ಬೆಂಗಳೂರಿನಲ್ಲಿ ಗಲ್ಲಿಗೆ ಒಂದರಂತೆ ಪಿ.ಜಿ ಗಳು ಇವೆ. ಸಾಮಾನ್ಯ ವರ್ಗದ ಜನರು ವಾಸಿಸುವಂತ ಪಿಜಿ ಗಳ ಜೊತೆಗೆ ಸಿರಿವಂತರು ವಾಸಿಸುವ ಪಿ. ಜಿ ಗಳು ಇವೆ. ಪಿ.ಜಿ ಗಳಲ್ಲಿ ವಾಸವಾಗಿರುವ ಹುಡುಗ ಹುಡುಗಿಯರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಅವರು ಮಾಡುವ ಕೃತ್ಯಗಳ ಬಗ್ಗೆ ಹೆಚ್ಚಿನ ಭದ್ರತೆ ಆಗ್ತಾ ಇರುವುದರಿಂದ ಈಗ ಪಿ.ಜಿ ಗಳಿಗೆ ಹಲವಾರು ನಿಯಮಗಳನ್ನು ಪೊಲೀಸ್ ಇಲಾಖೆ ಹೊರಡಿಸಿದೆ. ಇದು ಪಿ ಜಿ ಓನರ್ ಗಳಿಗೆ ಆತಂಕ ತಂದಿದೆ. ನಿಮ್ಮ ಮಕಳ್ಳನ್ನು ಪಿ.ಜಿ ಗೆ ಸೇರಿಸುವುದಿದ್ದರೆ ಪೊಲೀಸ್ ಇಲಾಖೆಯಿಂದ ಪಿ.ಜಿ ಗಳಿಗೆ ನೀಡಿರುವ guidelines ಏನೆಂದು ತಿಳಿಯಿರಿ.
ಪೊಲೀಸ್ ಇಲಾಖೆಯ ನಿಯಮಾವಳಿಗಳು:-
- ಪಿ.ಜಿ ಓನರ್ ಗಳು ಕಡ್ಡಾಯವಾಗಿ ಬಿಬಿಎಂಪಿ ಅವರಿಂದ ಪಿಜಿ ನಡೆಸಲು ಲೈಸೆನ್ಸ್ ತೆಗೆದುಕೊಂಡಿರಬೇಕು.
- ಪಿಜಿಗಳಿಗೆ ಬರುವ ವ್ಯಕ್ತಿಗಳ ಸಂಪೂರ್ಣ ಮಾಹಿತಿ ಅಂದರೆ ಅವರು ವರ್ಕ್ ಮಾಡುತ್ತಿದ್ದಾರೆ ಅಥವಾ ಏನು ಓದುತ್ತಾ ಇದ್ದರೆ ಅದರ ವಿವರ ಹಾಗೂ ಅವರ ಭಾವಚಿತ್ರ ಆಧಾರ್ ಕಾರ್ಡ್ ನಂಬರ್ ಹಾಗೂ ಫೋನ್ ನಂಬರ್ ಜೊತೆಗೆ ಅವರ ತಂದೆ ತಾಯಿಯ ಅಥವ ಒಡಹುಟ್ಟಿದವರ ವಿವರಗಳನ್ನು ಕಂಪ್ಯೂಟರ್ ನಲ್ಲಿ ಸರಿಯಾದ ಕ್ರಮದಲ್ಲಿ ದಾಖಲಿಸಿರಬೇಕು.
- ಪಿಜಿಯಲ್ಲಿ ವಾಸವಾಗಿರುವವರನ್ನು ಭೇಟಿ ಮಾಡಲು ಬರುವ ಸಂಬಂಧಿಕರು ಹಾಗೂ ಸ್ನೇಹಿತರ ವಿವರಗಳನ್ನು ( ಹೆಸರು ,ಫೋನ್ ನಂಬರ್, ಹಾಗೂ ವಿಳಾಸ) ಪ್ರತ್ಯೇಕವಾಗಿ ದಾಖಲಿಸಬೇಕು.
- ಕರ್ನಾಟಕ ಸಾರ್ವಜನಿಕರ ಸುರಕ್ಷಿತೆ ಅಧಿನಿಯಮ – 2017 ರ ನಿಯಮದ ಪ್ರಕಾರ ಪಿಜಿಯಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು.
- ಅಗ್ನಿ ಅವಘಡ ಸಂಭವಿಸದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು.
- ಯಾವುದೇ ಮಾದಕ ವಸ್ತುಗಳ ಸಂಗ್ರಹಣೆ ಮತ್ತು ಮಾರಾಟ ಹಾಗೂ ಮಾದಕ ವಸ್ತುಗಳ ಪ್ರಚೋದನೆ ಮಾಡಬಾರದು. ಇದು ಕಾನೂನು ಬಹಿರವಾಗಿರುತ್ತದೆ. ಇಂತಹ ಅನುಮಾನಗಳು ಬಂದಲ್ಲಿ ಪಿಜಿ ರೈಡ್ ಆಗುತ್ತದೆ.
- ಪಿಜಿ ಗಳಿಗ ಕೆಲಸಕ್ಕೆ ಬರುವ ಅಡುಗೆಯವರು ಸ್ವಚ್ಛತಾ ಸಿಬ್ಬಂದಿಗಳು ಹಾಗೂ ಸೆಕ್ಯೂರಿಟಿ ಗಾರ್ಡ್ ಗಳ ದಾಖಲೆಗಳನ್ನು ಪೊಲೀಸ್ verification ಮಾಡಿಸಿದ ನಂತರ ಕೆಲಸಕ್ಕೆ ನೇಮಿಸಿಕೊಳ್ಳಬೇಕು.
- ಪಿಜಿ ಗೆ ಬರುವ ವಿದೇಶಿ ವ್ಯಕ್ತಿಗಳ ದಾಖಲೆಗಳನ್ನು the register of foreiginers rules 1993 ‘form C’ ಪ್ರಕಾರ ಹತ್ತಿರದ ಪೊಲೀಸ್ ಠಾಣೆ ಅಥವಾ ಆನ್ಲೈನ್ ಮೂಲಕ ಮಾಹಿತಿ ಸಲ್ಲಿಸಬೇಕು.
- ನ್ಯಾಯಾಲಯದ ಆದೇಶದ ಪ್ರಕಾರ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯ ವರೆಗೆ ಯಾವುದೇ ಧ್ವನಿವರ್ಧಕ ಬಳಸುವಂತೆ ಇಲ್ಲ.
- ಪಿಜಿಗಳಲ್ಲಿ ವಾಸವಾಗಿತುವವರನ್ನು ಹೊರತು ಪಡಿಸಿ ಒಂದು ದಿನ ಅಥವಾ ಒಂದು ವಾರದ ತನಕ ಎಂದು ಯಾರನ್ನು ಪಿಜಿಯಲ್ಲಿ ಇರಿಸಿಕೊಳ್ಳುವಂತೆ ಇಲ್ಲ.
- ಪಿಜಿಯಲ್ಲಿರುವ ವ್ಯಕ್ತಿಗಳು ಪ್ರತಿದಿನ ಯಾವ ಸಮಯಕ್ಕೆ ಪಿಜಿ ಗೆ ಬಂದಿದ್ದಾರೆ ಮತ್ತು ಯಾವ ಸಮಯದಲ್ಲಿ ಬಿಟ್ಟಿದ್ದಾರೆ ಎಂಬುದರ ಮಾಹಿತಿಯನ್ನು ದಾಖಲಿಸಿರುಬೇಕು.
- ಸ್ಥಳೀಯ ಪೊಲೀಸ್ ಠಾಣೆ , ತುರ್ತು ಚಿಕಿತ್ಸಾ ವಾಹನ( ಆಂಬುಲೆನ್ಸ್) , ಹಾಗೂ ಸೈಬರ್ ಕ್ರೈಮ್ ಗಳ ದೂರವಾಣಿ ಸಂಖ್ಯೆಗಳನ್ನು ಪಿಜಿಗಳಲ್ಲಿ ಎಲ್ಲರಿಗೂ ಕಾಣುವ ಹಾಗೆ ಬೋರ್ಡ್ ನಲ್ಲಿ ಅಥವಾ ಪೇಪರ್ ನಲ್ಲಿ ಬರೆದು ಅಂಟಿಸಿರಬೇಕು.
- ಪ್ರಥಮ ಚಿಕಿತ್ಸಾ ಸಲಕರಣೆಗಳು ಕಡ್ಡಾಯವಾಗಿ ಇರಬೇಕು.
- ಮೇಲಿನ ನಿಯಮಗಳನ್ನು ಪಾಲಿಸದೆ ಏನಾದರೂ ಅನಾಹುತಗಳು ನಡೆದಲ್ಲಿ ನೇರವಾಗಿ ಪಿಜಿಯ ಮಾಲೀಕರು ಹೋಣೆಯಾಗುತ್ತಾರೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಇದನ್ನೂ ಓದಿ: ರಾಜೀವ್ ಗಾಂಧಿ ಪಂಚಾಯತ್ ರಾಜ್ ನಲ್ಲಿ 51 ಫೆಲೋಶಿಪ್ ಹುದ್ದೆಗೆ ಅರ್ಜಿ ಆಹ್ವಾನ; ತಿಂಗಳಿಗೆ 61,500 ರೂಪಾಯಿ ಸಂಬಳ
ಇದನ್ನೂ ಓದಿ: 5100 mAh ಹೊಂದಿರುವ POCO X6 5G ಯನ್ನು ಭರ್ಜರಿ ರಿಯಾಯಿತಿಯೊಂದಿಗೆ ಪಡೆಯಿರಿ