Nikhil kumaraswamy: ವಿಧಾನಸಭಾ ಚುನಾವಣೆಯಲ್ಲಿ ಸೋಲು! ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?

Nikhil kumaraswamy: ನಿನ್ನೆ ಕರ್ನಾಟಕ ವಿಧಾನಸಭ ಕ್ಷೇತ್ರಗಳ ಫಲಿತಾಂಶ ಹೊರಬಿದಿದ್ದು, ಅದರಲ್ಲೂ ರಾಮನಗರ ವಿಧಾನಸಭೆ ಕ್ಷೇತ್ರದ ಫಲಿತಾಂಶ ನಿಜಕ್ಕೂ ಕೂಡ ಜೆಡಿಎಸ್ ಪಾಳೇಯಕ್ಕೆ ಅರಗಿಸಿಕೊಳ್ಳಲು ಅಸಾಧ್ಯವಾಗಬಿಟ್ಟಿದೆ, ಹೌದು ಜೆಡಿಎಸ್ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲನುಭವಿಸಿದ್ದಾರೆ. ಕಾಂಗ್ರೆಸ್​​ ಅಭ್ಯರ್ಥಿ ಇಕ್ಬಾಲ್ ಹುಸೇನ್, ನಿಖಿಲ್ ವಿರುದ್ಧ ಭರ್ಜರಿ ಅಂತರದಲ್ಲಿ ಗೆದ್ದು ಬೀಗಿದ್ದಾರೆ. ಹೌದು ತವರು ಕ್ಷೇತ್ರದಲ್ಲೇ ಅದರಲ್ಲೂ ತಂದೆಯ ಭದ್ರ ಕೋಟೆಯಲ್ಲೇ ನಿಖಿಲ್ ಸೋತು ಸುಣ್ಣವಾಗಿರೋದು ನಿಜಕ್ಕೂ ಕೂಡ ಅರಗಿಸಿಕೊಳ್ಳಲಾಗಾದ ಸತ್ಯವಾಗಿ ಪರಿಣಾಮಿಸಿದ್ದು, ಸೋತ ನಂತರ ರಾಮನಗರ ಜಿಲ್ಲೆಯ ಜನತೆಯ ಕುರಿತು ನಿಖಿಲ್ ಇದೀಗ ಭಾವುಕ ಸಂದೇಶವೊಂದನ್ನ ಹಂಚಿಕೊಂಡಿದ್ದು, ಸೋಲನ್ನು ಕೂಡ ಸಂಭ್ರಮಿಸಿದ್ದಾರೆ. ಹಾಗಾದ್ರೆ ನಿಖಿಲ್ ಹಂಚಿಕೊಂಡಿರುವ ಭಾವುಕ ಸಂದೇಶದಲ್ಲಿ ಏನಿದೆ ರಾಮನಗರ ಜನತೆಗೆ ನಿಖಿಲ್ ಹೇಳಿರೋದಾದ್ರೂ ಏನು ಎಲ್ಲವನ್ನು ನೋಡೋಣ ಬನ್ನಿ.

WhatsApp Group Join Now
Telegram Group Join Now

ಜೆ.ಡಿ.ಎಸ್ ಭದ್ರ ಕೋಟೆಯಲ್ಲೇ ನಿಖಿಲ್ ಸೋಲು

ಹೌದು ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಮಗನಿಗಾಗಿ ತಮ್ಮ ವಿಧಾನಸಭಾ ಕ್ಷೇತ್ರವನ್ನು ತ್ಯಾಗ ಮಾಡಿದ್ದರು.ಅಂದರೆ ತಮ್ಮ ಕ್ಷೇತ್ರವನ್ನ ಮಗನಿಗಾಗಿ ಬಿಟ್ಟಿಕೊಟ್ಟು ತಾವು ಚುನಾವನೆಯಿಂದ ದೂರ ಉಳಿದಿದ್ರು ಆದ್ರೆ ಇದೀಗ ಮಗನಿಗಾಗಿ ತಾಯಿ ಮಾಡಿದ ತ್ಯಾಗ ಫಲಿಸಿಲ್ಲ.ಹೌದು ರಾಮನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ದಳಪತಿಯ ಕುಡಿ ನಿಖಿಲ್ ಕುಮಾರಸ್ವಾಮಿ ಸೋತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಗೆಲುವು ದಾಖಲಿಸಿದ್ದಾರೆ. ಬಿಜೆಪಿಯಿಂದ ಗೌತಮ್ ಗೌಡ ಸ್ಪರ್ಧಿಸಿದ್ದರು ಅವ್ರು ಕೂಡ ಸೋತು ಸುಣ್ಣವಾಗಿದ್ದಾರೆ. ಇನ್ನು ಈ ಹಿಂದೆ ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿದಿದ್ದ ನಿಖಿಲ್ ಕುಮಾರಸ್ವಾಮಿ(Nikhil kumaraswamy) ಸೋತಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸುಮಲತಾ ಅಂಬರೀಶ್ ವಿರುದ್ಧ ಸೋಲನ್ನ ಕಂಡಿದ್ರು. ಹೌದು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಗೆದ್ದು ಸಂಸದೆಯಾಗಿ ಆಯ್ಕೆಯಾಗಿದ್ದರು.

2018ರಲ್ಲಿ ಹೆಚ್ ಡಿ ಕುಮಾರಸ್ವಾಮಿ ಚನ್ನಪಟ್ಟಣ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಎರಡರಲ್ಲೂ ಗೆದ್ದಿದ್ದರು. ಆದರೆ ಈ ಬಾರಿ ಮಗನಿಗೆ ಸ್ಥಾನ ಕಲ್ಪಿಸಲು ಹೋಗಿ ಮಗನಿಗೆ ಸ್ಥಾನವೇ ಇಲ್ಲದಂತಾಗಿ ಮಾಡಿದ್ದಾರೆ. ಬಹಳ ಮತಗಳ ಅಂತರದಿಂದ ನಿಖಿಲ್ ಸೋಲನ್ನ ಕಾಣುವಂತಾಗಿದೆ. ನಿಖಿಲ್‌ಗೆ ತೀವ್ರ ಸ್ಪರ್ಧೆ ಒಡ್ಡಿದ್ದ ಕಾಂಗ್ರೆಸ್‌ನ ಇಕ್ಬಾಲ್‌ ಹುಸೇನ್‌ ಗೆಲುವು ಕಂಡಿದ್ದಾರೆ. ಈ ಮೂಲಕ ತಮ್ಮ ತಂದೆಯ ಭದ್ರಕೋಟೆಯಲ್ಲಿಯೇ ನಿಖಿಲ್‌ ಕುಮಾರಸ್ವಾಮಿ ಸೋಲು ಅನುಭವಿಸಿದ್ದಾರೆ. ಕಾಂಗ್ರೆಸ್‌ನ ಎಚ್‌.ಎ ಇಕ್ಬಾಲ್ ಹುಸೇನ್, ನಿಖಿಲ್ ವಿರುದ್ಧ,10,715 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ‌. ಇಕ್ಬಾಲ್ ಹುಸೇನ್ 87,690 ಮತಗಳನ್ನು ಪಡೆದುಕೊಂಡರೆ, ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ 76,975 ಮತಗಳನ್ನು ಪಡೆದುಕೊಂಡು ಸೋಲನುಭವಿಸಿದ್ದಾರೆ. ಈ ಮೂಲಕ ತಮ್ಮ ತಾಯಿ ಅನಿತಾ ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ಕ್ಷೇತ್ರ, ಜೆಡಿಎಸ್‌ನ ಭದ್ರಕೋಟೆಯಲ್ಲೇ ನಿಖಿಲ್‌ ಸೋಲು ಕಂಡಿದ್ದಾರೆ.

ಇದನ್ನೂ ಓದಿ: KR ಪೇಟೆ ಚಂದನ್ ಗೌಡಗೆ ಸಿಕ್ಕ ಓಟು ಎಷ್ಟು ಗೊತ್ತಾ? ಕೆ. ಆರ್ ಪೇಟೆ ಮತದಾರರು ಚಂದನ್ ಕೈ ಹಿಡಿಯಲಿಲ್ವಾ?

ಸೋಲು ನನ್ನನ್ನ ನಿಮ್ಮ ಜೊತೆಗೆ ಇರುವಂತೆ ಮಾಡಿದೆ

ರಾಮನಗರ ಮೊದಲಿನಿಂದಲೂ ಜೆಡಿಎಸ್‌ನ, ಅದರಲ್ಲೂ ಎಚ್‌.ಡಿ. ಕುಮಾರಸ್ವಾಮಿ ಅವರ ಭದ್ರಕೋಟೆ. ಸತತವಾಗಿ ಇಲ್ಲಿ ಗೆಲುವು ಸಾಧಿಸುತ್ತಿದ್ದ ಅವರು ಹಿಂದಿನ ಉಪಚುನಾವಣೆಯಲ್ಲಿ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿಯನ್ನು ಕಣಕ್ಕಿಳಿಸಿದ್ದರು. ಕಳೆದ ಬಾರಿ ಪತ್ನಿಯನ್ನು ಗೆಲ್ಲಿಸಿಕೊಂಡಿದ್ದ ಎಚ್‌ಡಿ ಕುಮಾರಸ್ವಾಮಿ ಅವರು ಈ ಬಾರಿ ಪುತ್ರನನ್ನು ನಿಲ್ಲಿಸಿ ಗೆಲ್ಲಿಸಿಕೊಳ್ಳಲು ಹೊರಟಿದ್ದರು. ಆದರೆ ಇದರಲ್ಲಿ ವಿಫಲವಾಗಿದ್ದಾರೆ. ಇದೀಗ ತಮ್ಮ ಸೋಲಿನ ಕುರಿತಂತೆ ಮುಂದಿನ ನಡೆಯ ಕುರಿತಂತೆ ನಿಖಿಲ್ ಕುಮಾರಸ್ವಾಮಿ(Nikhil kumaraswamy) ಭಾವುಕ ಸಂದೇಶ ಒಂದನ್ನ ರವಾನಿಸಿದ್ದಾರೆ. ಅದೇನು ಅಂತ ನೋಡೋದಾದ್ರೆ, ನನ್ನನ್ನು ಅತ್ಯಂತ ಪ್ರೀತಿಯಿಂದ ಬೆಂಬಲಿಸಿ ಆಶೀರ್ವದಿಸಿದ ರಾಮನಗರ ವಿಧಾನಸಭೆ ಕ್ಷೇತ್ರದ ಮಹಾಜನತೆಗೆ ನನ್ನ ಶಿರಸಾಷ್ಟಾಂಗ ನಮನಗಳು.

ಈ ಒಂದು ಸೋಲು ನಿಮ್ಮ ಸೇವೆ ಮಾಡಬೇಕು ಎನ್ನುವ ನನ್ನ ಅದಮ್ಯ ಸಂಕಲ್ಪಕ್ಕೆ ತಡೆ ಒಡ್ಡಲಾರದು. ನಾನೆಂದೂ ನಿಮ್ಮ ಜತೆಯಲ್ಲೇ ಇರುತ್ತೇನೆ, ನಿಮಗಾಗಿ ಜೀವಿಸುತ್ತೇನೆ.

ಸೋಲನ್ನು ಸಮಚಿತ್ತದಿಂದ ಸ್ವಿಕರಿಸಿ ಮುನ್ನಡೆಯುತ್ತೇನೆ. ಅದು ನಾನು ನನ್ನ ಪೂಜ್ಯ ತಾತನವರಾದ ಶ್ರೀ ಹೆಚ್.ಡಿ.ದೇವೇಗೌಡ ಸಾಹೇಬರಿಂದ, ತಂದೆ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರಿಂದ ಕಲಿತ ಪಾಠ. ಎಡವಿದ್ದೇನೆ, ಮತ್ತೆ ಎದ್ದು ಓಡುತ್ತೇನೆ. ಬಿದ್ದ ಮಗುವನ್ನು ಮೇಲೆತ್ತುವ ನಿಮ್ಮ ಪ್ರೀತಿ, ವಾತ್ಸಲ್ಯವನ್ನು ನಾನು ಬಲ್ಲೆ .

ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಜಾತ್ಯತೀತ ಜನತಾದಳವನ್ನು ಹರಸಿದ ಸಾರ್ವಜನಿಕ ಬಂಧುಗಳನ್ನು ಇಲ್ಲಿ ಸ್ಮರಿಸುತ್ತೇನೆ.

ಸೋಲಿನಿಂದ ಕಂಗೆಟ್ಟು ಜನರಿಂದ ದೂರವಾಗುವ ಜಾಯಮಾನ ನಮ್ಮದಲ್ಲ. ಈ ಪರಾಜಯದಿಂದ ಪಾಠ ಕಲಿಯುತ್ತೇವೆ, ಪುನಾ ಪುಟಿದೆದ್ದು ಬರುತ್ತೇವೆ.

ಪ್ರತಿಯೊಬ್ಬರಿಗೂ ಪ್ರಣಾಮಗಳು..

ಸಾಮಾಜಿಕ ಜಾಲತಾಣದಲ್ಲಿ ಇದೀಗ ತಮ್ಮ ಸೋಲಿನ ಸತ್ಯವನ್ನ ಅರಗಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವ ನಿಖಿಲ್ ಕುಮಾರಸ್ವಾಮಿ ಜನರನ್ನ ಭಾವುಕಾರಾಗಿ ತಲುಪುವ ಸಲುವಾಗಿ ಗೆಲ್ಲುತ್ತಾರ ಅಂತ ಕಾದು ನೋಡಬೇಕು.

ಇದನ್ನೂ ಓದಿ: ಯಾರಾಗ್ತಾರೆ ಕರ್ನಾಟಕದ ಮುಂದಿನ ಸಿಎಂ? ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಟಫ್ಫ್ ಫೈಟ್!

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram