ಏಪ್ರಿಲ್ ಒಂದರಿಂದ ಹೊಸ ಹಣಕಾಸು ವರ್ಷ ಆರಂಭ ಆಗುವುದು. ಅದರ ಜೊತೆ ಜೊತೆಗೆ ಹೊಸದಾಗಿ ನಿಯಮಗಳಲ್ಲಿ ಬದಲಾವಣೆ ಹಾಗೂ ಹಿಂದಿನ ನಿಯಮಗಳ ತಿದ್ದುಪಡಿಗಳು ಆಗುತ್ತವೆ. ಈಗಾಗಲೇ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ ಕೆಲವು ಆದಾಯ ತೆರಿಗೆ ನಿಯಮಗಳ ಬಗ್ಗೆ ತಿಳಿಸಿದ್ದಾರೆ ಅದರ ಜೊತೆಗೆ ಇನ್ನೂ ಯಾವ ಯಾವ ನಿಯಮಗಳೂ ಬದಲಾವಣೆ ಆಗುತ್ತಿವೆ ಎಂಬುದನ್ನು ನೋಡೋಣ.
ಹೊಸ ತೆರಿಗೆ ಪದ್ಧತಿ ವಿವರ:- ಪ್ರತಿ ವರ್ಷ ನಮ್ಮ ವಾರ್ಷಿಕ ಆದಾಯದ ಮೇಲೆ ನಾವು ಆದಾಯ ತೆರಿಗೆಯನ್ನು ನೀಡಬೇಕು. ಹೊಸ ತೆರಿಗೆ ಪದ್ಧತಿಯಲ್ಲಿ ಡೀಫಾಲ್ಟ್ ಸೆಟ್ಟಿಂಗ್ ಪದ್ಧತಿ ಜಾರಿಗೆ ಬರುತ್ತದೆ. ನೀವು ಡೀಫಾಲ್ಟ್ ಆಗಿ ಹಳೆ ತೆರಿಗೆ ಪದ್ಧತಿಯಿಂದ ಹೊಸ ತೆರಿಗೆ ಪದ್ಧತಿಗೆ ಕನ್ವರ್ಟ್ ಆಗಬಹುದು. ನಿಮ್ಮ ತೆರಿಗೆಗಳು ಹೊಸ ಪದ್ಧತಿಯ ನಿಯಮಗಳಂತೆ ಕಡಿತ ಆಗುತ್ತವೆ.
ಹೊಸ ಆದಾಯ ತೆರಿಗೆ ದರಗಳು ಹೀಗಿವೆ:-
ಇನ್ನೂ ಹೊಸ ತೆರಿಗೆ ನಿಯಮಗಳ ಪ್ರಕಾರ ನಿಮ್ಮ ವಾರ್ಷಿಕ ಆದಾಯವು 3 ಲಕ್ಷ ರೂಪಾಯಿ ಒಳಗೆ ಇದ್ದರೆ ನಿಮಗೆ. ಯಾವುದೇ ತೆರಿಗೆ ಅನ್ವಯ ಆಗುವುದಿಲ್ಲ. ನಿಮ್ಮ ವಾರ್ಷಿಕ ಆದಾಯವು 3 ರಿಂದ 6 ಲಕ್ಷ ರೂಪಾಯಿ ವರೆಗೆ ಇದ್ದರೆ ಆದಾಯದ ಶೇಕಡಾ 5% ನೀವು ತೆರಿಗೆ ಪಾವತಿ ಮಾಡಬೇಕು. ವಾರ್ಷಿಕ ಆದಾಯ 6 ಲಕ್ಷ ರೂಪಾಯಿಯಿಂದ 9 ಲಕ್ಷದ ವರೆಗೆ ಇದ್ದರೆ ಆದಾಯದ ಶೇಕಡಾ 10% ತೆರಿಗೆ ಪಾವತಿ ಮಾಡಬೇಕು. 9 ಲಕ್ಷ ರೂಪಾಯಿಯಿಂದ 12 ಲಕ್ಷದ ವರೆಗೆ ವಾರ್ಷಿಕ ಆದಾಯ ಇದ್ದರೆ ಶೇಕಡಾ 15% ತೆರಿಗೆ ಪಾವತಿ ಮಾಡಬೇಕು. 12 ರಿಂದ 15 ಲಕ್ಷ ರೂಪಾಯಿವರೆಗೆ ನಿಮ್ಮ ವಾರ್ಷಿಕ ಆದಾಯವು ಇದ್ದರೆ ನೀವು ಶೇಕಡಾ 20% ತೆರಿಗೆ ಪಾವತಿ ಮಾಡಬೇಕು. 15 ಲಕ್ಷ ರೂಪಾಯಿ ಗಿಂತ ನಿಮ್ಮ ಆದಾಯವು ಹೆಚ್ಚಾಗಿದ್ದರೆ ನಿಮ್ಮ ಆದಾಯದ ಶೇಕಡಾ 30% ರಷ್ಟು ಹಣವನ್ನು ತೆರಿಗೆ ನೀಡಬೇಕು.
ಹೊಸ ತೆರಿಗೆ ಪದ್ಧತಿಯಿಂದ ಹಳೆ ತೆರಿಗೆ ಪದ್ಧತಿಗೆ ಬದಲಿಸಲು ಸಾಧ್ಯವಿದೆಯೇ?: ವೃತ್ತಿಪರರು ಮತ್ತು ಬ್ಯುಸಿನೆಸ್ ಮಾಡುವವರು ಒಂದು ಬಾರಿ ಹಳೆಯ ತೆರಿಗೆ ಪದ್ಧತಿಗೆ ಬದಲಿಸಲು ಸಾಧ್ಯವಿದೆ. ಇನ್ನುಳಿದ ಆದಾಯ ತೆರಿಗೆದಾರರು ವಾರ್ಷಿಕವಾಗಿ ಒಮ್ಮೆ ನಿಮ್ಮ ಆದಾಯ ತೆರಿಗೆ ಪದ್ಧತಿಯನ್ನು ಬದಲಿಸಲು ಅವಕಾಶ ಇದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ವಿಮಾ ಯೋಜನೆಯಲ್ಲಿ ಮೆಚ್ಯೂರಿಟಿ ಸಮಯದಲ್ಲಿ ಬರುವ ಆದಾಯದ ಮೇಲೆ ತೆರಿಗೆ?
ಹೊಸ ತೆರಿಗೆ ಪದ್ಧತಿಯ ಅನ್ವಯ ನೀವು ನಿಮ್ಮ ಜೀವ ವಿಮಾ ಪಾಲಿಸಿಯಿಂದ ಬರುವ ಮೆಚ್ಯೂರಿಟಿ ಹಣದ ಮೇಲೆ ಆದಾಯ ತೆರಿಗೆ ಹಣವನ್ನು ಪಾವತಿಸಬೇಕಾಗುತ್ತದೆ. ಈ ವಿಷಯವನ್ನು ಈಗಾಗಲೇ ಸಚಿವೆ ನಿರ್ಮಲಾ ಸೀತಾ ರಾಮನ್ ಅವರು ಘೋಷಣೆ ಮಾಡಿದ್ದಾರೆ. ಹೊಸ ನಿಯಮಗಳ ಪ್ರಕಾರ ಮೆಚ್ಯೂರಿಟಿ ಹಣವು 5 ಲಕ್ಷ ರೂಪಾಯಿ ಗಿಂತ ಜಾಸ್ತಿ ಇದ್ದರೆ ಮಾತ್ರ ನೀವು ತೆರಿಗೆ ಪಾವತಿ ಮಾಡಬೇಕು. 5 ಲಕ್ಷ ರೂಪಾಯಿಗಿಂತ ಕಡಿಮೆ ಮೆಚ್ಯೂರಿಟಿ ಹಣ ಬಂದರೆ ಯಾವುದೇ ತೆರಿಗೆ ಅನ್ವಯ ಆಗುವುದಿಲ್ಲ.
ಹೊಸ ತೆರಿಗೆ ಪದ್ಧತಿಯಲ್ಲಿ ಹಲವಾರು ತೆರಿಗೆ ಪ್ರಯೋಜನಗಳು ಇವೆ. ಹಳೆ ಪದ್ದತಿಯಲ್ಲಿ 2,50,000 ರೂಪಾಯಿಯಿಂದ. 3,00,000 ರೂಪಾಯಿಯ ವರೆಗೆ ನೀಡಬೇಕಾಗಿದ್ದ ಟ್ಯಾಕ್ಸ್ ವಿನಾಯತಿ ಸಿಗುತ್ತದೆ. ಈ ಮಾಹಿತಿಗಳೂ ಹೊರತು ಪಡಿಸಿ ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ income tax office ಅಥವಾ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿ ಪಡೆಯಿರಿ.
ಇದನ್ನೂ ಓದಿ: ರೈಲ್ವೇ ನಿಯಮದಲ್ಲಿ ದೊಡ್ಡ ಬದಲಾವಣೆ, ಪ್ರಯಾಣಿಸುವ ಮುನ್ನ ತಿಳಿದುಕೊಳ್ಳಬೇಕಾದ ಮುಖ್ಯ ಸಂಗತಿಗಳು!
ಇದನ್ನೂ ಓದಿ: ಇದೊಂದು ಬೈಕ್ ಇದ್ದರೆ ಸಾಕು, ಕಾಲಲ್ಲಿ ಟ್ರಕ್ ಮಾಡುವುದೇ ಬೇಡ, ಬೆಟ್ಟ ಗುಡ್ಡ ಎನು ನೋಡದೆ ಗಾಡಿ ಓಡಿಸಬಹುದು.