Bajaj Chetak Urbane: ಬಜಾಜ್ ಚೇತಕ್ ಅರ್ಬೇನ್ ಅದು ಭಾರತೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾಂಗ್ ಅನ್ನು ಸೃಷ್ಟಿಸಿದೆ. ಈ ವಿಶೇಷ ಸ್ಕೂಟರ್‌ನಲ್ಲಿ ನಾಲ್ಕು ಬಣ್ಣಗಳನ್ನು ಕಾಣಬಹುದು ಮತ್ತು ಅದರಲ್ಲಿ ಕೆಲವೊಂದು ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಬಜಾಜ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬೈಕ್ ಹಾಗೂ ಸ್ಕೂಟರ್ ಅನ್ನು ಪ್ರಾರಂಭಿಸಿದೆ. ವೇಗದ ಚಾರ್ಜಿಂಗ್ ಮತ್ತು ರಿವರ್ಸ್ ಆಯ್ಕೆಗಳು ಈ ಸ್ಕೂಟರ್‌ನಲ್ಲಿ ಲಭ್ಯವಿವೆ. ಈ ಬಾರಿ, ಬಜಾಜ್ ಕಂಪನಿ ತನ್ನ ಚಿತಾಕ್ ಅನ್ನು ಮಾರುಕಟ್ಟೆಗೆ ತಂದಿದೆ, ಈ ಸ್ಕೂಟರ್‌ನಲ್ಲಿ ವಿವಿಧ ಬಣ್ಣಗಳನ್ನು ಕಾಣಬಹುದು ಮತ್ತು ಅನೇಕ ವಿಶೇಷತೆಗಳನ್ನು ಹೊಂದಿದೆ. ಈ ಬಾರಿ ಸ್ಕೂಟರ್‌ನಲ್ಲಿ ಹೆಚ್ಚು ನವೀಕರಣವನ್ನು ಸೃಷ್ಟಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್ ಕಂಪನಿಯ ವಾಹನಗಳಿಗೆ ಹೆಚ್ಚು ಬೇಡಿಕೆಯು ಸಹ ಇದೆ.
ಬಜಾಜ್ ಚೇತಕ್ ಅರ್ಬೇನ್ (2024) ಮೋಡಲ್ ಸ್ಕೂಟರ್‌ಗಳ ಬೆಲೆಗಳನ್ನು ಮೂರು ವಿಧಗಳಾಗಿ ವಿಂಗಡಿಸಿದೆ, ಬೆಲೆಯು ಹೀಗಿದೆ ನೋಡಿ:
- ಟೆಕ್ ಪ್ಯಾಕ್ (Tech Pack) – ₹1,21,001 ಎಕ್ಸ್-ಶೋರೂಮ್ ಬೆಲೆ
- ಪ್ರಮಾಣಿತ ಬೆಲೆ (Certified Price) – ₹1,15,001 ಎಕ್ಸ್-ಶೋರೂಮ್ ಬೆಲೆ
- ಪ್ರೀಮಿಯಂ ಬೆಲೆ (Premium Price) – ₹1,15,000 ಎಕ್ಸ್-ಶೋರೂಮ್ ಬೆಲೆ
ಸ್ಕೂಟರಿಗೆ ತಕ್ಕ ಹಾಗೆ ಮತ್ತು ಅದರ ವಿನ್ಯಾಸಗಳಿಗೆ ಅನುಗುಣವಾಗಿ ಬಜಾಜ್ ಕಂಪನಿಯು ಬೆಲೆಗಳನ್ನು ನಿರ್ಧರಿಸಿದೆ. ಅದರಲ್ಲಿ ಈ ಮೇಲೆ ತಿಳಿಸಿರುವಂತೆ ಮೂರು ಪ್ಯಾಕ್ಗಳಿದ್ದು, ಅದಕ್ಕೆ ತಕ್ಕಂತೆ ಬೆಲೆಗಳನ್ನು ನಿರ್ಧರಿಸಲಾಗಿದೆ.
ನೀವು ಬಜಾಜ್ ಚೇತಕ್ ಅರ್ಬೇನ್ ಆಯ್ಕೆಯಲ್ಲಿ, ಹೆಚ್ಚಿನ EMI ಆಯ್ಕೆಯನ್ನು ಪಡೆಯಬಹುದು. ನಿಮಗೆ 36 ತಿಂಗಳ EMI ನೊಂದಿಗೆ ಪ್ರತಿ ತಿಂಗಳು 3,612 ರೂ ಭರಿಸುವ ಮೂಲಕ, 97% ಬ್ಯಾಂಕಿನ ಬಡ್ಡಿ ದರದೊಂದಿಗೆ ಪಡೆಯಬಹುದು. ನಿಮ್ಮ ಒಟ್ಟು EMI ಬೆಲೆ 1,12,873 ರೂ. ಜೊತೆಗೆ ನಿಧಾನವಾಗಿ ಕಟ್ಟಬಹುದು. ಇನ್ನು ಇದರ ಬ್ಯಾಟರಿ ಬಗ್ಗೆ ಹೇಳುವುದಾದರೆ, ಬಜಾಜ್ ಚೇತಕ್ ಅರ್ಬೇನ್ ಸ್ಕೂಟರ್ ಉನ್ನತ ವೇಗ ಮತ್ತು ಬ್ಯಾಟರಿಯನ್ನು ಹೊಂದಿದೆ. ಈ ಸ್ಕೂಟರ್ ಬ್ಯಾಟರಿ ಒಮ್ಮೆ ಚಾರ್ಜ್ ಮಾಡಿದರೆ 5 ಗಂಟೆಗಳಲ್ಲಿ ಪೂರ್ಣ ಆಗುತ್ತದೆ. ಮತ್ತು ಇದು 113 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ. ಮತ್ತು 73 ಕಿ. ಮೀ ವೇಗವನ್ನು ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ಬಜಾಜ್ ಚೇತಕ್ ಅರ್ಬೇನ್ ನ ವೈಶಿಷ್ಟ್ಯಗಳು(Features of Bajaj Chetak Urbane)
ಬಜಾಜ್ ಚೇತಕ್ ಅರ್ಬೇನ್(Bajaj Chetak Urbane) ಒಂದು ಆಕರ್ಷಕ ಸ್ಕೂಟರ್ ಆಗಿದೆ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್ ಕಂಪನಿಯ ಬಗ್ಗೆ ಹೆಚ್ಚು ಬೇಡಿಕೆ ಇದೆ. ಈ ಸ್ಕೂಟರ್ ಅನೇಕ ಹೊಸ ಸೌಲಭ್ಯಗಳನ್ನು ಹೊಂದಿದೆ, ಇದರಲ್ಲಿ ವರ್ಣರಂಜಿತ LCD ಜೊತೆಗೆ ಆಕರ್ಷಕವಾದ ACO ಮೋಡ್ ಹಾಗೂ ಸ್ಪೋರ್ಟ್ ಮೋಡ್, ಜಿಯೋ ಲೊಕೇಶನ್ ಮೋಡ್, ಸ್ಕೂಟರ್ ರಿವರ್ಸ್ ಆಯ್ಕೆ, ಆಫ್ ಬೋರ್ಡ್ ಚಾರ್ಜರ್ ಸೇರಿದಂತೆ ಸ್ಪೀಡೋಮೀಟರ್, ಬ್ಯಾಟರಿ ಚಾರ್ಜಿಂಗ್, ಟೈಲ್ ಹೆಡ್ಲೈಟ್ ಮತ್ತು ಕೀ ಫೋಬ್ ಇಂತಹ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಈ ಸ್ಕೂಟರ್ ನ ಡಿಸೈನ್ ಬಗ್ಗೆ ಹೇಳುವುದಾದರೆ, ಇದು ಅತ್ಯುತ್ತಮ ಮತ್ತು ವಿಶಿಷ್ಟ ನೋಟವನ್ನು ಹೊಂದಿದೆ. ಈ ಸ್ಕೂಟರ್ ಕೆಂಪು, ನೀಲಿ, ಕಪ್ಪು ಮತ್ತು ಮೆಟ್ರಿಕ್ ಯುಲೇಷನ್ ಹೀಗೆ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಇದು ದೊಡ್ಡ ಆಸನವನ್ನು ಹೊಂದಿದೆ ಮತ್ತು ಆಸನದ ಅಡಿಯಲ್ಲಿ ವಸ್ತುಗಳನ್ನು ಇಡಲು ದೊಡ್ಡದಾದ ಜಾಗ ಇರುವಂತೆ ಡಿಜೈನ್ ಮಾಡಲಾಗಿದೆ.
ಇದನ್ನೂ ಓದಿ: ಬೆಳೆ ಪರಿಹಾರ ಪಡೆಯಲು ಏನ್ ಮಾಡಬೇಕು? ಯಾವೆಲ್ಲಾ ದಾಖಲೆಗಳು ಬೇಕು?
ಇದನ್ನೂ ಓದಿ: ಸರಕಾರಿ ನೌಕರರಿಗೆ ಸಿಹಿ ಸುದ್ದಿ, ಇನ್ನು ಮುಂದೆ ಆಸ್ತಿ ಖರೀದಿ ಮಾಡುವುದು ನಿಮಗೆ ಸುಲಭವಾಗಲಿದೆ.