ಮನುಷ್ಯ ಅಂದಮೇಲೆ ತಪ್ಪು ಮಾಡುವುದು ಸಹಜ. ಆದರೆ ಪ್ರತಿ ಬಾರಿ ತಪ್ಪು ಮಾಡುವುದು ಒಳ್ಳೆಯದಲ್ಲ. ಸಮಯ ಸಂದರ್ಭ ಅಂತ ನೋಡಿಕೊಳ್ಳಬೇಕು. ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲವೊಂದು ತಪ್ಪುಗಳು ಜೀವನದಲ್ಲಿ ನಡೆದು ಹೋಗುತ್ತದೆ ಕಾಕತಾಳಿಯ ಎನ್ನುವಂತೆ ನಮಗೆ ಅರಿವಿಲ್ಲದಂತೆ ಭಗವಂತ ನಮ್ಮ ಕೈಯಿಂದ ತಪ್ಪನ್ನು ಮಾಡಿಸುತ್ತಾನೆ. ಆದರೆ ನವರಾತ್ರಿಯಂದು ಈ ತಪ್ಪುಗಳನ್ನ ಖಂಡಿತವಾಗಲೂ ಮಾಡಬೇಡಿ. ನವರಾತ್ರಿ(Navratri) ಎಂದರೆ ಶ್ರೀ ಶಕ್ತಿಯಾದ ದುರ್ಗಾದೇವಿಯ 9 ಅವತಾರಗಳು. ಇಂತಹ ವಿಶೇಷವಾದ ದಿನಗಳಂದು ಈ ತಪ್ಪುಗಳನ್ನು ಮಾಡಬೇಡಿ. ಹಾಗಾದರೆ ಯಾವ ತಪ್ಪುಗಳನ್ನು ಮಾಡಬಾರದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಪೂರ್ತಿ ಲೇಖನವನ್ನ ಓದಿ.
ದುರ್ಗಾ ಮಾತೆಗೆ ನಡೆದುಕೊಳ್ಳುವುದು ಕಷ್ಟ ಏಕೆಂದರೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ಕೂಡ ಆ ತಾಯಿಗೆ ಸಿಟ್ಟು ಎನ್ನುವುದು ಮುಂದೆ. ಕರುಣೆ ಬೀರಿದರೂ ಸಹಿತ ಅಷ್ಟೇ ವೇಗವಾಗಿ ಫಲವನ್ನು ಕೊಡುತ್ತಾಳೆ ಆ ತಾಯಿ, ಮುನಿಸಿಕೊಂಡರು ಸಹಿತ ಅಷ್ಟೇ ಬೇಗ ಕೋಪಿಸಿಕೊಳ್ಳುತ್ತಾಳೆ. ಆದ್ದರಿಂದ ಈ ನವರಾತ್ರಿಗಳಲ್ಲಿ ದುರ್ಗಾ ಮಾತೆ ಕೋಪಿಸಿಕೊಳ್ಳುವಂತಹ ಕೆಲಸವನ್ನು ಮಾಡಬಾರದು.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಇದನ್ನೂ ಓದಿ: ನಿಮಗಿನ್ನು ಅನ್ನ ಭಾಗ್ಯ ಯೋಜನೆಯ ಹಣ ಬಂದಿಲ್ವಾ? ಇದೊಂದು ಕೆಲಸವನ್ನು ತಪ್ಪದೆ ಮಾಡಿ ಹಣ ಬಂದೇ ಬರುತ್ತೆ.
ನವರಾತ್ರಿಯಲ್ಲಿ ಮಾಡಬಾರದ ತಪ್ಪುಗಳು
ಮೊದಲನೆಯದಾಗಿ ಮಹಿಳೆಯರನ್ನು ಗೌರವಿಸಬೇಕು, ಹೌದು ಈ ಮಾತು ನೂರಕ್ಕೆ ನೂರು ನಿಜ ಯಾರ ಮನೆಯಲ್ಲಿ ಮಹಿಳೆಯರನ್ನು ಗೌರವವಾಗಿ ಕಾಣುತ್ತಾರೋ ಮಹಿಳೆಯರನ್ನ ಪ್ರೀತಿಯಿಂದ ನೋಡಿಕೊಳ್ಳುತ್ತಾರೋ ಅಂತಹ ಮನೆಯಲ್ಲಿ ಮಹಾಲಕ್ಷ್ಮಿಯು ಸದಾ ನೆಲೆಸಿರುತ್ತಾಳೆ ಅಂತಹ ಮನೆಯಲ್ಲಿ ಸಿರಿವಂತಿಕೆ ನೆಮ್ಮದಿ ಸುಖ ಶಾಂತಿ ತಾಂಡವ ಮಾಡುತ್ತಿರುತ್ತದೆ. ಮಹಿಳೆ ಎಂದರೆ ಗೃಹಲಕ್ಷ್ಮಿ, ಆದ್ದರಿಂದ ಮಹಿಳೆಯರನ್ನ ನವರಾತ್ರಿ ಅಂತಲ್ಲ ಯಾವಾಗಲೂ ಕೂಡ ಗೌರವದಿಂದ ಕಾಣಬೇಕು ಅಂತ ಮನೆಯಲ್ಲಿ ಏಳಿಗೆ ಎನ್ನುವುದು ಯಾವಾಗಲೂ ಇರುತ್ತದೆ.
ಇನ್ನು ಎರಡನೆಯದಾಗಿ ನಿಮ್ಮ ಮನೆಯ ಬಾಗಿಲಿಗೆ ದೇಹಿ ಎಂದು ಬಂದವರನ್ನು ಖಾಲಿ ಕೈಯಲ್ಲಿ ಕಳಿಸಬೇಡಿ. ಅಂದರೆ ಭಿಕ್ಷುಕರಾಗಿರಬಹುದು ಅಥವಾ ಇನ್ನಿತರ ಯಾರೇ ಆಗಿರಬಹುದು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿ. ಬಿಕ್ಷುಕರು ಮನೆಯ ಬಾಗಿಲಿಗೆ ಬಂದರೆ ಅವರಿಗೆ ನಿಮ್ಮ ಕೈಲಾದ್ದನ್ನು ಕೊಟ್ಟು ಕಳುಹಿಸಿ. ಇನ್ನು ನವರಾತ್ರಿಯಲ್ಲಿ ಸುಳ್ಳು ಹೇಳಬಾರದು ಕಳ್ಳತನ ಮಾಡಬಾರದು ಯಾವುದೇ ರೀತಿಯ ಕೆಟ್ಟ ಕೆಲಸವನ್ನು ಮಾಡಬಾರದು ಇಂತಹವರು ದುರ್ಗಾ ದೇವಿಯ ಕೋಪಕ್ಕೆ ಗುರಿಯಾಗುತ್ತಾರೆ. ಸುಳ್ಳು ಹೇಳುವವರನ್ನು ಕಂಡರೆ ಮತ್ತು ಕಳ್ಳತನವನ್ನು ಮಾಡುವವರನ್ನು ಕಂಡರೆ, ಮೋಸ ಮಾಡುವವರನ್ನು ಕಂಡರೆ ದುರ್ಗಾದೇವಿಗೆ ಆಗುವುದಿಲ್ಲ. ಇಂಥವರ ಮೇಲೆ ದುರ್ಗಾದೇವಿ ಬೇಗನೇ ಕೋಪಗೊಳ್ಳುತ್ತಾಳೆ.
ನವರಾತ್ರಿಯ(Navratri) ಸಮಯದಲ್ಲಿ ತಾಮಸಿಕ ಆಹಾರಗಳನ್ನು ತಿನ್ನಬಾರದು. ತಾಮಸಿಕ ಆಹಾರ ಅಂತಂದ್ರೆ ಬೆಳ್ಳುಳ್ಳಿ ಹಾಗೂ ಈರುಳ್ಳಿ, ಇದನ್ನ ತಿನ್ನಬಾರದು ಅಂತ ಹೇಳುತ್ತೆ ಶಾಸ್ತ್ರ. ಇವೆರಡನ್ನ ತ್ಯಜಿಸಿ ದುರ್ಗಾದೇವಿ ಪೂಜೆಯನ್ನು ಮಾಡಬೇಕು. ಮಾಂಸಾಹಾರ, ತಂಬಾಕು, ಧೂಮಪಾನ ಮದ್ಯಪಾನ ಇವುಗಳನ್ನು ನವರಾತ್ರಿಯಲ್ಲಿ ಸೇವಿಸಬಾರದು. ವಿಶೇಷ ದಿನಗಳಲ್ಲಿ ಇದನ್ನು ನಿಷಿದ್ದ ಎಂದು ಪರಿಗಣಿಸಲಾಗಿದೆ. ಇನ್ನು ನವರಾತ್ರಿಯಲ್ಲಿ ಯಾರು ಬ್ರಹ್ಮಚರ್ಯವನ್ನು ಪಾಲನೆ ಮಾಡುತ್ತಾರೋ ಅಂತಹವರ ಮೇಲೆ ದುರ್ಗಾದೇವಿಯ ಕೃಪೆ ಇರುತ್ತದೆ. ಕಟ್ಟುನಿಟ್ಟಾಗಿ ಬ್ರಹ್ಮಚರ್ಯವನ್ನು ಪಾಲನೆ ಮಾಡಿದಲ್ಲಿ ಒಂದು ವರ್ಷಗಳ ಕಾಲ ದುರ್ಗಾದೇವಿಯ ಆಶೀರ್ವಾದ ನಿಮ್ಮನ್ನು ಕಾಪಾಡುತ್ತದೆ.
ಇನ್ನು ನವರಾತ್ರಿಯ(Navratri) ಸಂದರ್ಭದಲ್ಲಿ ಕೂದಲನ್ನು ಕತ್ತರಿಸಬಾರದು. ಪುರುಷರು ಶೇವಿಂಗ್ ಮಾಡಬಾರದು. ಇದರಿಂದ ದುರ್ಗಾ ಮಾತೆಯ ಅವಕೃಪೆಗೆ ಕಾರಣರಾಗುತ್ತೇವೆ. ಹಾಗೆ ಉಗುರುಗಳನ್ನು ಸಹಿತ ಕತ್ತರಿಸಬಾರದು ಈ ಒಂಬತ್ತು ದಿನಗಳ ಕಾಲ ಕೂದಲು ಉಗುರು ಹಾಗೂ ಶೇವಿಂಗ್ ಗಳನ್ನ ಮಾಡಬಾರದು. ಇನ್ನು ನವರಾತ್ರಿಯ ಸಂದರ್ಭದಲ್ಲಿ ಜಗಳವನ್ನು ಕೂಡ ಮಾಡಬಾರದು ಮನೆಯಲ್ಲಿ ಜಗಳಗಳು ಆಗಬಾರದು ಗಲಾಟೆ ಜಗಳಗಳು ಕಣ್ಣೀರು ಬೈಗುಳ ಇದೆಲ್ಲವೂ ಕೇಳಿ ಬರಬಾರದು. ಅಂತಹ ಮನೆಯಲ್ಲಿ ದುರ್ಗೆಯು ನೆಲೆಸುವುದಿಲ್ಲ.
ಇನ್ನು ಈ ನವರಾತ್ರಿಯ 9 ದಿನಗಳ ಒಳಗಡೆ ನಮ್ಮ ಮನೆಗೆ ಯಾರಾದರೂ 11 ವರ್ಷದ ಕೆಳಗಿನ ಮಕ್ಕಳು ಬಂದರೆ ಅವರಿಗೆ ಅರಿಶಿನ ಕುಂಕುಮ ಹಾಗೂ ಸಿಹಿಯನ್ನ ಕೊಟ್ಟು ಬಾಗಿನವನ್ನು ಕೊಟ್ಟು ಕಳಿಸಬೇಕು ಯಾಕೆಂದರೆ 11 ವರ್ಷದ ಒಳಗಿನ ಮಕ್ಕಳನ್ನು ನಾವು ದುರ್ಗಾದೇವಿ ರೂಪ ಎಂದು ಪರಿಗಣಿಸುತ್ತೇವೆ. ಆದ್ದರಿಂದ ಅವರನ್ನು ಕಾಲಿ ಕೈಲಿ ಕಳುಹಿಸಬಾರದು. ನವರಾತ್ರಿಯ ಸಂದರ್ಭದಲ್ಲಿ ಹಗಲು ನಿದ್ದೆಯನ್ನು ಮಾಡಬಾರದು. ನೀವು ಆರೋಗ್ಯವಂತರಾಗಿದ್ದರೆ ಸದೃಢರಾಗಿದ್ದರೆ ಹಗಲು ನಿದ್ದೆಯನ್ನು ಮಾಡಬೇಡಿ. ಗರ್ಭಿಣಿಯರು ಬಾಣಂತಿಯರು ಹಾಗೂ ವಯಸ್ಸಾದವರಿಗೆ ಯಾವುದೇ ದೋಷವಾಗುವುದಿಲ್ಲ. ಆದಷ್ಟು ಈ ಸಂದರ್ಭಗಳಲ್ಲಿ ಈ ವಿಶೇಷವಾದ ದಿನಗಳಲ್ಲಿ ಹಗಲು ನಿದ್ದೆಯನ್ನು ಮಾಡಬೇಡಿ. ಈ ಒಂಬತ್ತು ನಿಯಮಗಳನ್ನ ನೀವು ಪಾಲಿಸಿದರೆ ಖಂಡಿತವಾಗಲೂ ಇನ್ನೂ ಒಂದು ವರ್ಷಗಳ ಕಾಲ ದುರ್ಗಾದೇವಿ ನಿಮ್ಮನ್ನು ಕಾಯುತ್ತಾಳೆ.