NHAI ಫಾಸ್ಟ್ಯಾಗ್ ಇಶ್ಯೂ ಮಾಡುವ ಬ್ಯಾಂಕ್ ಗಳ ಲಿಸ್ಟ್ ಬಿಡುಗಡೆ ಮಾಡಿದೆ.

NHAI Fastag Issuer List

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಫಾಸ್ಟ್‌ಟ್ಯಾಗ್ ನೀಡುವ ಬ್ಯಾಂಕ್‌ಗಳ ಪಟ್ಟಿಯನ್ನು ಪರಿಷ್ಕರಿಸಿ ಬ್ಯಾಂಕ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. NHAI ಬಿಡುಗಡೆ ಮಾಡಿದ ನೂತನ ಪಟ್ಟಿ ಮತ್ತು ಫಾಸ್ಟ್ ಟ್ಯಾಗ್ ನ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಫಾಸ್ಟ್ ಟ್ಯಾಗ್ ಎಂದರೇನು?: ಫಾಸ್ಟ್ಯಾಗ್ ಎಂಬುದು ಕೇಂದ್ರ ಸರ್ಕಾರವು ಟೋಲ್ ಪ್ಲಾಜಾಗಳಲ್ಲಿ ಉಂಟಾಗುವ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಅಳವಡಿಸಿದ ನೂತನ ವ್ಯವಸ್ಥೆ ಆಗಿದ್ದು, ಈ ವ್ಯವಸ್ಥೆಯಲ್ಲಿ ವಾಹನ ಸವಾರರು ಟೋಲ್ ಗೇಟ್ ಬಳಿ ಟೋಲ್ ಶುಲ್ಕವನ್ನು ನಗದು ರಹಿತವಾಗಿ ಮತ್ತು ತ್ವರಿತವಾಗಿ ಪಾವತಿಸಲು ಸಾಧ್ಯವಾಗುತ್ತದೆ. ಫಾಸ್ಟ್ ಟ್ಯಾಗ್ ಒಂದು ಪ್ರಿಪೇಯ್ಡ್ ಟ್ಯಾಗ್ ವ್ಯವಸ್ಥೆಯ ಆಗಿದೆ. ವಾಹನದ ಮುಂಭಾಗದ ಗಾಜಿಗೆ ಟ್ಯಾಗ್ ಅಂಟಿಸಲಾಗುತ್ತದೆ. ಟೋಲ್ ಗೇಟ್ ದಾಟುವಾಗ, ಟ್ಯಾಗ್ RFID ರೀಡರ್ ಅನ್ನು ಸ್ವಯಂಚಾಲಿತವಾಗಿ ಗುರುತಿಸುತ್ತದೆ ಹಾಗೂ ನಿಮ್ಮ ಬ್ಯಾಂಕ್ ಖಾತೆಯಿಂದ ಟೋಲ್ ಶುಲ್ಕವನ್ನು ಪಾವತಿ ಆಗುತ್ತದೆ. ಆದರೆ ನಿಮ್ಮ ಖಾತೆಯಲ್ಲಿ ಮುಂಗಡವಾಗಿ ನೀವು ಹಣವನ್ನು ಹೊಂದಿರಬೇಕು.

NHAI ಬಿಡುಗಡೆ ಮಾಡಿದ ಬ್ಯಾಂಕ್ ವಿವರ :-

ಈಗಾಗಲೇ RBI Paytm ಮೇಲೆ ನಿಷೇಧ ವಿಧಿಸಲಾಗಿದೆ. ಈಗ NHAI Paytm bank ನೀಡುವ ಫಾಸ್ಟ್ ಟ್ಯಾಗ್ ಅನ್ನು ಲಿಸ್ಟ್ ನಿಂದ ಹೊರಗೆ ಇಟ್ಟಿದೆ. ದೇಶದ ರಾಷ್ಟ್ರೀಯ ಮತ್ತು ಲೋಕಲ್ ಬ್ಯಾಂಕ್ ಗಳ ಹೆಸರನ್ನು ಬಿಡುಗಡೆ ಮಾಡಿದೆ. ಹಾಗಾದರೆ ಯಾವ ಯಾವ ಬ್ಯಾಂಕ್ ಗಳು ಇವೆ ಎಂಬುದನ್ನು ನೋಡೋಣ. ಒಟ್ಟು 39 ಬ್ಯಾಂಕ್ ಗಳ ಹೆಸರನ್ನು NHAI ಘೋಷಿಸಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ರಾಷ್ಟ್ರೀಯ ಬ್ಯಾಂಕ್ ಗಳು:- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕ್ ಲಿಮಿಟೆಡ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯಸ್ ಬ್ಯಾಂಕ್, ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬಂಧನ್ ಬ್ಯಾಂಕ್, ಕೆನರಾ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್.

ಲೋಕಲ್ ಬ್ಯಾಂಕ್ :- ಲೋಕಲ್ ಬ್ಯಾಂಕ್ ಎಂದರೆ ಕೆಲವು ಪ್ರದೇಶಗಳಲ್ಲಿ ಮಾತ್ರ ಈ ಬ್ಯಾಂಕ್ ಗಳ ಶಾಖೆಯು ಇದೆ. ಲೋಕಲ್ ಬ್ಯಾಂಕ್ ಗಳ ಹೆಸರುಗಳು ಹೀಗಿವೆ :- ಇಂಡಿಯನ್ ಬ್ಯಾಂಕ್, ಫಿನೋ ಪೇಮೆಂಟ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಲಿವ್‌ಕ್ವಿಕ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್, ನಾಗ್ಪುರ್ ನಾಗರಿಕ್ ಸಹಕಾರಿ ಬ್ಯಾಂಕ್ ಲಿಮಿಟೆಡ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ಮಹಾರಾಷ್ಟ್ರ ಬ್ಯಾಂಕ್, ಸಿಟಿ ಯೂನಿಯನ್ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಕಾಸ್ಮಾಸ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್, ಡೊಂಬಿವಲಿ ನಗರಿ ಸಹಕಾರಿ ಬ್ಯಾಂಕ್,ಕರೂರ್ ವೈಶ್ಯ ಬ್ಯಾಂಕ್, ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಫೆಡರಲ್ ಬ್ಯಾಂಕ್, ತ್ರಿಶೂರ್ ಜಿಲ್ಲಾ ಸಹಕಾರಿ ಬ್ಯಾಂಕ್ ಮತ್ತು ಯುಕೋ ಬ್ಯಾಂಕ್, ಜೆ & ಕೆ ಬ್ಯಾಂಕ್, ಸಾರಸ್ವತ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಜಲಗಾಂವ್ ಪೀಪಲ್ಸ್ ಕೋ-ಆಪ್ ಬ್ಯಾಂಕ್.

ಮಾರ್ಚ್ 15 ರ ಒಳಗೆ ಪೇಟಿಎಂ ಫಾಸ್ಟ್ಯಾಗ್ ಬಳಸಲು ಗ್ರಾಹಕರಿಗೆ ಅವಕಾಶ :- ಮಾರ್ಚ್ 15ರ ಒಳಗೆ ಪೇಟಿಎಂ ಫಾಸ್ಟ್ಯಾಗ್ ನಲ್ಲಿ ಗ್ರಾಹಕರ ಹಣ ಇದ್ದರೆ ಟೋಲ್ ಗೇಟ್ ಗಳಲ್ಲಿ ಬಳಸಬಹುದು. ಅದರ ನಂತರ ಗ್ರಾಹಕರು ಯಾವುದೇ ಪೇಟಿಎಂ ಫಾಸ್ಟ್ಯಾಗ್ ಬಳಸಲು ಸಾಧ್ಯವಿಲ್ಲ ಎಂದು ಇಲಾಖೆಯು ಸ್ಪಷ್ಟವಾಗಿ ತಿಳಿಸಿದೆ. ಹೊಸದಾಗಿ ಮೇಲಿನ ಲಿಸ್ಟ್ ನಲ್ಲಿ ಇರುವ ಯಾವುದೇ ಬ್ಯಾಂಕ್ ನಿಂದ ಫಾಸ್ಟ್ ಟ್ಯಾಗ್ ಪಡೆದು ಪಾವತಿ ಮಾಡಬಹುದು ಎಂದು RBI ತಿಳಿಸಿದೆ.

ಇದನ್ನೂ ಓದಿ: ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಸಿ ರಿಮೋಟ್ ಕಂಟ್ರೋಲ್ ಸೀಲಿಂಗ್ ಫ್ಯಾನ್ ಗಳು, ಬೇಸಿಗೆಯನ್ನು ತಂಪಾಗಿಸಿ..