ನಿವೃತ್ತಿ ಜೀವನದಲ್ಲಿ ಆರ್ಥಿಕವಾಗಿ ಸ್ವತಂತ್ರ ಆಗಿ ಇರುವುದು ಬಹಳ ಮುಖ್ಯ ಆಗಿರುತ್ತದೆ. ನಿವೃತ್ತಿ ಜೀವನಕ್ಕೆ ವೃತ್ತಿ ಜೀವನದಲ್ಲಿ ಉಳಿಸಿದ ಹಣವೂ ಉಪಯೋಗಕ್ಕೆ ಬರುತ್ತದೆ. ಹನಿ ಹನಿ ಕೂಡಿ ಹಳ್ಳ ಆಗುವಂತೆ ಇಂದು ಕೂಡಿಟ್ಟ ಹಣವೂ ಮುಂದಿನ ಭವಿಷ್ಯದ ಜೀವನಕ್ಕೆ ಆಧಾರ ಆಗುತ್ತದೆ. NPS ನಲ್ಲಿ ಹಣ ಹೂಡಿಕೆ ಮಾಡಿ ನಿವೃತ್ತಿ ಜೀವನದಲ್ಲಿ ತಿಂಗಳಿಗೆ 40,000 ರೂಪಾಯಿಗಳನ್ನು ಪಡೆಯುವ ಯೋಜನೆಯ ಬಗ್ಗೆ ತಿಳಿಯೋಣ.
ತಿಂಗಳಿಗೆ 40,000 ರೂಪಾಯಿ ಪಡೆಯವ ಸ್ಕೀಮ್ ಬಗ್ಗೆ ಮಾಹಿತಿ ತಿಳಿಯೋಣ :- ಸಾಮಾನ್ಯವಾಗಿ 60 ನೇ ವಯಸ್ಸಿನಲ್ಲಿ ಯಾವುದೇ ವೃತ್ತಿಯಲ್ಲಿ ಇದ್ದರೂ ಸಹ ನಿವೃತ್ತಿ ದೊರೆಯುತ್ತದೆ. ನಿವೃತ್ತಿ ಜೀವನದಲ್ಲಿ ತಿಂಗಳಿಗೆ 40,000 ರೂಪಾಯಿ ಹಣವನ್ನು ಪಡೆಯಲು NPS ನಲ್ಲಿ 21 ನೇ ವಯಸ್ಸಿನಿಂದ ಪೂರ್ತಿ ತಿಂಗಳಿಗೆ 3,475 ರೂಪಾಯಿ ಹೂಡಿಕೆ ಮಾಡಬೇಕು. 39 ವರ್ಷಗಳ ವರೆಗೆ ಹೂಡಿಕೆ ಮಾಡಬೇಕು.
ತಿಂಗಳಿಗೆ 3,475 ರೂಪಾಯಿ ಎಂದರೆ ವರ್ಷಕ್ಕೆ 41,000 ಹಣವನ್ನು ಹೂಡಿಕೆ ಮಾಡಿದಂತೆ ಆಗುತ್ತದೆ. 39 ವರ್ಷಕ್ಕೆ ನಿಮ್ಮ ಹೂಡಿಕೆಯ ಮೊತ್ತ 16,26,300 ರೂಪಾಯಿ ಆಗಿರುತ್ತದೆ. ಈ ಮೊತ್ತಕ್ಕೆ ಬಡ್ಡಿದರಗಳು ಸೇರಿ ನಿಮಗೆ ನಿವೃತ್ತಿ ಜೀವನದಲ್ಲಿ ತಿಂಗಳಿಗೆ 40,000 ರೂಪಾಯಿ ಸಿಗುತ್ತದೆ.
NPS ನಲ್ಲಿ ಹೂಡಿಕೆ ಮಾಡುವ ಲಾಭಗಳು :-
- ಹೂಡಿಕೆಯ ಭದ್ರತೆ :- NPS ನಲ್ಲಿ ಹಣ ಹೂಡಿಕೆ ಮಾಡುವುದರಿಂದ ನಿಮ್ಮ ಹೂಡಿಕೆ ಹಣ ಭದ್ರವಾಗಿ ಇರುತ್ತದೆ. ನೀವು ಯಾವುದೇ ಭಯ ಇಲ್ಲದೆ ಹಣ ಹೂಡಿಕೆ ಮಾಡಬಹುದು.
- ಉತ್ತಮ ಬಡ್ಡಿದರ ಸಿಗುತ್ತದೆ :- ನಿಮ್ಮ ಹೂಡಿಕೆಯ ಹಣಕ್ಕೆ ಉತ್ತಮ ರೀತಿಯಲ್ಲಿ ಬಡ್ಡಿದರ ಸಿಗುತ್ತದೆ.
- ತೆರಿಗೆ ವಿನಾಯಿತಿ ಸಿಗುತ್ತದೆ : ನಿಮ್ಮ ಹೂಡಿಕೆಯ ಮೊತ್ತಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು.
- ಹೂಡಿಕೆಯ ಆಯ್ಕೆಗಳು ಇವೆ. :- NPS ನಲ್ಲಿ ಅತಿ ಕಡಿಮೆ ಮೊತ್ತದಿಂದ ಅತಿ ಹೆಚ್ಚು ಹಣವನ್ನು ಹೂಡಿಕೆ ಮಾಡುವ ಆಯ್ಕೆ ಇರುತ್ತದೆ. ತಿಂಗಳ ಹೂಡಿಕೆ ಹಾಗೂ ಒಮ್ಮೆಲೇ ದೊಡ್ಡ ಮೊತ್ತದ ಹೂಡಿಕೆ ಮಾಡಬಹುದು.
ಪೆನ್ಷನ್ ಸ್ಕೀಮ್ ಗಳಲ್ಲಿ ಹೂಡಿಕೆ ಮಾಡುವುದು ಎಷ್ಟು ಮುಖ್ಯ :-
- ಆರ್ಥಿಕ ಭದ್ರತೆ: ನಿವೃತ್ತಿಯ ಬಳಿಕ ನಿಮ್ಮ ಆದಾಯದ ಮೂಲಗಳು ಕಡಿಮೆ ಆಗುತ್ತದೆ. ಆಗ ಪೆನ್ಷನ್ ಸ್ಕೀಮ್ ನಲ್ಲಿ ಮಾಡಿರುವ ಹೂಡಿಕೆ ನಿಮಗೆ ನಿಯಮಿತವಾದ ಆದಾಯದ ಮೂಲವನ್ನು ಒದಗಿಸುತ್ತವೆ, ಇದು ನಿಮ್ಮ ಅಗತ್ಯಗಳನ್ನು ಪೂರೈಸಲು ಮತ್ತು ನಿಮ್ಮ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
- ಮಾನಸಿಕ ಶಾಂತಿ: ನಿವೃತ್ತಿ ಜೀವನದಲ್ಲಿ ನಿಮ್ಮ ಬಳಿ ಯಾವುದೇ ಆದಾಯ ಮೂಲ ಇದ್ದರೆ ಅದು ನಿಮಗೆ ಮಾನಸಿಕ ಶಾಂತಿಯನ್ನು ನೀಡುತ್ತದೆ. ನಿಮ್ಮ ಭವಿಷ್ಯದ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ ಎಂದು ತಿಳಿದುಕೊಳ್ಳುವುದು ನಿಮ್ಮ ಪ್ರಸ್ತುತ ಜೀವನವನ್ನು ಹೆಚ್ಚು ಆನಂದಿಸಲು ಸಹಾಯ ಮಾಡುತ್ತದೆ.
- ತೆರಿಗೆ ಪ್ರಯೋಜನಗಳು: ಭಾರತದಲ್ಲಿ, ಹಲವಾರು ಪೆನ್ಷನ್ ಸ್ಕೀಮ್ಗಳು ತೆರಿಗೆ ಪ್ರಯೋಜನಗಳನ್ನು ನೀಡುತ್ತವೆ. ಉದಾಹರಣೆಗೆ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ನಲ್ಲಿ ನೀವು ಮಾಡುವ ಕೊಡುಗೆಗಳ ಮೇಲೆ ತೆರಿಗೆ ವಿನಾಯಿತಿ ಪಡೆಯಬಹುದು.
- ನಿಮ್ಮ ಕುಟುಂಬಕ್ಕೆ ಬೆಂಬಲ: ನಿವೃತ್ತಿಯ ಬಳಿಕ ನೀವು ನಿಮ್ಮ ಕುಟುಂಬದ ಮೇಲೆ ಹಣಕಾಸಿನ ಹೊರೆ ಆಗುವುದಿಲ್ಲ. ಪೆನ್ಷನ್ ಸ್ಕೀಮ್‌ಗಳು ನಿಮಗೆ ಆರ್ಥಿಕವಾಗಿ ಸ್ವತಂತ್ರರಾಗಿರಲು ಮತ್ತು ನಿಮ್ಮ ಕುಟುಂಬಕ್ಕೆ ಹಣಕಾಸಿನ ನೆರವು ನೀಡಲು ಸಹಾಯ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ತಿಂಗಳಿಗೆ ದಿನಕ್ಕೆ 333 ರೂಪಾಯಿ ಹೂಡಿಕೆ ಮಾಡಿ 17 ಲಕ್ಷ ರೂಪಾಯಿ ಹಿಂಪಡೆಯುವ ಪೋಸ್ಟ್ ಆಫೀಸ್ ಯೋಜನೆಯ ಬಗ್ಗೆ ತಿಳಿಯೋಣ.
ಇದನ್ನೂ ಓದಿ: ಆಯುಷ್ಮಾನ್ ಭಾರತ್ ಕಾರ್ಡ್ 24 ಗಂಟೆಗಳಲ್ಲಿ! ಆನ್‌ಲೈನ್ ಅರ್ಜಿ ಸಲ್ಲಿಸುವುದು ಹೇಗೆ?