬಹುದು. ನಿಮ್ಮ ಮೊಬೈಲ್ ನಲ್ಲಿ ಡಿಮ್ಯಾಟ್ ಅಕೌಂಟ್ ಓಪನ್ ಮಾಡಿ (D- Mat account) ನೇರವಾಗಿ ಹೂಡಿಕೆಯನ್ನು ಮಾಡಬಹುದು. ಹಾಗೂ ಮಾರುಕಟ್ಟೆಯ ಏರಿಳಿತಗಳನ್ನ ನೀವು ಈ ಖಾತೆಯ ಮೂಲಕವೇ ಚೆಕ್ ಮಾಡಿಕೊಳ್ಳಬಹುದು. ಯಾವುದೇ ಮಧ್ಯವರ್ತಿಯ ಸಹಾಯದ ಅವಶ್ಯಕತೆ ಇರುವುದಿಲ್ಲ.

ಮ್ಯೂಚುಯಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವುದರ ಅನುಕೂಲಗಳು ಮತ್ತು ಅನಾನುಕೂಲಗಳು

ಒಂದು ಪ್ರಮುಖವಾದ ಅಂಶವೇನೆಂದರೆ ನೀವು ಮ್ಯೂಚುವಲ್ ಫಂಡ್ಗಳಲ್ಲಿ(Mutual Funds) ಹೂಡಿಕೆ ಮಾಡುವ ಮೊದಲು ಇದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಅವಶ್ಯಕ. ಮೊದಲಿಗೆ ನೀವು ಎಸ್ಐಪಿ (SIP) ಶುರು ಮಾಡಬೇಕು. ಇದರಿಂದ ನೀವು ಮುಂದಿನ ದಿನಗಳಲ್ಲಿ ಹೆಚ್ಚು ಲಾಭಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇದರಲ್ಲಿ ಯಾವುದೇ ಲಾಕ್ ಇನ್ ಪಿರಿಯಡ್ ಇರುವುದಿಲ್ಲ. ನಿಮಗೆ ಮಧ್ಯದಲ್ಲಿ ಬೇಕಾದಾಗ ಹಣವನ್ನು ತೆಗೆದುಕೊಳ್ಳಬಹುದು. ಯೋಚಿಸಿ ಹೂಡಿಕೆ ಮಾಡಿದಲ್ಲಿ ನೀವು ಉತ್ತಮ ಲಾಭವನ್ನು ಗಳಿಸಬಹುದಾಗಿದೆ. ದಿನದಿಂದ ದಿನಕ್ಕೆ ಏರುವ ಈ ಮ್ಯೂಚುಯಲ್ ಫಂಡ್ಗಳು ಉತ್ತಮ ಆದಾಯವನ್ನ ತಂದು ಕೊಡುತ್ತವೆ. ಇತರೆ ಬ್ಯಾಂಕುಗಳಿಗೆ ಹೋಲಿಸಿದರೆ ಇದರ ಬಡ್ಡಿದರ ಬ್ಯಾಂಕಿನ 10 ಪಟ್ಟು ಇರುತ್ತದೆ.

ಇನ್ನು ಇದರ ಅನಾನುಕೂಲತೆ ಅಂತಂದ್ರೆ ಇದು ತುಂಬಾ ರಿಸ್ಕ್ ಆಗಿರುತ್ತದೆ. ನಮ್ಮ ರಿಸ್ಕ್ ಅನ್ನು ನಾವೇ ತೆಗೆದುಕೊಳ್ಳಬೇಕು ಬೇರೆ ಯಾರು ಜವಾಬ್ದಾರ ಆಗಿರುವುದಿಲ್ಲ. ಬ್ಯಾಂಕುಗಳಲ್ಲಿ ನೀವು ಠೇವಣಿ ಇಡುವುದರಿಂದ ಕಡಿಮೆ ಬಡ್ಡಿದರ ಬರಬಹುದು ಆದರೆ ನಿಮ್ಮ ಅಸಲು ಕಾಣೆಯಾಗುವುದಿಲ್ಲ. ಮ್ಯೂಚುಯಲ್ ಫಂಡ್ಗಳಲ್ಲಿ ಮಾರುಕಟ್ಟೆ ವೈಪರಿತ್ಯದಿಂದ ಹೂಡಿಕೆ ಮಾಡಿದ ಹಣಕ್ಕೂ ಕೂಡ ಹೊಡೆತ ಬರಬಹುದು. ಒಟ್ಟಿನಲ್ಲಿ ಮ್ಯೂಚುಯಲ್ ಫಂಡ್ಗಳು ಒಳ್ಳೆಯದು ಅಂತ ಹೇಳಬಹುದು ಸರಿಯಾಗಿ ಮಾಹಿತಿಯನ್ನು ತಿಳಿದುಕೊಂಡು ಹೂಡಿಕೆಯನ್ನು ಮಾಡಿದ್ದಲ್ಲಿ ನೀವು ಖಂಡಿತವಾಗಲೂ ಲಾಭಗಳಿಸಲು ಉತ್ತಮ ಮಾರ್ಗವಾಗಿದೆ ಅಂತ ಹೇಳಬಹುದು.

ಇದನ್ನೂ ಓದಿ: ಜಿಯೋ ಲ್ಯಾಪ್ಟಾಪ್ ಕೇವಲ 15000 ಕ್ಕೆ ಲಭ್ಯವಿದೆ, ಖರೀದಿಸುವವರು ಪೂರ್ತಿ ಮಾಹಿತಿಯನ್ನ ತಿಳಿದುಕೊಳ್ಳಿ.

ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ ಏರಿಕೆ; ಕರ್ನಾಟಕದಲ್ಲಿ ಇಂದಿನ ಚಿನ್ನ, ಬೆಳ್ಳಿಯ ದರ ಎಷ್ಟಾಗಿದೆ ನೋಡಿ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram