Namma Lachi: ನಮ್ಮ ಲಚ್ಚಿ ಅಮ್ಮ ಮಗಳು ಪುನರ್ಮಿಲನ.!!

Namma Lachi: ಸ್ಟಾರ್ ಸುವರ್ಣ ವಾಹಿನಿಯಲ್ಲಿ ರಾತ್ರಿ 8ಕ್ಕೆ ಪ್ರಸಾರವಾಗುತ್ತಿರುವ ನಮ್ಮ ಲಚ್ಚಿ ಸೀರಿಯಲ್ ಪ್ರೇಕ್ಷಕರ ಮನ ಗೆದ್ದಿದೆ ಈ ಧಾರಾವಾಹಿಯಲ್ಲಿ ಮೊದಲ ಬಾರಿಗೆ ತಂದೆ ಪಾತ್ರ ಮಾಡುತ್ತಿರುವ ವಿಜಯ್ ಸೂರ್ಯ ಮತ್ತು ನೇಹಾ ಗೌಡ, ಸಾರ ಅಣ್ಣಯ್ಯ ಹಾಗೂ ಲಚ್ಚಿ ಪಾತ್ರ ಮಾಡುತ್ತಿರುವ ಪುಟಾಣಿ ಸಾಂಗವಿ ಇಷ್ಟು ಕಲಾವಿದರು ಮುಖ್ಯ ಪಾತ್ರಗಳಾಗಿ ಕಾಣಿಸಿಕೊಂಡಿದ್ದಾರೆ ಆದರೆ ಕೆಲವು ಸಂಚಿಕೆಗಳ ಹಿಂದೆ ಲಚ್ಚಿ ಅಮ್ಮ ಗಿರಿಜಾ ಸಾವನಪ್ಪುತ್ತಾರೆ ಅಮ್ಮನ ಸಾವಿನ ನಂತರ ಏನು ತೋಚದ ಲಚ್ಚಿ ಇದೀಗ ಹುಡುಗನ ವೇಷದಲ್ಲಿ ಅಪ್ಪನ ಮನೆಯಲ್ಲಿ ಇದ್ದಾಳೆ ಆದರೆ ಈಗ ಮತ್ತೆ ಲಚ್ಚಿ ಮತ್ತು ಗಿರಿಜಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

WhatsApp Group Join Now
Telegram Group Join Now

ಲಚ್ಚಿ ಧಾರಾವಾಹಿಯಲ್ಲಿ ಸಾಕಷ್ಟು ಟ್ವಿಸ್ಟ್ ಗಳು ಬಂದವು ಲಚ್ಚಿ ತಾಯಿ ಗಿರಿಜಾ ಸಾವನ್ನಪ್ಪಿದ್ದು ಇದು ಧಾರಾವಾಹಿಯ ದೊಡ್ಡ ಟ್ವಿಸ್ಟ್ ಆದರೆ ಧಾರಾವಾಹಿ ತಂಡದ ಈ ನಿರ್ಧಾರದಿಂದ ತುಂಬಾ ಪ್ರೇಕ್ಷಕರಿಗೆ ಬೇಜಾರಾಗಿತ್ತು ಇಷ್ಟು ಬೇಗ ಗಿರಿಜಾ ಪಾತ್ರ ಮುಗಿಸುವುದಾದರೆ ಮತ್ತೆ ಯಾಕೆ ನೇಹಾ ಗೌಡ ಅವರನ್ನು ಆಯ್ಕೆ ಮಾಡಿದ್ದೀರಿ ಅವರ ಪಾತ್ರ ಮುಂದುವರಿಸಿ ಗಿರಿಜಾ ಮತ್ತು ಸಂಗಮ ಜೊತೆಯಾಗಬೇಕು ಎಂದು ಗಿರಿಜಾ ಪಾತ್ರ ಮುಕ್ತಾಯವಾದಾಗ ವೀಕ್ಷಕರಿಂದ ನಾನಾ ತರದ ಕಾಮೆಂಟ್ ಗಳು ಬಂದವು ಇದೀಗ ಮತ್ತೆ ಅಮ್ಮ ಮಗಳ ಪುನರ್ಮಿಲನ ಆಗಿದೆ ಹಾಗಾದರೆ ಗಿರಿಜಾ ಸತ್ತಿಲ್ವ ಅಥವಾ ಸ್ಟಾರ್ ಸುವರ್ಣ ದಲ್ಲಿ ಪ್ರಸಾರವಾಗುತ್ತಿರುವ ಹೊಸ ಕಾರ್ಯಕ್ರಮದಲ್ಲಿ ಅಮ್ಮ ಮಗಳು ಒಟ್ಟಿಗೆ ಸೇರಿದ್ದಾರಾ.

ಇದನ್ನೂ ಓದಿ: ಬುಲೆಟ್ ಪ್ರಕಾಶ್ ಮಗಳ ಮದುವೆಗೆ ದರ್ಶನ್ ಅವರು ಯಾಕೆ ಬಂದಿಲ್ಲ? ಕಾರಣ ತಿಳಿಸಿದ ರಕ್ಷಕ್ ಬುಲೆಟ್

ಹೌದು ನೇಹಾ ಗೌಡ ತಮ್ಮ ಸೋಶಿಯಲ್ ಮೀಡಿಯಾ ದಲ್ಲಿ ಹಂಚಿಕೊಂಡಿರುವ ಈ ಫೋಟೋ ದಿಂದ ಈ ಪ್ರಶ್ನೆ ಮೂಡಿದೆ ಈ ಫೋಟೋ ದಲ್ಲಿ ಲಚ್ಚಿ ಪಾತ್ರ ಮಾಡುತ್ತಿರುವ ಸಾಂಗವಿ ಮತ್ತು ನೇಹ ಗೌಡ ಕಾಣಿಸುತ್ತಿದ್ದಾರೆ. ತಾಯಿ ಮತ್ತು ಮಗಳು ಮತ್ತೆ ಒಟ್ಟಿಗೆ ಎಂದು ನೇಹಾ ಗೌಡ ಬರೆದುಕೊಂಡಿದ್ದಾರೆ. ಕೆಲವು ಮಾಹಿತಿಗಳ ಪ್ರಕಾರ ಇವರು ಸುವರ್ಣ ದಲ್ಲಿ ಪ್ರಸಾರವಾಗುವ ಸುವರ್ಣ ಸಂಭ್ರಮ ನಮ್ಮ ಲಚ್ಚಿ ಜೊತೆ ಕಥೆಯೊಂದು ಶುರುವಾಗಿದೆ ಕಾರ್ಯಕ್ರಮ ದಲ್ಲಿ ಕಾಣಿಸಿಕೊಂಡಿದ್ದಾರೆ ಹಾಗಾದರೆ ಮತ್ತೆ ನೇಹಾ ಗೌಡ ಲಚ್ಚಿ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳುತ್ತಾರ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬುಲೆಟ್ ಪ್ರಕಾಶ್ ಮಗಳು.. ಯಾರೆಲ್ಲ ಬಂದಿದ್ರು?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram