ಹೊಸ ರಾಯಲ್ ಎನ್ಫೀಲ್ಡ್ ಹಿಮಾಲಯನ್ ಈಗ ಎಲೆಕ್ಟ್ರಾನಿಕ್ ಮಾದರಿಯಲ್ಲೂ ಸಿಗಲಿದೆ, ಹೊಸ ವೈಶಿಷ್ಟಗಳೊಂದಿಗೆ ಮಾರುಕಟ್ಟೆಯಲ್ಲಿ ಸಿಗಲಿದೆ.

Royal Enfield Himalayan Electric: ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಇಐಸಿಎಂಎಯಲ್ಲಿ(EICMA) ಪ್ರದರ್ಶಿಸಲಾಗಿದೆ, ಆದರೆ ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಒದಗಿಸಿಲ್ಲ. ಗುಡ್ಡಗಾಡು ಪ್ರದೇಶದಲ್ಲಿ ಹಾಗೂ ಅರಣ್ಯ ಪ್ರದೇಶಗಳಲ್ಲಿ ಓಡಾಡಲು ತುಂಬಾ ಸಹಾಯಕವಾಗಿದೆ. ಕಂಪನಿಯು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸಿಲ್ಲ, ಆದರೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಫೋಟೋಸ್ ಹಂಚಿಕೆಯಾಗಿದೆ.

WhatsApp Group Join Now
Telegram Group Join Now

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ವಿದ್ಯುತ್ ಮಾದರಿಯನ್ನು ನೋಡಿದಾಗ, ಇದು ಹೊಸ ಹಿಮಾಲಯನ್ 450 ಗೆ ಹೋಲಿಕೆ ಆಗುವ ರೀತಿಯಲ್ಲಿ, ಆಕರ್ಷಕ ಶೈಲಿಯೊಂದಿಗೆ ದೊಡ್ಡ ವಿಂಡ್‌ಸ್ಕ್ರೀನ್ ಮತ್ತು ಗೋಳಾಕಾರದ ಹ್ಯಾಂಡ್‌ಲ್ಯಾಂಪ್‌ಗಳಿಂದ ಕೂಡಿದೆ. ಪಫ್ಡ್ ಎಲ್‌ಇಡಿ ಹ್ಯಾಂಡಲ್ ಲ್ಯಾಂಪ್ ಜೊತೆಗೆ ವಿಭಿನ್ನ ವಿನ್ಯಾಸ ಟ್ಯಾಂಕ್ ಮತ್ತು ಒಂದೇ ತುಂಡು ಆಸನವನ್ನು ಹೊಂದಿದೆ. ರಾಯಲ್ ಎನ್‌ಫೀಲ್ಡ್ ನೋಡುಗರಿಗಂತೂ ಆಕರ್ಷಣೆ ತರಿಸುವಂತಿದೆ.

Image Credit: Original Source

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಇದನ್ನೂ ಓದಿ: ದೀಪಾವಳಿ ಪ್ರಯುಕ್ತ ಮಹಿಂದ್ರ ಬೋಲೇರೋ ನಿಯೋ ವಿಶೇಷ ರಿಯಾಯಿತಿಯಲ್ಲಿ ಲಭ್ಯವಿದೆ. ಈ ಉತ್ತಮ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. 

ರಾಯಲ್ ಎನ್ಫೀಲ್ಡ್ ಹಿಮಾಲಯನ್ ವೈಶಿಷ್ಟ್ಯಗಳು(Features of Royal Enfield Himalayan Electric Bike)

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ವಿದ್ಯುತ್ ಮಾದರಿಯಲ್ಲಿ ಎಲೆಕ್ಟ್ರಿಕ್ ಮೋಟರ್ ಮತ್ತು ಬ್ಯಾಟರಿ ಪ್ಯಾಕ್( electric motor and battery pack) ಅನ್ನು ಅದ್ಭುತವಾಗಿ ಅಳವಡಿಸಲಾಗಿದೆ. ಇದು ಬೇರೆ ಬೇರೆ ಬಣ್ಣಗಳಿಂದ ಅಲಂಕೃತವಾಗಿದೆ. ನೋಡುಗರಿಗೆ ಕಣ್ಮನ ಸೆಳೆಯುವಂತಿದೆ.

Royal Enfield Himalayan Electric ಸಸ್ಪೆನ್ಷನ್ ಮತ್ತು ಬ್ರೇಕ್, ತಲೆಕೆಳಗಾದ ಫೋರ್ಕ್ ಮತ್ತು ಅಡ್ಜಸ್ಟೇಬಲ್ ಸೆನ್ಸರನ್ನು ಅಳವಡಿಸಲಾಗಿದೆ. ಬ್ರೇಕ್ ಸೆಟಪ್‌ನಲ್ಲಿ ಎರಡೂ ಚಕ್ರಗಳಲ್ಲಿ ಒಂದೇ ಡಿಸ್ಕ್ ಬ್ರೇಕ್ ಸೆಟಪ್ ಹೊಂದಿದೆ. ಇದು ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಾಮರ್ಥ್ಯವನ್ನು ಹೊಂದಿದೆ. ಸ್ಮಾರ್ಟ್‌ಫೋನ್ ಸಂಪರ್ಕ, ಕಾಲ್ ಅಲರ್ಟ್, ಎಸ್‌ಎಂಎಸ್ ಅಲರ್ಟ್, ಇಮೇಲ್ ಹಾಗೂ ಸ್ಮಾರ್ಟ್ ಅಸಿಸ್ಟೆಂಟ್ ನ್ಯಾವಿಗೇಷನ್ ಸಿಸ್ಟಮ್‌ನೊಂದಿಗಿನ ಬ್ಲೂಟೂತ್ ಸಂಪರ್ಕಗಳನ್ನು ಅದರಲ್ಲಿ ನೀವು ಕಾಣಬಹುದಾಗಿದೆ.

