Ola Cruiser Bike: ಓಲಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎಲೆಕ್ಟ್ರಿಕ್ ಬೈಕ್ ಅನ್ನು ಪ್ರಾರಂಭಿಸಿದೆ. ಈ ಬೈಕ್ ಹೆಸರು ಓಲಾ ಕ್ರೂಸರ್. ತಮ್ಮ ಕಾರ್ಖಾನೆಯಲ್ಲಿಯೇ ಈ ಬೈಕ್ ಅನ್ನು ಪ್ರದರ್ಶನ ಮಾಡಲಾಗಿದೆ. ಈ ಬೈಕ್, Ola S1 ಹಾಗೂ ಇತರ ಬೈಕ್ ಗಳ ನಂತರ ಮಾರುಕಟ್ಟೆಯಲ್ಲಿ ಇನ್ನೊಂದು ಬೈಕ್ ಪ್ರದರ್ಶನಗೊಳ್ಳಬಹುದು ಎಂದು ವರದಿಗಳು ತಿಳಿಸಿವೆ.
ಓಲಾ ಕಂಪನಿ, ವಿದೇಶದಲ್ಲಿ ನವೀಕರಿಸಿದ ಈ ನಾಲ್ಕು ಬೈಕ್ ಗಳನ್ನು ಬಹುಮುಖ್ಯವಾಗಿ ಭಾರತೀಯ ಮಾರುಕಟ್ಟೆಗೆ ತರುತ್ತಿದೆ. ಆ ನಾಲ್ಕು ವಿಧಗಳು ಯಾವವು ಎಂದರೆ, ಡೈಮಂಡ್ ಹೆಡ್(Diamondhead), ಸಾಹಸ(Adventure), ಕ್ರೂಸರ್(Cruiser) ಮತ್ತು ರೋಡ್ಸ್ಟರ್(RoadSter) ಹೀಗೆಲ್ಲಾ ವೈವಿಧ್ಯಮಯವಾದ ಶೈಲಿಗಳನ್ನು ಹೊಂದಿವೆ. ಈ ಬೈಕ್‌ಗಳು ಅತ್ಯಂತ ಆಕರ್ಷಕ ವಾಗಿರುವುದರ ಜೊತೆಗೆ ಬೈಕ್ ಪ್ರಿಯರಿಗೆ ಅತ್ಯುತ್ತಮ ಅನುಭವವನ್ನು ನೀಡುತ್ತವೆ.
ಓಲಾ ಕಂಪನಿ ಈ ಬೈಕ್‌ಗಳನ್ನು ಭಾರತೀಯ ಮಾರುಕಟ್ಟೆಗಳಿಗೆ ಶೀಘ್ರದಲ್ಲೇ ತರಲಿದೆ ಇದು ಬೈಕ್ ಪ್ರೇಮಿಗಳಿಗೆ ಒಳ್ಳೆಯ ಸುದ್ದಿ ಅಂತಾನೇ ಹೇಳಬಹುದು ಇನ್ನು ಓಲಾ ಬಗ್ಗೆ ಕೆಲವು ವೈಶಿಷ್ಟತೆಗಳನ್ನು ಹೇಳಬೇಕು ಅಂತಂದ್ರೆ ಓಲಾ ಕ್ರೂಸರ್ ಬೈಕ್ ಒಂದು ನವೀನ ಸ್ವರೂಪದ ವಾಹನವಾಗಿದ್ದು, ಅದರಲ್ಲಿ ಪೂರ್ಣ 3-4 ಇಂಚುಗಳ ಡಿಜಿಟಲ್ ಡಿಸ್ಪ್ಲೇಅನ್ನು ಅಳವಡಿಸಲಾಗಿದೆ. ಅಷ್ಟೇ ಅಲ್ಲದೆ, ಇದರಲ್ಲಿ ವಿಶಿಷ್ಟ ರೀತಿಯ ಟೈಲ್ ಹೆಡ್‌ಲ್ಯಾಂಪ್‌ಗಳು, ಸ್ಮಾರ್ಟ್ ಫೋನ್‌ಗಳ ಸಂಪರ್ಕ, ಕಾಲ್ ಅಲರ್ಟ್, SMS Alert ಇನ್ನು ಮುಂತಾದ ಹೊಸ ಫೀಚರ್ಸ್ ಅನ್ನು ಪಡೆಯಬಹುದು.
Ola Cruiser Bike ಭಾರತದಲ್ಲಿ 2 ಲಕ್ಷ 70 ಸಾವಿರ ರೂಪಾಯಿಗಳಿಗೆ ಸಿಗುವ ಸಾಧ್ಯತೆ ಇದೆ. ಈ ಬೈಕ್ ಮೊದಲು ಒಂದು ಬಣ್ಣದಲ್ಲಿ ಮಾತ್ರ ಲಭ್ಯವಿತ್ತು, ಆದರೆ ಈಗ ಹೆಚ್ಚಿನ ಮಾರಾಟವಾಗುವ ಒಂದು ಸೂಚನೆಯಲ್ಲಿ ವಿವಿಧ ಬಣ್ಣಗಳಲ್ಲಿ ಹಾಗೂ ವಿವಿಧ ಶೈಲಿಗಳಲ್ಲಿ ಲಭ್ಯವಾಗಲಿದೆ. ಇದರ ಬ್ಯಾಟರಿಯಾದಕ್ಷತೆಯು ಚೆನ್ನಾಗಿದ್ದು ಒಂದು ಬಾರಿ ಚಾರ್ಜ್ ಮಾಡಿದರೆ ಬಹು ದೂರದವರೆಗೂ ಆರಾಮವಾಗಿ ನಡೆಸಬಹುದಾಗಿದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
Ola Cruiser Bike Suspension and Brake
ಹೌದು, ಇದು ಎಲ್ಲರಿಗೂ ದಿನಚರಿಯಲ್ಲಿ ಬಳಕೆಯಾಗುವ ಒಂದು ಉತ್ತಮ ಬೈಕ್ ಆಗಿದ್ದು, ಅನೇಕ ಸೌಕರ್ಯ(amenity) ಗಳನ್ನು ಹೊಂದಿದೆ. ಅವುಗಳ ಬಗ್ಗೆ ಹೇಳುವುದಾದರೆ, ಎರಡು ಅಮಾನತುಗಳು ಅದರ ವೈವಿಧ್ಯಮಯ ಫೋರ್ಕ್ ಸಸ್ಪೆನ್ಶನ್ ಮತ್ತು ಅದ್ಭುತ ಟೈರ್ ವಿನ್ಯಾಸವನ್ನು ಹೊಂದಿದೆ.
ಅಷ್ಟೇ ಅಲ್ಲದೆ, ಬ್ರೇಕಿಂಗ್ ವ್ಯವಸ್ಥೆಯಲ್ಲೂ ಕೂಡ ಅಲಾಯ್ ಚಕ್ರಗಳು ಮತ್ತು ಡಿಸ್ಕ್ ಬ್ರೇಕ್ಗಳ ಸಂಯೋಜನೆಯಿಂದ ಅತ್ಯುತ್ತಮ ನಿಯಂತ್ರಣವನ್ನು ನೀಡುತ್ತದೆ. ಫ್ಲಾಟ್ ಟೈರ್ಗಳು ಸುಲಭವಾಗಿ ಮತ್ತು ಪರಿಪೂರ್ಣ ಸ್ಥಾಯಿತ್ವವನ್ನು ಒದಗಿಸುತ್ತವೆ. ಒಟ್ಟಿನಲ್ಲಿ ಈ ಬೈಕ್ ಆಕರ್ಷಕ ನೋಟದ ಜೊತೆಗೆ ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ತಯಾರಾಗಿದೆ. ಇನ್ನು ಇದರ ವಿನ್ಯಾಸದ ಬಗ್ಗೆ ಹೇಳಬೇಕೆಂದರೆ, ಇದೊಂದು ಬಹುಮುಖ್ಯ ಬೈಕ್ ಆಗಿದೆ ಅಂತಾನೆ ಹೇಳಬಹುದು. ವಿಶೇಷವಾಗಿ, ಈ ಬೈಕ್ ಸ್ಪೋರ್ಟ್ ಮತ್ತು ರೇಸಿಂಗ್ ಬೈಕ್‌ಗಳ ಶೈಲಿಗಳಲ್ಲಿ ತಯಾರಾಗಿದೆ. ಇದರ ಟ್ಯಾಂಕ್‌ನ ಮೇಲೆ ಚಾರ್ಜಿಂಗ್ ಪಾಯಿಂಟ್ ಅನ್ನು ಅಳವಡಿಸಲಾಗಿದೆ, ಇದೊಂದು ಈ ಬೈಕ್ ನ ಪ್ಲಸ್ ಪಾಯಿಂಟ್ ಅಂತಾನೆ ಹೇಳಬಹುದು.ಇದರ ಬಣ್ಣಗಳು ಬಿಳಿ, ಕಪ್ಪು ಮತ್ತು ತಿಳಿ ಬೂದು ಆಗಿವೆ. ಒಟ್ಟು ಮೂರು ಬಣ್ಣಗಳಲ್ಲಿ ಲಭ್ಯವಿದೆ. ಈ ಬೈಕ್ ನ ಬಿಡುಗಡೆ ದಿನಾಂಕದ ಬಗ್ಗೆ ಹೆಚ್ಚಿಗೆ ಮಾಹಿತಿ ದೊರೆತಿಲ್ಲ. ಬಹುಶ: 2024ರ ಹೊತ್ತಿಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಇನ್ಮುಂದೆ ಭೂ ದಾಖಲೆಗಳು ಆಗಲಿವೆ ಡಿಜಿಟಲೀಕರಣ; ರಾಜ್ಯ ಸರ್ಕಾರದಿಂದ ಮತ್ತೊಂದು ಮಹತ್ವದ ಯೋಜನೆ ಜಾರಿ
ಇದನ್ನೂ ಓದಿ: ಕಡಿಮೆ ಬಡ್ಡಿದರದಲ್ಲಿ ಪೋಸ್ಟ್ ಆಫೀಸ್ ನಲ್ಲಿ ಸಾಲವನ್ನು ಪಡೆಯುವುದು ಹೇಗೆ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram