ಸ್ಕೂಟಿ ಪ್ರಿಯರಿಗೆ ಇದು ನಿಜಕ್ಕೂ ಖುಷಿ ನೀಡುವ ಸುದ್ದಿಯಾಗಿದೆ. ಯಮಹಾ ಕಂಪನಿಯವರು ಹೊಸ ಸ್ಕೂಟಿ ಯನ್ನು ಮಾರುಕಟ್ಟೆಗೆ ಸದ್ಯದಲ್ಲಿಯೇ ಬರಲಿದೆ. ಇತ್ತೀಚಿನ ಭಾರತ್ ಮೊಬಿಲಿಟಿ ಶೋನಲ್ಲಿ ಈ ಹೊಸ ಸ್ಕೂಟರ್ ಅನಾವರಣ ಗೊಂಡಿದೆ. ಈ ಸ್ಕೋಟಿಯು ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ನೀವು ಹೊಸ ಸ್ಕೂಟಿ ಖರೀದಿಸಬೇಕು ಅಥವಾ ಸ್ಕೂಟಿ ಬದಲಾಯಿಸಬೇಕು ಎಂದು ಆಲೋಚಿಸುತ್ತಾ ಇದ್ದರೆ ಈಗಲೇ Yamaha Nmax 155 ನ ವಿಶೇಷತೆಗಳ ಬಗ್ಗೆ ತಿಳಿಯಿರಿ.
Nmax 155 ವಿಶೇಷತೆಗಳು :-
Nmax 155 ಸಾಮಾನ್ಯ ಸ್ಕೂಟರ್ಗಿಂತ ಭಿನ್ನವಾಗಿದೆ. ಇದರ ವಿನ್ಯಾಸ ಎಲ್ಲರ ಗಮನ ಸೆಳೆಯುವುದು ಖಚಿತ. ಇದು ನಾರ್ಮಲ್ ಸ್ಕೂಟಿ ವಿನ್ಯಾಸವನ್ನು ಹೊಂದಿಲ್ಲ. ದಪ್ಪ ಮತ್ತು ಆಕ್ರಮಣಕಾರಿ ವಿನ್ಯಾಸವನ್ನು ಹೊಂದಿದ್ದು ದೊಡ್ಡ ಮುಂಭಾಗದ ತಂತುಕೋಶ ಹಾಗೂ ಆರಾಮದಾಯವಾಗಿ ಕುಳಿತು ಸ್ಕೂಟಿ ಓಡಿಸಲು ಅನುಕೂಲವಾಗುವಂತ ಆಸನವನ್ನು ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಎಂಜಿನ್ ವಿಶೇಷತೆ :- Nmax 155 ಎಂಜಿನ್ ಶಕ್ತಿಯುತವಾದ 155cc ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಒಳಗೊಂಡಿದೆ. ಯಮಹಾ ಏರಾಕ್ಸ್ 155 ಇದೆ ಎಂಜಿನ್ ಬಳಸಲಾಗಿದೆ. 14.9 bhp ಪವರ್ ಮತ್ತು 13.5 Nm ಟಾರ್ಕ್ ಹೊಂದಿದೆ. ಇದು ನಗರದ ಹೈವೆಗಳಲ್ಲಿ ಮತ್ತು ಬೀದಿಗಳಲ್ಲಿ ಸುಗಮವಾಗಿ ಸಂಚಾರ ಮಾಡುವ ಸಾಮರ್ಥ್ಯ ಹೊಂದಿದೆ.
ಬೆಲೆ :- ಅಧಿಕೃತ ಬೆಲೆ ಇನ್ನೂ ಘೋಷಣೆಯಾಗಿಲ್ಲದಿದ್ದರೂ, 1.23 ಲಕ್ಷ ರೂಪಾಯಿ ಎಕ್ಸ್-ಶೋರೂಂ ನ ಬೆಲೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಸಾಮಾನ್ಯ ಸ್ಕೂಟರ್ ಗೆ ಹೋಲಿಸಿದರೆ ಕೆಲವು ಎಕ್ಸ್ಟ್ರಾ ಫೀಚರ್ ಗಳನ್ನು Nmax 155 ಹೊಂದಿದೆ. ಈ ಸ್ಕೂಟಿ ವಿಶೇಷತೆಗಳು ಎಂದರೆ ಪೂರ್ಣ-ಎಲ್ಇಡಿ ಲೈಟಿಂಗ್ ಮತ್ತು ಎಲ್ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ. ಬ್ಲೂ, ಗ್ರೇ, ಬಿಳಿ, ಕಪ್ಪು ಬಣ್ಣಗಳಲ್ಲಿ ಈ ಸ್ಕೂಟಿ ಲಭ್ಯವಿದೆ. ಎಲ್ಇಡಿ ಹೆಡ್ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ಒಳಗೊಂಡಿದೆ. CVT ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅನ್ನು ಜೋಡಿಸಲಾಗಿದೆ. 23 ಲೀಟರ್ ಸ್ಟೋರೇಜ್ ಬಾಕ್ಸ್ ಇದೆ. ಏರ್ ಲೀಕ್‌ಗಳನ್ನು ಕಡಿಮೆ ಮಾಡಲು ಎರೋಡೈನಾಮಿಕ್ ವಿನ್ಯಾಸ ಇದೆ. ಉತ್ತಮ ಟ್ರಾಕ್ಷನ್‌ಗಾಗಿ ಅಗಲವಾದ ಟೈರ್‌ಗಳು ಇವೆ. LCD ಇನ್ಸ್ಟ್ರುಮೆಂಟ್ ಕ್ಲಸ್ಟರ್, 12V ಪವರ್ ಸಾಕೆಟ್ ಒಳಗೊಂಡಿದೆ. ಸ್ಟೈಲಿಶ್ ಮಿಶ್ರಲೋಹದ ಚಕ್ರಗಳನ್ನು ಹೊಂದಿದೆ.
ನಿಮ್ಮ ಲಿಸ್ಟ್ ನಲ್ಲಿ Nmax 155 ಇದ್ದರೆ ನೀವು ಅಧಿಕೃತ ವೆಬ್ಸೈಟ್ ಅಥವಾ ಯಮಹಾ ಕಂಪನಿಯ ಶಾಖೆಗೆ ಭೇಟಿನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
ಇದನ್ನೂ ಓದಿ: ಪ್ರಧಾನ ಮಂತ್ರಿ ಆವಾಸ್ ಯೋಜನಯಡಿ ನಿರ್ಮಾಣವಾದ 36,789 ಮನೆಗಳನ್ನು ಹಂಚಿಕೆ ಮಾಡಿದ ಸಿ.ಎಂ
ಯಮಹಾ ಕಂಪನಿಯ ಬಗ್ಗೆ ಒಂದಿಷ್ಟು ಮಾಹಿತಿ :-
ಯಮಹಾ ಮೋಟಾರ್ ಕಂಪನಿಯು ಜಪಾನ್ ಮೂಲದ ಮೋಟಾರು ಚಾಲಿತ ಯಂತ್ರಗಳ ತಯಾರಿಕೆಗೆ ಪ್ರಸಿದ್ಧಿಯಾದ ಸಂಸ್ಥೆಯಾಗಿದೆ. ಈ ಕಂಪನಿಯು ದ್ವಿಚಕ್ರ ವಾಹನಗಳಾದ ಬೈಕ್, ಮೋಟಾರ್ ಸೈಕಲ್, ಬ್ಯಾಟರಿ ಚಾಲಿತ ಬೈಕ್ ಮತ್ತು ಸೈಕಲ್ ತಯಾರಿಕೆಯ ಜೊತೆಗೆ ಹಾಯಿದೋಣಿಗಳು, ಗಾಲ್ಫ್ ಬಂಡಿಗಳು, ನೀರೆತ್ತುವ ಪಂಪುಗಳು, ಎಲ್ಲಾ ತರದ ಭೂಪ್ರದೇಶಗಳಲ್ಲಿ ಸಂಚರಿಸಬಲ್ಲ ನಾಲ್ಕು ಚಕ್ರದ ವಾಹನಗಳನ್ನು ತಯಾರಿಸುತ್ತದೆ. ಇದು ಒಂದು ಬಹುರಾಷ್ಟ್ರೀಯ ಕಂಪನಿ ಆಗಿದ್ದು ವಿಶ್ವದ ಹಲವು ದೇಶದಲ್ಲಿ ಶಾಖೆಗಳನ್ನು ಹೊಂದಿದೆ. 1 ಮೇ 1955 ರಲ್ಲೀ ಈ ಸಂಸ್ಥೆಯು ಸ್ಥಾಪನೆ ಆಯಿತು. ಭಾರತಕ್ಕೆ ಯಮಹಾ ಮೋಟಾರ್ ಕಂಪನಿ 1985ರಲ್ಲಿ ಬಂದಿತು. ಭಾರತದಲ್ಲಿ ಹೆಚ್ಚು ಬೇಡಿಕೆ ಇರುವ ಬೈಕ್ ಗಳಲ್ಲಿ ಯಮಹಾ ಸಹ ಒಂದಾಗಿದೆ. ಯಮಹಾ ಕಂಪನಿಗೆ ಹಲವು ಪ್ರಶಸ್ತಿಗಳು ಸಂದಿವೆ.
ಇದನ್ನೂ ಓದಿ: ಖರೀದಿಸಿದರೆ ಇದನ್ನೇ ಅನ್ನುವಷ್ಟು ಕುತೂಹಲಕಾರಿಯಾಗಿದೆ Polytron Fox-S, ಇದರ ಮೈಲೇಜ್ ಎಂಥ ಅದ್ಭುತ!