ನೀವು APL -BPL ಕಾರ್ಡ್ ಗಾಗಿ ಅರ್ಜಿಯನ್ನು ಸಲ್ಲಿಸಿದ್ದೀರಾ? ಹಾಗಾದ್ರೆ ನಿಮಗೆ ಇನ್ನು ಕೇವಲ 15 ದಿನದಲ್ಲೇ ಬರಲಿದೆ ಹೊಸ ರೇಷನ್ ಕಾರ್ಡ್.

New ration card

ಹೌದು ಹೊಸ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ದಾರರಿಗೆ ಸರಕಾರವು ಸಿಹಿ ಸುದ್ದಿಯನ್ನು ನೀಡಿದ್ದು ಈಗಾಗಲೇ ಅರ್ಜಿ ಸಲ್ಲಿಸಿದವರಲ್ಲಿ ಇನ್ನು ಎರಡೇ ಎರಡು ವಾರಗಳಲ್ಲಿ ನೀವು ಹೊಸ ರೇಷನ್ ಕಾರ್ಡನ್ನು ಪಡೆಯಬಹುದಾಗಿದೆ. ನೀವು ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿ ಇನ್ನು 15 ದಿನಗಳ ಒಳಗಾಗಿ ಹೊಸ ರೇಷನ್ ಕಾರ್ಡನ್ನು ಅರ್ಜಿದಾತರಿಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸರ್ಕಾರವು ಸೂಚನೆಯನ್ನು ನೀಡಿದೆ. ಇಷ್ಟು ದಿನ ಅನ್ನಭಾಗ್ಯ ಯೋಜನೆಯಡಿ ಅಕ್ಕಿಯ ಬದಲು ಅಕ್ಕಿಯ ಮೊತ್ತವನ್ನು ನೀಡಲಾಗುತ್ತಿತ್ತು ಆದರೆ ಇನ್ನು ಮುಂದೆ ಅಕ್ಕಿಯನ್ನು ನೀಡುವ ಪ್ರಯತ್ನ ನಡೆಯುತ್ತಿದೆ ಎಂದು ಕೆಎಚ್ ಮುನಿಯಪ್ಪ ಅವರು ಸ್ಪಷ್ಟಪಡಿಸಿದ್ದಾರೆ ಇಷ್ಟು ದಿನ ಚುನಾವಣೆ ಅಂಗವಾಗಿ ಹೊಸ ರೇಷನ್ ಕಾರ್ಡ್ ವಿತರಣೆಯನ್ನು ನಿಲ್ಲಿಸಲಾಗಿತ್ತು ಆದರೆ ಇದೀಗ ಇನ್ನೂ 15 ದಿನದ ಒಳಗಾಗಿ ಅರ್ಜಿಯನ್ನು ಪರಿಶೀಲಿಸಿ ಹೊಸ ಕಾರ್ಡುಗಳನ್ನು ವಿತರಿಸಲಾಗುವುದು ಎಂದು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram

ಎಷ್ಟು BPL ಕಾರ್ಡ್ ಗಳನ್ನು ರದ್ದುಗೊಳಿಸಲಾಗುತ್ತಿದೆ?

ಕೆಲವು ರೇಷನ್ ಕಾರ್ಡ್ದಾರರು ಸುಮಾರು ಆರು ತಿಂಗಳಿನಿಂದ ಯಾವುದೇ ರೀತಿಯ ಸದುಪಯೋಗವನ್ನು ಮಾಡಿಕೊಳ್ಳುತ್ತಿಲ್ಲ. ಸುಮಾರು ಲೆಕ್ಕದಂತೆ 3.26 ಲಕ್ಷ ಉಪಯೋಗಿಸದ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತಿದೆ. ಇಲ್ಲಿ ಹೇಳಿರುವ ಹಾಗೆ ಇಷ್ಟು BPL ಕಾರ್ಡ್ ದಾರರು ಸುಮಾರು ಆರು ತಿಂಗಳಿಂದ ರೇಷನ್ ಅನ್ನು ಪಡೆಯುತ್ತಿಲ್ಲ ಇಂತಹ ಕಾರ್ಡುಗಳನೂ ರದ್ದು ಗೊಳಿಸಲಾಗುವುದು ಇಂದು ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ.

ನಮ್ಮ ರಾಜ್ಯದಲ್ಲಿ ಹಲವು ಕುಟುಂಬಗಳಿಗೆ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಅಗತ್ಯತೆ ಇಲ್ಲದಿದ್ದರೂ ಕೂಡ ಪಡಿತರ ಚೀಟಿಯನ್ನು ಪಡೆಯುವುದಕ್ಕೆ ಅರ್ಜಿಯನ್ನು ಹಾಕಿದ್ದಾರೆ ಇಂತಹ ಕಾರ್ಡುಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಿ ಅವುಗಳನ್ನು ರದ್ದುಗೊಳಿಸಲಾಗುವುದು ಎಂದು ಹೇಳಿದ್ದಾರೆ. ಅಗತ್ಯತೆ ಇರುವವರಿಗಿಂತ ಬೈಕು ಕಾರುಗಳನ್ನು ಹೊಂದಿದವರೇ ಹೆಚ್ಚಿನ ಜನರು ಪಡಿತರ ಚೀಟಿಗಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಇದು ಸೂಕ್ತವಲ್ಲ ಇಂತಹ ಅರ್ಜಿ ಗಳನ್ನು ತಳ್ಳಿ ಹಾಕಲಾಗುವುದು ಎಂದು ಸರ್ಕಾರ ಕಟ್ಟುನಿಟ್ಟಾಗಿ ಅಧ್ಯಯನ ಹೊರಡಿಸಿದೆ.

ಅಷ್ಟೇ ಅಲ್ಲದೆ ಪಿಂಚಣಿ ಇರಬಹುದು ಆರ್ ಟಿ ಇ ಇರಬಹುದು ಶಿಕ್ಷಣ ಇರಬಹುದು ಮತ್ತು ಆಸ್ಪತ್ರೆ ಗಳಲ್ಲಿ ಉಚಿತ ಚಿಕಿತ್ಸೆಗಳನ್ನು ಪಡೆಯಲು ಹಾಗೂ ಇನ್ನಿತರ ಸರಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುವ ಹಂಬಲದಿಂದ ಹಲವು ಲಕ್ಷ ಮಂದಿ ಬಿಪಿಎಲ್ ಕಾರ್ಡನ್ನು ಪಡೆದುಕೊಂಡಿದ್ದಾರೆ ಆದರೆ ಆರು ತಿಂಗಳುಗಳಿಂದ ಆ ಕಾರ್ಡನ್ನು ಉಪಯೋಗಿಸುತ್ತಿಲ್ಲ ಅದನ್ನೆಲ್ಲ ಪತ್ತೆ ಹಚ್ಚಿ ರದ್ದುಗೊಳಿಸುತ್ತೇವೆ ಎಂದು ಸರ್ಕಾರ ಹೇಳಿದೆ. ಹೌದು ನಮ್ಮ ರಾಜ್ಯ ದಲ್ಲಿ ಅವಶ್ಯಕತೆ ಇದ್ದವರ ಜೊತೆ ಅವಶ್ಯಕತೆ ಇಲ್ಲದಿದ್ದವರು ಕೂಡ ಬಿಪಿಎಲ್ ಕಾರ್ಡುಗಳನ್ನು ಪಡೆದುಕೊಂಡಿದ್ದಾರೆ ಉಚಿತ ಸರ್ಕಾರಿ ಸೌಲಭ್ಯಗಳನ್ನು ಕೂಡ ಪಡೆಯುತ್ತಿದ್ದಾರೆ ಇದರಿಂದ ಸರ್ಕಾರಕ್ಕೆ ನಷ್ಟವಾಗುತ್ತದೆ ಆದ್ದರಿಂದ ಇಂತಹ ಕಾರ್ಡುಗಳನ್ನು ಪತ್ತೆ ಹಚ್ಚಿ ರದ್ದುಗೊಳಿಸುತ್ತೇವೆ ಎಂದು ಸರ್ಕಾರ ಖಡಾ ಖಂಡಿತವಾಗಿ ಹೇಳಿದೆ.

ಇದನ್ನೂ ಓದಿ: HSRP ನಂಬರ್ ಪ್ಲೇಟ್ ಅಳವಡಿಸಲು ದಿನಾಂಕ ನಿಗಧಿ; ಫೆಬ್ರವರಿ 17 ಕೊನೆಯ ದಿನ? ಮಾಡಬೇಕಿರೋದು ಏನ್ ಗೊತ್ತಾ

ಇದನ್ನೂ ಓದಿ: ನಿಮ್ಮ ಹಣ ಸ್ವಲ್ಪ ಸಮಯದಲ್ಲೇ ಡಬಲ್ ಆಗಬೇಕಾ? ಹಾಗಾದರೆ post office ನ ಈ ಯೋಜನೆಯಲ್ಲಿ ಹೂಡಿಕೆಯನ್ನು ಮಾಡಿ