ವಿಜಯ್ ಸೂರ್ಯ ಮನೆಯಲ್ಲಿ ಲಕ್ಷ್ಮೀ ಪೂಜೆ; ಪೂಜೆಯಲ್ಲಿ ಭಾಗಿಯಾಯ್ತು ನಮ್ಮ ಲಚ್ಚಿ ಸೀರಿಯಲ್ ತಂಡ

ನಟ ವಿಜಯ್ ಸೂರ್ಯ(Vijay suriya) ಕನ್ನಡ ಕಿರುತೆರೆಯಲ್ಲಿ ಭರವಸೆಯ ನಟರಾಗಿ ಗುರುತಿಸಿಕೊಂಡಿದ್ದಾರೆ. ಅಲ್ದೇ ಧಾರವಾಹಿ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇನ್ನು ವಿಜಯ್ ಸೂರ್ಯ ಮೊನ್ನೆಯಷ್ಟೇ ಜನ್ಮದಿನದ ಸಂಭ್ರಮದಲ್ಲಿದ್ದರು ಅಲ್ದೇ ಈ ವೇಳೆ ಅವರ ಮನೆಯಲ್ಲಿ ಲಕ್ಷ್ಮೀ ಪೂಜೆ ಇಟ್ಟುಕೊಂಡಿದ್ರು. ಈ ಕಾರ್ಯಕ್ರಮಕ್ಕೆ ತಮ್ಮ ಸಹ ಕಲಾವಿದರನ್ನ ಕರೆಸಿ ಬಹಳ ಸಂಭ್ರಮಿಸಿದ್ದಾರೆ. ಹೌದು ಸದ್ಯ ವಿಜಯ್ ಸೂರ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮ ಲಚ್ಚಿ ಸೀರಿಯಲ್ ನಲ್ಲಿ ಲೀಡ್ ರೋಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಡುಗಾರ ಸಂಗಮ್ ಪಾತ್ರಧಾರಿ ಬಹಳ ಜನಮೆಚ್ಚುಗೆ ಗಳಿಸಿಕೊಂಡಿದ್ದಾರೆ.

WhatsApp Group Join Now
Telegram Group Join Now

ಹೌದು ವಿಜಯ್ ಸೂರ್ಯ ಸದ್ಯ ಕನ್ನಡದಲ್ಲಿ ‘ನಮ್ಮ ಲಚ್ಚಿ’ ಎನ್ನುವ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ನಿಮ್ಮೆಲ್ಲರಿಗೂ ಗೊತ್ತಿರುವಂತೆ ಇದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ. ಹೀಗಾಗಿ ತಮ್ಮ ಹುಟ್ಟುಹಬ್ಬ ಹಾಗೂ ಮನೆಯಲ್ಲಿ ಲಕ್ಷ್ಮೀ ಪೂಜೆ ಎರಡನ್ನ ಒಟ್ಟಿಗೆ ಆಚರಿಸಿರುವ ವಿಜಯ್ ಸೂರ್ಯ ತಮ್ಮ ಕುಟುಂಬದ ಜೊತೆಗೆ ನಮ್ಮ ಲಚ್ಚಿ’ ಧಾರಾವಾಹಿ ಕಲಾವಿದರು ಈ ಪೂಜೆಯಲ್ಲಿ ಭಾಗಿಯಾಗಿದ್ದು ಬಹಳ ವಿಶೇಷವಾಗಿತ್ತು.

ನಟ ವಿಜಯ್ ಸೂರ್ಯ(Vijay suriya) ಮನೆಯಲ್ಲಿ ಹಬ್ಬದ ಸಂಭ್ರಮ ಕಳೆ ಗಟ್ಟಿತ್ತು. ಈ ಒಂದು ಸಂಭ್ರಮಕ್ಕೆ ಜೊತೆಗೂಡಲು ನಟ ವಿಜಯ್ ಸೂರ್ಯ ತನ್ನ ಸಹ ಕಲಾವಿದರನ್ನ ಆಹ್ವಾನಿಸಿದ್ರು. ಸಹ ಕಲಾವಿದ್ರು ಸಹ ನಟನ ಮನೆಗೆ ಆಗಮಿಸಿ ಹಬ್ಬದ ಖುಷಿಯಲ್ಲಿ ಭಾಗಿಯಾಗಿದ್ದಾರೆ. ಹೌದು ನಟಿ ಐಶ್ವರ್ಯಾ ಸಿಂಧೋಗಿ, ಸುಷ್ಮಿತಾ ಗೌಡ, ಜಗಪ್ಪ ವಾಣಿ, ಸೇರಿದಂತೆ ಸಾಕಷ್ಟು ಕಲಾವಿದರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಚಿರು ಸಮಾಧಿ ಪಕ್ಕದಲ್ಲಿ ಮಲಗಿದ್ದ ಧ್ರುವ, ಪ್ರತಿ ವಾರವು ಅಣ್ಣನ ಪಕ್ಕದಲ್ಲೇ ಮಲಗ್ತಾರೆ; ಆದ್ರೆ ಧ್ರುವ ಸರ್ಜಾ ಹೀಗ್ ಮಾಡೋಕೆ ಕಾರಣ ಏನ್ ಗೊತ್ತಾ?

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಸಹ ಕಲಾವಿದರ ಜೊತೆಗೆ ಹಬ್ಬ ಆಚರಿಸಿದ ವಿಜಯ್

ಇನ್ನು ಇವರೆಲ್ಲರೂ ಕೂಡ ವಿಜಯ್ ಸೂರ್ಯ(Vijay suriya) ಮನೆಗೆ ಹಾಜರಿ ಹಾಕಿದ್ದರು. ಅಲ್ದೇ ವಿಜಯ್ ಅವರ ಆತ್ಮೀಯ ಬಳಗ ಈ ಪೂಜೆಯಲ್ಲಿ ಭಾಗಿಯಾಗಿತ್ತು.ಇನ್ನು ಐಶ್ವರ್ಯಾ, ಸುಷ್ಮಿತಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ಮನೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದನ್ನ ನೋಡಿದ ಕಲಾವಿದರ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದು, ಎಲ್ಲರನ್ನ ಒಟ್ಟಿಗೆ ನೋಡಿ ಖುಷಿಪಟ್ಟಿದ್ದಾರೆ.

ಇನ್ನು ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಮನೆ ಮಾತಾದ ನಟ ವಿಜಯ್ ಸೂರ್ಯ ಸದ್ಯ ಸೀರಿಯಲ್ ಗಳ ಜೊತೆಗೆ ಸಿನಿಮಾದಲ್ಲೂ ಬ್ಯುಸಿ ಆಗಿದ್ದಾರೆ. ಸದ್ಯ ವೀರಪುತ್ರನಾಗಿ ಮನ ಗೆಲ್ಲಲು ಸಜ್ಜಾಗಿರುವ ವಿಜಯ್ ಹುಟ್ಟುಹಬ್ಬದ ಅಂಗವಾಗಿ ಅವರು ನಟಿಸುತ್ತಿರುವ ಹೊಸ ಸಿನಿಮಾ ವೀರಪುತ್ರ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಉದ್ದ ಕೂದಲು ಬಿಟ್ಟು, ರಗಡ್ ಅವತಾರದಲ್ಲಿ ಚಾಕೊಲೇಟ್ ಹೀರೋ ಕಾಣಿಸಿಕೊಂಡಿದ್ದಾರೆ. ಇನ್ನು ಸ್ಟೈಲೀಶ್ ಸ್ಟಾರ್ ವಿಜಯ್ ಸೂರ್ಯ ಜೋಡಿಯಾಗಿ ಲೇಖಚಂದ್ರ ನಟಿಸುತ್ತಿದ್ದು, ಉಮಾಶ್ರೀ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಂದ್ರಶೇಖರ್ ಬಂಡಿಯಪ್ಪ ಸಂಭಾಷಣೆ, ಜೂಡಾ ಸ್ಯಾಂಡಿ ಸಂಗೀತ, ಸಿ. ರವಿಚಂದ್ರನ್ ಸಂಕಲನ, ಉದಯ್ ಆದಿತ್ಯ ಛಾಯಾಗ್ರಹಣ, ಪ್ರಮೋದ್ ಮರವಂತೆ ಸಾಹಿತ್ಯ ವೀರಪುತ್ರ ಚಿತ್ರಕ್ಕಿದ್ದು, ವಿಜಯ್ ಅಭಿಮಾನಿಗಳು ಬಹಳ ಖುಷಿಯಿಂದ ಕಾತುರದಿಂದ ಸಿನಿಮಾಗಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ: ಕೆಲಸಕ್ಕೆಂದು ವಿದೇಶಕ್ಕೆ ಹೋದವರ ಪಾಡು ಏನಾಯ್ತು ಗೊತ್ತಾ? ಕಂಪನಿಯಲ್ಲಿ ಕೆಲಸಕ್ಕೆಂದು ಕರೆಸಿ ಅಲ್ಲಿ ಏನೆಲ್ಲಾ ಮಾಡಿಸ್ತಾರೆ ನೋಡಿ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram