Sitara: ಅಗ್ನಿಸಾಕ್ಷಿ ವಾಣಿಯಂತಾನೆ ಈಗಲೂ ಫೇಮಸ್ ಆಗಿರುವ ನಟಿ ಸಿತಾರಾ ಅವರು ರಂಗಭೂಮಿ ಕಲಾವಿದೆ. ನೀನಾಸಂನಲ್ಲಿ ಥಿಯೇಟರ್ ಆರ್ಟ್ಸ್‌ನಲ್ಲಿ ಡಿಪ್ಲೊಮಾ ಮಾಡಿರುವ ಇವರು ಸಿನಿಮಾ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸದ್ಯ ಪಾರು ಧಾರಾವಾಹಿಯ ದಾಮಿನಿ ಪಾತ್ರ ಮಾಡುತ್ತಿರುವ ಸಿತಾರ ಚಿಕ್ಕವರಿದ್ದಾಗಲೇ ಅಪ್ಪ-ಅಮ್ಮನನ್ನು ಕಳೆದುಕೊಂಡು ಈ ಹಂತಕ್ಕೆ ಬರೋದಿಕ್ಕೆ ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಹೌದು ಪಾರು ಧಾರಾವಾಹಿಯಲ್ಲಿ ಕಾಮಿಡಿ ಕಮ್ ವಿಲನ್ ಪಾತ್ರ ಮಾಡಿರೋ ದಾಮಿನಿ ಜನರಿಗೆ ಇಷ್ಟವಾಗಿದ್ದಾರೆ. ಆದ್ರೆ ನಾವು ಕಾಮಿಡಿ ಪಾತ್ರದಲ್ಲಿ ನೋಡುವಂತೆ ಧಾಮಿನಿ ಅಲಿಯಾಸ್ ಸಿತಾರ ಬದುಕು ಸುಲಭ ಅಲ್ಲ. ದಾಮಿನಿ ಅವ್ರು ನಡೆದು ಬಂದ ಜೀವನ ತುಂಬಾ ಕಷ್ಟದ್ದಾಗಿದೆ. ಈ ಹಂತಕ್ಕೆ ಬರಲು ಅವರು ತುಂಬಾ ಕಷ್ಟಪಟ್ಟಿದ್ದಾರೆ. ಕಾರಣ ಸಿತಾರ ಅವರು 3 ತಿಂಗಳ ಮಗು ಇದ್ದಾಗಲೇ ಅಪ್ಪ-ಅಮ್ಮನನ್ನು ಕಳೆದುಕೊಂಡ್ರಂತೆ. ಆಗ ಅಜ್ಜಿ ಅವರನ್ನು ಸಾಕಿದ್ರಂತೆ. ಆದ್ರೆ ವಿದ್ಯಾಭ್ಯಸ ಕೊಡಿಸುವಷ್ಟು ಅಜ್ಜಿ ಶಕ್ತಳಾಗಿರಲಿಲ್ವಂತೆ.
