Olle Hudga Pratham Engagement: ಒಳ್ಳೆ ಹುಡುಗ ಅಥವಾ ಪ್ರಥಮ್ ಅಂದರೆ ಎಲ್ಲರಿಗೂ ಫಸ್ಟ್ ನೆನಪಾಗೋದೇ ಅವರ ನಾನ್ ಸ್ಟಾಪ್ ಮಾತು. ದೊಡ್ಮನೆಯಲ್ಲಿ ತಮ್ಮ ಮಾತು, ನೇರ ನುಡಿಯಿಂದಲೇ ಫೇಮಸ್ ಆಗಿದ್ದ ಪ್ರಥಮ್,ಭುವನ್, ಸಂಜನಾ, ರೇಖಾ, ಇದ್ದ ಸೀಸನ್ನಲ್ಲಿ ಪ್ರಥಮ್ ಖಡಕ್ ಆಗಿ ಆಟ ಆಡುತ್ತಾ ಒಂದಷ್ಟು ಅಭಿಮಾನಿ ಬಳಗವನ್ನ ಸೃಷ್ಟಿ ಮಾಡಿಕೊಂಡಿದ್ರು. ಅಲ್ಲದೇ ಬಿಗ್ ಬಾಸ್ ಸೀಸನ್ ಒಂದರ ವಿನ್ನರ್ ಆಗಿ ಗೆಲುವು ಸಾಧಿಸಿದ್ರು. ಇದೀಗ ತಮ್ಮ ಬ್ಯಾಚುಲರ್ ಲೈಫ್ ಗೆ ಪ್ರಥಮ್ ಗುಡ್ ಬೈ ಹೇಳ್ತಿದ್ದಾರೆ. ಹೌದು ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಸದ್ದಿಲ್ಲದೆ ನಟಭಯಂಕರ ನೇರ ನುಡಿಯ ನಿಷ್ಠುರ ಮಾತುಗರ ಪ್ರಥಮ್ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಸದ್ಯ ಈ ಕುರಿತ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೌದು, ಪ್ರಥಮ್ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಹೀಗಾಗಿ ಸೈಲೆಂಟ್ ಆಗಿ ಒಳ್ಳೆಯ ಹುಡುಗ ಪ್ರಥಮ್ ಎಂಗೇಜ್ ಆಗಿದ್ದಾರೆ. ತನ್ನ ಕುಟುಂಬದವರು ಹುಡುಕಿರುವ ಹುಡುಗಿ ಜೊತೆ ಅರೆಂಜ್ ಮ್ಯಾರೇಜ್ ಆಗಲು ನಟ ರೆಡಿಯಾಗಿದ್ದು, ಇದೀಗ ನಿಶ್ಚಿತಾರ್ಥ ಮಾಡಿಕೊಂಡಿರುವ ಕುರಿತು ಭಾವಿ ಪತ್ನಿ ಜೊತೆಗಿನ ರಿಂಗ್ ತೊಟ್ಟಿರುವ ಫೋಟೋವನ್ನ ನಟ ಶೇರ್ ಮಾಡಿಕೊಂಡು ಕೆಲ ಸಾಲುಗಳನ್ನ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ! ಹೀಗಿದೆ ನೋಡಿ ಹಿಂದಿನ ಚಿನ್ನ & ಬೆಳ್ಳಿಯ ದರ
ನನ್ನ ಎಂಗೇಜ್ಮೆಂಟ್ ದೇಶದ ದೊಡ್ಡ ಸುದ್ದಿಯಲ್ಲ
ಹೌದು ತಾವು ಕುಟುಂಬದವರು ಒಪ್ಪಿದ ಹುಡುಗಿಯ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಂಡಿರುವ ವಿಷಯವನ್ನ ಸ್ವತಃ ಪ್ರಥಮ್ ಅವ್ರೆ ಹಂಚಿಕೊಂಡಿದ್ದು, ತಮ್ಮ ಜೀವನದ ಅತೀ ಮಧುರ ಕ್ಷಣಗಳ ಬಗ್ಗೆ ಒಂದಷ್ಟು ಸಾಲುಗಳನ್ನ ಬರೆದುಕೊಂಡಿದ್ದಾರೆ. ಕೈ ಬೆರಳಿಗೆ ಉಂಗುರ ಹಾಕಿಕೊಂಡಿರುವ ಪೋಟಿ ಶೇರ್ ಮಾಡಿರುವ ಪ್ರಥಮ್, ಒಂದು ಸುಂದರ ಕ್ಷಣ. ಇವತ್ತು ನನ್ನ ಎಂಗೇಜ್ಮೆಂಟ್ ಆಯ್ತು. ಯಾವ ಆಡಂಬರ, ಸಂಭ್ರಮ, ತೋರ್ಪಡಿಕೆ ಇಲ್ಲದೆ ಬಹಳ ಸರಳವಾಗಿ ಕುಟುಂಬದವರು ಮೆಚ್ಚಿದವರ ಜೊತೆಯಾದೆ. ನಾನು ತುಂಬಾ ಸರಳವಾಗಿಯೇ ಬದುಕಿದವನು, ಹಾಗೇ ಇರೋಕೆ ಇಷ್ಟ. ನನ್ನ ಎಂಗೇಜ್ಮೆಂಟ್ ದೇಶದ ದೊಡ್ಡ ಸುದ್ಧಿಯಲ್ಲ. ಆದರೆ ನನ್ನ ಇಷ್ಟಪಡುವ ಸ್ಬೇಹಿತರು ಆತ್ಮೀಯರಿಗೆ ವಿಚಾರ ಹಂಚಿಕೊಳ್ಳೋಣ ಅನ್ನೋ ಕಾರಣಕ್ಕೆ ನಿಮ್ಗೆ ತಿಳಿಸಿದ್ದೇನೆ ಅಷ್ಟೇ. ಮದುವೆ ಎಷ್ಟು ಅದ್ಧೂರಿಯಾಗಿ ಆದೆ ಅನ್ನೋದಕ್ಕಿಂತ ಎಷ್ಟು ಚೆನ್ನಾಗಿ ಬದುಕು ಕಟ್ಟಿಕೊಂಡ್ವಿ ಅನ್ನೋದೇ ನಿಜವಾದ ಸಾಧನೆ. ನನಗೆ ಹಾಗಿರೋಕೆ ಇಷ್ಟ. ಹೀಗೇ ಇದ್ದು ಬಿಡ್ತೀನಿ. ಹರಸುವವರು ಅಲ್ಲಿಂದಲೇ ಹರಸಿ., ಅದೇ ಆಶೀರ್ವಾದ ಎಂದು ಪ್ರಥಮ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆ ಪ್ರಥಮ್ ಅಭಿಮಾನಿಗಳು ಆಪ್ತರು ಸ್ನೇಹಿತರು ಸೇರಿದಂತೆ ಸಾಕಷ್ಟು ಜನರು ಕಮೆಂಟ್ಸ್ ಗಳ ಮಹಾ ಪುರಾವೆ ಹರಿಸುತ್ತಿದ್ದೂ, ಎಲ್ಲರು ಕೂಡ ಶುಭಾಶಯಗಳು ಆರೈಸುತ್ತಿದ್ದಾರೆ. ಇನ್ನು ಒಂದಷ್ಟು ಜನ ಹುಡುಗಿಯ ಮುಖ ರಿವಿಲ್ ಮಾಡುವಂತೆ ಕೇಳಿಕೊಂಡಿದ್ರು, ಆದರೆ ಪ್ರಥಮ್ ಅವ್ರು ಒಂದು ಫೋಟೋ ಬಿಟ್ಟು ಮತ್ಯಾವತ್ತು ಫೋಟೋಗಳನ್ನು ಕೂಡ ಹಂಚಿಕೊಂಡಿರಲಿಲ್ಲ. ಆದರೆ ಸೋಶಿಯಲ್ ಮೀಡಿಯಾ ತುಂಬಾ ಪಾಸ್ಟ್ ಇರೋದ್ರಿಂದ ಇದೀಗ ಪ್ರಥಮ್ ಎಂಗೇಜ್ಮೆಂಟ್ ಫೋಟೋಗಳು ಒಂದೊಂದೇ ವೈರಲ್ ಆಗ್ತಿದೆ. ಹೌದು ಒಳ್ಳೆ ಹುಡುಗನ ಹುಡುಗಿ ಬಹಳ ಮುದ್ದಾಗಿದ್ದು,ಪ್ರಥಮ್ ಕೂಡ ಬಹಳ ಖುಷಿಯಿಂದಲೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಪ್ರಥಮ್ ಅವ್ರೆ ತಿಳಿಸಿರುವಂತೆ ಕುಟುಂಬದವರು ನೋಡಿ ಮೆಚ್ಚಿರುವ ಹುಡುಗಿ ಆಗಿರೋದ್ರಿಂದ ಒಳ್ಳೆ ಹುಡುಗನ ಹುಡುಗಿಯ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಆದ್ರೆ ಫೋಟೋ ಮೂಲಕ ನೋಡಿಕೊಳ್ಳಬಹುದು. ಇನ್ನು ಪ್ರಥಮ್ ಅವ್ರ ನಿಶ್ಚಿತಾರ್ಥ ಸಮಾರಂಭ ಬಹಳ ಸಿಂಪಲ್ ಆಗಿ ನಡೆದಿದ್ದು, ಸಿನಿ ತಾರೆಯರು ಬಂದಿದ್ರು ಅಂತ ಹೇಳಲಾಗ್ತಿದ್ದು, ಸಾಕಷ್ಟು ಕಾಮಿಡಿ ಕಲಾವಿದರು ಧಾರವಾಹಿ ಕಲಾವಿದರು ಬಂದು ಶುಭ ಆರೈಸಿದ್ದಾರೆ. ನೀವು ಸಹ ಒಳ್ಳೆ ಹುಡುಗನಿಗೆ ಒಳ್ಳೆಯದಾಗ್ಲಿ ಅಂತ ಶುಭಾಶಯಗಳು ಆರೈಸಿ.
ಇದನ್ನೂ ಓದಿ: ಬೆಂಗಳೂರು ಚಿಕ್ಕಪೇಟೆಯಲ್ಲಿ ಫೇಮಸ್ ವಿದೇಶಿ ಯೂಟ್ಯೂಬ್ ಮೇಲೆ ಹಲ್ಲೆ! ಪೂರ್ತಿ ವಿಡಿಯೋ ಇಲ್ಲಿದೆ ನೋಡಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram