Oil India Recruitment 2024: ಆಯಿಲ್ ಇಂಡಿಯಾ ಲಿಮಿಟೆಡ್ ನಲ್ಲಿ ಪಿಯುಸಿ, ಐ ಟಿ ಐ, ಡಿಪ್ಲೊಮ ಪಾಸಾದವರನ್ನು ವಿವಿಧ ಗ್ರೇಡ್‌ನ ವರ್ಕ್ ಪರ್ಸನ್ ಆಗಿ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಹೌದು ಒಟ್ಟು 421 ಹುದ್ದೆಗಳನ್ನ ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಕಂಪನಿಯ ಆನ್‌ಲೈನ್ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಸಲ್ಲಿಸಿದವರನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ ಕರೆದು, ನಂತರ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ. ಹೌದು ಆಯಿಲ್ ಇಂಡಿಯಾ ಲಿಮಿಟೆಡ್ ತನ್ನ ಘಟಕದಲ್ಲಿ ಖಾಲಿ ಇರುವ 421 ವರ್ಕ್ ಪರ್ಸನ್ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ವಿದ್ಯಾರ್ಹತೆ, ವಯಸ್ಸಿನ ಅರ್ಹತೆ, ಪ್ರಮುಖ ದಿನಾಂಕಗಳು, ವೇತನ ವಿವರ, ಇತರೆ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಬಹುದು.
ಆಯಿಲ್ ಇಂಡಿಯಾ ಕಾರ್ಪೋರೇಷನ್ ಲಿಮಿಟೆಡ್ ವರ್ಕ್ ಪರ್ಸನ್ ಹುದ್ದೆಗಳ ಭರ್ತಿಗಾಗಿ ಡಿಪ್ಲೊಮ, ಐಟಿಐ, ದ್ವಿತೀಯ ಪಿಯುಸಿ ಪಾಸಾದವರಿಂದ ಅರ್ಜಿ ಸಲ್ಲಿಸಲು ತಿಳಿಸಿದ್ದು, ಅರ್ಜಿ ಹಾಕಲು ಜನವರಿ 30 ರವರೆಗೆ ಅವಕಾಶ ನೀಡಲಾಗಿದೆ, ಸದ್ಯ ಆಯಿಲ್ ಇಂಡಿಯಾ ಲಿಮಿಟೆಡ್‌ನಲ್ಲಿ 421 ಹುದ್ದೆಗಳು ಖಾಲಿಯಿದ್ದು, ಐಟಿಐ, ಡಿಪ್ಲೊಮ, ಪಿಯು ಪಾಸಾದವರು ಅರ್ಜಿ ಹಾಕಿ ಇದರ ಸದುಪಯೋಗ ಪಡೆದುಕೊಳ್ಳಬಹುದು. ಹಾಗಾದ್ರೆ ಅರ್ಜಿ ಸಲ್ಲಿಸೋದು ಹೇಗೆ ಮತ್ತು ಎಲ್ಲಿ,ಬೇಕಾದ ದಾಖಲೆಗಳೇನು ಸಂಪೂರ್ಣವಾಗಿ ನೋಡೋಣ ಬನ್ನಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
421ಹುದ್ದೆಗಳಿಗೆ ನಡೆಯಲಿದೆ ನೇಮಕಾತಿ? ಹಾಗಾದ್ರೆ ಏನ್ ಮಾಡ್ಬೇಕು ಗೊತ್ತಾ?
ಸದ್ಯ ಆಯಿಲ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಹೌದು ವಿವಿಧ ಟ್ರೇಡ್‌ಗಳು ಅಥವಾ ಬ್ರ್ಯಾಂಚ್‌ಗಳಲ್ಲಿ ಐಟಿಐ ಮತ್ತು ಡಿಪ್ಲೊಮ ಪಾಸಾದವರು, ಗ್ರೇಡ್-5 ಹುದ್ದೆಗೆ ಪದವಿ ಅರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದು. ಜೊತೆಗೆ ಪಿಯುಸಿ ಪಾಸ್ ಆಗಿರುವಂತವರಿಗೂ ಕೂಡ ಉದ್ಯೋಗಗಳು ಖಾಲಿಯಿದ್ದು ಅವ್ರು ಕೂಡ ಅರ್ಜಿ ಸಲ್ಲಿಸಿ ಕೆಲಸ ಪಡೆದುಕೊಳ್ಳಬಹುದು. ಇನ್ನು ವಯಸ್ಸಿನ ಅರ್ಹತೆ ಬಗ್ಗೆ ಹೇಳೋದಾದ್ರೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು ಅಂದ್ರೆ 18ವರ್ಷದ ಮೇಲ್ಪಟ್ಟ, ಹೇಳಿರುವ ವಿದ್ಯಾರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದು.
ಇನ್ನು ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಗರಿಷ್ಠ 33 ವರ್ಷ ಮೀರಿರಬಾರದು ಅಂತ ಹೇಳಲಾಗಿದೆ. ಅಲ್ದೇ ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಮೀರಿರಬಾರದು. ಇನ್ನು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 36 ವರ್ಷ ವಯಸ್ಸು ಮೀರಿರಬಾರದು. ಅಪ್ಲಿಕೇಶನ್ ಶುಲ್ಕ ವಿವರ ನೋಡೋದಾದ್ರೆ ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 200 ರೂಪಾಯಿ ಹಾಗಿ
ಎಸ್‌ಸಿ, ಎಸ್‌ಟಿ, EWS, Pwd, ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದ್ದು, ಅಪ್ಲಿಕೇಶನ್ ಶುಲ್ಕವನ್ನು ಆನ್‌ಲೈನ್ ಮೂಲಕ ಕೂಡ ಪಾವತಿ ಮಾಡಬಹುದು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಇನ್ನು ಈಗಾಗ್ಲೇ ಅರ್ಜಿ ಸಲ್ಲಿಕೆಗೆ ಗಡುವು ನಿಗಧಿಯಾಗಿದ್ದು, 30-12-2023 ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇನ್ನು ಸಲ್ಲಿಸಲು ಕೊನೆ ದಿನಾಂಕ: 30-01-2024 ರ ರಾತ್ರಿ 11-59 ರವರೆಗೆ ಕೂಡ ಸಮಯ ನೀಡಲಾಗಿದೆ. ಇನ್ನು ಅರ್ಜಿ ಸಲ್ಲಿಕೆ ಮಾಡಿದ ನಂತರ ಅರ್ಹ ಅಭ್ಯರ್ಥಿಗಳನ್ನ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹೌದು ಕಂಪ್ಯೂಟರ್ ಆಧಾರಿತ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಒಟ್ಟು 100 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಹೌದು ಹುದ್ದೆಗೆ ಸಂಬಂಧಿತ ವಿದ್ಯಾರ್ಹತೆ ಮತ್ತು ಟೆಕ್ನಿಕಲ್ ಅರಿವಿನ ಬಗ್ಗೆ 60 ಅಂಕಗಳಿಗೆ, ರೀಸನಿಂಗ್ ಅರಿಥ್ಮೆಟಿಕ್, ಮೆಂಟಲ್ ಎಬಿಲಿಟಿ ಕುರಿತು 20 ಅಂಕಗಳಿಗೆ, ಇಂಗ್ಲಿಷ್ ಭಾಷೆ ಮತ್ತು ಸಾಮಾನ್ಯ ಜ್ಞಾನ ಕುರಿತು 20 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಒಟ್ಟು 100 ಅಂಕಗಳಿಗೆ ನಡೆಸಿದ ಪರೀಕ್ಷೆಯಲ್ಲಿ ಇದರಲ್ಲಿ ಶಾರ್ಟ್ ಲಿಸ್ಟ್ ಮಾಡಲಾಗುತ್ತೆ, ಅಂದ್ರೆ ಹೆಚ್ಚು ಅಂಕ ಗಳಿಸಿದವರ ಪಟ್ಟಿ ತಯಾರಿಸಿ ಶಾರ್ಟ್ ಲಿಸ್ಟ್ ಆದವರನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ನಂತರ ಅಂತಿಮವಾಗಿ ಮೆಡಿಕಲ್ ಟೆಸ್ಟ್ ನಡೆಸಿ ಅಭ್ಯರ್ಥಿಗಳ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗುತ್ತದೆ.
ಇನ್ನು ವೇತನ ಶ್ರೇಣಿ ಬಗ್ಗೆ ಹೇಳೋದಾದ್ರೆ, 20,000ದಿಂದ 35000ದವರೆಗೂ ಕೂಡ ಸಂಬಳ ನಿಗಧಿ ಮಾಡಲಾಗಿದ್ದು, ಆಯಾ ಹುದ್ದೆಗಳಿಗನುಸಾರ ನೀವು ವೇತನವನ್ನ ಪಡೆಯಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ವೆಬ್ಸೈಟ್ ಗೆ ಭೇಟಿ ನೀಡಿ ಮತ್ತಷ್ಟು ಮಾಹಿತಿ ತಿಳಿದು ನಂತರ ಅರ್ಜಿಯನ್ನ ಸಲ್ಲಿಸಬಹುದು. ವೆಬ್ ಸೈಟ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ. ಅಧಿಸೂಚನೆ PDFಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Google Pay ಮತ್ತು Paytm ನೊಂದಿಗೆ ಸ್ಪರ್ಧಿಸಲು ಬರುತ್ತಿದೆ TATA PAY, RBI ನಿಂದಲೂ ಪರವಾನಗಿ