ಹೊಸ ರೇಷನ್ ಕಾರ್ಡ್ ಮಾಡಿಸಲು ಸುವರ್ಣಾವಕಾಶ; ಪಡಿತರ ಚೀಟಿಯಲ್ಲಿನ ತಿದ್ದುಪಡಿಗೆ 2ದಿನದ ಕಾಲವಾಕಾಶ

ಸಾಕಷ್ಟು ತಿಂಗಳುಗಳಿಂದ ರಾಜ್ಯದ ಜನರು ಪಡಿತರ ಚೀಟಿಯಲ್ಲಿ ಬದಲಾವಣೆ ಮಾಡಿಸಲು ಹೊಸ ಪಡಿತರಕ್ಕೆ ಅರ್ಜಿ ಸಲ್ಲಿಸಲು ಕಾಯುತ್ತಿದ್ರು, ಇದೀಗ ಅದಕ್ಕೆ ಸಮಯ ಬಂದಿದ್ದು, ಪಡಿತರ ಚೀಟಿಯಲ್ಲಿ ಹೆಸರುಗಳು ತಪ್ಪಿವೆಯೇ, ಯಾವುದಾದರೂ ಹೆಸರನ್ನು ಸೇರ್ಪಡೆ ಮಾಡಬೇಕೇ, ಹಾಗಿದ್ದರೆ ಎರಡು ದಿನದಲ್ಲಿ ಇದನ್ನು ಮಾಡಿಕೊಳ್ಳಲು ಅವಕಾಶವಿದೆ. ಹೌದು ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಬಳಕೆಗೆ ಪಡಿತರ ಕಡ್ಡಾಯವಾಗಿರುವುದರಿಂದ ಸರಿಪಡಿಸಿಕೊಳ್ಳುವವರಿಗೆ ಕರ್ನಾಟಕ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಕರ್ನಾಟಕ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಈಗಾಗಲೇ ಸೂಚನೆ ಹೊರಡಿಸಲಾಗಿದ್ದು ನವೆಂಬರ್‌ 29 ಮತ್ತು 30 ರ ಎರಡು ದಿನದ ಮಟ್ಟಿಗೆ ಮಾತ್ರ ಇದನ್ನು ಬಳಕೆ ಮಾಡಿಕೊಳ್ಳಬಹುದು. ಅದೂ ಎರಡು ಗಂಟೆಗಳ ಕಾಲ ಮಾತ್ರ.

WhatsApp Group Join Now
Telegram Group Join Now

ಇನ್ನು ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಜಿಎಸ್‌ಸಿ ತಿದ್ದುಪಡಿ ಹಾಗೂ ಹೆಚ್ಚುವರಿ ಫಲಾನುಭವಿಗಳ ಹೆಸರನ್ನು ಸೇರ್ಪಡೆಗೆ ಹಾಗೂ ಹೊಸ ಆದ್ಯತಾ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಕರ್ನಾಟಕ ಒನ್ ಹಾಗೂ ಗ್ರಾಮ ಒನ್‌ಗಳಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಕಲಬುರಗಿ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಜಿ. ಗುಣಕಿ ತಿಳಿಸಿದ್ದಾರೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಆರಂಭಿಕ ಮತ್ತು ಕೊನೆ ದಿನ ಯಾವಾಗ? ಮಾಡಬೇಕಿರೋದು ಏನು ಗೊತ್ತಾ?

ಹೌದು ಈಗಾಗ್ಲೇ ಗೃಹಲಕ್ಷ್ಮೀ ಯೋಜನೆಯ ಲಾಭವನ್ನು ಸಾಕಷ್ಟು ಜನರು ಪಡೆಯುತ್ತಿದ್ದೂ, ಒಂದಷ್ಟು ಜನರು ರೇಷನ್ ಕಾರ್ಡ್ ಸಮಸ್ಯೆಯಿಂದಾಗಿ ಈ ಯೋಜನೆಯಿಂದ ಹೊರಗೂಳಿದಿದ್ರು. ಅಂತವರಿಗೆ ಈಗ ಸುವರ್ಣಕಾಶ ಅಂತ ಹೇಳಬಹುದು. ಹೌದು ಸದಸ್ಯರ ಹೆಸರು ಸೇರ್ಪಡೆ/ಬೇರ್ಪಡೆ/ ತಿದ್ದುಪಡಿ, ಪಡಿತರ ಚೀಟಿಯಲ್ಲಿನ ನ್ಯಾಯಬೆಲೆ ಅಂಗಡಿ ವಿಳಾಸ ಬದಲಾವಣೆ ಹಾಗೂ ಆದ್ಯತೇತರ ಪಡಿತರ ಚೀಟಿದಾರರು ಪಡಿತರ ಪಡೆಯಲು ಇಚ್ಚೆ ವ್ಯಕ್ತಪಡಿಸುವವರು ಕರ್ನಾಟಕ ಒನ್ ಹಾಗೂ ಗ್ರಾಮ ಒನ್‌ಗಳಲ್ಲಿ ನವೆಂಬರ್ 29 ಹಾಗೂ 30 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಹೊಸ ಆದ್ಯತಾ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 3 ರಂದು ಒಂದು ದಿನ ಮಾತ್ರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕರ್ನಾಟಕ ಒನ್ ಹಾಗೂ ಗ್ರಾಮ ಒನ್‌ಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಸರಿಯಾದ ಹೆಸರು, ಆಧಾರ್‌ ಕಾರ್ಡ್‌ ಹಾಗೂ ವಿಳಾಸದ ದಾಖಲೆಗಳೊಂದಿಗೆ ನಿಗದಿತ ಸಮಯದೊಳಗೆ ಆಗಮಿಸಬೇಕು ಅಂತ ಶಾಂತ ಗೌಡ ಜಿ. ಗುಣಕಿ ತಿಳಿಸಿದ್ದಾರೆ.

ಇನ್ನು ಕಲ್ಬುರ್ಗಿ ಜಿಲ್ಲೆಯ ನಗರ ಪ್ರದೇಶಗಳಲ್ಲಿರುವ ಕರ್ನಾಟಕ ಒನ್ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿನ ಗ್ರಾಮ ಒನ್ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಇವುಗಳನ್ನು ಹೊರತುಪಡಿಸಿ ಬೇರೆ ಇನ್ಯಾವುದೇ ಆನ್‌ಲೈನ್ ಸೆಂಟರ್‌ಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಲ್ಲ ಅಂತ ಸ್ಪಷ್ಟ ಪಡಿಸಿದ್ದಾರೆ.

ಹೌದು ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲು ರೇಷನ್ ಕಾರ್ಡ್ ಬಹಳ ಮುಖ್ಯವಾಗಿರುವ ದಾಖಲೆಯಾಗಿದೆ. ಒಂದು ವೇಳೆ ರೇಷನ್ ಕಾರ್ಡ್ ನಲ್ಲಿ ಯಾವುದೇ ರೀತಿಯ ತಪ್ಪು ಮುದ್ರಣ ಇದ್ದರೆ ಅಂತಹ ಕುಟುಂಬದವರು ಸರ್ಕಾರದ ಯಾವ ಯೋಜನೆಯ ಪ್ರಯೋಜನವನ್ನು ಕೂಡ ಪಡೆದುಕೊಳ್ಳಲು ಸಾಧ್ಯವಿಲ್ಲ. ಹಲವರ ರೇಷನ್ ಕಾರ್ಡ್ ನಲ್ಲಿ ಹೆಸರು ಹಾಗೂ ವಿಳಾಸ ತಪ್ಪಾಗಿ ಮುದ್ರಣಗೊಂಡಿರುತ್ತದೆ. ಹಾಗಾಗಿ ನೀವು ನಿಮ್ಮ ಹೆಸರು ತಿದ್ದುಪಡಿ ಮಾಡಲು ಸರ್ಕಾರ ಮತ್ತೆ ಅವಕಾಶ ಮಾಡಿಕೊಟ್ಟಿದೆ, ಅಷ್ಟೇ ಅಲ್ಲದೆ ಮನೆಯಲ್ಲಿ ಇರುವ ಯಾವುದೇ ಸದಸ್ಯರ ಹೆಸರನ್ನು ರೇಷನ್ ಕಾರ್ಡ್ ನಲ್ಲಿ ಸೇರಿಸಬಹುದು ಹಾಗೂ ಮನೆಯಲ್ಲಿ ಇಲ್ಲದ ಸದಸ್ಯರ ಹೆಸರು ರೇಷನ್ ಕಾರ್ಡ್ ನಲ್ಲಿ ಇದ್ದರೆ ಅವರ ಹೆಸರನ್ನು ಕೂಡ ತೆಗೆದು ಹಾಕಬಹುದು.

ಸಾಮಾನ್ಯವಾಗಿ ರೇಷನ್‌ ಕಾರ್ಡ್‌ಗಳಲ್ಲಿ ಸದಸ್ಯರ ಹೆಸರುಗಳು ಏನಾದರೂ ತಪ್ಪಾಗಿದ್ದರೆ ಅವುಗಳನ್ನು ಸರಿಪಡಿಸಲು ಆಯಾ ಜಿಲ್ಲಾವಾರು ದಿನಾಂಕವನ್ನು ನಿಗದಿಪಡಿಸಿರುತ್ತಾರೆ. ಆ ದಿನಾಂಕದೊಳಗೆ ದಾಖಲೆಗಳನ್ನು ಸರಿಪಡಿಸಿಕೊಂಡರೆ ಪಡಿತರ ಪಡೆಯಲು ಯಾವುದೇ ಸಮಸ್ಯೆಗಳನ್ನು ಇರುವುದಿಲ್ಲ. ಹಾಗೆಯೇ ಇದೀಗ ಕಲ್ಬುರ್ಗಿ ಜಿಲ್ಲೆಯಲ್ಲೂ ಸಹ ಪಡಿತರ ಚೀಟಿ ತಿದ್ದುಪಡಿಗೆ ದಿನಾಂಕ ನಿಗಧಿಪಡಿಲಾಗಿದೆ. ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರದಲ್ಲಿ ಅರ್ಹ ಫಲಾನುಭವಿಗಳು ನಿಗಧಿತ ಸಮಯದಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: UPI Payment ನಿಯಮದಲ್ಲಿ ಬದಲಾವಣೆ; 2000 ಕ್ಕೂ ಮೀರಿದ ಮೊದಲ ವಹಿವಾಟು 4 ಗಂಟೆ ವಿಳಂಬ ಸಾಧ್ಯತೆ..

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram