No Alcohol: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಮಧ್ಯೆ ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗದಿಂದ ಮದ್ಯಪ್ರಿಯರಿಗೆ ಒಂದು ಬೇಸರದ ಸುದ್ದಿ ಬಂದಿದೆ. ಮುಂದಿನ ವಾರ ಬರೋಬ್ಬರಿ ನಾಲ್ಕು ದಿನಗಳು ಬಾರ್, ಹೋಲ್‌ಸೇಲ್ ಮಾರ್ಟ್ ಸೇರಿ ಮದ್ಯ ಮಾರಾಟ ಮಳಿಗೆಗಳು ಸಂಪೂರ್ಣ ಬಂದ್ ಆಗಲಿವೆ. ಹೌದು, ಚುನಾವಣೆ ಮತ್ತು ಮತ ಎಣಿಕೆ ಹಿನ್ನೆಲೆಯಲ್ಲಿ ಮೇ 8, 9, 10 ಮತ್ತು 13 ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್ ಆಗಲಿದೆ. ಈ ಕುರಿತು ರಾಜ್ಯ ಸರ್ಕಾರಕ್ಕೆ ಚುನಾವಣಾ ಆಯೋಗವು ಪತ್ರ ಬರೆದಿದ್ದು, ಅದರಂತೆ ರಾಜ್ಯ ಸರ್ಕಾರ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅದರಂತೆ ಎಲ್ಲಾ ಜಿಲ್ಲಾಧಿಕಾರಿಗಳು ಆಯಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮದ್ಯಮಾರಾಟ ಬಂದ್ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ.
ವಿಧಾನಸಭ ಚುನಾವಣೆ ಹಿನ್ನಲೆ ಈಗಾಗಲೆ ನೀತಿಸಂಹಿತೆ ಜಾರಿಯಲ್ಲಿದ್ದು, ಚುನಾವಣೆ ಆಯೋಗ ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಂಡಿದೆ. ಆದರೂ ಕೆಲವೊಂದು ಸಲ ಅರಿವಿಲ್ಲದಂತೆ ಕೆಲವೊಂದು ತೊಂದರೆಗಳು ಆಗೋದುಂಟು. ಅದರಲಂತು ಮಧ್ಯಪ್ರಿಯರಿಗೆ ಎಣ್ಣೆ ಇದ್ದಾರೆ ಹಬ್ಬವಿದ್ದಂತೆ. ಕೆಲವೊಂದಿಷ್ಟು ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಮತದಾರರಿಗೆ ಮಧ್ಯಾದಾಮಿಷ ತೋರಿಸುವುದು ಸರ್ವೇ ಸಾಮಾನ್ಯ, ಆಗ ಕುಡಿದ ಅಮಲಿನಲ್ಲಿರುವ ಜನರು ಗಲಭೆ ಗದ್ದಲ ಮಾಡಿಕೊಂಡು ಸುಮ್ಮನೆ ತಲೆನೋವು ತಂದೊಡ್ದುತ್ತಾರೆ ಹೀಗಾಗಿ ಮತದಾನ ಸಂದರ್ಭದಲ್ಲಿ ಗಲಾಟೆಗಳು ಉಂಟಾಗುವ ಸಾಧ್ಯತೆಗಳಿದ್ದು, ಮುಂಜಾಗ್ರತಾ ಕ್ರಮವಾಗಿ ರಾಜ್ಯದಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಲಾಗುತ್ತದೆ. ಅಲ್ಲದೇ ಹೆಚ್ಚು ಜನ ಸೇರುವ ಹಬ್ಬ, ಮಹೋತ್ಸವ, ಮಹಾತ್ಮರ ಜನ್ಮ ದಿನಗಳಂದು ಮದ್ಯಮಾರಾಟ ಬಂದ್ ಮಾಡಲಾಗುತ್ತದೆ.
ಸೋಮವಾರದಿಂದಲೇ ಮಧ್ಯ ಬಂದ್, ಎಷ್ಟು ದಿನ ಎಣ್ಣೆ ಸಿಗಲ್ಲ?!
ಮತದಾನ ಮುಕ್ತಾಯಕ್ಕೆ ನಿಗದಿಪಡಿಸಿದ ದಿನಾಂಕದ 48 ಗಂಟೆಗಳ ಮುನ್ನ ಅವಧಿಯಲ್ಲಿ ಅಂದರೆ, ಮೇ 8ರ ಸೋಮವಾರ ಮಧ್ಯಾರಾತ್ರಿ 12ರಿಂದಲೇ ಮಧ್ಯ ನಿಷೇಧ ಮಾಡಲಾಗಿದೆ. ಇನ್ನುಳಿದಂತೆ 3ದಿನಗಳ ಕಾಲ ಬೆಳಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆವರೆಗೆ ಎಲ್ಲಾ ಕ್ಷೇತ್ರಗಳಲ್ಲಿ ಮದ್ಯ ಮಾರಾಟ ಮಳಿಗೆಗಳಲ್ಲಿ ಮದ್ಯ ಮಾರಾಟ ಮತ್ತು ಪೂರೈಕೆಯನ್ನು ನಿಷೇಧಿಸಲಾಗಿದೆ. ಒಂದು ವೇಳೆ ಎಲ್ಲಾದರೂ ಮರು ಮತದಾನ ನಡೆದರೆ ಅಲ್ಲಿಗೂ ಈ ಆದೇಶ ಅನ್ವಯವಾಗಲಿದೆ. ಅದೇ ರೀತಿ, ಮತ ಎಣಿಕೆ ದಿನವೂ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಮೇ 13 ರಂದು ಬೆಳಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆವರೆಗೆ ಮದ್ಯದ ಅಂಗಡಿಗಳು ಬಂದ್ ಆಗಲಿವೆ. ಈ ನಾಲ್ಕು ದಿನಗಳ ಅವಧಿಯಲ್ಲಿ ಮದ್ಯ ದಾಸ್ತಾನು ಮಾಡುವುದಕ್ಕೆ ಕಡಿವಾಣ ಹಾಕಬೇಕು. ಈ ಕುರಿತಂತೆ ಸಮಗ್ರ ನಿರ್ದೇಶನಗಳನ್ನು ನೀಡಬೇಕು ಎಂದು ಆಯೋಗವು ರಾಜ್ಯ ಸರಕಾರಕ್ಕೆ ತಾಕೀತು ಮಾಡಿದೆ. ಅದರಂತೆ ಈಗ ಜಿಲ್ಲಾಧಿಕಾರಿಗಳು ಅಯಾ ಜಿಲ್ಲೆಗಳಲ್ಲಿ ಪ್ರತ್ಯೇಕ ಆದೇಶಗಳನ್ನು ಹೊರಡಿಸಿದ್ದಾರೆ.
ಹೌದು ಚುನಾವಣೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಮದ್ಯ ಮಾರಾಟಕ್ಕೂ ಮುನ್ನ ಭಾರೀ ಪ್ರಮಾಣದ ಮದ್ಯವನ್ನು ಖರೀದಿ ಮಾಡಿ ಸಂಗ್ರಹಿಸಿ ಇಟ್ಟುಕೊಳ್ಳುವವರ ಮೇಲೆಯೂ ಪೊಲೀಸರು ಕಣ್ಣಿಟ್ಟಿದ್ದಾರೆ. ಅಂತಹ ಪ್ರಕರಣಗಳು ಪೋಲೀಸರ ಗಮನಕ್ಕೆ ಬಂದಲ್ಲಿ ಪೋಲಿಸರು ಶಿಸ್ತು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ಹೀಗಾಗಿಯೇ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದಲ್ಲಿ ಮೂರು ದಿನ ಮದ್ಯ ಮಾರಾಟ ನಿಷೇಧವಾಗಲಿದೆ. ಇನ್ನು ಮೇ 10 ರಂದು ಮತದಾನ ನಡೆಯಲಿದ್ದು, ಮೇ 8ರ ಮಧ್ಯರಾತ್ರಿಯಿಂದ ಮೇ 10ರ ಮಧ್ಯರಾತ್ರಿಯವರೆಗೂ ಮದ್ಯ ಮಾರುವಂತಿಲ್ಲ. ಒಂದು ದಿನ ಮುಂಚಿತವಾಗಿಯೇ ರಾಜ್ಯದಲ್ಲಿ ಮದ್ಯ ಮಾರಾಟ ಬಂದ್ ಆಗಲಿದೆ. ಮೇ 13ರಂದು ಫಲಿತಾಂಶ ಹೊರಬೀಳುವ ಕಾರಣ ಮೇ 12ರ ಮಧ್ಯರಾತ್ರಿಯಿಂದ ಮೇ 13ರ ಮಧ್ಯರಾತ್ರಿಯವರೆಗೂ ಮದ್ಯ ಮಾರಾಟಕ್ಕೆ ಅವಕಾಶ ಇರುವುದಿಲ್ಲ. ಹೀಗಾಗಿ ಈ 4ದಿನವೂ ಕೂಡ ಎಣ್ಣೆ ಪ್ರಿಯರಿಗೆ ನಿರಾಶೆ ತಪ್ಪಿದ್ದಲ್ಲ.
ಇದನ್ನೂ ಓದಿ: ಪ್ರಶಾಂತ್ ಸಂಬರ್ಗಿ ಪೋಸ್ಟ್ ಗೆ ಶಿವಣ್ಣ ಖಡಕ್ ಎಚ್ಚರಿಕೆ.!
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram