ಭಾರತ ಪಾಕಿಸ್ತಾನ ಮಧ್ಯೆ ನಡೆಯುವ ಕ್ರಿಕೆಟ್ ಸೆಣೆಸಾಟ ನೋಡಲು ಕ್ರೀಡಾಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿರುತ್ತರೆ. ದೇಶ ಅಂತ ಬಂದಾಗ ಅಭಿಮಾನಿಗಳು ಯಾವಾಗಲೂ ಒಂದು ಕೈ ಮೇಲೆ ಇರುತ್ತಾರೆ. ದೇಶ ಅಂತ ಬಂದಾಗ ಆಟ ಯಾವುದೇ ಇದ್ರೆ ಎಲ್ಲ ವರ್ಗದ ಜನರು ಭಾರತ ಅಂತಾರೆ ಅದರಲ್ಲಿ ಇತಿಹಾಸ ಸೃಷ್ಟಿಸಿರೋದು ಕ್ರಿಕೆಟ್. ಅದರಲ್ಲೂ ಬರೋಬ್ಬರಿ 7 ವರ್ಷಗಳ ಬಳಿಕ ಪಾಕಿಸ್ತಾನ ತಂಡ ಭಾರತ ಪ್ರವಾಸ ಕೈಗೊಂಡಿದೆ. 2016ರಲ್ಲಿ ಕೊನೆಯ ಬಾರಿಗೆ ಪಾಕಿಸ್ತಾನ ಕ್ರಿಕೆಟ್‌ಗಾಗಿ ಭಾರತಕ್ಕೆ ಬಂದಿತ್ತು.
ಪಾಕಿಸ್ತಾನದ ಆಟಗಾರರಿಗೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ದೊರೆತಿದೆ. ಇದೇ ಅಕ್ಟೋಬರ್ 5 ರಿಂದ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ಗಾಗಿ ತಂಡಗಳು ದೇಶಕ್ಕೆ ಬರಲಾರಂಭಿಸಿವೆ. ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನದ ಕ್ರಿಕೆಟ್ ತಂಡ ಭಾರತವನ್ನು ತಲುಪಿದೆ. ಪಾಕ್ ನಾಯಕ ಬಾಬರ್ ಅಜಂ ಮತ್ತು ಇತರ ಆಟಗಾರರನ್ನು ಭಾರತೀಯ ಶೈಲಿಯಲ್ಲಿ ಶಾಲು ಹೊದಿಸಿ ಸ್ವಾಗತಿಸಲಾಯಿತು. ಈ ವೇಳೆ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಜಂ ಸೇರಿದಂತೆ ಕೆಲವು ಆಟಗಾರರು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಕೇಸರಿ ಶಾಲು ಹಾಕಿ ಸ್ವಾಗತಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೌದು ಐಸಿಸಿ ವಿಶ್ವಕಪ್(ODI World Cup) ಶೀಘ್ರದಲ್ಲೇ ಆರಂಭವಾಗಲಿದೆ. ಇದಕ್ಕಾಗಿ ಇಡೀ ವಿಶ್ವವೆ ಕಾದುಕುಳಿತಿದೆ ಅಂದ್ರೆ ತಪ್ಪಾಗಲ್ಲ. ಇದೇ ಅಕ್ಟೋಬರ್ 5 ರಿಂದ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ಗಾಗಿ ತಂಡಗಳು ದೇಶಕ್ಕೆ ಬರಲಾರಂಭಿಸಿವೆ. 1ವಾರ ಮುಂಚಿತವಾಗಿಯೇ ಬೇರೆ ಬೇರೆ ತಂಡಗಳು ಭಾರತವನ್ನ ತಲುಪುತ್ತವೆ ಅದರಲ್ಲಿ ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನದ ಕ್ರಿಕೆಟ್ ತಂಡ ಬುಧವಾರ ತಡರಾತ್ರಿ ಭಾರತವನ್ನು ತಲುಪಿದೆ. ಭಾರತಕ್ಕೆ ಕ್ರೀಡಾಪಟುಗಳು ಎಂಟ್ರಿ ಆಗ್ತಿದ್ದಂತೆ ಅವರನ್ನ ಸ್ವಾಗತಿಸಿದ್ದು ಬಹಳ ವಿಭಿನ್ನವಾಗಿತ್ತು, ಭಾರತೀಯರಿಗೆ ಹೆಮ್ಮೆ ತರುವಂತಿತ್ತು. ಹೌದು ಪಾಕ್ ನಾಯಕ ಬಾಬರ್ ಅಜಂ ಮತ್ತು ಇತರ ಆಟಗಾರರನ್ನು ಭಾರತೀಯ ಶೈಲಿಯಲ್ಲಿ ಶಾಲು ಹೊದಿಸಿ ಸ್ವಾಗತಿಸಲಾಯಿತು. ಈ ವೇಳೆ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಜಂ ಸೇರಿದಂತೆ ಕೆಲವು ಆಟಗಾರರು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಕೇಸರಿ ಶಾಲು ಹಾಕಿ ಸ್ವಾಗತಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಜೈ ಹಿಂದ್ ಜೈ ಜವಾನ್ ಅಂದ್ರು ನೆಟ್ಟಿಗರು
ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಬಾಬರ್ ಆಜಮ್ ಅವರಿಗೆ ಕೇಸರಿ ಶಾಲು ಹಾಕಿ ಸ್ವಾಗತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಕುರಿತಂತೆ ಬಾಬರ್ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ‘ಭಾರತದಲ್ಲಿ ತಮಗೆ ಸಿಕ್ಕಿದ ಸ್ವಾಗತಕ್ಕೆ ಮನಸೋತಿದ್ದೇನೆ’ ಅಂತ ಸಂತೋಷ ವ್ಯಕ್ತಪಡಿಸಿದ್ದಾರೆ. ಬಾಬರ್ ಜೊತೆಗೆ, ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಕೂಡ ಪೋಸ್ಟ್ ಮೂಲಕ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಪಾಕಿಸ್ತಾನಿ ತಂಡದಲ್ಲಿ ಬಾಬರ್ ಅಜಮ್ , ಶಾದಾಬ್ ಖಾನ್, ಅಬ್ದುಲ್ಲಾ ಶಫೀಕ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಇಫ್ತಿಕರ್ ಅಹ್ಮದ್, ಇಮಾಮ್-ಉಲ್-ಹಕ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಮ್, ಸಲ್ಮಾನ್ ಅಘಾ, ಸೌದ್ ಶಕೀಲ್, ಶಾಹೀನ್ ಶಾ ಅಫ್ರಿದಿ, ಉಸಾಮಾ ಮಿರ್ ತಂಡದಲ್ಲಿ ಇರಲಿದ್ದಾರೆ. ಇವರೆಲ್ಲರೂ ದೇಶಕ್ಕೆ ಎಂಟ್ರಿ ಕೊಡ್ತಿದ್ದಂತೆ ಸ್ವಾಗತ ಮಾಡಿರುವ ರೀತಿ ಇದೀಗ ಎಲ್ಲೆಡೆ ಪ್ರಸಂಸೆಗೆ ಕಾರಣವಾಗಿದ್ದು ಅಭಿಮಾನಿಗಳಂತು ಫುಲ್ ಥ್ರಿಲ್ ಆಗ್ತಿದ್ದಾರೆ. ಅದರಲ್ಲೂ ದೇಶಭಕ್ತರಿಗಂತೂ ಈ ವಿಡಿಯೋ ಒಂದು ಶಕ್ತಿಯನ್ನ ನೀಡಿದಂತಿದ್ದು ಇದು ನಮ್ಮ ಭಾರತ ಅಂತಿದ್ದಾರೆ.
Welcome to India, Babar Azam and Team Pakistan.#BabarAzam𓃵 #PakistanCricketTeam pic.twitter.com/GCsuSjgobI
— Aarz-e-ishq (@Aarzaai_Ishq) September 28, 2023
ಇದನ್ನೂ ಓದಿ: ನಾನು ಇಲ್ಲಿಗೆ ಆಟ ಆಡಲು ಬಂದವನು ಯಾವುದೇ ಕಾರಣಕ್ಕೂ ಕರ್ನಾಟಕ ವಿರೋಧಿ ಆಗಲಾರೆ; ಕಾವೇರಿ ವಿಚಾರವಾಗಿ ಧೋನಿ ಹೇಳಿದ್ದೇನು ಗೊತ್ತಾ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram