Hyundai Alcazar: ಅತಿ ಕಡಿಮೆ ಬೆಲೆಯಲ್ಲಿ ಹುಂಡೈ ಅಲ್ಕಾಜರ್, ಹೆಚ್ಚಿನ ಸುರಕ್ಷತಾ ಸೌಲಭ್ಯದೊಂದಿಗೆ

Hyundai Alcazar: ಹುಂಡೈ ಮೋಟಾರ್(Hyundai Motor) ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಹೊಸತನದೊಂದಿಗೆ ತನ್ನ ಎಲ್ಲಾ ವಾಹನಗಳನ್ನು ಬಿಡುಗಡೆ ಮಾಡುತ್ತಿದೆ. ಭದ್ರತಾ ಸೌಲಭ್ಯದ ದೃಷ್ಟಿಯಿಂದ ಹುಂಡೈ ಮೋಟಾರ್, ಆರು ಏರ್‌ಬ್ಯಾಗ್‌ಗಳೊಂದಿಗೆ (6 air bags) ಹುಂಡೈ ಅಲ್ಕಾಜರ್ ಅನ್ನು ತನ್ನ ಲಿಸ್ಟ್ ನಲ್ಲಿ ಸೇರಿಸಿದೆ. ಈ ಕಾರನ್ನು ಹಲವಾರು ಸೌಲಭ್ಯಗಳ ಜೊತೆ ಆರು ಏರ್‌ಬ್ಯಾಗ್‌ಗಳೊಂದಿಗೆ ಬಿಡುಗಡೆ ಮಾಡಿದೆ. ಹುಂಡೈ ಅಲ್ಕಾಜರ್(Hyundai Alcazar) ಅನೇಕ ಸೌಲಭ್ಯಗಳೊಂದಿಗೆ ಹಾಗೂ ಹಲವು ವಿಶೇಷತೆಗಳೊಂದಿಗೆ ನಿರ್ಮಾಣವಾಗಿದೆ. ಹುಂಡೈ ಅಲ್ಕಾಜರ್ ಭಾರತದಲ್ಲಿ ವಿವಿಧ ಮಾರುಕಟ್ಟೆಗಳಲ್ಲಿ ವಿಭಿನ್ನವಾದ ಶೈಲಿಗಳಲ್ಲಿ ಲಭ್ಯವಿದೆ, ಅದರ ಬೆಲೆಯು ಮಾರುಕಟ್ಟೆಗೆ ತಕ್ಕಂತೆ ಬದಲಾಗುವ ಸಾಧ್ಯತೆ ಇದೆ. ಹುಂಡೈ ಅಲ್ಕಾಜರ್ ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಸಿದ್ಧವಾಗಿದೆ.

WhatsApp Group Join Now
Telegram Group Join Now

ಹುಂಡೈ ಅಲ್ಕಾಜಾರ್ ವಿವಿಧ ಬಣ್ಣಗಳಲ್ಲಿ ಹಾಗೂ ವಿವಿಧ ಮಾದರಿಗಳಲ್ಲಿ (different colours and models) ಲಭ್ಯವಿದೆ. ನಿಮ್ಮಿಷ್ಟದ ಮಾದರಿಗಳು ಮತ್ತು ಬಣ್ಣಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಇದು ಭಾರತೀಯ ಮಾರುಕಟ್ಟೆಗಳಲ್ಲಿ 8 ವಿಭಿನ್ನ ಆಕಾರ ಮತ್ತು 9 ಬಣ್ಣಗಳಲ್ಲಿ ಲಭ್ಯವಿದೆ. ಅಷ್ಟೇ ಅಲ್ಲದೆ 6 ಮತ್ತು 7 ಆಸನಗಳಿಗೆ ಹೊಂದಿಕೊಳ್ಳುವಂತೆ ತಯಾರಾಗಿದೆ.

ಇಲ್ಲಿ ಹುಂಡೈ ಅಲ್ಕಾಜರ್(Hyundai Alcazar) ಕಾರುಗಳಲ್ಲಿ ಲಭ್ಯವಿರುವ ಎಂಜಿನ್ ಗಳ ಬಗ್ಗೆ ತಿಳಿದುಕೊಳ್ಳೋಣ:

1. 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್:
– ಶಕ್ತಿ: 160 ಬಿಎಚ್‌ಪಿ
– ಟಾರ್ಕ್: 253 ಎನ್‌ಎಂ
– ವಿಶೇಷತೆಗಳು: 7-ಸ್ಪೀಡ್ ಡಿಸಿಟಿ ಗೇರ್ ಬಾಕ್ಸ್

2. 1.5 ಲೀಟರ್ ಡೀಸೆಲ್ ಎಂಜಿನ್:
– ಶಕ್ತಿ: 116 ಬಿಎಚ್‌ಪಿ
– ಟಾರ್ಕ್: 250 ಎನ್‌ಎಂ
– ವಿಶೇಷತೆಗಳು: 6-ಸ್ಪೀಡ್ ಸ್ವಯಂಚಾಲಿತ ನಿಯಂತ್ರಣ

ಇದು ಒಂದು ಎಸ್ಯುವಿ(SUV) ಆಗಿದ್ದು ಇದರಲ್ಲಿ ಮೂರು ತರಹದ ಡ್ರೈವಿಂಗ್ ಮೋಡ್ ಗಳು ಲಭ್ಯವಿದೆ. Eco, Sport ಮತ್ತು City ಇದಲ್ಲದೆ ಮಣ್ಣು(MUD) ಮತ್ತು ಮರಳುಗಳ(Sand) ಪ್ರದೇಶಗಳಿಗೂ ಅನುಕೂಲವಾಗುವಂತೆ ರಚಿಸಲಾಗಿದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಹುಂಡೈ ಅಲ್ಕಾಜರ್ ವೈಶಿಷ್ಟ್ಯಗಳು(Features of Hyundai Alcazar)

  • 10.25 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್.
  • 10.25 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್.
  • ವೈರ್‌ಲೆಸ್ ಆಂಡ್ರಾಯ್ಡ್ ಆಟೋ.
  • ಸ್ವಯಂಚಾಲಿತ ಹವಾಮಾನ ನಿಯಂತ್ರಣ.
  • ಪನೋರಮಿಕ್ ಸನ್‌ರೂಫ್.
  • ವಾಯ್ಸ್ ಅಸಿಸ್ಟ್ ಫಂಕ್ಷನ್.
  • ಕ್ರೂಸ್ ಕಂಟ್ರೋಲ್.
  • ಎತ್ತರ ಹೊಂದಾಣಿಕೆ ಚಾಲಕ ಆಸನ.
  •  ವೈರ್‌ಲೆಸ್ ಮೊಬೈಲ್ ಚಾರ್ಜಿಂಗ್.
  • ಹೊಸ ಸೌಲಭ್ಯವನ್ನು ಅಳವಡಿಸಲು ಅನುಕೂಲವಾಗುವಂತೆ ಸೇರ್ಪಡೆ ಮಾಡಲಾಗಿದೆ.
  • ಡ್ಯುಯಲ್ ಡ್ಯಾಶ್ ಕ್ಯಾಮೆರಾ ಸೆಟಪ್.

ಇದರಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಹೊಸ ಸೌಲಭ್ಯಗಳನ್ನು ವಿಶೇಷವಾಗಿ ಅಳವಡಿಸಲಾಗಿದೆ. ಇವುಗಳೊಂದಿಗೆ ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಪನೋರಮಿಕ್ ಸನ್‌ರೂಫ್, ವಾಯ್ಸ್ ಅಸಿಸ್ಟ್ ಫಂಕ್ಷನ್, ಕ್ರೂಸ್ ಕಂಟ್ರೋಲ್, ಎತ್ತರ ಹೊಂದಾಣಿಕೆ ಚಾಲಕ ಆಸನ, ಹಿಂದಿನ ಪ್ರಯಾಣಿಕರಿಗೆ ನಿಯಂತ್ರಣ, ವೈರ್‌ಲೆಸ್ ಮೊಬೈಲ್ ಚಾರ್ಜರ್ ಹೀಗೆ ಹತ್ತು ಹಲವಾರು ವಿಶೇಷತೆಗಳನ್ನು ಹೊಂದಿದೆ.

ಇದನ್ನೂ ಓದಿ: ಹೊಸ ಐಷಾರಾಮಿ ವಿನ್ಯಾಸದೊಂದಿಗೆ ಹೊಸ ಸ್ಕೊಡಾ, ಹಲವು ವೈಶಿಷ್ಟ್ಯಗಳ ಇಂಜಿನ್ ನೊಂದಿಗೆ ಮಾರುಕಟ್ಟೆಯಲ್ಲಿ ಮಿನುಗಲಿದೆ. 

ಹುಂಡೈ ಮೋಟಾರ್ ಭವಿಷ್ಯದ ಯೋಜನೆ(Hyundai Motor Future Plans)

ಹುಂಡೈ ಭಾರತೀಯ ಮಾರುಕಟ್ಟೆಯಲ್ಲಿ ಸುರಕ್ಷತೆಗೆ ಅಧಿಕ ಗಮನ ಹರಿಸುತ್ತಿದೆ. ಹ್ಯುಂಡೈ ವರ್ನಾ ಮತ್ತು ಗ್ಲೋಬಲ್ ಮಾದರಿಗಳು 5 ಸ್ಟಾರ್ (5 star) ರೇಟಿಂಗ್‌ಗಳನ್ನು ಗಳಿಸಿವೆ. 2024 ರಲ್ಲಿ ಪ್ರಾರಂಭಿಸಲು ಹುಂಡೈ ಮೋಟಾರ್(Hyundai Motor) ಅನೇಕ ಅತ್ಯುತ್ತಮ ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ. ಹುಂಡೈ ಕ್ರೆಟಾ ಸೌಲಭ್ಯ ಮತ್ತು ಹೊಸ ಮಾದರಿಯ ಅಲ್ಕಾಜರ್ ಅನ್ನು ಭದ್ರತೆಗೆ ಅನುಗುಣವಾಗಿ ವಿವಿಧ ಮಾದರಿಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಹೊಸ ಪಡಿತರ ಚೀಟಿಗೆ ಅನುಮತಿ ಆರಂಭ; ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ ಕೊಟ್ಟ ಸಚಿವ ಕೆ.ಎಚ್ ಮುನಿಯಪ್ಪ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram