Sitara: ಪಾರು ಸೀರಿಯಲ್ ಧಾಮಿನಿ ಹಾಟ್ ಫೋಟೊ ಶೂಟ್. ಧಾಮಿನಿ ಬೋಲ್ಡ್ ಲುಕ್ ಗೆ ದಂಗಾದ ಪ್ರೇಕ್ಷಕರು!

Sitara: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಹಲವಾರು ಧಾರವಾಹಿಗಳು ಆಯ್ಕೆಯಾದ ಕಥಾ ಹಂದರದಿಂದ ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಶ್ವಿಯಾಗುತ್ತವೆ. ಅಂತದ್ದೇನು ಒಂದು ಧಾರವಾಹಿ ಅಂದ್ರೆ ಅದು ಪಾರು. ಪಾರು ಧಾರವಾಹಿ ಪ್ರತಿ ದಿನ ಸೋಮವಾರದಿಂದ ಶುಕ್ರವಾರದವರೆಗೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಸೀರೆಯುಟ್ಟು ಬಹಳ ಅಂದವಾಗಿ ಕಾಣಿಸಿಕೊಳ್ಳುವ ಧಾಮಿನಿ ಧಾರಾವಾಹಿಯಲ್ಲಿ ಇವರೇ ದೊಡ್ಡ ಕಾಮಿಡಿ ವುಮನ್ ಅಂದರೆ ತಪ್ಪಾಗಲಾರದು. ಹೌದು ಧಾರಾವಾಹಿಯಲ್ಲಿ ಅಖೀಲಾಂಡೇಶ್ವರಿ ತಂಗಿಯಾಗಿ ಮೋಹನ್ ನ ಹೆಂಡತಿಯಾಗಿ ನಟನೆ ಮಾಡುತ್ತಿರುವ ದಾಮಿನಿ, ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಿ, ಅವರ ಅಭಿಮಾನ ಚಪ್ಪಾಳೆಯನ್ನ ಪಡೆದುಕೊಂಡಿರುವ ನಟಿ.

WhatsApp Group Join Now
Telegram Group Join Now

ಇನ್ನು ಸೀರಿಯಲ್ ನಲ್ಲಿ ತಮ್ಮ ಕಾಮಿಡಿ ಟೈಮಿಂಗ್, ಹಾಸ್ಯ ಹೊಮ್ಮಿಸುವ ನಟನೆಯಿಂದಾಗಿ ಪ್ರೇಕ್ಷಕರನ್ನು ನಕ್ಕು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು ಕಾಮಿಡಿ ವಿಲನ್ ದಾಮಿನಿ ಪಾತ್ರಧಾರಿ ನಟಿ ಸಿತಾರಾ ತಾರಾ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಆಕ್ಟಿವ್ ಆಗಿರ್ತಾರೆ. ಅಲ್ಲದೇ ಆಗಾಗ ತಮ್ಮ ಫೋಟೋಗಳನ್ನು ಅವರು ಶೇರ್ ಮಾಡುತ್ತಲಿರುತ್ತಾರೆ. ಆದ್ರೆ ಇದೀಗ ದಾಮಿನಿ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಫೋಟೋ ನೋಡಿದವರೆಲ್ಲ ಇವರೇನಾ ಪಾರು ಧಾರಾವಾಹಿಯಲ್ಲಿ ಬರುತ್ತಿದ್ದ ದಾಮಿನಿ ಎಂದು ಮೂಗಿನ ಮೇಲೆ ಬೆರಳು ಇಟ್ಟುಕೊಂಡು ನೋಡುತ್ತಿದ್ದಾರೆ. ಇನ್ನು ದಾಮಿನಿ ಅಭಿಮಾನಿಗಳು ಮಾತ್ರ ದಾಮಿನಿ ಫೋಟೋ ಕಂಡು ಸಖತ್ ಖುಷಿ ಪಟ್ಟಿದ್ದು, ಫೋಟೋ ನೋಡಿದ ಅಭಿಮಾನಿಗಳು ಸೂಪರ್ ಎಂದು ಹೇಳಿದ್ರೆ ಇನ್ನೂ ಕೆಲವರು ನೀವು ಸೀರೆಯಲ್ಲಿ ನೋಡಲು ಚೆನ್ನಾಗಿ ಕಾಣಿಸುತ್ತ ಇದ್ರಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದುಬೈನಲ್ಲಿ ಡಾ. ಬ್ರೋ ಜೊತೆ ಕನ್ನಡದ ನಟರು.. ಅಚಾನಕ್ಕಾಗಿ ಎಲ್ಲರನ್ನು ಒಟ್ಟಿಗೆ ನೋಡಿ ಸೈಕಾದೆ

ಸಿತಾರ ಹೊಸ ಫೋಟೋಶೂಟ್ ನೋಡಿ ಅವರ ಅಭಿಮಾನಿಗಳು ಹೇಳಿದ್ದೇನು?

ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿ ಇಂದು ಜನ ಮನ ಗೆದ್ದಿರುವ ಸಿತಾರ(Sitara) ಅವರು ಹೊಸದೊಂದು ಬೋಲ್ಡ್ ಫೋಟೋ ಶೂಟ್ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಹೌದು ನಟಿ ಸಿತಾರಾ ತಾರಾ ಅವರು ಹಂಚಿಕೊಂಡಂತಹ ಹೊಸ ಬೋಲ್ಡ್ ಫೋಟೋಗಳನ್ನು ನೋಡಿ ಅವರ ಅಭಿಮಾನಿಗಳು ಖಂಡಿತ ಶಾಕ್ ಆಗಿದ್ದಾರೆ. ಅಲ್ಲದೇ ನಟಿಯ ಫೋಟೋಗಳನ್ನು ನೋಡಿವರು ನಿಜವಾಗಲೂ ಇವರು ದಾಮಿನಿನಾ ಅಂತಿದ್ದಾರೆ. ಅಲ್ಲದೇ ಕೆಲವರಂತು ಶಾಕ್ ಗೆ ಒಳಗಾಗಿದ್ದು ಇದು ಧಾಮಿನಿ ಆಗೋಕೆ ಸಾಧ್ಯನೇ ಇಲ್ಲ ಅನ್ನುತ್ತಿದ್ದಾರೆ. ಯಾಕಂದ್ರೆ ಹೊಸ ಫೋಟೋಗಳಲ್ಲಿ ಸಿತಾರಾ ಸಖತ್ ಬೋಲ್ಡ್ ಆಗಿ ಪೋಸ್ ಗಳನ್ನು ನೀಡಿದ್ದು, ಅವರು ಹಂಚಿಕೊಂಡ ಫೋಟೋಗಳಿಗೆ ಅನೇಕರಿಂದ ಮೆಚ್ಚುಗೆಗಳು ಹರಿದು ಬರುತ್ತಿದೆ.

ಮತ್ತು ಕೆಲವರು ನಿಮಗೆ ಇದು ಸೂಟ್ ಆಗಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಕಾರಣ ಕಡು ನೇರಳೆ ಬಣ್ಣದ ಗೌನ್ ಧರಿಸಿರುವ ಸಿತಾರ ತಾರ ತುಂಬಾ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಯಾವಾಗಲೂ ಮೈ ತುಂಬಿ ಸೀರೆ ಉಟ್ಟುಕೊಂಡು ನೋಡುಗರಿಗೆ ವ್ಹಾ ಏನ್ ಕಾಮಿಡಿ ಟೈಮಿಂಗ್ ಗುರು ಅನ್ನಿಸುವಂತೆ ನಟಿಸಿ ಸೈ ಎನಿಸಿಕೊಂಡಿದ್ರು. ಅಲ್ಲದೇ ಪ್ರೇಕ್ಷಕರು ಹಾಗೂ ನಟಿಯರು ಅಭಿಮಾನಿಗಳು ಸಿತಾರ ಅವ್ರನ್ನ ಆ ಲುಕ್ ನಲ್ಲಿ ನೋಡಿ ಮೆಚ್ಚಿಕೊಂಡಿದ್ರು. ಅದ್ರಿಗ ಬಹಳ ಬೋಲ್ಡ್ ಆಗಿ ಮೈ ತುಂಬಾ ಬಟ್ಟೆ ಧರಿಸದೆ ಅರ್ಧಂಬರ್ಧ ಬಟ್ಟೆ ತೊಟ್ಟು ಕ್ಯಾಮರಾ ಮುಂದೆ ಫೋಸ್ ನೀಡಿರೋದು ಕೆಲವರಿಗೆ ಬೇಸರ ಮೂಡಿಸಿದೆ.

ಕಷ್ಟದಿಂದ ಮೇಲೆ ಬಂದಿರುವ ನಟಿ ಸಿತಾರ

ಇವತ್ತು ಒಳ್ಳೆ ಕಲಾವಿದೆ, ಜನರ ಚಪ್ಪಾಳೆ ಅಭಿಮಾನ ಗಿಟ್ಟಿಸಿಕೊಂಡಿರುವ ಸಿತಾರ(Sitara) ಈ ಹಂತಕ್ಕೆ ಬರಲು ಬಹಳ ಅಂದ್ರೆ ಬಹಳ ಕಷ್ಟ ಪಟ್ಟಿದ್ದಾರೆ. ಹೌದು ಸಿತಾರ ಚಿಕ್ಕ ಮಗು ಅಂದ್ರೆ 3ತಿಂಗಳ ಮಗುವಾಗಿದ್ದಾಗಲೇ ತಂದೆ ತಾಯಿಯನ್ನು ಕಳೆದುಕೊಳ್ಳುತ್ತಾರೆ. ಪುಟ್ಟ ಮಗುವಾಗಿದ್ದ ಕಾರಣ ಇವ್ರನ್ನ ಯಾರು ಅಷ್ಟಾಗಿ ನೋಡಿಕೊಳ್ಳಲ್ಲ ಹೀಗಾಗಿ ಇವ್ರ ಅಜ್ಜಿಯೇ ಸಿತಾರ ಆರೈಕೆ ಮಾಡುತ್ತಿದ್ದರಂತೆ. ನಂತರದಲ್ಲಿ ಸಿತಾರ ಶಾಲೆಗೆ ಹೋಗಬೇಕು ಅಂದುಕೊಂಡರೂ ಸಾಧ್ಯ ಆಗುತ್ತಿರಲಿಲ್ಲ. ಕೊನೆಗೆ ಸಾಣಿಹಳ್ಳಿ ಸ್ವಾಮೀಜಿಯವರು ಸಿತಾರ ಅವರನ್ನು ದತ್ತು ತೆಗೆದುಕೊಂಡು ಶಿಕ್ಷಣವನ್ನು ನೀಡಿದ್ದರು.

ಪಿಯುಸಿ ಮುಗಿಸಿ ಡಿಗ್ರಿ ಮಾಡುವಾಗ ನೀನಾಸಂನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು. ಅಲ್ಲದೇ ನೀನಾಸಂನಲ್ಲಿ ಥಿಯೇಟರ್ ಆರ್ಟ್ಸ್‌ನಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಹಾಗೆಯೇ ಸಿನಿಮಾ, ಧಾರಾವಾಹಿಗಳಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಸಿತಾರ ಆಗಾಗ ಹೇಳಿಕೊಳ್ಳುತ್ತಿರುತ್ತಾರೆ, ನಾನು ಏನೇ ಮಾಡಿದ್ದರು ಅದರ ಕ್ರೆಡಿಟ್ ಅದು ಸಾಣೆಹಳ್ಳಿ ಸ್ವಾಮಿಗಳಿಗೆ ಸೇರಬೇಕು. ನಾನು ತಿನ್ನುವ ಪ್ರತಿ ಆಗುಳಿನಲ್ಲಿ ನಾನು ಅವರನ್ನು ನೆನಪಿಸಿಕೊಳ್ಳುತ್ತೇನೆ ಬಹಳಷ್ಟು ಸಲ ಹೇಳಿಕೊಂಡಿದ್ದಾರೆ. ಇನ್ನು ವೈರಲ್ ಆಗಿರುವ ಫೋಟೋ ಕೆಲವರಿಗೆ ಇಷ್ಟವಾದ್ರೆ ಮತ್ತು ಕೆಲವರಿಗೆ ಇರಿಸು ಮುರಿಸು ಉಂಟು ಮಾಡಿರೋದಂತೂ ಸುಳಲ್ಲ. ಆದರೂ ಸ್ವತಃ ಸಿತಾರ ಅವ್ರೆ ಈ ಫೋಟೋಗಳನ್ನ ಹಂಚಿಕೊಂಡು ಜನರು ನಿಮ್ಮ ಕಡೆ ಕಲ್ಲುಗಳನ್ನ ಎಸೆದರೆ ನೀವು ವಾಪಸ್ ಕಲ್ಲುಗಳನ್ನ ಎಸೆಯಬೇಡಿ, ಅದರ ಬದಲಿಗೆ ಆ ಕಲ್ಲುಗಳನ್ನ ಸಂಗ್ರಹಿಸಿ ಸಾಮ್ರಾಜ್ಯವನ್ನ ಕಟ್ಟಿ ಅಂತ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಫೇಸ್ ಬುಕ್ ಬಂದ್ ಮಾಡ್ಬೇಕಾ? ಫೇಸ್ಬುಕ್ ಸಂಸ್ಥೆಗೆ ಹೈ ಕೋರ್ಟ್ ನಿಂದ ಒಂದು ವಾರದ ಗಡುವು

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram