ಜೂನ್ ತಿಂಗಳಲ್ಲಿ ಡ್ರೈವಿಂಗ್ ಲೈಸೆನ್ಸ್, ಗ್ಯಾಸ್ ಸಿಲೆಂಡರ್, ಆಧಾರ್ ಕಾರ್ಡ್ ನವೀಕರಣ, ವಾಹನ ಚಲಾವಣೆಗೆ ಸಂಭಂದಿಸಿದ ನಿಯಮಗಳು ಸ್ವಲ್ಪ ಮಟ್ಟಿಗೆ ಬದಲಾವಣೆ ಅಗಲಿದೆ. ಬದಲಾವಣೆಯ ಪರಿಣಾಮದಿಂದ ಜನಸಾಮಾನ್ಯರಿಗೆ ಹೆಚ್ಚಿನ ಆರ್ಥಿಕ ತೊಂದರೆ ಆಗುವ ಸಾಧ್ಯತೆ ಇದೆ.
ಗ್ಯಾಸ್ ಸಿಲೆಂಡರ್ ಬೆಲೆ ಬದಲಾವಣೆ ಸಾಧ್ಯತೆ :-
ತಿಂಗಳಿಂದ ಗ್ಯಾಸ್ ಸಿಲೆಂಡರ್ ಬೆಲೆಯೂ ಏರಿಕೆ ಆಗುವ ಸಾಧ್ಯತೆ ಕಂಡುಬರುತ್ತಿದೆ. ಪ್ರತಿ ತಿಂಗಳ ಒಂದನೇ ತಾರೀಖಿನ ದಿನ ನೂತನ ಸಿಲೆಂಡರ್ ಬೆಲೆ ತಿಳಿಯುತ್ತದೆ. ತೈಲ ಕಂಪನಿಗಳು 14 ಕೆಜಿ ದೇಶೀಯ ಮತ್ತು 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಜೂನ್ 1 2024 ರಂದು ತಿಳಿಸಲಿವೆ.
ಆಧಾರ್ ಕಾರ್ಡ್ :-
ಈಗಾಗಲೆ ಆಧಾರ್ ಕಾರ್ಡ್ ನವೀಕರಣಕ್ಕೆ UIDAI ಸೂಚನೆ ನೀಡಿದೆ. ಅದರಂತೆ ಈಗ ನೀವು ಉಚಿತವಾಗಿ ಆಧಾರ್ ಕಾರ್ಡ್ ನವೀಕರಣಗೊಳಿಸಲು ಇದೆ ಬರುವ ಜೂನ್ 14 2024 ರ ವರೆಗೆ ಸಮಯ ಇರುತ್ತದೆ. ಜೂನ್ 15 2024 ರಿಂದ ಆಧಾರ್ ಕಾರ್ಡ್ ನವೀಕರಣಕ್ಕೆ ಶುಲ್ಕ ಪಾವತಿಸಬೇಕಾಗುತ್ತದೆ. offline ಮೂಲಕ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು 50 ರೂಪಾಯಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಅದರಿಂದ ಆಧಾರ್ ಕಾರ್ಡ್ ಅಪ್ಡೇಟ್ ಆಗದೆ ಇದ್ದವರು ಉಚಿತವಾಗಿ ಜೂನ್ 14 ರ ಹತ್ತಿರದ ಆಧಾರ್ ಅಪ್ಡೇಟ್ ಕೇಂದ್ರಕ್ಕೆ ಭೇಟಿ ನೀಡಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಡ್ರೈವಿಂಗ್ ಲೈಸೆನ್ಸ್ :-
ಜೂನ್ 1 2024 ರಿಂದ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಕೆಲವು ನಿಯಮಗಳ ಬದಲಾವಣೆ ಆಗಲಿದೆ. ಇನ್ನು ಮುಂದೆ ನೀವು ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕು ಎಂದರೆ RTO. ಕಚೇರಿಗೆ ತೆರಳಿ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಿ ನಂತರ ಡ್ರೈವಿಂಗ್ ಟೆಸ್ಟ್ ನಲ್ಲಿ ಪಾಸ್ ಅದ ಬಳಿಕ ನಿಮಗೆ ಡ್ರೈವಿಂಗ್ ಲೈಸೆನ್ಸ್ ಸಿಗುತ್ತಿತ್ತು. ಆದರೆ ಇನ್ನೂ ಮುಂದೆ ಚಾಲನಾ ತರಬೇತು ಕೇಂದ್ರಗಳಲ್ಲಿ ಡ್ರೈವಿಂಗ್ ಕಲಿಸುವುದರ ಜೊತೆಗೆ ನಿಮಗೆ ಡ್ರೈವಿಂಗ್ ಲೈಸೆನ್ಸ್ ಸಹ ಅಲ್ಲಿಯೇ ಸಿಗುತ್ತದೆ. ಆದರೆ ಡ್ರೈವಿಂಗ್ ಕ್ಲಾಸ್ ನವರು ನಡೆಸುವ ಪರೀಕ್ಷೆಯಲ್ಲಿ ನೀವು ಪಾಸ್ ಆಗಬೇಕು. ಇಲಾಖೆ ಸೂಚಿಸಿರುವ ಚಾಲನಾ ತರಬೇತಿ ಕೇಂದ್ರಗಳು ಮಾತ್ರ ಡ್ರೈವಿಂಗ್ ಲೈಸೆನ್ಸ್ ವಿತರಣೆ ಮಾಡಬಹುದು.
ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡಿದರೆ ದಂಡ ಕಟ್ಟಬೇಕಾಗುತ್ತದೆ :-
ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡಿ ಅಪಘಾತಗಳು ಆಗುವ ಘಟನೆಗಳು ಹೆಚ್ಚಾಗಿರುವುದರಿಂದ ಈಗ ಇಲಾಖೆ ಕಠಿಣ ಕಾನೂನು ಕ್ರಮ ತೆಗೆದುಕೊಂಡಿದೆ. ಇಲಾಖೆಯ ನಿಯಮದ ಪ್ರಕಾರ ಜೂನ್ 1 2024 ರಿಂದ 18 ವಯಸ್ಸಿನ ಒಳಗೆ ಇರುವ ಅಪ್ರಾಪ್ತ ವಯಸ್ಸಿನ ಮಕ್ಕಳು (ಹುಡುಗ /ಹುಡುಗಿ ) ವಾಹನ ಚಾಲನೆ ಮಾಡಿದರೆ 25,000 ರೂಪಾಯಿಗಳ ವರೆಗೆ ದಂಡ ಕಟ್ಟಬೇಕು ಜೊತೆಗೆ ವಾಹನ ಸವಾರರ ಚಾಲನಾ ಪರವಾನಿಗೆಯನ್ನು ಸಹ ರದ್ದು ಮಾಡುವ ಸಾಧ್ಯತೆ ಇರುತ್ತದೆ. ಅದರಿಂದ ಜೂನ್ 1 ರಿಂದ ಯಾವುದೇ ಕಾರಣಕ್ಕೂ ನಿಮ್ಮ ವಾಹನವನ್ನು 18 ವರ್ಷದ ಮಕ್ಕಳಿಗೆ ಚಾಲನೆ ಮಾಡಲು ಬಿಡಬಾರದು. ಈ ನಿಯಮ ಮಕ್ಕಳ ಜೀವ ಉಳಿಯುವುದರ ಜೊತೆಗೆ ಉಳಿದ ವಾಹನ ಸವಾರರಿಗೆ ಆಗುವ ಅಪಾಯವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಜಿಯೋದ ಎರಡು ಉತ್ತಮವಾದ ಯೋಜನೆಯಗಳು, ಕೇವಲ 89 ಮತ್ತು 29 ರೂಪಾಯಿಗಳಿಗೆ ಮಾತ್ರ!