UPl ಅಪ್ಲಿಕೇಶನ್ ನಲ್ಲಿ ರುಪೇ ಕ್ರೆಡಿಟ್ ಕಾರ್ಡ್ ಬಳಸುವ ಗ್ರಾಹಕರಿಗೆ ಹೊಸದಾಗಿ ಮೂರು ನಿಯಮಗಳು ಜಾರಿಯಾಗಿದೆ.

New Rupay Credit Card Rules

ರುಪೇ ಕ್ರೆಡಿಟ್ ಕಾರ್ಡ್‌ಗಳು ಭಾರತೀಯ ರಾಷ್ಟ್ರೀಯ ಪಾವತಿಗಳ ನಿಗಮ (NPCI) ಯಿಂದ ಒಂದು ಪಾವತಿ ಕಾರ್ಡ್ ಆಗಿದ್ದು. ಈ ಕಾರ್ಡ್ ಭಾರತದ ಹಲವು ಬ್ಯಾಂಕ್ ಗಳು ನೀಡುತ್ತಿವೆ. ರುಪೇ ಕ್ರೆಡಿಟ್ ಕಾರ್ಡ್‌ ಬಳಸಿ ನಾವು ನಗದು ರಹಿತ ಪಾವತಿ ಮಾಡಲು ಇದು ಅನುಕೂಲವಾಗಿದೆ. ಸಾಮಾನ್ಯವಾಗಿ UPl ಅಪ್ಲಿಕೇಶನ್ ನಲ್ಲಿ ಕ್ರೆಡಿಟ್ ಕಾರ್ಡ್‌ ಬಳಸಿ ಹಣ ಪಾವತಿ ಮಾಡುವುದು ನಮಗೆ ಗೊತ್ತೇ ಇದೆ. ಆದರೆ ಈಗ ಹಣ ರುಪೇ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಗ್ರಾಹಕರಿಗೆ ಹೊಸದಾಗಿ NPCI ಮೂರು ನಿಯಮಗಳನ್ನು ಜಾರಿ ಮಾಡಿದೆ. ಮೂರು ನಿಯಮಗಳ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

NPCI ನೀಡಿರುವ ಪತ್ರಿಕಾ ಪ್ರಕಟಣೆ ಏನು?: NPCI ಮಾರ್ಚ್ 29, 2024 ರಂದು ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ ರೂಪೇ ಕ್ರೆಡಿಟ್ ಕಾರ್ಡ್‌ಗಳನ್ನು ಇನ್ನೂ ಮುಂದೆ UPI ನಲ್ಲಿ ಲಿಂಕ್ ಮಾಡಿ, ಸುರಕ್ಷಿತವಾಗಿ ಪಾವತಿ ಮಾಡುವ ವ್ಯವಸ್ಥೆ ನೀಡಲಾಗಿದೆ. ಹಣ ಪಡೆಯುವ ವ್ಯಾಪಾರಿಗಳು QR ಕೋಡ್‌ಗಳ ಕ್ರೆಡಿಟ್ ಖಾತೆಗೆ ಹಣ ಸ್ವೀಕಾರ ಮಾಡಬಹುದು ಎಂಬ ಮಾಹಿತಿಯನ್ನು ತಿಳಿಸಿದೆ. ಜೊತೆಗೆ NPCI ರೂಪೇ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸುವ ಎಲ್ಲಾ ಬ್ಯಾಂಕ್ ಗಳಿಗೆ ಮಾರ್ಚ್ 31 2024 ರ ಒಳಗೆ ಎಲ್ಲಾ ಕ್ರೆಡಿಟ್ ಕಾರ್ಡ್ UPI ನಿಯಮಗಳನ್ನು ಜಾರಿ ಗೊಳಿಸುವಂತೆ ತಿಳಿಸಿತ್ತು. ಇದರಿಂದ ಹಲವಾರು ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

UPI ಅಪ್ಲಿಕೇಶನ್ ನಲ್ಲಿ ನೀಡಲಾದ ಹೊಸ ನಿಯಮಗಳು ಏನು?

ಇಎಂಐ ಬಳಕೆ:- UPI ಪೇಮೆಂಟ್ ಮಾಡುವಾಗ ಕ್ರೆಡಿಟ್ ಕಾರ್ಡ್ ನಲ್ಲಿ ಇಎಂಐ ಪಾವತಿಯನ್ನು ಸಕ್ರಿಯಗೊಳಿಸಲು ಅರ್ಜಿ ಸಲ್ಲಿಸಲು ಅವಕಾಶ ಇದೆ. ಕೆಲವು ಷರತ್ತು ಮತ್ತು ನಿಯಮಗಳನ್ನು ಪಾಲಿಸಿದರೆ ನೀವು ಈ ಸೌಲಭ್ಯ ಪಡೆಯಬಹುದು. ಹಿಂದೆ ಮಾಡಿದ payment ಅಥವಾ ಮಾಡಬೇಕಾಗಿರುವ ಪೇಮೆಂಟ್ ಗಳಿಗೆ ಇಎಂಐ ಪೇಮೆಂಟ್ ಗೆ ಅರ್ಜಿ ಸಲ್ಲಿಸಿ ಒಮ್ಮೆಲೆ ಹಣ ಪಾವತಿ ಮಾಡುವ ಬದಲು ಕಂತುಗಳ ಮೂಲಕ ಹಣ ಪಾವತಿ ಮಾಡಲು ಸಾಧ್ಯವಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಕ್ರೆಡಿಟ್ ಕಾರ್ಡ್ ಬಿಲ್ ಪೇಮೆಂಟ್:- ಕ್ರೆಡಿಟ್ ಕಾರ್ಡ್ ಮೂಲಕ ಕರೆಂಟ್ ಬಿಲ್, ವಾಟರ್ ಬಿಲ್, ಮನೆ ಬಿಲ್ ಹೀಗೆ ಅನೇಕ ಪಾವತಿಗಳನ್ನು ಮಾಡಲು ಅನುಕೂಲ ಆಗುವಂತೆ UPI ಮೂಲಕ ಹಣ ಪಾವತಿ ಮಾಡಲು ಅನುಕೂಲ ಆಗಲಿದೆ. ಇದು ಮುಂದಿನ ಬಿಲ್ ಗಳ ಮೊತ್ತ ಅಥವಾ ದಿನಾಂಕಗಳನ್ನು ಸ್ವಯಂ ಪ್ರೇರಿತವಾಗಿ ನಮಗೆ ತಿಳಿಸುತ್ತದೆ.

ಪಾವತಿಸುವ ಮೊತ್ತದ ಮಿತಿ ಹೆಚ್ಚಳ:- ಹೊಸ ನಿಯಮದ ಪ್ರಕಾರ ನಾವು ಕ್ರೆಡಿಟ್ ಮಿತಿಯನ್ನು ಹೆಚ್ಚಿಸಿಕೊಳ್ಳುವ ಮಾರ್ಗ ನೀಡಲಾಗಿದೆ. ಹೆಚ್ಚುವರಿ ಮಿತಿಯನ್ನು ಮದುವೆ ಮನೆಯಲ್ಲಿ ಏನಾದರೂ ಪೂಜೆ ಅಥವಾ ಶಾಪಿಂಗ್ ಅಥವಾ ಏನಾದರೂ ಪ್ರಾಪರ್ಟಿ ತೆಗೆದುಕೊಳ್ಳುವ ಸಮಯದಲ್ಲಿ ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. ಆದರೆ ಈ ನಿಯಮಗಳು ನಿರ್ಧಿಷ್ಟ ಅವಧಿಗೆ ಮಾತ್ರ ಸೀಮಿತವಾಗಿ ಇರುತ್ತದೆ.

ಕ್ರೆಡಿಟ್ ಕಾರ್ಡ್ upi ಬಳಕೆಯಿಂದ ಹಲವಾರು ಕಾರ್ಡ್ ಗಳನ್ನ ಬಳಸಿ ಪೇಮೆಂಟ್ ಮಾಡಬೇಕು ಎನ್ನುವ ಗೊಂದಲ ಇಲ್ಲ ಹಾಗೆಯೇ ನಿಮ್ಮ ಬಳಿ ಇರುವ ಯಾವುದೇ upi ಅಪ್ಲಿಕೇಶನ್ ಬಳಸಿ ನೀವು ಕ್ರೆಡಿಟ್ ಕಾರ್ಡ್ ಇಂದ ಹಣವನ್ನು ಪಾವತಿ ಮಾಡಲು ಸಾಧ್ಯವಿದೆ.

ಇದನ್ನೂ ಓದಿ: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಶೈಕ್ಷಣಿಕ ವಿದ್ಯಾರ್ಹತೆ ತಿದ್ದುಪಡಿಯ ಅಧಿಸೂಚನೆ ಹೊರಡಿಸಿದೆ.