ದಸರಾಗೆ ಹೋಗುವ ಪ್ರಯಾಣಿಕರಿಗೆ ಬಂಪರ್ ಗುಡ್ ನ್ಯೂಸ್, ರಿಯಾಯಿತಿ ದರದಲ್ಲಿ ಟಿಕೆಟ್ ಅನ್ನು ಕೊಡಲಾಗುತ್ತಿದೆ.

Mysore Dasara: ನವರಾತ್ರಿ ಈಗಾಗಲೇ ಆರಂಭವಾಗಿದ್ದು, ದಸರಾ ಗೆ ಕ್ಷಣಗಣನೆ ಶುರುವಾಗಿದೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಡೈರೆಕ್ಟ್ ಆಗಿ ಮೈಸೂರಿಗೆ ಹೆಚ್ಚಿನ ಸಾರಿಗೆ ಸೌಲಭ್ಯದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ದಸರಾ ಗೆ ಹೋಗುವ ಜನರಿಗೆ ಫ್ಲೈಯಿಂಗ್ ಬಸ್ ಮೂಲಕ ವ್ಯವಸ್ಥೆಯನ್ನು ಮಾಡಲಾಗಿದೆ. ರಾಜ್ಯದ ಹಲವಾರು ಜಿಲ್ಲೆಗಳಿಂದ ಪ್ರಯಾಣಿಸುವ ಜನರಿಗೆ ಹೆಚ್ಚಿನ ಸಾರಿಗೆ ಸೌಲಭ್ಯವನ್ನು ವಿತರಿಸುವ ಭರವಸೆಯನ್ನು ನೀಡಿದೆ. ಸುಮಾರು 1500ಕ್ಕೂ ಹೆಚ್ಚು ಬಸ್ಸಿನ ವ್ಯವಸ್ಥೆಯನ್ನು ಮಾಡುವುದಾಗಿ ಕೆಎಸ್ಆರ್ಟಿಸಿ (KSRTC) ಭರವಸೆಯನ್ನು ನೀಡಿದೆ. ಇನ್ನೂ ರಾಜ್ಯದಲ್ಲಿ ಅಷ್ಟೇ ಅಲ್ಲದೆ, ಅಂತ ರಾಜ್ಯದಲ್ಲಿ ಊಟಿ, ಕೊಡಕ್ಕೆನಾಲ್ ಯಿಂದಲೂ ಪ್ರಯಾಣಿಕರಿಗೆ ಸುಲಭವಾಗುವಂತೆ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಒಂದೇ ಕುಟುಂಬದ ಒಂದಕ್ಕಿಂತ ಹೆಚ್ಚು ಜನರು ಒಂದೇ ಸಮಯಕ್ಕೆ ಪ್ರಯಾಣಿಸಿದಲ್ಲಿ ಅವರಿಗೆ ರಿಯಾಯಿತಿಯ ದರವನ್ನು ಕೂಡ ಒದಗಿಸಲಾಗಿದೆ.

WhatsApp Group Join Now
Telegram Group Join Now

ಶಾಲಾ ಕಾಲೇಜುಗಳು ರಜೆ ಇದ್ದಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುವ ಜನರಿಗಾಗಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ಸೌಲಭ್ಯವನ್ನು ಕಲ್ಪಿಸಿ ಕೊಡುವ ವ್ಯವಸ್ಥೆಯನ್ನ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಭರವಸೆಯನ್ನು ನೀಡಿದೆ. ನಮ್ಮ ಹಿಂದೂ ಸಂಪ್ರದಾಯವಾದ ದಸರಾ ಉತ್ಸವ ಹಾಗೂ ಆನೆಯ ಅಂಬಾರಿಯನ್ನು ವೀಕ್ಷಿಸಲು ಬರುವ ನಮ್ಮ ಜನತೆಗೆ ಪ್ರಯಾಣಕ್ಕೆ ಅನುಕೂಲವಾಗವಂತೆ ಈ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬೆಂಗಳೂರಿನಿಂದ ಅಷ್ಟೇ ಅಲ್ಲದೆ ರಾಜ್ಯದ ಹಲವೆಡೆಯಿಂದ ಶಿವಮೊಗ್ಗ ಮಂಗಳೂರು ಗೋಕರ್ಣಗಳಿಂದಲೂ ಕೂಡ ಸಾರಿಗೆ ಬಸ್ ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಅಂತರ್ ರಾಜ್ಯಗಳಿಂದಲೂ ವ್ಯವಸ್ಥೆ ಕಲ್ಪಿಸಿರುವ ಈ ಬಸ್ ಗಳಿಂದ ಹಲವು ಪ್ರಯಾಣಿಕರು ದಸರಾ ನೋಡಲು ಸಹಾಯವಾಗಬಹುದು.

ವರ್ಷಕ್ಕೆ ಒಂದು ಬಾರಿ ನಡೆಯುವ ಈ ದಸರಾ ವನ್ನು ಕಣ್ತುಂಬಿಕೊಳ್ಳಲು ಜನ ರಾಜ್ಯದ ಹಲವಡೆಯಿಂದ ಬರಲು ಪ್ರಯತ್ನಿಸುತ್ತಾರೆ ಆದರೆ ಕೆಲವೊಂದು ಸಾರಿಗೆ ವ್ಯವಸ್ಥೆಯಿಂದಾಗಿ ಅವರಿಗೆ ತಲುಪಲು ಸಾಧ್ಯವಾಗುವುದಿಲ್ಲ. ನಮ್ಮ ಸಂಪ್ರದಾಯದ ದಸರಾವನ್ನು ನೋಡಲು ಎಲ್ಲರಿಗೂ ಅನುಕೂಲವಾಗುವಂತೆ ನಮ್ಮ ಸಾರಿಗೆ ಸಂಸ್ಥೆ ಹೆಚ್ಚುವರಿ ಬಸ್ಸನ್ನು ಕಲ್ಪಿಸಿಕೊಡಲು ವ್ಯವಸ್ಥೆ ಮಾಡಿದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ರಾಜ್ಯದ ಯಾವ ಕಡೆಯಿಂದ ಹೆಚ್ಚುವರಿ ಬಸ್ ಆರಂಭ?

ಬೆಂಗಳೂರಿನಿಂದ ಅಷ್ಟೇ ಅಲ್ಲದೆ ಮಂಗಳೂರು ಶಿವಮೊಗ್ಗ ಗೋಕರ್ಣ ಮಡಿಕೇರಿಗಳಿಂದಲೂ ಬಸ್ ವ್ಯವಸ್ಥೆಯನ್ನ ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಅಷ್ಟೇ ಅಲ್ಲದೆ ಅಂತ ರಾಜ್ಯವಾದ ಊಟಿ ಕೊಡೈಕೆನಾಲ್ ಗಳಿಂದಲೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನು ಉಚಿತ ಬಸ್ ಪ್ರಯಾಣವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ದಸರಾವನ್ನು ನೋಡಲು ಸಹಾಯವಾಗಬಹುದು ಎಂದು ಊಹಿಸಲಾಗಿದೆ.

ಉಚಿತ ಬಸ್ ಹಿನ್ನೆಲೆಯಲ್ಲಿ ಈಗಾಗಲೇ ಪ್ರಯಾಣಕರ ಸಂಖ್ಯೆ ಹೆಚ್ಚಿದ್ದು ಈ ದಸರಾದ ಸಮಯದಲ್ಲಿ ಇನ್ನೂ ದುಪ್ಪಟ್ಟು ಸಂಖ್ಯೆಯಲ್ಲಿ ಪ್ರಯಾಣಿಕರು ಭಾಗವಹಿಸಬಹುದು ಎಂದು ಅಂದಾಜಿಸಲಾಗಿದೆ. ಕಾಂಗ್ರೆಸ್ ಸರ್ಕಾರದ ಉಚಿತ ಬಸ್ ಯೋಜನೆಯಿಂದ ಹಲವಾರು ಇನ್ನು ದಸರಾ ವನ್ನು ನೋಡದೆ ಇದ್ದವರು ಕೂಡ ಈ ವರ್ಷ ದಸರಾವನ್ನು ನೋಡಲು ಅನುವು ಮಾಡಿಕೊಟ್ಟಿದೆ.

ಈಗಾಗಲೇ ದಸರಾ ರಜೆ ಪ್ರಾರಂಭವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ದಸರಾ ವನ್ನು ನೋಡಲು ಜನರು ಆಗಮಿಸಬಹುದು ಎಂದು ನಿರೀಕ್ಷಿಸಲಾಗಿದೆ. 9 ದಿನಗಳು ನಡೆಯುವ ದಸರಾದಲ್ಲಿ ಜನರ ಓಡಾಟ ಹೆಚ್ಚಾಗಿರುತ್ತದೆ. ಸಾರಿಗೆ ಸೌಲಭ್ಯವನ್ನು ಒದಗಿಸಿದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಭಾಗವಹಿಸಬಹುದಾಗಿದೆ. ಇದರಿಂದ ದಸರಾದ ಮೆರುಗು ಹೆಚ್ಚುತ್ತದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಹೊಂದಿರೋರಿಗೆ ಬಿಗ್ ಶಾಕ್; ಅಂತವರಿಗೆ ಸಿಗಲ್ಲ ಅನ್ನಭಾಗ್ಯ ಗೃಹಲಕ್ಷ್ಮಿ ಸೌಲಭ್ಯ

ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ PPF ಖಾತೆಯನ್ನು ಹೇಗೆ ತೆರೆಯುವುದು ಎನ್ನುವುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram