ಹೆಬ್ಬುಲಿ ಹೇರ್ ಕಟ್ ಮಾಡಿಸಿದ್ರೆ ಶಾಲೆಗೆ ಮಕ್ಕಳು ನೋ ಎಂಟ್ರಿ! ಕಟ್ಟಿಂಗ್ ಶಾಪ್ ನವರಿಗೆ ಮುಖ್ಯೋಪಾಧ್ಯಾಯರಿಂದ ಪತ್ರ

ಸ್ಟಾರ್ ನಟ ನಟಿಯರನ್ನ ಅನುಸರಿಸುವುದು, ಅವರಂತೆ ತಾವು ಇರಬೇಕು ಅಂತ ಬಯಸಿ ಏನೋನೋ ಮಾಡಿ ಮತ್ತೊಂದೇನೋ ಆಗೋದು ಈಗೆಲ್ಲ ಕಾಮನ್ ಆಗ್ಬಿಟ್ಟಿದೆ ಬಿಡಿ. ಅದರಲ್ಲೂ ಸಿನಿಮಾ ನಟರು ಸಮಾಜದ ಮೇಲೆ ಭಾರೀ ಪ್ರಭಾವ ಬೀರುತ್ತಾರೆ ಅನ್ನೋದು ಬಹಳ ದೊಡ್ಡ ಮಟ್ಟದ ವಿಚಾರ. ಅದರಲ್ಲೂ ಅವರ ಥರ ಬಾಡಿ ಬಿಲ್ಡ್ ಮಾಡುವುದು, ಸಿಗರೇಟು ಸೇದುವುದು, ಡ್ರೆಸ್ ಮಾಡೋದು ಕಾರು ಬೈಕ್ ಹುಚ್ಚು, ಹೇರ್ ಸ್ಟೈಲ್ ಮಾಡಿಸುವುದು ನಡೆಯುತ್ತಲೇ ಇರುತ್ತದೆ. ಈಗ ಇದೇ ಮಾದರಿ ಹೇರ್ ಸ್ಟೈಲ್ ಒಂದು ಚರ್ಚೆಗೆ ಕಾರಣವಾಗಿದೆ. ಹೌದು ನಟ ಕಿಚ್ಚ ಸುದೀಪ್ ಅವ್ರು ಹೆಬ್ಬುಲಿ ಚಿತ್ರದಲ್ಲಿ ಮಾಡಿಕೊಂಡ ಹೇರ್ ಸ್ಟೈಲ್ ಈಗಲೂ ಕೂಡ ಸಾಕಷ್ಟು ಟ್ರೆಂಡ್ ನಲ್ಲಿದೆ ಅದ್ರಲ್ಲೂ ವಿದ್ಯಾರ್ಥಿಗಳನ್ನು ಸಿಕ್ಕಾಪಟ್ಟೆ ಅಟ್ರಾಕ್ಟ್ ಮಾಡ್ತಿದೆ.

WhatsApp Group Join Now
Telegram Group Join Now

ಇದು ಓಕೆ ಆದರೆ ಇದು ಶಿಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ದೇ ಈ ರೀತಿಯ ಹೇರ್ ಕಟ್ಟಿಂಗ್ ಮಾಡಬೇಡಿ ಅಂತ ಶಾಲಾ ಮುಖ್ಯೋಪಾಧ್ಯಯರು ಬರೆದಿರುವ ಪತ್ರವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು ಅಚ್ಚರಿಯಾದರೂ ಇದು ಸತ್ಯ. ಸರ್ಕಾರಿ ಪ್ರೌಢ ಶಾಲೆ ಕುಲಹಳ್ಳಿಯ ಮುಖ್ಯ ಶಿಕ್ಷಕರು, ಕುಲಹಳ್ಳಿಯ ಹೇರ್ ಕಟಿಂಗ್ ಅಂಗಡಿ ಮಾಲೀಕ ಚನ್ನಪ್ಪ ಸಿದರಾಮಪ್ಪ ನಾವಿ ಅನ್ನೋರಿಗೆ ಬರೆದಿರುವ ಪತ್ರ ಈಗ ಎಲ್ಲೆಡೆ ವೈರಲ್ ಆಗ್ತಿದೆ. ಶಾಲೆಯ ವಿದ್ಯಾರ್ಥಿಗಳಿಗೆ ಹೆಬ್ಬುಲಿ ಸ್ಟೈಲ್ ಕಟಿಂಗ್ ಮಾಡಬೇಡಿ ಅಂತಲೂ ಕೂಡ ಪತ್ರದಲ್ಲಿ ಮನವಿ ಮಾಡಲಾಗಿದೆ. ಹಾಗಾದ್ರೆ ಇದಕ್ಕೆ ಕಾರಣ ಏನು ಯಾಕೆ ಇತರ ಕಟ್ಟಿಂಗ್ ಮಾಡಸಬಾರದು ಗೊತ್ತಾ.

ಹೌದು ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾ 2017ರಲ್ಲಿ ಬಿಡುಗಡೆಯಾಗಿತ್ತು. ರವಿಚಂದ್ರನ್, ಅಮಲಾ ಪೌಲ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಬಿಡುಗಡೆಗೊಂಡಾಗ ಕಿಚ್ಚನ ಅಭಿಮಾನಿಗಳು ಇದೇ ಮಾದರಿಯಲ್ಲಿ ಹೇರ್‌ ಸ್ಟೈಲ್ ಮಾಡಿಕೊಂಡು ಸಿನಿಮಾ ಸ್ವಾಗತಿಸಿದ್ದರು. ಅಲ್ದೇ ಇದು ಮುಂದೆ ಟ್ರೆಂಡ್ ಆಗಿ ಹೊಯ್ತು. ಈಗಲೂ ಸಹ ಸಾಕಷ್ಟು ಜನರು ಈ ರೀತಿಯ ಹೇರ್ ಸ್ಟೈಲ್ ನ್ನ ಇಷ್ಟ ಪಡ್ತಾರೆ.

ಇದನ್ನೂ ಓದಿ: ಸೌಜನ್ಯ ಕೇಸ್ ನಲ್ಲಿ ಸಂತೋಷ್ ರಾವ್ ಪರ ನಿಂತ ಈ ವಕೀಲರು ಯಾರು ಗೊತ್ತಾ? ಒಂದು ರೂಪಾಯಿ ಹಣ ಪಡೆಯದೇ ಸಂತೋಷ್ ಪರ ನಿಂತಿದ್ದೇಕೆ?

ಬಾಗಲಕೋಟೆ ಶಾಲೆಯಲ್ಲಿ ಅಪರೂಪದಲ್ಲೇ ಅಪರೂಪದ ರೂಲ್ಸ್

ಇನ್ನು ಇದೀಗ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕುಲಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಶಿವಾಜಿ ನಾಯಕ ಬರೆದಿರುವ ಪತ್ರ ಸಖತ್ ವೈರಲ್ ಆಗ್ತಿದೆ. ಹೌದು ಈ ಪತ್ರ ಸರ್ಕಾರಿ ಪ್ರೌಢ ಶಾಲೆ ಕುಲಹಳ್ಳಿಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವ್ಯವಸ್ಥಿತ ಮತ್ತು ಶಿಸ್ತಿನಿಂದ ಕಾಣುವಂಥ ಹೇರ್ ಕಟಿಂಗ್ ಮಾಡುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ. ಇನ್ನು ಈ ಪತ್ರದಲ್ಲಿ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಶಾಲೆಯ ಗಂಡು ಮಕ್ಕಳು ಹೆಬ್ಬುಲಿಯಂತಹ ಇತರೆ ತರಹದ ಹೇರ್ ಕಟಿಂಗ್ ಅಂದ್ರೆ ತಲೆಯ ಒಂದು ಬದಿಗೆ ಕೂದಲು ಬಿಟ್ಟು ಇನ್ನೊಂದು ಬದಿಗೆ ಕೂದಲು ಉಳಿಸಿಕೊಳ್ಳುವುದು ಮಾಡಿಸಿಕೊಂಡು ಶಾಲೆಗೆ ಬರುತ್ತಿದ್ದು ಇದರಿಂದ ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಕೆಗೆ ಆಸಕ್ತಿ ತೋರಿಸದೆ ಹಾಗೂ ಚಟುವಟಿಕೆಗಳಿಗೆ ಹೆಚ್ಚು ಮಹತ್ವ, ನೀಡದೇ ಕಲಿಕೆಯಲ್ಲಿ ಹಿಂದೆ ಉಳಿಯುತ್ತಿದ್ದಾರೆ ಅಂತ ಪತ್ರದಲ್ಲಿ ಮುಖ್ಯ ಶಿಕ್ಷಕರು ವಿವರಣೆ ನೀಡಿದ್ದಾರೆ. ಅಲ್ದೇ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಒಪ್ಪುವಂತಹ ಹೇರ್ ಕಟಿಂಗ್ ಮಾಡಲು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಒಂದು ವೇಳೆ ವಿದ್ಯಾರ್ಥಿಗಳು ಹೆಬ್ಬುಲಿ ಹೇರ್ ಕಟಿಂಗ್ ಮಾಡಲು ನಿಮಗೆ ಒತ್ತಾಯಿಸಿದರೆ ಅಂತಹ ವಿದ್ಯಾರ್ಥಿಗಳ ಹೆಸರನ್ನು ನನಗೆ ಅಥವಾ ಅವರ ಪಾಲಕರ ಗಮನಕ್ಕೆ ತರಲು ತಮ್ಮಲ್ಲಿ ಕೋರುತ್ತೇನೆ ಅಂತ ಪತ್ರದಲ್ಲಿ ಬರೆದು ಮನವಿ ಮಾಡಿದ್ದಾರೆ.

ಸದ್ಯ ಶಾಲಾ ಮುಖ್ಯೋಪಾಧ್ಯಾಯರು ಬರೆದಿರುವ ಈ ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಪರೂಪಗಳಲ್ಲಿ ಅತೀ ಅಪರೂಪದ ಈ ನಿರ್ಧಾರವನ್ನ ತೆಗೆದುಕೊಂಡಿರುವ ವಿಚಾರ ಕೇಳಿ ಕೆಲವ್ರು ಒಳ್ಳೆ ನಿರ್ಧಾರ ಅಂದ್ರೆ ಮತ್ತು ಕೆಲವ್ರು ಇದೆಲ್ಲಾ ವರ್ಕ್ ಆಗಲ್ಲ ಅಂತಿದ್ದಾರೆ. ಒಟ್ಟಿನಲ್ಲಿ ಹೆಬ್ಬುಲಿ ಚಿತ್ರದಲ್ಲಿ ನಟ ಕಿಚ್ಚ ಸುದೀಪ್ ಒಂದು ಕಡೆ ಹೇರ್ ಕಟ್ ಮಾಡಿಸಿ, ಮತ್ತೊಂದು ಕಡೆ ಹಾಗೆಯೇ ಬಿಟ್ಟಿದ್ದರು ಈಗ ಆ ಸ್ಟೈಲ್ ಅಭಿಮಾನಿಗಳ ಗಮನ ಸೆಳೆದಿದ್ದು, ಸುದೀಪ್ ಅವ್ರ ಅಭಿಮಾನಿಗಳು ತಮ್ಮ ನಟನ ನೆಚ್ಚಿನ ಇದೇ ಮಾದರಿಯನ್ನ ಅನುಸರಿಸಿದ್ದರು. ಈಗ ಅದು ಶಾಲಾ ಕಾಲೇಜು ಮಕ್ಕಳ ಮೇಲೆ ಅವ್ರ ವಿದ್ಯಾಭ್ಯಾಸದ ಮೇಲೆ ಗಾಢ ಪ್ರಭಾವ ಬಿರ್ತಿದೆ.

ಓದಿನಲ್ಲಿ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸುತ್ತಿದ್ದು, ವಿದ್ಯಾರ್ಥಿಗಳು ಸ್ಟೈಲ್ ಅದು ಇದು ಅಂತ ಓದಿನಲ್ಲಿ ಹಿಂದೆ ಉಳಿದಿದ್ದಾರೆ ಹೀಗಾಗಿ ಇತರದ ಕೆಲಸಗಳಿಗೆ ಯಾರು ಆಸ್ಪದ ಕೊಡಬಾರದು. ಈ ರೀತಿಯ ನಿರ್ಧಾರಗಳು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಬಹಳಷ್ಟು ಹೊಡತೆ ಬೀಳುತ್ತೆ ಅಂತ ಹೇಳಲಾಗುತ್ತಿದ್ದೂ, ಇದೀಗ ಶಾಲೆಯ ವಿದ್ಯಾರ್ಥಿಗಳ ಈ ಹೇರ್ ಸ್ಟೈಲ್ ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಸದ್ಯ ಮುಖ್ಯ ಶಿಕ್ಷಕರು ಒಂದೊಳ್ಳೆ ನಿರ್ಧಾರವನ್ನ ತೆಗೆದುಕೊಂಡಿದ್ದು ಇದು ಯಾವ ರೀತಿ ಪರಿಣಾಮ ಬಿರುತ್ತದೆಯೋ ಮುಂದಿನ ದಿನಗಳಲ್ಲಿ ಕಾದು ನೋಡಬೇಕು.

ಇದನ್ನೂ ಓದಿ: ಮದುವೆ ಕುಟುಂಬ ನಂಗೆ ಸರಿ ಹೋಗ್ತಿಲ್ಲ; ಸಾಂಸಾರಿಕ ಜೀವನದ ಮೇಲೆ ಸಿತಾರಗೆ ಯಾಕಿಷ್ಟು ಜಿಗುಪ್ಸೆ!

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram