ಹೊಸ ರೇಷನ್ ಕಾರ್ಡ್ ಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ ರಾಜ್ಯ ಸರ್ಕಾರ; ಏನೆಲ್ಲಾ ದಾಖಲೆಗಳು ಬೇಕು?

New Ration Card Application Karnataka

ರೇಷನ್ ಕಾರ್ಡ್ ಮನೆಯ ಸದಸ್ಯರ ಬಗ್ಗೆ ಪೂರ್ಣ ಮಾಹಿತಿ ನೀಡುವ ಒಂದು ದಾಖಲಾತಿ. ಸರ್ಕಾರದ ಹಲವು ಯೋಜನೆಗಾಗಿ ಮುಖ್ಯವಾಗಿ ರೇಷನ್ ಕಾರ್ಡ್ ಬೇಕು. ಸರ್ಕಾರವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಕೆಳಗಿರುವ ವರ್ಗಗಳ ಕುಟುಂಬಕ್ಕೆ ಬಿಪಿಎಲ್ ಹಾಗೂ ಮೇಲ್ವರ್ಗದ ಕುಟುಂಬಗಳಿಗೆ ಎಪಿಎಲ್ ರೇಷನ್ ಕಾರ್ಡ್ ನೀಡುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಈಗ ಹೊಸದಾಗಿ ಸದಸ್ಯರು ಕುಟುಂಬಕ್ಕೆ ಬಂದಿದ್ದರೆ ಅಥವಾ ಕುಟುಂಬದ ಸದಸ್ಯರು ತೀರಿಕೊಂಡಿದ್ದರೆ ಹಾಗೂ ಒಂದು ಕುಟುಂಬದಲ್ಲಿ ಇರುವ ಅಣ್ಣ, ತಮ್ಮ ಬೇರೆ ಬೇರೆಯಾಗಿ ಜೀವಿಸುತ್ತಾ ಇದ್ದರೆ ನೀವು ಹೊಸದಾಗಿ ರೇಷನ್ ಕಾರ್ಡ್ ಪಡೆಯಬೇಕು. ಅಂತಹ ಕುಟುಂಬಕ್ಕೆ ಕೆಲವು ನಿರ್ಭಂಧೆಂಗಳ ಅನುಸಾರವಾಗಿ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತಿದೆ. ಇದೇ ಬರುವ ಏಪ್ರಿಲ್ ಒಂದರಿಂದ ಅರ್ಜಿ ನಮೂನೆಗಳು ತೆರೆಯಲಿದೆ.

WhatsApp Group Join Now
Telegram Group Join Now

ಈಗಾಗಲೇ ಅರ್ಜಿ ಸಲ್ಲಿಸಿರುವ ಕುಟುಂಬಕ್ಕೆ ಸಿಗಲಿದೆ ಹೊಸ ರೇಷನ್ ಕಾರ್ಡ್ :- 2020 ನೇ ಇಸವಿಯಲ್ಲಿ ಅರ್ಜಿ ಸಲ್ಲಿಸಿದ್ದ ಹಲವಾರು ಫಲಾನುಭವಿಗಳಿಗೆ ರೇಷನ್ ಕಾರ್ಡ್ ವಿತರಣೆ ಆಗಿರಲಿಲ್ಲ. ಆದರೆ ಇದೇ ತಿಂಗಳು ಮಾರ್ಚ್ 31 ರ ಒಳಗಾಗಿ ರೇಷನ್ ಕಾರ್ಡ್ ಗೆ ಅಪ್ಲೈ ಮಾಡಿದ್ದ ಎಲ್ಲಾ ಕುಟುಂಬಕ್ಕೆ ರೇಷನ್ ಕಾರ್ಡ್ ವಿತರಣೆ ಮಾಡುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ. ಒಟ್ಟು ಮಾರ್ಚ್ 31 ರ ಒಳಗೆ 2,95,986 ಅರ್ಹ ಫಲಾನುಭವಿಗಳಿಗೆ ಹೊಸ ರೇಷನ್ ಕಾರ್ಡ್ ಸಿಗಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಯಾರು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಬಹುದು?

1) ಮದುವೆ ಆದವರು :- ಮದುವೆಯಲ್ಲಿ ಹೆಣ್ಣು ಮಗಳು ತಂದೆಯ ಮನೆಯ ಬಿಟ್ಟು ಗಂಡನ ಮನೆಗೆ ಹೋಗುತ್ತಾಳೆ. ಆಗ ತಂದೆ ಮನೆಯಲ್ಲಿ ಅವಳ ಹೆಸರನ್ನು ತೆಗೆಸಬೇಕು ಹಾಗೂ ಗಂಡನ ಮನೆಯಲ್ಲಿ ಅವಳನ್ನೂ ಕುಟುಂಬದ ಸದಸ್ಯರ ಲಿಸ್ಟ್ ನಲ್ಲಿ ಸೇರಿಸಬೇಕು. ಹಾಗಾಗಿ ಹುಡುಗಿಯ ಗಂಡನ ಮನೆಯವರು ಹಾಗೂ ಅಪ್ಪನ ಮನೆಯವರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

2) ಕುಟುಂಬದಿಂದ ದೂರ ಆದವರು :- ಇಷ್ಟು ದಿನಗಳ ಕಾಲ ಒಂದೇ ಮನೆಯಲ್ಲಿ ವಾಸ ಮಾಡುತ್ತಾ ಇದ್ದು. ಹಲವಾರು ಕಾರಣಗಳಿಂದ ಮನೆಯಿಂದ ದೂರ ಉಳಿಯುವ ಕುಟುಂಬದ ಸದಸ್ಯರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.

3) ಸದಸ್ಯರ ಮರಣ :- ಮನೆಯ ಸದಸ್ಯರ ಮರಣ ಹೊಂದಿದ ಸಮಯದಲ್ಲಿ ಅವರ ಮರಣ ಪ್ರಮಾಣಪತ್ರವನ್ನು ನೀಡಿ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.

4) ನಿವಾಸ ಬದಲಾವಣೆ :- ಒಂದು ಊರಿನಿಂದ ಇನ್ನೊಂದು ಊರಿಗೆ ವಿಳಾಸ ಬದಲಾವಣೆ ಮಾಡಿದರೆ ನಿಮ್ಮ ಹಳೆ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡಿಸಿ ನೀವು ಇರುವ ವಿಳಾಸಕ್ಕೆ ಹೊಸ ರೇಷನ್ ಕಾರ್ಡ್ ಮಾಡಿಸಬೇಕು.

5) ತಿದ್ದುಪಡಿ ಇದ್ದಲ್ಲಿ :- ಕುಟುಂಬದ ಸದಸ್ಯರ ಹೆಸರುಗಳು ಆಧಾರ್ ಕಾರ್ಡ್ ನಲ್ಲಿ ಇರುವಂತೆ ರೇಷನ್ ಕಾರ್ಡ್ ನಲ್ಲಿ ಇಲ್ಲ ಎಂದಾದರೆ ನೀವು ಹೊಸದಾಗಿ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಸಲು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಗೃಹ ಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣ ಜಮಾ ಆಗಿದೆ.

ಹೊಸ ರೇಷನ್ ಕಾರ್ಡ್‌ಗೆ ಅಗತ್ಯವಿರುವ ದಾಖಲೆಗಳು:-

  • ಮನೆಯ ಎಲ್ಲಾ ಸದಸ್ಯರ ಆಧಾರ್ ಕಾರ್ಡ್‌ಗಳು.
  • ವಾಸಸ್ಥಳದ ಪುರಾವೆ ( ವಿದ್ಯುತ್ ಬಿಲ್, ನೀರಿನ ಬಿಲ್, ಮನೆ ತೆರಿಗೆ ರಸೀದಿ, ಬಾಡಿಗೆದಾರರಿಗೆ‌ ಒಪ್ಪಂದ ಪತ್ರ ಕಡ್ಡಾಯ ).
  • ಬಿಪಿಎಲ್ ಕಾರ್ಡ್ ಪಡೆಯಲು ಆದಾಯ ಪ್ರಮಾಣ ಪತ್ರ.
  • ಜಾತಿ ಪ್ರಮಾಣ ಪತ್ರ.
  • ಮೊಬೈಲ್ ಸಂಖ್ಯೆ.

ನೂತನ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಹತ್ತಿರದ ಗ್ರಾಮ್ ಒನ್ ಕೇಂದ್ರ, ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಮಹಿಳೆಯರು ತೆಗೆದುಕೊಳ್ಳುವ ಗೃಹ ಸಾಲಕ್ಕೆ ಹಲವು ರೀತಿಯ ಪ್ರಯೋಜನಗಳು ಇವೆ