ಸಿತಾರ(Sitara) ಅವರನ್ನು ಸಾಣಿ ಹಳ್ಳಿ ಸ್ವಾಮೀಜೀ ದತ್ತು ತೆಗೆದುಕೊಂಡ್ರಂತೆ. ಆದ್ರೂ ಕೂಡ ಕುಟುಂಬ, ಮನೆ ಅಪ್ಪ ಅಮ್ಮನ ಪ್ರೀತಿ ಇಲ್ದೆ ಒಂಟಿ ಜೀವನ ಸಾಗಿಸಿದ್ರು. ಇನ್ನು ಪಿಯುಸಿ ಮುಗಿಸಿ ಡಿಗ್ರಿ ಮಾಡುವಾಗ ನೀನಾಸಂ ಸೇರ್ತಾರೆ ಆದ್ರೆ ರಜೆ ಇದ್ದಾಗ ಒಬ್ಬಳೇ ಹಾಸ್ಟೆಲ್ ನಲ್ಲಿ ಇರ್ತಿದ್ದ ಇವ್ರಿಗೆ ಅಪ್ಪ ಅಮ್ಮ ಇಲ್ಲ ಅನ್ನೋ ನೋವು ತುಂಬಾ ಕಾಡುತ್ತೆ. ಹೌದು ಸಿತಾರ ಅವರಿಗೆ ಕುಟುಂಬ ಅಂದ್ರೆ ಏನು ಅಂತ ಗೊತ್ತೇ ಇರಲಿಲ್ವಂತೆ. ಸ್ನೇಹಿತರು ಹೇಳಿದ ಮೇಲೆ ಗೊತ್ತಾಗಿದ್ದಂತೆ. ಅವರ ಸ್ನೇಹಿತರ ಅಪ್ಪ ಅಮ್ಮ ಎಷ್ಟೂ ಸಾರಿ ಸಿತಾರ ಅವ್ರಿಗೆ ಊಟ, ತಿಂಡಿ ತಂದು ಕೊಟ್ಟಿದ್ದು ಇದೆ. ಆದ್ರೆ ಇಷ್ಟೆಲ್ಲ ಕಷ್ಟ ಪಟ್ಟು ಈ ಹಂತಕ್ಕೆ ಬಂದ ಸಿತಾರ ಅವ್ರ ವೈವಾಹಿಕ ಜೀವನವು ಅವ್ರಿಗೆ ಖುಷಿ ನೆಮ್ಮದಿ ಪ್ರೀತಿ ಕೊಟ್ಟಿಲ್ಲ. ಹೌದು ಗಂಡನಿಂದ ದೂರವಾಗುವ ಹಂತಕ್ಕೆ ಬಂದಿರುವ ಸಿತಾರ ತಮ್ಮ ಜೀವನದ ಕಹಿ ಘಟನೆಗಳನ್ನ ನೆನೆದು ಭಾವುಕರಾಗಿದ್ದಾರೆ.
ಹೌದು ಧಾರವಾಹಿಗಳಲ್ಲಿ ಸಿತಾರ ಅವ್ರನ್ನ ನಾವು ಹೇಗೆ ನೋಡುತ್ತೇವೆಯೋ ಆಗೇ ಸಿತಾರ ಅವ್ರ ಬದುಕು ಇಲ್ಲ. ನಾವು ಅಂದುಕೊಂಡಷ್ಟು ಅವ್ರ ಜೀವನ ಚೆನ್ನಾಗಿಲ್ಲ. ತೆರೆ ಮೇಲೆ ಯಾವ ರೀತಿ ಸಿತಾರ ಬಹಳ ಖಡಕ್ ಆಗಿ ನಟಿಸುತ್ತಾರೋ ಅಷ್ಟೆ ಜೀವನದಲ್ಲಿ ನೊಂದು ಬೆಂದು ಹೋಗಿದ್ದಾರೆ. ಚಿಕ್ಕ ವಯಸ್ಸಿಗೆ ಅಪ್ಪ ಅಮ್ಮನನ್ನ ಕಳೆದುಕೊಂಡ ಸಿತಾರ ಅವ್ರಿಗೆ ಅಜ್ಜಿ ತಂದೆ ತಾಯಿಯಗ್ತಾರೆ ಆದ್ರೆ ಅಜ್ಜಿ ಆರ್ಥಿಕವಾಗಿ ಅಷ್ಟು ಮುಂದೆ ಇರದ ಕಾರಣ ಮಠ ವೊಂದಕ್ಕೆ ಕಳುಹಿಸಿ ಸ್ವಾಮೀಜಿಯವರಿಗೆ ಸಿತಾರ ಅವ್ರನ್ನ ದತ್ತು ಕೊಡುತ್ತಾರೆ. ಹೌದು ವಿದ್ಯಾಭ್ಯಾಸದ ಉದ್ದೇಶದಿಂದ ಮೊಮ್ಮಗಳನ್ನ ದೂರ ಮಾಡಿಕೊಂಡ ಅಜ್ಜಿಯಿಂದಲೂ ಸಿತಾರ ದೂರ ಉಳಿದು ಅಲ್ಲಿಗೆ ಅಜ್ಜಿ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ.
ಇದನ್ನೂ ಓದಿ: ಸಂಜೆ ವೇಳೆ ಅಪ್ಪಿ ತಪ್ಪಿಯು ಈ 5 ಕೆಲಸಗಳನ್ನು ಮಾಡಬೇಡಿ! ಲಕ್ಷ್ಮೀ ಶಾಶ್ವತವಾಗಿ ಹೊರಟು ಹೋಗುತ್ತಾಳೆ
ನಾನು ಯಾವಾಗಲೂ ಒಂಟಿನೇ! ಈಗ್ಲೂ ಆಗೇ ಇರ್ತೀನಿ
ತಂದೆ ತಾಯಿ ಪೋಷಕರ ಪ್ರೀತಿಲ್ಲಿ ಬೆಳಿಯಬೇಕಾದವ್ರು ಆಶ್ರಮ ದಲ್ಲಿ ಬೆಳಿತಾರೆ. ಯಾವುದರ ಆಸೆ ಅರಿವು, ಪ್ರೀತಿಯ ನಿರೀಕ್ಷೆಗಳಿಲ್ಲದೆ ಇದೆ ಜೀವನ ಅಂತ ಬದುಕುತ್ತಿದ್ದ ಸಿತಾರ(Sitara) ಅವ್ರನ್ನ ಕಾಲ ದೇವತೆ ಕೈ ಹಿಡಿಯುತ್ತಾಳೆ. ನೀನಾಸಂ ಸೇರಿದ ಸಿತಾರ ಅವ್ರು ಕಲೆಯಲ್ಲಿ ಹಿಡಿತ ಸಾಧಿಸಿ ಒಳ್ಳೆ ಕಲಾವಿದೆಯಾಗಿ ಗುರುತಿಸಿಕೊಳ್ಳುತ್ತಾರೆ. ಓದು ಮತ್ತು ಕಲೆ ಎರಡನ್ನ ಬಿಟ್ಟು ಬೇರೆ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂದುಕೊಳ್ಳುವಗ್ಲೇ ಸಂಸಾರ ಬಂಧನಕ್ಕೆ ಒಳಗಾಗುತ್ತಾರೆ. ಹೌದು ನಟಿ ಸಿತಾರ 2019ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ.
ಹೌದು 2019ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ನಟಿಯರು ಸಂಸಾರ ನೌಕೆ ದಾರಿ ತಪ್ಪಿತ್ತು. ನಟಿ ಸಿತಾರ ಅವ್ರಿಗೆ ಸಾಂಸಾರಿಕ ಜೀವನದ ಸುಖವು ಸಿಗಲಿಲ್ಲ. ಈ ಬಗ್ಗೆ ಮಾತನಾಡೋದು ಬೇಡ ಅಂದುಕೊಳ್ತೀನಿ ಅಂತ ಹೇಳ್ತಾರೆ ಈ ವರ್ಷ ತಾವಿಬ್ಬರು ಬೇರೆ ಬೇರೆ ಆಗ್ತಿದ್ದು ತಮಗೆ ಡೈವರ್ಸ್ ಸಿಗಲಿದೆ ಅನ್ನೋ ವಿಷಯವನ್ನ ಸಿತಾರ ಅವ್ರ ಬಾಯಿ ಬಿಟ್ಟಿದ್ದಾರೆ. ಹೌದು ಮದುವೆಯಾದ ಕೆಲವೇ ದಿನಕ್ಕೆ ಗಂಡ ಹೆಂಡತಿ ಮಧ್ಯೆ ಭಿನ್ನಾಭಿಪ್ರಾಯ ಬಂದು 2-3 ವರ್ಷಗಳ ಕಾಲ ಹೊಂದಾಣಿಕೆ ಜೀವನ ನಡೆಸಿದ ಸಿತಾರ ನಂತರ ಇದರಿಂದ ಮುಕ್ತಿ ಬೇಕು ಅಂತ ಭಾವಿಸಿ ಇದೀಗ ಡೈವರ್ಸ್ ಹಂತಕ್ಕೆ ಬಂದು ನಿಂತಿದೆ. ಆದ್ರೆ ಗಂಡ ಹಾಗೂ ಗಂಡನ ಮನೆಯವರ ಬಗ್ಗೆ ಒಳ್ಳೆ ರೀತಿಯಲ್ಲಿ ಮಾತನಾಡಿರುವ ಸಿತಾರ ಎಲ್ಲಿಯೂ ಯಾರ ಬಗ್ಗೆಯೂ ಸಣ್ಣ ಮಾತನ್ನು ಆಡಿಲ್ಲ ಆದ್ರೆ ನಮ್ಮಿಬ್ಬರಿಗೆ ಯಾಕೋ ಏನೋ ಹೊಂದಾಣಿಕೆ ಆಗ್ಲೇ ಇಲ್ಲ.
ನಾನು ತಾಳ್ಮೆಯಿಂದ 2-3 ವರ್ಷ ಕಾಯ್ದೆ ಆದ್ರೆ ಪ್ರಯೋಜನ ಆಗ್ಲಿಲ್ಲ. ಈ ವರ್ಷ ಡಿವೋರ್ಸ್ ಆಗಬಹುದು ಅಲ್ಲ ಆಗುತ್ತೆ.. ಈ ಸಂಸಾರ ಕುಟುಂಬ ಇದೆಲ್ಲಾ ನಂಗೆ ಆಗಬರಲ್ಲ ಅನ್ಸುತ್ತೆ ಎಲ್ಲದ್ರಿಂದ ಹೊರಗಡೆ ಬಂದು ಒಬ್ಬಂಟಿಯಾಗಿ ಜೀವನ ನಡೆಸೋದೆ ಒಳ್ಳೆಯದು ಅನ್ನಿಸ್ತಿದೆ. ಇನ್ನೊಂದಷ್ಟು ಸಾಧಿಸೋದಿದೆ. ಬೇರೆ ಬೇರೆ ರಂಗದಲ್ಲಿ ಬೇರೆ ಬೇರೆ ಕೆಲ್ಸಗಳಲ್ಲಿ ಗುರ್ತಿಸಿಕೊಂಡು ಬೆಳಿತಿದೀನಿ ಇದಕ್ಕೆ ಸಾಕಷ್ಟು ಜನ ಸಹಾಯ ಮಾಡ್ತಿದ್ದಾರೆ. ನಂಬಿ ಕೆಲಸ ಕೊಡ್ತಿದ್ದಾರೆ. ಅದೆಲ್ಲವನ್ನ ಅಲ್ಲಿಸಿಕೊಂಡು ಒಬ್ಬಳೇ ಬದುಕು ಸಾಗಿಸಬೇಕು ಅಂದುಕೊಂಡಿದ್ದೀನಿ. ಈ ಹಂತದಲ್ಲಿ ಕೆಲವರು ನನ್ನ ಒಳ್ಳೆತನ ಬಳಸಿಕೊಂಡಿದ್ದಾರೆ, ದುಡ್ಡು ತಿಂದಿದ್ದಾರೆ ಪರ್ವಾಗಿಲ್ಲ ಇನ್ಮುಂದೆ ನಾನು ಸರಿಯಾಗಿ ಗಟ್ಟಿಯಾಗಿ ಒಬ್ಬಳೇ ಬದುಕುತಿನಿ ಅಂತ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಸುದೀಪ್ ಕಾಂಟ್ರವರ್ಸಿ ಬಗ್ಗೆ ಶಿವಣ್ಣ ಖಡಕ್ ಮಾತು; ನನ್ನ ತಮ್ಮ ಸುದೀಪ್ ಅವನು ತಪ್ಪು ಮಾಡಿಲ್ಲ!?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram