ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಅಥವಾ ಒಂದು ಕೆಲಸದಿಂದ ಇನ್ನೊಂದು ಕೆಲಸಕ್ಕೆ ಹೋಗುವಾಗ ಪಿಎಫ್ ಗಳು ಹೇಗೆ ಸಿಗುತ್ತವೆ. ಹೋದ ನಿಯಮದ ಪ್ರಕಾರ ಇನ್ನೊಂದು ಕೆಲಸಕ್ಕೆ ಹೋದಾಗ ಪಿಎಫ್ ಖಾತೆಗೆ ಹಣ ಹಣ ಬರುವಾಗ ನೀವು ಏನು ಮಾಡಬೇಕು ಎಂಬ ಪೂರ್ಣ ಮಾಹಿತಿ ಇಲ್ಲಿದೆ.
ಹೊಸ ಪಿಎಫ್ ಖಾತೆಗೆ ವಿಲೀನ ಹೋಲಿಸಲು ಮನವಿ ಸಲ್ಲಿಸುವ ಅಗತ್ಯ ಇಲ್ಲ:- ಹಿಂದೆ ಒಂದು ಕೆಲಸದಿಂದ ಇನ್ನೊಂದು ಕೆಲಸಕ್ಕೆ ಹೋಗುವಾಗ ಹಳೆಯ ಕೆಲಸದಲ್ಲಿ ನಮ್ಮ ಪಿಎಫ್ ಖಾತೆಯನ್ನು ಇನ್ನೊಂದು ಕಂಪನಿಯ ಪಿಎಫ್ ಖಾತೆ ತೆರೆದು ಎರಡು ಖಾತೆಯನ್ನು ವಿಲೀನ ಗೊಳಿಸಬೇಕು ಎಂಬ ನಿಯಮ ಇತ್ತು. ಆದರೆ ಇನ್ನೂ ಮುಂದೆ ಆ ನಿಯಮ ಇಲ್ಲ. ನೀವು ಬದಲಾಯಿಸಿದಾಗ ಯಾವುದೇ ವಿನಂತಿ ಪತ್ರ ನೋಡದೆಯೇ ತನ್ನಿಂದ ತಾನೇ ನಿಮ್ಮ ಖಾತೆಗೆ ವಿಲೀನ ಆಗಲಿದೆ.
ಯಾವಾಗಿನಿಂದ ಈ ಹೊಸ ನಿಯಮ ಜಾರಿಯಾಗಲಿದೆ :- ನೀವು ಹೊಸ ಕಂಪನಿಗೆ ಹೋದಾಗ ನಿಮ್ಮ ಪಿಎಫ್ ಖಾತೆ ನೇರವಾಗಿ ವರ್ಗಾವಣೆ ಆಗುವ ಸೌಲಭ್ಯವು ಇದೆ ಏಪ್ರಿಲ್ 1 2024 ರಿಂದ ಆರಂಭ ಆಗಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹಿಂದೆ ಪಿಎಫ್ ಖಾತೆಯ ನಿಯಮ ಏನಿತ್ತು?
ನೀವು ಉದ್ಯೋಗವನ್ನು ಬದಲಾಯಿಸುವಾಗ, ಹೊಸ ಕಂಪನಿಯು ನಿಮಗಾಗಿ ಹೊಸ EPF ಖಾತೆಯನ್ನು ರಚಿಸುತ್ತದೆ. ನಿಮ್ಮ ಹಳೆಯ ಖಾತೆಗಳು ಯಾವುದೇ ಬದಲಾವಣೆಯಿಲ್ಲದೆ ಹಾಗೆಯೇ ಇರುತ್ತಿತ್ತು. ಹಳೆ ಖಾತೆಯನ್ನು ಹೊಸ ಪಿಎಫ್ ಖಾತೆಗೆ ಸೇರಿಸಬೇಕು ಎಂದರೆ ನೀವು ಮೊದಲು ಮನವಿ ಸಲ್ಲಿಸಬೇಕು ಎಂದು ಇತ್ತು. ಆದರೆ ಆ ನಿಯಮದಲ್ಲಿ ಖಾತೆಗಳನ್ನು ವಿಲೀನಗೊಳಿಸದಿದ್ದರೆ, ನಿಮ್ಮ ಹಳೆಯ ಖಾತೆಗಳಿಗೆ ಬಡ್ಡಿ ಸಿಗುವುದಿಲ್ಲ ಎಂದು ಇತ್ತು. ಆದರೆ ಇನ್ನೂ ಹೀಗೆ ಆಗುವುದಿಲ್ಲ. ನಿಮ್ಮ ಎಲ್ಲಾ ಹಳೆಯ EPF ಖಾತೆಗಳನ್ನು ಒಂದೇ ಖಾತೆಯಲ್ಲಿ ಒಟ್ಟುಗೂಡಿಸುವುದರಿಂದ, ನೀವು ಒಂದೇ ಖಾತೆಯಲ್ಲಿ ಒಟ್ಟಾರೆ ಉಳಿತಾಯವನ್ನು ಪಡೆಯಲು ಹಾಗೂ ಬಡ್ಡಿದರ ಸಿಗಲು ನಿಮಗೆ ಸಹಾಯ ಮಾಡುತ್ತದೆ.
ತೆರಿಗೆ ವಿನಾಯಿತಿ ನೀಡುತ್ತಿರುವ ಸರ್ಕಾರ :-
ರಜೆ ನಗದೀಕರಣಕ್ಕೆ ಅನ್ವಯವಾಗುವ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಲಾಗಿದೆ. ಈ ತೆರಿಗೆ ಮಿತಿಯನ್ನು 3 ಲಕ್ಷ ರೂಪಾಯಿಗಳಿಂದ 25 ಲಕ್ಷ ರೂಪಾಯಿಗಳಿಗೆ ಏರಿಸಲಾಗಿದೆ. ಇದರಿಂದ ನೀವು ಇನ್ನೂ ಮುಂದೆ 25 ಲಕ್ಷ ರೂಪಾಯಿ ಗಳ ವರೆಗೆ ಯಾವುದೇ ತೆರಿಗೆ ಅನ್ವಯ ಆಗುವುದಿಲ್ಲ.
ಹೊಸ ನಿಯಮದಿಂದ ಏನು ಉಪಯೋಗ ಇದೆ?
- ನಿವೃತ್ತಿ ಪ್ರಯಾಣವನ್ನು ಸುರಕ್ಷಿತ ಮತ್ತು ಸಮೃದ್ಧವಾಗಿಸಲು ಭರವಸೆ ಇದೆ. ಏಕೆಂದರೆ ನಿಮ್ಮ ನಿವೃತ್ತಿ ಜೀವನದಲ್ಲಿ ನಿಮಗೆ ಸಿಗುವ ಪಿಎಫ್ ಹಣವೂ ಬಹಳ ಮುಖ್ಯವಾಗಿ ಇರುತ್ತದೆ. ಇದು ನಿಮ್ಮ ಪಿಎಫ್ ಖಾತೆಗೆ ಯಾವುದೇ ಕಡಿತ ಇಲ್ಲದೆ ಪೂರ್ಣ ಹಣ ಸಿಗಲು ಅನುಕೂಲ ಆಗಲಿದೆ.
- ಇದರಿಂದ ನೀವು ಪ್ರತಿ ಸಲವೂ ಕೆಲಸ ಬದಲಾಯಿಸುವ ಸಮಯದಲ್ಲಿ ಪಿಎಫ್ ಖಾತೆಯನ್ನು ವರ್ಗಾವಣೆ ಮಾಡುವ ಪ್ರಮೇಯ ಇರುವುದಿಲ್ಲ.
- ಹಳೆ ಪಿಎಫ್ ಖಾತೆಯಿಂದ ಹೊಸ ಪಿಎಫ್ ಖಾತೆಗೆ ಹಣ ವರ್ಗಾವಣೆ ಆಗಲೂ ತಗುಲುವ ಸಮಯದ ಉಳಿತಾಯ ಆಗಲಿದೆ.
- ನಿಮ್ಮ ಪಿಎಫ್ ಖಾತೆಯ ಹಣ ಮತ್ತು ಬಡ್ಡಿದರವನ್ನು ನಿಖರವಾಗಿ ನೀವು ಲೆಕ್ಕ ಹಾಕಲು ಈ ಯೋಜನೆ ಅನುಕೂಲ ಆಗಲಿದೆ.
ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ನೀವು ನಿಮ್ಮ ಇಲಾಖೆಯ ಸಂಬಂದಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ.
ಇದನ್ನೂ ಓದಿ: Audi Q7 ಕಾರು ಖರೀದಿಸಿದ ಅಶ್ವಿನಿ ಪುನೀತ್ ರಾಜಕುಮಾರ್, ಇದರ ಬೆಲೆ ಎಷ್ಟು ಗೊತ್ತಾ?
ಇದನ್ನೂ ಓದಿ: 100 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸುವವರಿಗೆ ವಿದ್ಯುತ್ ದರ ಇಳಿಕೆ ಆಗಲಿದೆ.