Hyundai Santa Fe: ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನ್ನುವಷ್ಟು ಆಕರ್ಷಣೆಯನ್ನು ತುಂಬಿಕೊಂಡು ಬಂದು ನಿಲ್ಲುತ್ತಿದೆ ಹುಂಡೈ ಸಾಂತ ಫೆ ಫಾರ್ಚುನರ್.

Hyundai Santa Fe: ಹ್ಯುಂಡೈ ಸಾಂತಾ ಫೆ ದಿನದಿಂದ ದಿನಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಎಸ್ಯುವಿಗಳ ಬೇಡಿಕೆಯನ್ನು ಪೂರೈಸಲು ನವೀಕರಿಸುತ್ತಿದೆ. ಹುಂಡೈನ ಈ ವಾಹನವು ಟೊಯೋಟಾ ಫಾರ್ಚೂನರ್ ಮತ್ತು ಎಂಜಿ ಗ್ಲೋಸ್ಟರ್ ನಂತಹ ವಾಹನಗಳೊಂದಿಗೆ ಸ್ಪರ್ಧಿಸುತ್ತಿದೆ. ಈ ವರ್ಷದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಭಾರತೀಯ ಮಾರುಕಟ್ಟೆ ಅದನ್ನು 2024ರ ಅಂತ್ಯದ ವೇಳೆಗೆ ಅಥವಾ 2025ರ ಆರಂಭದಲ್ಲಿ ಪ್ರಾರಂಭಿಸಬಹುದು ಎನ್ನಲಾಗುತ್ತಿದೆ. 

WhatsApp Group Join Now
Telegram Group Join Now

ಹ್ಯುಂಡೈ ಸಾಂತಾ ಫೆ ಹೊಸ ಡಿಜೈನ್ ಹೊಂದಿದೆ ಮತ್ತು ಹಳೆಯ ಮಾದರಿಗೆ ಹೋಲಿಸಿದರೆ ಇದು ತುಂಬಾ ಬದಲಾದ ರೀತಿಯಲ್ಲಿ ನಿರ್ಮಿಸಲಾಗಿದೆ. ಈ ವಾಹನದಲ್ಲಿ ಲಾಂಗ್ ವ್ಹೀಲ್‌ಬೇಸ್, 3 ಸಾಲಿನಲ್ಲಿ ನಿರ್ಮಿತವಾಗಿವೆ. ನೋಡಲು ಬಹಳ ಅತ್ಯಾಕರ್ಷಕವೆನಿಸುತ್ತದೆ. ಹ್ಯುಂಡೈ ಸಾಂತಾ ಫೆ ಹೆಡ್ ಲೈಟ್ ಗಳು ಮತ್ತು ಟೈಲ್ ಲೈಟ್ ಗಳು ನೋಡುಗರಿಗೆ ಬಹಳ ಅತ್ಯಾಕರ್ಷಕ ವೆನಿಸುತ್ತವೆ. ಪೂರ್ಣ ಅಗಲವಾದ ಎಲ್ಇಡಿ ಸ್ಟ್ರಿಪ್ ಲೈಟ್, ಹೆಜ್ಜೆನಲ್ ವೀಲ್ ಆರ್ಚ್ ಅನ್ನು ಅಳವಡಿಸಲಾಗಿದ್ದು, ದಪ್ಪ ಬಾಡಿ ಕ್ಲಾಡಿಂಗ್, ಸ್ಪೋರ್ಟಿ ಅಲಾಯ್ ಚಕ್ರಗಳು ಸೇರಿದಂತೆ ಒಟ್ಟು 90 ಡಿಗ್ರಿ ತೆರೆಯುವ ಬಾಗಿಲುಗಳನ್ನೂ ಸಹ ಅಳವಡಿಸಲಾಗಿದೆ.

ಕ್ಯಾಬಿನ್ ನ ವಿಶಿಷ್ಟಗಳು: ಹ್ಯುಂಡೈ ಸಾಂತಾ ಫೆ ಕ್ಯಾಬಿನ್ ಒಳಗೆ ಅನೇಕ ಹೊಸ ಆದ್ಯತೆಗಳನ್ನು ಅಳವಡಿಸಲಾಗಿದೆ. ಡ್ಯಾಶ್‌ಬೋರ್ಡ್ ವಿನ್ಯಾಸದಲ್ಲಿ ಕೂಡಿದ್ದು, adjustable ಚರ್ಮದ ಆಸನ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಕೇಂದ್ರ ಕನ್ಸೋಲ್‌ನ ಜೊತೆಗೆ ಅನೇಕ ಅತ್ಯುತ್ತಮ ವೈಶಿಷ್ಟ್ಯಗಳನ್ನು ನೀವು ಕಾಣಬಹುದಾಗಿದೆ. ಹೊಸ ವಿನ್ಯಾಸದ AC ಮತ್ತು ಹೆಚ್ಚಿನ ಸ್ಪರ್ಶ ಫಲಕಗಳನ್ನು ಅಳವಡಿಸಲಾಗಿದೆ.

Hyundai Santa Fe

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

Hyundai Santa Fe ವೈಶಿಷ್ಟ್ಯತೆಗಳು

ಹ್ಯುಂಡೈ ಸಾಂತಾ ಫೆ ಸೌಲಭ್ಯಗಳು ಅತ್ಯುತ್ತಮ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಳನ್ನು ಹೊಂದಿವೆ ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್‌ಪ್ಲೇನ್ ಅನ್ನು 12.3 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಅಳವಡಿಸಲಾಗಿದೆ. ಇದು ಅನೇಕ ಹೊಸ ಸೌಲಭ್ಯಗಳನ್ನು ಹೊಂದಿದೆ, ಡ್ಯಾಶ್‌ಬೋರ್ಡ್ ವಿನ್ಯಾಸದಲ್ಲಿ ಅಭಿವೃದ್ಧಿಯನ್ನು ಹೊಂದಿದೆ, ಇದು ನಿಮಗೆ ಪ್ರೀಮಿಯಂ ಅನುಭವ ಒದಗಿಸುತ್ತದೆ. ಅಷ್ಟೇ ಅಲ್ಲದೆ, ಆಂಬಿಯೆಂಟ್ ಲೈಟಿಂಗ್, 360 ಡಿಗ್ರಿ ಕ್ಯಾಮೆರಾ ಹಾಗೂ ದೊಡ್ಡ ಪನೋರಮಿಕ್ ಸನ್‌ರೂಫ್ ಮೊದಲಾದ ಪ್ರಮುಖ ಸೌಲಭ್ಯಗಳು ಲಭ್ಯವಿವೆ.

ಹ್ಯುಂಡೈ ಸಾಂತಾ ಫೆ ಒಂದು ಉತ್ತಮ ಸುರಕ್ಷತೆಯ ಒಂದು ಕಾರ್ ಆಗಿದೆ. ಅದರಲ್ಲಿ ಪ್ರಮುಖ ಸುರಕ್ಷಾ ಅಂಶಗಳು ಕೂಡಿವೆ. ಮತ್ತು ನವೀಕರಿಸಿದ ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಇಷ್ಟೇ ಅಲ್ಲದೆ, ಸಾಂತಾ ಫೆ ಅದ್ಭುತ ಬ್ಯಾಟರಿ ಲೈಫ್ ಅನ್ನು ಹೊಂದಿದೆ, ಸುಲಭವಾದ ವಾಯು ಸೂಚಕಗಳು, ಹೊಸದಾಗಿ ಸೇರಿದ ವಿಶೇಷತೆಗಳು ಬಳಕೆದಾರರಿಗೆ ಒಂದು ರೀತಿಯ ಖುಷಿಯನ್ನು ಉಂಟುಮಾಡುತ್ತದೆ.

ಈ ವಾಹನದ ಇಂಜಿನ್ ಬಗ್ಗೆ ಒಂದಷ್ಟು ಮಾಹಿತಿ:

ಹ್ಯುಂಡೈ ಸಾಂತಾ ಫೆ ಭಾರತೀಯ ಮಾರುಕಟ್ಟೆಯಲ್ಲಿ ಹಾಗೂ ಅಮೆರಿಕಾ, ಕೊರಿಯಾಗಳಲ್ಲಿ ಎರಡು ವಿವಿಧ ಎಂಜಿನ್ ಮಾದರಿಯಲ್ಲಿ ಲಭ್ಯವಾಗಿದೆ. ಒಂದು 2.5 ಲೀಟರ್ ಟರ್ಬೋ ಚಾರ್ಜ್ ಪೆಟ್ರೋಲ್ ಎಂಜಿನ್ ಇದು 280 BHP ಶಕ್ತಿಯನ್ನು ನೀಡುತ್ತದೆ. ಮತ್ತು ಇನ್ನೊಂದು 1.6 ಲೀಟರ್ ಟರ್ಬೋ ಚಾರ್ಜ್ ಹೈಬ್ರಿಡ್ ಎಂಜಿನ್ ಇದು 180 BHP ಶಕ್ತಿಯನ್ನು ನೀಡುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಇವುಗಳಲ್ಲಿ ಯಾವ ಎಂಜಿನ್ ಲಭ್ಯವಾಗಲಿದೆ ಎಂಬುದರ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಎಂಜಿನ್ ಆಯ್ಕೆಯ ವಿವರಗಳನ್ನು ವೆಬ್ಸೈಟ್ ಮೂಲಕ ತಿಳಿದುಕೊಳ್ಳಬಹುದು.

ಭಾರತದಲ್ಲಿ ಹ್ಯುಂಡೈ ಸಾಂತಾ ಫೆ ಮುಂಬರುವ ಬೆಲೆಯ ಬಗ್ಗೆ ಇನ್ನು ಯಾವುದೇ ರೀತಿಯ ಅಧಿಕೃತ ಮಾಹಿತಿ ಲಭ್ಯವಿಲ್ಲ. ಆದರೆ ಕೆಲವು ಮಾಧ್ಯಮಗಳ ಮೂಲಕ 2024 ರಲ್ಲಿ ಈ ಮಾಡೆಲ್ ಪ್ರಾರಂಭಿಸುವ ಒಂದು ನಿರೀಕ್ಷೆ ಇದೆ ಅಂತ ಹೇಳಲಾಗುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಅದರ ಬೆಲೆ ಸುಮಾರು 45 ಲಕ್ಷ ರೂಪಾಯಿಯಿಂದ 55 ಲಕ್ಷ ರೂಪಾಯಿಗಳ ನಡುವೆ ಇರಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಓಲಾ ಕ್ರೂಸರ್ ಬೈಕ್ ಸದ್ಯದಲ್ಲೇ ಬಿಡುಗಡೆಯಾಗಲಿದೆ ಲಾಂಚಿಂಗ್ ಡೇಟ್, ಅತ್ಯುತ್ತಮ ವಿನ್ಯಾಸ ಹೊಸ ವೈಶಿಷ್ಟ್ಯಗಳೊಂದಿಗೆ ಭಾರತೀಯ ಮಾರುಕಟ್ಟೆಗೆ ಎಂಟ್ರಿಯಾಗಲಿರುವ ಓಲಾ ಕ್ರೂಸರ್. 

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram