ಇನ್ಮುಂದೆ ಆನ್ಲೈನ್ ನಲ್ಲಿ ಮದುವೆ ರಿಜಿಸ್ಟ್ರೇಷನ್ ಮಾಡಿಸಬಹುದು. ಹೊಸ ಸೌಲಭ್ಯವನ್ನು ಜನತೆಗೆ ನೀಡಿದ ರಾಜ್ಯ ಸರಕಾರ

Online Marriage Registration Karnataka

ಮದುವೆ ಆದ ಮೇಲೆ ಕಡ್ಡಾಯವಾಗಿ ರಿಜಿಸ್ಟರ್ ( ನೋಂದಣಿ ) ಮಾಡಿಸಬೇಕು. ಆದರೆ ಮದುವೆ ನೋಂದಣಿಯ ಕಚೇರಿಗೆ ಹೋಗಿ ದಾಖಲೆಗಳನ್ನು ನೀಡುವ ಸಮಯ ಈಗಿನ ಯುವಕ ಯುವತಿಯರಿಗೆ ಇರುವುದಿಲ್ಲ. ಮದುವೆ ಒಂದು ವಾರ ರಜೆ ಮೇಲೆ ಮನೆಗೆ ಬರುವ ವಧು ವರರು ಮದುವೆ ಆದ ಮಾರನೇ ದಿನ ತಮ್ಮ ತಮ್ಮ ಕೆಲಸ ಎಂದು ದೂರದ ಊರಿಗೆ ಹೋಗಿಬಿಡುತ್ತಾರೆ. ಆದರೆ ಮದುವೆ ಕಾನೂನು ಪ್ರಕಾರ ಆಗಿರುವ ಬಗ್ಗೆ ಯಾವುದೇ ದಾಖಲೆ ಇರುವುದಿಲ್ಲ. ಮದುವೆ ಆಗಿ ವರ್ಷಗಳ ನಂತರ ಬಿಡುವು ಮಾಡಿಕೊಂಡು ರಿಜಿಸ್ಟರ್ ಆಫೀಸ್ ಗೆ ಹೋಗಿ ಮದುವೆ ನೋಂದಣಿ ಮಾಡಿಸುತ್ತಾರೆ. ಮದುವೆ ನೋಂದಣಿ ಮಾಡಿಸದೆ ರೇಷನ್ ಕಾರ್ಡ್ ಮನೆಯ ವಿಳಾಸಗಳನ್ನು ತಿದ್ದುಪಡಿ ಮಾಡಲು ಕಷ್ಟ ಆಗುತ್ತದೆ ಆದ್ರಿಂದ ಇದೆಲ್ಲವನ್ನೂ ಗಮನಿಸಿ ರಾಜ್ಯ ಸರ್ಕಾರವು ಈಗ ಆನ್ಲೈನ್ ನಲ್ಲಿ ಮದುವೆ ರಿಜಿಸ್ಟರ್ ಮಾಡುವ ಪೋರ್ಟಲ್ ಬಿಡುಗಡೆ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಆನ್ಲೈನ್ Marriage Registration ನಡೆಯನ್ನು ಮೆಚ್ಚಿದ ಸಂಸದ ತೇಜಸ್ವಿ ಸೂರ್ಯ: ಆನ್ಲೈನ್ ಮ್ಯಾರೇಜ್ ರಿಜಿಸ್ಟರ್ ವ್ಯವಸ್ತೆಯನ್ನು ಮೆಚ್ಚಿದ ತೇಜಸ್ವಿ ಸೂರ್ಯ ತಮ್ಮ ಅಧಿಕೃತ Twitter ಖಾತೆಯಲ್ಲಿ ಮದುವೆ ನೋಂದಣಿ ಪ್ರಕ್ರಿಯೆಯನ್ನು ಡಿಜಿಟಲ್ ರೂಪದಲ್ಲಿ ಮತ್ತು ನಾಗರಿಕ ಅನುಕೂಲ ಆಗುವಂತೆ ಪರಿಚಯಿಸಿದ ಕೃಷ್ಣ ಬೈರೇಗೌಡರ ಈ ಕ್ರಮ ನಿಜಕ್ಕೂ ಸ್ವಾಗತಾರ್ಹ ಹೊಸದಾಗಿ ಮದುವೆ ಆದವರು ತಮ್ಮ ಮನೆಯಲ್ಲಿ ಕುಳಿತು ಆರಾಮವಾಗಿ ಪ್ರಮಾಣಪತ್ರವನ್ನು ಸ್ವೀಕರಿಸಲು ಅನುವು ಮಾಡಿಕೊಡುವ ಈ ಯೋಜನೆ ಸ್ವಾಗತ ನಡೆ ಎಂದು ಹೇಳಿದ್ದಾರೆ.

ಪ್ರಾಯೋಗಿಕವಾಗಿ ಗುರುವಾರ ಚಾಲನೆ ನೀಡಿದ ಸಚಿವ ಕೃಷ್ಣ ಭೈರೇಗೌಡ..

ಆನ್ಲೈನ್ ರಿಜಿಸ್ಟರ್ ಪೋರ್ಟಲ್ ಅನ್ನು ಪ್ಯಾಯೋಗಿಕವಾಗಿ ಬೆಂಗಳೂರಿನ ಮಲ್ಲೇಶ್ವರಂ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೆರವೇರಿಸಿದರು. ಈ ಬಗ್ಗೆ ಮಾತನಾಡಿದ ಸಚಿವರು ಈ ಹಿಂದೆ offline ನಲ್ಲಿ ನಿಮಗೆ ದೊರೆತಂತೆ ರಿಜಿಸ್ಟರ್ ಸರ್ಟಿಫಿಕೇಟ್ ಸಿಗಲಿದೆ ಅದರಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಮದುವೆ ಆಗಿರುವ ಬಗ್ಗೆ ಫೋಟೋ ಮತ್ತು ವೀಡಿಯೋ, ಹಾಗೂ ಮಂಗಳಪತ್ರ ಗಳ ಮಾಹಿತಿಯನ್ನು ಆನ್ಲೈನ್ ನಲ್ಲಿ ಸಲ್ಲಿಸಬೇಕು. ಪಾರದರ್ಶಕತೆ ಮತ್ತು ಸೇವಾ ವಿತರಣೆಯತ್ತ ಇನ್ನೊಂದು ಮಹತ್ವದ ಹೆಜ್ಜೆಯನ್ನು ಇಡುತ್ತಿದ್ದೇವೆ ಎಂದು ಹೇಳಿದರು. ಪ್ರಾಯೋಗಿಕವಾಗಿ ಎರಡು ದಂಪತಿಗಳ ವಿವಾಹ ನೋಂದಣಿ ಕಾರ್ಯವನ್ನು ಮಾಡಲಾಗಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಆನ್ಲೈನ್ ರಿಜಿಸ್ಟರ್ ಪ್ರಕ್ರಿಯೆ ಹೇಗೆ?

ವಿವಾಹ ಆದ ವಧು ವರರು ಆನ್ಲೈನ್ ನಲ್ಲಿ ತಮ್ಮ ಮದುವೆಯ ಕಾರ್ಡ್, ಮದುವೆಯ ಫೋಟೊ ವೀಡಿಯೋ, ಹಾಗೂ ಆಧಾರ್ ದೃಢೀಕರಣ ಒದಗಿಸಬೇಕು. ನಂತರ ದಂಪತಿಗಳು ಒಮ್ಮೆ ರಿಜಿಸ್ಟರ್ ಆಫೀಸ್ ಗೆ ಭೇಟಿ ನೀಡಬೇಕು. ರಿಜಿಸ್ಟರ್ ಆಫೀಸ್ ನಲ್ಲಿ ನೋಂದಣಿಯ ಅಧಿಕೃತ ಪತ್ರ ದೊರೆಯುತ್ತದೆ.

ಯಾವುದೇ ದಂಪತಿಗಳು ಆನ್ಲೈನ್ ನಲ್ಲಿ ಮಾಹಿತಿ ಒದಗಿಸಲು ಇಷ್ಟ ಪಡದೆ ಇದ್ದಲ್ಲಿ ಈ ಹಿಂದೆ ಕಚೇರಿಗೆ ಹೋಗಿ ಮದುವೆ ಆದ ಬಗ್ಗೆ ಮಾಹಿತಿಯನ್ನು ನೀಡಿ ಇಬ್ಬರು ಸಾಕ್ಷಿದರಾರ ಸಹಿ ಹಾಕಿಸಿ ವಿವಾಹ ಪತ್ರವನ್ನು ಪಡೆಯುವಂತೆ ಈಗಲೂ ಪಡೆಯುವ ಅವಕಾಶ ಇದೆ.
ಫೆಬ್ರುವರಿ ತಿಂಗಳ ಮೊದಲ ವಾರದಲ್ಲಿ ಮದುವೆ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲು ಮತ್ತು ಆನ್ಲೈನ್ ಪೋರ್ಟಲ್ ಆರಂಭ ಮಾಡಲು ಕರ್ನಾಟಕ ಸರ್ಕಾರವು ಹಿಂದೂ ವಿವಾಹ ನೋಂದಣಿ ಕಾಯ್ದೆಯ ತಿದ್ದುಪಡಿಯನ್ನು ಅನುಮೋದನೆ ಮಾಡಿತ್ತು.

ಇದನ್ನೂ ಓದಿ: ಕೆಲವೇ ದಿನಗಳಲ್ಲಿ ಎಲ್ಲಾ ಆನ್ಲೈನ್ ಮಳಿಗೆಗಳಲ್ಲಿ ಸಿಗಲಿದೆ ಭಾರತ್ ಬ್ರಾಂಡ್ ಅಕ್ಕಿ.

ಇದನ್ನೂ ಓದಿ: ಗೃಹ ಲಕ್ಷ್ಮಿ ಯೋಜನೆಯ ಏಳನೇ ಕಂತಿನ ಹಣದ ಬಿಡುಗಡೆ ಆಗುವ ಮೊದಲೇ ಮೂರು ಬಂಪರ್ ಸುದ್ದಿ ನೀಡುತ್ತಿದೆ ರಾಜ್ಯ ಸರ್ಕಾರ..