KIA EV5: ಇತ್ತೀಚಿಗೆ ಕಿಯಾ ಮೋಟರ್ಸ್ ಬಾರಿ ಬೇಡಿಕೆಯಲ್ಲಿದ್ದು ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್(Electric) ಹಾಗೂ ಪೆಟ್ರೋಲ್, ಡೀಸೆಲ್ ಹೊಸ ಮಾದರಿ ಕಾರುಗಳನ್ನ ಮಾರುಕಟ್ಟೆಗೆ ತರಲಿದೆ. ಮೂಲತ: ಕಿಯಾ(Kia) ಕಂಪನಿಯು ಕೋರಿಯಾದ ಮೂಲದಿಂದ ಬಂದಿದ್ದು ಮಾರುಕಟ್ಟೆಯಲ್ಲಿ ತನ್ನ ವಾಹನವನ್ನು ಮಾರಾಟ ಮಾಡುತ್ತಿದೆ ಇದಕ್ಕೆ ಭಾರತೀಯರಿಂದ ಸಾಕಷ್ಟು ಬೇಡಿಕೆಯು ಕೂಡ ಹುಟ್ಟಿಕೊಂಡಿದೆ ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ 5 ಅನ್ನು ಚೀನಾದಲ್ಲಿ ಮೊದಲು ಬಿಡುಗಡೆ ಮಾಡಿದ ನಂತರ ಭಾರತದ ಮಾರುಕಟ್ಟೆಯಲ್ಲಿ ಇದನ್ನು ಪರಿಚಯಿಸಲಾಗುತ್ತದೆ ಎಂದು ಕಿಯಾ ಮೋಟರ್ಸ್ ಸ್ಪಷ್ಟಪಡಿಸಿದೆ.
ಇದು ಕಿಯಾ ಎಲೆಕ್ಟ್ರಿಕ್ 9(KIA EV9) ಹಾಗೆ ವಿನ್ಯಾಸಗೊಳಿಸಿದ್ದು ನೋಡುಗರಿಗೆ ಹೆಚ್ಚಿನ ರೀತಿಯಲ್ಲಿ ಆಕರ್ಷಣೆಯನ್ನು ಉಂಟುಮಾಡಲಿದೆ. ಈ ಎಲೆಕ್ಟ್ರಿಕ್ ವಾಹನವನ್ನು ಬಹಳ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಮುಂಭಾಗದಲ್ಲಿ 3ಡಿ ನಕ್ಷೆಯನ್ನು ರಚಿಸಲಾಗಿದೆ ಹಾಗೂ ಹೊಸ ಡಿ ಆರ್ ಎಲ್ ನೊಂದಿಗೆ ಹೆಚ್ಚು ಆಕರ್ಷಣೆಯುಳ್ಳ ನಾಚ್ ಗ್ರೀಲ್ ನಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ನೋಡುಗರಿಗಂತು ಕಣ್ಣಿಗೆ ಹಬ್ಬವನ್ನುಂಟು ಮಾಡುವ ರೀತಿಯಲ್ಲಿ ವಿಶೇಷವಾದ ರೀತಿಯಲ್ಲಿ ಕಿಯಾದ ಈ ವಾಹನವನ್ನು ವಿನ್ಯಾಸಗೊಳಿಸಲಾಗಿದೆ
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
KIA EV5 ವಿಶೇಷತೆಗಳು(KIA EV5 Specifications)
ಈ ಕಾರ್ ನ ಸೈಡ್ ಪ್ರೊಫೈಲ್ ಗಳಲ್ಲಿ 21 ಇಂಚಿನ ಅಲೈಚಕ್ರ ಗಳನ್ನು ಅಳವಡಿಸಲಾಗಿದೆ ಇದರ ವಿನ್ಯಾಸವನ್ನು ಇನ್ನಷ್ಟು ಆಕರ್ಷಣೆಗೊಳಿಸಲು ಸ್ಕಿಡ್ ಪ್ಲೇಟ್ ಹಾಗೂ ಕ್ಲಾಡಿಂಗ್ ನೊಂದಿಗೆ ಅಲಂಕರಿಸಲಾಗಿದೆ. ಹಾಗೂ ಕಾರಿನ ಹಿಂಭಾಗದಲ್ಲಿ ಎಲ್ಇಡಿ ಟೈಲ್ ಲೈಟ್ ಅನ್ನು ಅಳವಡಿಸಲಾಗಿದೆ. ಬೇರೆ ಮಾದರಿಗಳಿಗೆ ಹೋಲಿಸಿದರೆ ಇದರ ಕ್ಯಾಬಿನ್ ತುಂಬಾ ಸರಳವಾಗಿ ನಿರ್ಮಿಸಲ್ಪಟ್ಟಿದೆ. ಕಿಯ ಇವಿ ನೈನ್ ಹೋಲುವಂತೆ ಕ್ಯಾಬಿನ್ ಗಳನ್ನು ರಚಿಸಲಾಗಿದೆ. ಇದರ ಡ್ಯಾಶ್ ಬೋರ್ಡ್(DashBoard) ಅನ್ನ ಸರಳ ಮತ್ತು ಫ್ಯೂಚರಿಸ್ಟ್ ಆಗಿ ನಿರ್ಮಿಸಲಾಗಿದೆ. ಹಾಗೂ ನಾಲ್ಕು ಸ್ಪೀಕರನ್ನು ಅಳವಡಿಸುವುದರ ಜೊತೆಗೆ ಮೃದುವಾದ ಚರ್ಮದ ಸೀಟನ್ನು ಅಳವಡಿಸಲಾಗಿದೆ ಇದರಿಂದ ನೀವು ಎಷ್ಟು ದೂರ ಪ್ರಯಾಣ ಮಾಡಿದರು ಸಹ ನಿಮಗೆ ದಣಿವು ಅನ್ನೋದು ಆಗೋದಿಲ್ಲ.
ಇದು 12.3 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು 5-ಇಂಚಿನ ಹವಾಮಾನ ನಿಯಂತ್ರಣ ಫಲಕವನ್ನು ಹೊಂದಿದೆ. ಇದನ್ನು 3 ಜಾನ್ ಹವಾಮಾನ ನಿಯಂತ್ರಣ ಹಾಗೂ ಹೆಚ್ಚಿನ ಎತ್ತರ ಹೊಂದಾಣಿಕೆಯೊಂದಿಗೆ ಉಪಯೋಗಿಸಬಹುದು. ಈ ಕಾರನ್ನು ಮೆಮೊರಿ ಸೆಟ್ ಕಾರ್ಯ ಮತ್ತು ಮೃದುವಾದ ಆಸನಗಳೊಂದಿಗೆ ಆನಂದಿಸಬಹುದು. ಇದು ಸನ್‌ರೂಫ್ (sunroof) ಮತ್ತು 64 ಬಣ್ಣಗಳನ್ನು ಹೊಂದಿದೆ, ಈ ಕಾರಿಗೆ ಕಾರು ತಾಂತ್ರಿಕ ಮತ್ತು ಹಿಂದಿನ ಪ್ರಯಾಣಿಕರಿಗೆ ಎಸಿ ವೆಂಟ್‌ಗಳನ್ನು ಸಹ ನೀಡಬಹುದಾಗಿದೆ.
ಇದು ಸೆವೆನ್ ಏರ್ ಬ್ಯಾಗ್ (air bag) ವ್ಯವಸ್ಥೆಯನ್ನು ಹೊಂದಿದ್ದು, ಸುರಕ್ಷತಾ ಮತ್ತು ಇಲಾಕೆಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಹಿಲ್ ಹೋಲ್ಡ್ ಅಸಿಸ್ಟ್, ಹಿಲ್ ಯೋಗ್ಯ ನಿಯಂತ್ರಣ, ಎಳೆತ ನಿಯಂತ್ರಣ, ಮತ್ತು ಹಿಂಭಾಗದ ಪಾರ್ಕಿಂಗ್ ಸಂವೇದಕಗಳೊಂದಿಗೆ ಐಸೊಫಿಕ್ಸ್ ಚೈಲ್ಡ್ ಸೆಟ್ ಆಂಕರ್ ನೀಡಲಾಗಿದೆ. ಇದು ತುಂಬಾ ಸುರಕ್ಷಿತವಾಗಿ ಮತ್ತು ಹೊರಗೆ ಸಾಲಿನಿಂದ ಹೊರಗೆ ಹೋಗುವಾಗ ಎಚ್ಚರಿಕೆ ಕೊಡುತ್ತದೆ. ಇದು ಸುಧಾರಿತ ಎಡಿಎಎಸ್(ADAS) ತಂತ್ರಜ್ಞಾನವನ್ನು ಪಡೆಯುತ್ತದೆ, ಮತ್ತು ಉತ್ತಮ ಸೌಲಭ್ಯಗಳು ಲಭ್ಯವಿದೆ. ನೀವು ಎಚ್ಚರಿಕೆಯಿಂದ ಬೇಕಾದರೆ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಸ್ವಯಂಚಾಲಿತ ತುರ್ತು ಬ್ರೇಕಿಂಗ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸಿಸ್ಟಮ್, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್, ಮತ್ತು ಟ್ರಾಫಿಕ್ ಜಾಮ್ ಅಸಿಸ್ಟ್ ಬಳಸಬಹುದು.
ಇನ್ನೂ ಇದರ ಬ್ಯಾಟರಿ ಮಹತ್ವದ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ ಸದ್ಯದಲ್ಲೇ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸುವುದಾಗಿ ಕಿಯಾ ಮೋಟರ್ಸ್ ತಿಳಿಸಿದೆ ಇದರ ಜೊತೆಗೆ ಎರಡು ವಿಭಿನ್ನ ರೀತಿಯ ಬ್ಯಾಟರಿಗಳನ್ನ ಅಳವಡಿಸಲಾಗುವುದು ಎಂದು ತಿಳಿದುಬಂದಿದೆ ರಿಯಲ್ ವೀಲ್ ಡ್ರೈವ್ ಮತ್ತು ಫೋರ್ ಡಬ್ಲ್ಯೂ ಡಿ (real wheel drive and 4WD drive) ಎಂಬ ಡ್ಯುಯಲ್ ಬ್ಯಾಟರಿಗಳನ್ನ ಅಳವಡಿಸಲಾಗುವುದು ಎಂದು ತಿಳಿದುಬಂದಿದೆ. ಇದು ಅತ್ಯಂತ ವೇಗದಲ್ಲಿ ಕೇವಲ 27 ನಿಮಿಷಗಳಲ್ಲಿ ಹಂಡ್ರೆಡ್ ಪರ್ಸೆಂಟ್(100%) ಚಾರ್ಜ್ ಆಗುತ್ತದೆ ಜೊತೆಗೆ 720 ಮೈಲೇಜ್(Mileage) ಅನ್ನು ನಿರೀಕ್ಷೆ ಮಾಡಲಾಗುತ್ತದೆ. 2025 ರ ವೇಳೆಗೆ ಭಾರತೀಯ ಮಾರುಕಟ್ಟೆಗೆ ಬರಲಿದೆ ಎಂದು ತಿಳಿಸಲಾಗಿದೆ ಇದರ ಬೆಲೆ ಸುಮಾರು 55 ಲಕ್ಷಗಳಿಂದ ಪ್ರಾರಂಭವಾಗುವ ನೀರಿಕ್ಷೆ ಇದೆ.
ಇದನ್ನೂ ಓದಿ: ದೀಪಾವಳಿ ಕೊಡುಗೆ : ಹೋಂಡಾ ಎಸ್ ಪಿ 125 ನಲ್ಲಿ ಭರ್ಜರಿ ರಿಯಾಯಿತಿ, ಲಿಮಿಟೆಡ್ ಆಫರ್