ಈ ಬೈಕ್ ಲಾಂಚ್ ದಿನಾಂಕದ ಬಗ್ಗೆ ಇನ್ನು ಯಾವುದೇ ಮಾಹಿತಿ ಲಭ್ಯವಿಲ್ಲ. ಹಿಮಾಲಯ ಎಲೆಕ್ಟ್ರಿಕ್ ಕಂಪನಿ 2025 ರ ವೇಳೆಗೆ ಭಾರತದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದು ರಾಯಲ್ ಎನ್‌ಫೀಲ್ಡ್ನ ಮೊದಲ ಎಲೆಕ್ಟ್ರಿಕ್ ಅಡ್ವೆಂಚರ್ (first electric adventure bike) ಬೈಕ್ ಆಗಿದ್ದು, ಹೆಚ್ಚಿಗೆ ಮಾರಾಟವಾಗುವ ನಿಟ್ಟಿನಲ್ಲಿ ಅನೇಕ ಸೌಲಭ್ಯಗಳನ್ನು ಅಳವಡಿಸಲಾಗಿದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಹೊಸ ಮಾಡೆಲ್ ವಿಶೇಷತೆಗಳನ್ನು ಹೇಳುವುದಾದರೆ, ಇದು 452 ಸಿಸಿ ಲಿಕ್ವಿಡ್-ಕೂಲ್ಡ್ ಎಂಜಿನ್ ಸೆಟಪ್ ಹೊಂದಿದೆ ಮತ್ತು 40.2BHP ಶಕ್ತಿಯನ್ನು ಮತ್ತು 40nm ಗರಿಷ್ಠ ಟಾರ್ಕ್ ಅನ್ನು ಅಳವಡಿಸಲಾಗಿದೆ. ಇದು 6 ಸ್ಪೀಡ್ ಗೇರ್ ಬಾಕ್ಸ್‌ನೊಂದಿಗೆ ಹೊಂದಿಕೆಯಾಗಿದೆ. ಈ ಮಾಡೆಲ್ ಗೆ ಒಂದು ವಿಶೇಷವಾದ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ, ಇದು ನ್ಯಾವಿಗೇಷನ್ ಮತ್ತು ವಿವರಗಳ ಸೂಚನೆಯನ್ನು ನೀಡುತ್ತದೆ. ಇದು 4 ಇಂಚಿನ ಗೋಳಾಕಾರದ Horn ಕ್ಲಸ್ಟರ್ ಆಗಿದ್ದು, ಸ್ಪೀಡೋಮೀಟರ್, ಟೆಕೂಮೀಟರ್, ಟ್ರಿಪ್ ಮೀಟರ್, ಗೇರ್ ಸ್ಥಾನ, ಇಂಧನ ಗೇಜ್, ಸೇವಾ ಸೂಚಕ, ಸ್ಟ್ಯಾಂಡ್ ಎಚ್ಚರಿಕೆಯನ್ನು ನೀಡುತ್ತದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ರ ಸೆಟ್‌ನಲ್ಲಿ ತಲೆಕೆಳಗಾದ ಫೋರ್‌ಗಳನ್ನು ಬಳಸಲಾಗಿದೆ. ಅದರ ಬ್ರೇಕಿಂಗ್ ಕಾರ್ಯಗಳನ್ನು ನಿರ್ವಹಿಸಲು ಡಿಸ್ಕ್ ಬ್ರೇಕ್‌ಗಳನ್ನು ಎರಡೂ ಚಕ್ರಗಳಿಗೆ ಅಳವಡಿಸಲಾಗಿದೆ. ಸುರಕ್ಷತಾ ಸೌಲಭ್ಯವು ಡ್ಯುಯಲ್ ಚಾನೆಲ್ ಎಬಿಎಸ್, ಎಳೆತ ನಿಯಂತ್ರಣ ಮತ್ತು ಆಂಟಿ-ಲಾಕಿಂಗ್ ಬ್ರೇಕಿಂಗ್ ಸಿಸ್ಟಮ್ನಂತಹ ಸೌಲಭ್ಯವನ್ನು ಒದಗಿಸುತ್ತದೆ. ಒಮ್ಮೆ ಈ ಬೈಕ್ ಅನ್ನು ನೋಡಿದವರು ಖರೀದಿ ಮಾಡುವಂತಹ ನಿಟ್ಟಿನಲ್ಲಿ ವಿಶೇಷ ಸೌಲಭ್ಯದೊಂದಿಗೆ ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ: ಹೆಚ್ಚು ಸೌಲಭ್ಯದೊಂದಿಗೆ ಹೊಸ ಸುಜುಕಿ ಬರ್ಗ್ಮನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸೂಕ್ತ ಬೆಲೆಗೆ ಮುಂಬರುವ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಖರೀದಿಸಬಹುದು.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram