50 ಔಟ್‌ ಆಫ್‌ ಸಿಲೆಬಸ್‌ ಪ್ರಶ್ನೆ ಹೊರತು ಪಡಿಸಿ ಸಿಇಟಿ ಪರೀಕ್ಷೆಯ ಮೌಲ್ಯಮಾಪನ ನಡೆಯಲಿದೆ

No Re Exam For CET

2023-24 ನೇ ಸಾಲಿನಲ್ಲಿ ನಡೆದ ಸಿಇಟಿ ಪ್ರಶ್ನೆ ಪತ್ರಿಕೆಯಲ್ಲಿ 50 ಪ್ರಶ್ನೆಗಳು ಸಿಲೆಬಸ್ ಹೊರತಾಗಿ ಇದೆ ಎಂದು ತಜ್ಞರ ಸಮಿತಿ ವರದಿಯಲ್ಲಿ ತಿಳಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮತ್ತೆ ಮರು ಪರೀಕ್ಷೆ ಮಾಡುವ ಬದಲು ಆ ಪ್ರಶ್ನೆಗಳನ್ನು ಹೊರತು ಪಡಿಸಿ ಉಳಿದ ಪ್ರಶ್ನೆಗಳ ಉತ್ತರಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡು ಮೌಲ್ಯಮಾಪನ ಮಾಡುವುದಾಗಿ ಇಲಾಖೆ ತಿಳಿಸಿದೆ.

WhatsApp Group Join Now
Telegram Group Join Now

ಯಾವ್ಯಾವ ವಿಷಯಗಳಲ್ಲಿ ಸಿಲೆಬಸ್ ಹೊರತು ಪ್ರಶ್ನೆ ಕೇಳಲಾಗಿದೆ?: ಭೌತಶಾಸ್ತ್ರ ವಿಷಯದಲ್ಲಿ 9 ಪ್ರಶ್ನೆಗಳು ರಸಾಯನ ಶಾಸ್ತ್ರ ವಿಷಯದಲ್ಲಿ 15 ಪ್ರಶ್ನೆಗಳು ಗಣಿತ ವಿಷಯದಲ್ಲಿ 15 ಪ್ರಶ್ನೆಗಳು ಮತ್ತು ಜೀವಶಾಸ್ತ್ರ ವಿಷಯದಲ್ಲಿ 11 ಪ್ರಶ್ನೆಗಳು ಪಠ್ಯದ ಹೊರತಾಗಿ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ :- ಸಿಇಟಿ ಪರೀಕ್ಷೆಯಲ್ಲಿ ಪಠ್ಯೇತರ ಪ್ರಶ್ನೆ ಪತ್ರಿಕೆ ಇದ್ದರೂ ಸಹ ಇಲಾಖೆ ಅಥವಾ ಸರ್ಕಾರ ತಪ್ಪು ಮಾಡಿದ ವ್ಯಕ್ತಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. 240 ಅಂಕದ ಸಿಇಟಿ ಪ್ರಶ್ನೆ ಪತ್ರಿಕೆಯಲ್ಲಿ ಬರೋಬ್ಬರಿ 50 ಪ್ರಶ್ನೆ ಗಳನ್ನೂ ಸಿಲೆಬಸ್ ಹೊರತು ಸಿದ್ಧಪಡಿಸಿದ್ದ ಕೆಇಎಯ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾ ಮಾಡಬೇಕೆಂದು ವಿದ್ಯಾರ್ಥಿಗಳು, ಹಾಗೂ ಪೋಷಕರು ಹಾಗೂ ಉಪನ್ಯಾಸಕರ ಸಂಘಟನೆಗಳು ಆಗ್ರಹ ವ್ಯಕ್ತಪಡಿಸಿದ್ದರು. ಆದರೂ ಸಹ ಕ್ರಮ ಕೈಗೊಳ್ಳದೇ ಇರುವುದು ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂಬ ಅನುಮಾನ ವ್ಯಕ್ತವಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಮರು ಪರೀಕ್ಷೆ ಯಾಕೆ ಮಾಡುತ್ತಿಲ್ಲ?

ಮುಂಬರುವ ಮೇ ಮತ್ತು ಜೂನ್‌ ತಿಂಗಳಲ್ಲಿ ನೀಟ್‌, ಜೆಇಇ ಮೈನ್ಸ್‌, ಕಾಮೆಡ್‌-ಕೆ ಸೇ ಹಾಗು ಇನ್ನಿತರ ಪರೀಕ್ಷೆಗಳು ನಡೆಯಲಿದೆ ಹಾಗೂ ದ್ವಿತೀಯ ಪಿಯುಸಿ ‘ಪರೀಕ್ಷೆ 2’ ಪರೀಕ್ಷೆ ಇರುವ ಕಾರಣದಿಂದ ಸಿಇಟಿ ಮರು ಪರೀಕ್ಷೆ ಮಾಡುವುದಿಲ್ಲ. ಏಕೆಂದರೆ ಈ ಹಂತದಲ್ಲಿ ಮರು ಪರೀಕ್ಷೆ ನಡೆಸಿದರೆ ಅನಗತ್ಯವಾಗಿ ಮಕ್ಕಳಲ್ಲಿ ಆತಂಕ ಸೃಷ್ಟಿಯಾಗಲಿದೆ. ಹಾಗೂ ಜೊತೆಗೆ ತಮ್ಮ ತಪ್ಪಿಂದ ಆಗದ ಎಡವಟ್ಟಿಗೆ ವಿದ್ಯಾರ್ಥಿಗಳು ಹಿಂಸೆ ಪಡುವಂತೆ ಆಗಬಾರದು ಹಾಗೂ ಈಗ ಸಿಇಟಿ ಮರು ಪರೀಕ್ಷೆ ನಡೆಸುವುದರಿಂದ ವೃತ್ತಿಪರ ಕೋರ್ಸ್‌ಗಳ ಶೈಕ್ಷಣಿಕ ವೇಳಾಪಟ್ಟಿಯು ವಿಳಂಬವಾಗಲಿದೆ ಎಂದು ಶ್ರೀಕರ್ ಅವರು ಮಾಹಿತಿ ನೀಡಿದರು.

ಎರಡು ತಪ್ಪು ಪ್ರಶ್ನೆಗಳಿಗೆ ಅಂಕ ನೀಡಲಾಗುತ್ತದೆ. :- ಸಿಲೆಬಸ್ ಹೊರತು ಪಡಿಸಿ ಇರುವ ಪ್ರಶ್ನೆ ಯ ಕೈ ಬಿಡುವುದರ ಜೊತೆಗೆ ತಪ್ಪಾದ ಪ್ರಶ್ನೆಗಳಿಗೆ ಅಂಕಗಳನ್ನು ನೀಡಲಾಗುತ್ತದೆ. 

ಕೀ ಉತ್ತರದಲ್ಲಿ ಸ್ಪಷ್ಟತೆ ನೀಡಲಿದೆ. :- ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಉತ್ತರ ಪತ್ರಿಕೆಯ ಕೀ ಉತ್ತರಗಳನ್ನು ಬಿಡುಗಡೆ ಮಾಡುವಾಗ ಯಾವ ಯಾವ ಪ್ರಶ್ನೆ ಗಳು ಸಿಲೆಬಸ್ ಹೊರತಾಗಿ ಇದೆ ಹಾಗೂ ಯಾವ ಯಾವ ತಪ್ಪಾದ ಪ್ರಶ್ನೆ ಗೆ ಅಂಕ ನೀಡಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೆ ಈ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು :- ಈ ತರಹ ತಪ್ಪಿನ ಸಂಗತಿಗಳು ಮತ್ತೆ ನಡೆಯಬಾರದು ಎಂದು ಇಲಾಖೆಯು ಸಿಇಟಿ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಲು ಪ್ರಾಮಾಣಿಕತೆ ಕಾರ್ಯಾಚರಣೆ ವಿಧಾನವನ್ನು ರೂಪಿಸುವಂತೆ ಕೆಇಎ ಗೆ ನಿರ್ದೇಶನ ನೀಡಲಾಗಿದೆ.

ಮೂರು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಈ ಬಾರಿ ಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು ಎಂಬ ಬಗ್ಗೆ ಇಲಾಖೆ ಮಾಹಿತಿಯನ್ನು ನೀಡಿದೆ.

ಇದನ್ನೂ ಓದಿ: ಬ್ಯಾಂಕ್ ಎಫ್‌ಡಿಯನ್ನು ಮೀರಿಸುವ ಬಡ್ಡಿ ಮತ್ತು ತೆರಿಗೆ ಪ್ರಯೋಜನಗಳೊಂದಿಗೆ ಸುರಕ್ಷಿತ ಹೂಡಿಕೆ ಮಾಡಿ!

ಇದನ್ನೂ ಓದಿ: ಯುಪಿಎಸ್‌ಸಿಯಿಂದ 506 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಆಸಕ್ತರು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.